ಇದ್ದಕಿದ್ದ ಹಾಗೆ ನಿರ್ದೇಶಕನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡ ಕಿರುತೆರೆಯ‌ ಮತ್ತೊಬ್ಬ ಖ್ಯಾತ ನಟಿ..

0 views

ಕನ್ನಡ ಕಿರುತೆರೆಯಲ್ಲಿ ಕಳೆದ ಎರಡು ವರ್ಷಗಳಿಂದ ಸಾಲು ಸಾಲು ಕಲ್ಯಾಣಗಳು‌ಜರುಗುತ್ತಿದ್ದು ಸಾಕಷ್ಟು ಕಲಾವಿದರು ಹಸೆಮಣೆ ಏರಿ ಹೊಸ ಜೀವನ ಆರಂಭಿಸಿದ್ದಾರೆ.. ಹೌದು ಕಿರುತೆರೆ ಕಲಾವಿದರುಗಳು ಸಾಕಷ್ಟು ಮಂದಿ ತಮ್ಮ ಕ್ಷೇತ್ರದ ಸಹ ಕಲಾವಿದರುಗಳನ್ನೇ ಪ್ರೀತಿಸಿ ಸಂಗಾತಿಗಳನ್ನಾಗಿ ಆಯ್ಕೆ ಮಾಡಿಕೊಂಡು ನೂತನ ಜೀವನ ಆರಂಭಿಸುತ್ತಿದ್ದು ಇದೀಗ ಕನ್ನಡದ ಮತ್ತೊಬ್ಬ ಖ್ಯಾತ ನಟಿಯೊಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ನಿರ್ದೇಶಕರ ಜೊತೆ ಹೊಸ ಜೀವನ ಆರಂಭಿಸಿದ್ದಾರೆ..

ಹೌದು ಕಳೆದ ಎರಡು ವರ್ಷಗಳಿಂದ ಮಯೂರಿ ಅರುಣ್.. ಚಂದನ್ ಶೆಟ್ಟಿ‌ ನಿವೇದಿತಾ.. ಅಜಯ್ ರಾವ್.. ಶಿಲ್ಪಾ ದರ್ಶಕ್.. ಚಂದನ್ ಕವಿತಾ ಗೌಡ.. ನಿಖಿಲ್ ರೇವತಿ.. ಕೃಷ್ಣಾ ಮಿಲನಾ ನಾಗರಾಜ್.. ಹೀಗೆ ಸಾಕಷ್ಟು ಕಲಾವಿದರುಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಅದರಲ್ಲಿ ಬಹುತೇಕರು ತಮ್ಮ ತಮ್ಮ ಕ್ಷೇತ್ರದವರನ್ನೇ ಸಂಗಾತಿಗಳನ್ನಾಗಿ ಆಯ್ಕೆ ಮಾಡಿಕೊಂಡು ಪ್ರೀತಿಸಿ ಮದುವೆಯಾಗಿ ಹೊಸ ಜೀವನ ಆರಂಭಿಸಿದ್ದಾರೆ..

ತಮ್ಮದೇ ಕ್ಷೇತ್ರದ ಸಂಗಾತಿಗಳಾದರೆ ಮುಂದಿನ ಬದುಕು ಸರಾಗ ಎನ್ನುವುದು ಅವರುಗಳ ಅಭಿಪ್ರಾಯ.. ಕಲಾವಿದರ ಬದುಕಲ್ಲಿ ಒಬ್ಬರನೊಬ್ಬರು ಅರ್ಥ ಮಾಡಿಕೊಳ್ಳುವುದು ಅತ್ಯಂತ ಮುಖ್ಯವಾಗಿರುತ್ತದೆ.. ಅದರಲ್ಲಿಯೂ ಮದುವೆಯ ನಂತರವೂ ಈ ಕಲಾ ವೃತಿ ಬದುಕನ್ನು ಮುಂದುವರೆಸಬೇಕಾದರೆ ಜೊತೆಗಾರರ ಬೆಂಬಲ ಅನಿವಾರ್ಯವೂ ಹೌದು.. ನಟನೆಯನ್ನು ನಟನೆಯನ್ನಾಗಿ ಮಾತ್ರ ನೋಡುವುದು ಬಹಳ ಮುಖ್ಯವೂ ಹೌದು.. ಅದೇ ಕಾರಣಕ್ಕೆ ಬಹುತೇಕ ಕಲಾವಿದರುಗಳು ಕಲಾವಿದರನ್ನೇ ವರಿಸುವುದು ಸಾಮಾನ್ಯ.. ಇದೀಗ ಅದೇ ರೀತಿ ಕನ್ನಡದ ಮತ್ತೊಬ್ಬ ಖ್ಯಾತ ನಟಿಯೊಬ್ಬರು ನಿರ್ದೇಶಕರೊಬ್ಬರನ್ನು ಪ್ರೀತಿಸಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ..

ಹೌದು ಕಲರ್ಸ್ ಕನ್ನಡ ವಾಹಿನಿಯ ಕನ್ಯಾ ಕುಮಾರಿ ಧಾರಾವಾಹಿಯ ನಟಿ ರಶ್ಮಿತಾ ಶೆಟ್ಟಿ ಹಾಗೂ ನಿರ್ದೇಶಕ ಹೊನ್ನೇಶ್ ಅವರು ಮೊನ್ನೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಬೆಂಗಳೂರಿನ ಕನ್ವೆನ್ಷನ್ ಹಾಲ್ ಒಂದರಲ್ಲಿ ಅದ್ಧೂರಿಯಾಗಿ ಮದುವೆ ಸಮಾರಂಭ ನೆರವೇರಿದೆ.. ರಶ್ಮಿತಾ ಶೆಟ್ಟಿ ಈಗಾಗಲೇ ತ್ರಿವೇಣಿ ಸಂಗಮ.. ಸುಬ್ಬಲಕ್ಷ್ಮಿ ಸಂಸಾರ.. ಬ್ರಹ್ಮಾಸ್ತ್ರ ಧಾರಾವಾಹಿಯಲ್ಲಿಯೂ ಅಭಿನಯಿಸಿದ್ದು ಸಿನಿಮಾಗೂ ಕಾಲಿಟ್ಟಿದ್ದಾರೆ.. ಸಧ್ಯ ಇದೀಗ ಕನ್ಯಾ ಕುಮಾರಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರವಾದ ಯಾಮಿನಿ ಪಾತ್ರದಲ್ಲಿ ಬ್ಯುಸಿಯಾಗಿದ್ದಾರೆ..

ಇನ್ನು ಕೆಲ ದಿನಗಳ ಹಿಂದಷ್ಟೇ.. ದಾಸ ಪುರಂದರ ಧಾರಾವಾಹಿಯ ನಟಿ ಲಾವಣ್ಯ ಹಾಗೂ ನಟ ಶಶಿ ಹೆಗ್ಗಡೆ.. ನಾಗಿಣಿ ಧಾರಾವಾಹಿಯ ನಟ ನಿನಾದ್ ಹರಿತ್ಸ.. ಇನ್ನು ಇತ್ತ ಕಿರುತೆರೆ ನಟ ವಿನಯ್ ಹಾಗೂ ನಟಿ ಐಶ್ವರ್ಯಾ ಸಾಲಿಮಠ.. ಹೀಗೆ ಮೂವರು ಜೋಡಿಗಳ ಕಲ್ಯಾಣ ನೆರವೇರಿದ್ದು ಇದೀಗ ಕನ್ಯಾಕುಮಾರಿ ನಟಿ ರಶ್ಮಿತಾ ಶೆಟ್ಟಿ ಹಾಗೂ ನಿರ್ದೇಶಕ ಹೊನ್ನೇಶ್ ಅವರ ವಿವಾಹ ಸಂಪ್ರದಾಯ ಬದ್ಧವಾಗಿ ಅದ್ಧೂರಿಯಾಗಿ ನೆರವೇರಿದೆ.. ಮದುವೆ ಸಮಾರಂಭಕ್ಕೆ ಸಂಪೂರ್ಣ ಕನ್ಯಾಕುಮಾರಿ ಧಾರಾವಾಹಿ ತಂಡ ಆಗಮಿಸಿದ್ದು ನೂತನ ಜೋಡಿಗೆ ಶುಭ ಹಾರೈಸಿದ್ದಾರೆ..

ಇನ್ನು ನಟಿ ರಶ್ಮಿತಾ ಶೆಟ್ಟಿಯಾಗಲಿ ಅಥವಾ ನಿರ್ದೇಶಕ ಹೊನ್ನೇಶ್ ಅವರಾಗಲಿ ತಮ್ಮ ಮದುವೆಯ ವಿಚಾರವನ್ನು ಹೊರಗೆಲ್ಲೂ ಬಹಿರಂಗ ಪಡಿಸಿರಲಿಲ್ಲ.. ಸಾಮಾಜಿಕ ಜಾಲತಾಣದಲ್ಲಿಯೂ ಈ ಕುರಿತು ಯಾವುದೇ ವಿಚಾರ ಹಂಚಿಕೊಂಡಿರಲಿಲ್ಲ.. ಇದೀಗ ಇದ್ದಕಿದ್ದ ಹಾಗೆ ಇಬ್ಬರ ಮದುವೆಯ ಸುದ್ದಿ ಕೇಳಿ ಸ್ನೇಹಿತರು ಸಾಮಾಜಿಕ ಜಾಲತಾಣದಲ್ಲಿ ಸಂತೋಷ ವ್ಯಕ್ತಪಡಿಸಿದ್ದು ಇಬ್ಬರಿಗೂ ಶುಭ‌ಹಾರೈಸಿದ್ದಾರೆ..