ನೆನಪಿದ್ದಾರಾ ರತ್ನಮ್ಮ‌ ಮಂಜಮ್ಮ.. ಸರಿಗಮಪ ಶೋನಿಂದ ಹೋದ ನಂತರ ಇವರು ಏನಾದರು ಗೊತ್ತಾ..

0 views

ಸರಿಗಮಪ ಶೋ ಟಿ ಆರ್ ಪು ಗಾಗಿ ಅದೇನೇ ಮಾಡಲಿ.. ಆದರೆ ಇದೆಲ್ಲದಕ್ಕೂ ಮೀರಿ ಈ ಶೋನಿಂದ ಬಹಳಷ್ಟು ಜನರು ತಮ್ಮ ಜೀವನವನ್ನು ಕಟ್ಟಿಕೊಂಡಿದ್ದಾರೆ ಅನ್ನೋದು ಅಷ್ಟೇ ಸತ್ಯ‌. ಎಲ್ಲೋ ಇದ್ದ ಪ್ರತಿಭೆಗಳನ್ನು ಕರೆತಂದು ಅವರಿಗೊಂದು ಸೂಕ್ತ ವೇದಿಕೆಯನ್ನು ಒದಗಿಸಿಕೊಟ್ಟು.. ಅವರಿಗೆ ಸಕಲ ತರಬೇತಿ ನೀಡಿ ವೇದಿಕೆ ಮೇಲೆ ಹಾಡಿಸಿ.. ಅದನ್ನಿ ಅಚ್ಚುಕಟ್ಟಾಗಿ ತೆರೆ ಮೇಲೆ ಪ್ರಸಾರ ಮಾಡಿ ಜನರು ಇಷ್ಟ ಪಡುವಂತೆ ಮಾಡುವರು.. ಸರಿಗಮಪ ಮಾತ್ರವಲ್ಲ ಇತ್ತ ಕಾಮಿಡಿ ಕಿಲಾಡಿಗಳು ಆಗಿರಬಹುದು ಅಥವಾ ಕಲರ್ಸ್ ಕನ್ನಡ ವಾಹಿನಿಯ ಸಿಂಗಿಂಗ್ ಶೋ ಹಾಗೂ ಇನ್ನಿತರ ಕಾರ್ಯಕ್ರಮಗಳಾಗಿರಬಹುದು ಸಾಕಷ್ಟು ಹಳ್ಳಿಗರಿಗೆ ಅದರಲ್ಲೂ ಆರ್ಥಿಕವಾಗಿ ತೊಂದರೆಯಲ್ಲಿದ್ದು ಅವರಲ್ಲಿ ಪ್ರತಿಭೆಯೂ ಇದ್ದು ಅದನ್ನು ಹೊರ ತರಲು ಸಾಧ್ಯವಾಗದಂತವರಿಗೆ ವೇದಿಕೆ ಕೊಟ್ಟು ಅವರಿಗೆ ಸಂಭಾವನೆಯನ್ನೂ ಕೊಟ್ಟು ಜೊತೆಗೆ ಮುಂದಿನ ಜೀವನಕ್ಕೆ ದಾರಿಯೂ ಸಹ ಆಗಿವೆ ಎಂದರೆ ತಪ್ಪಾಗಲಾರದು.. ಅದೇ ರೀತಿ ಸರಿಗಮಪ ಶೋ ನಲ್ಲಿ ಹಾಡಿದ ಸಾಕಷ್ಟು ಮಂದಿ ಇಂದು ಸಿನಿಮಾಗಳಲ್ಲಿ ಹಿನ್ನೆಲೆ ಗಾಯಕರಾಗಿ ಗುರುತಿಸಿಕೊಂಡಿದ್ದಾರೆ..

ಅದರಲ್ಲೂ ಸಂಚಿತ್ ಹೆಗ್ಡೆ ಅಂತೂ ಅತಿ ಚಿಕ್ಕ ವಯಸ್ಸಿಗೆ ಸಾಕಷ್ಟು ಅವಕಾಶ ಪಡೆದು ಪರಭಾಷೆಗಳಲ್ಲಿಯೂ ಗಾಯಕನಾಗಿ ಗುರುತಿಸಿಕೊಂಡು ಅಷ್ಟೇ ಅಲ್ಲದೇ ನಟನಾಗಿಯೂ ಮಿಂಚುತ್ತಿದ್ದಾರೆ.. ಜೊತೆಗೆ ಕೈ ತುಂಬಾ ಸಂಪಾದನೆ ಸಹ ಮಾಡುತ್ತಿದ್ದಾರೆ.. ಈ ರೀತಿ ಸಾಕಷ್ಟು ಕಲಾವಿದತು ಇಂತಹ ಶೋಗಳ ಮೂಲಕ ಬದುಕು ಕಟ್ಟಿಕೊಂಡಿದ್ದಾರೆನ್ನಬಹುದು.. ಇನ್ನು ಸರಿಗಮಪ ವಿಚಾರಕ್ಕೆ ಬಂದರೆ ಸಾಕಷ್ಟು ಸೀಸನ್ ಗಳು ಬರಬಹಿದು ಹೋಗಬಹುದು.. ಆದರೆ ಈ ರೀತಿ ಕೆಲ ಸೀಸನ್ ಗಳಲ್ಲಿ ಬಂದ ಸ್ಪರ್ಧಿಗಳು ಮಾತ್ರ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದು ಬಿಡುತ್ತಾರೆ.. ಹನುಮಂತ, ಜ್ಞಾನೇಶ, ರತ್ನಮ್ಮ ಮಂಜಮ್ಮ, ಪುಟಾಣಿ ಜ್ಞಾನ ಹೀಗೆ ಕೆಲವೊಬ್ಬ ಸ್ಪರ್ಧಿಗಳನ್ನು ಎಷ್ಟೇ ಸೀಸನ್ ಕಳೆದರೂ ಮರೆಯಲಾಗದು..

ಇನ್ನು ಕಳೆದ ಸೀಸನ್ ನಲ್ಲಿ ಸರಿಗಮಪ ಕಾರ್ಯಕ್ರಮಕ್ಕೆ ಆಗಮಿಸಿದ್ದ ರತ್ನಮ್ಮ ಮಂಜಮ್ಮ ಅವರ ಪರಿಚಯ ಎಲ್ಲರಿಗೂ ಇದ್ದೇ ಇರುತ್ತದೆ.. ತುಮಕೂರಿನ ದೇವಸ್ಥಾನವೊಂದರಲ್ಲಿ ಹೊಟ್ಟೆ ಪಾಡಿಗಾಗಿ ಹಾಡು ಹೇಳುತ್ತಾ ಜನರು ನೀಡುತ್ತಿದ್ದ ಹಣವನ್ನು ಪಡೆದು ತಮ್ಮ ಮನೆ ನಡೆಸುವುದರ ಜೊತೆಗೆ ತಮ್ಮ ಔಷಧಿಯ ಖರ್ಚನ್ನೂ ಸಹ ನಿಭಾಯಿಸಬೇಕಿತ್ತು.. ಕಣ್ಣು ಕಾಣದ ಈ ಸಹೋದರಿಯರಿಗೆ ಸರಿಗಮಪ ಅವಕಾಶ ನೀಡಿತ್ತು.. ಇನ್ನು ಶೋ ಶುರುವಾದ ಮೊದಲ ವಾರದಲ್ಲಿಯೇ ಈ ಹೆಣ್ಣು ಮಕ್ಕಳಿಗೆ ಅವಕಾಶ ನೀಡಿದ್ದಕ್ಕೆ ಜೀ ವಾಹಿನಿಗೆ ಬಹಳಷ್ಟು ಮೆಚ್ಚುಗೆಯೂ ವ್ಯಕ್ತವಾಗಿತ್ತು.. ಆದರೆ ಇವರ ಹಾಡುಗಳನ್ನು ಸ್ಪರ್ಧೆ ಮಾಡದೇ ಇವರಿಗೆ ಸಹಾಯ ಮಾಡುವ ಸಲುವಾಗಿ ಸಂಭಾವನೆ ನೀಡಿ ಶೋನಲ್ಲಿ ಇವರ ಬಳಿ ಹಾಡಿಸಲಾಗುತಿತ್ತು..

ಹೌಜೊತೆಗೆ ಸಾಕಷ್ಟು ಜನರು ಇವರಿಗೆ ಸಹಾಯ ಮಾಡಲು ಸಹ ಮುಂದಾಗಿದ್ದರು.. ಸಹಾಯವೂ ಮಾಡಿದರು.. ಜೀ ವಾಹಿನಿ ಸಾಕಷ್ಟು ಹಣವನ್ನೂ ಸಹ ನೀಡಿತು. ಆದರೆ ಶೋ ಮುಗಿದ ಬಳಿಕ ಎಲ್ಲಿಯೂ ಅಷ್ಟಾಗಿ ಕಾಣಿಸಿಕೊಳ್ಳದ ಇವರಿಬ್ಬರು ಏನಾದರು ಎಂಬ ಕುತೂಹಲ ಇದ್ದೇ ಇದೆ.. ಅಂದು ಸರಿಗಮಪ ಶೋನಲ್ಲಿ ಭಾಗವಹಿಸಿದ ರತ್ನಮ್ಮ ಹಾಗೂ ಮಂಜಮ್ಮ ಅವರ ಮನೆಯ ಪರಿಸ್ಥಿತಿ ತೀರಾ ಹದಗೆಟ್ಟ ವಿಚಾರ ಎಲ್ಲರಿಗೂ ತಿಳಿಯಿತು.. ಆಗ ನಟ ಜಗ್ಗೇಶ್ ಅವರು ಇವರಿಗೆ ಸ್ವಂತದ್ದೊಂದು ಸೂರನ್ನೇ ಕಟ್ಟಿಸಿಕೊಟ್ಟರು.. ಹೌದು ಅವರಿದ್ದ ಮನೆ ಬೀಳುವ ಹಂತದ್ದಲ್ಲಿದ್ದು ಮಳೆ ಬಂದಾಗ ಬಹಳಷ್ಟು ತೊಂದರೆ ಅನುಭವಿಸುತ್ತಿದ್ದ ರತ್ನಮ್ಮ ಹಾಗೂ ಮಂಜಮ್ಮ ಕುಟುಂಬಕ್ಕೆ ಆ ದಿನ ಜಗ್ಗೇಶ್ ಅವರು ಮನೆಯ ಭರವಸೆ ಕೊಟ್ಟು ಕೇವಲ ನಲವತ್ತೈದು ದಿನಗಳಲ್ಲಿ ಅಚ್ಚುಕಟ್ಟಾದ ವಿಶಾಲವಾದ ಮನೆಯನ್ನೂ ಸಹ ನಿರ್ಮಿಸಿಕೊಟ್ಟರು.. ಇನ್ನು ಅವರು ಜೀವನ ಪೂರ್ತಿ ಒಂದು ಸ್ವಂತದ ಸೂರಿನಲ್ಲಿ ವಾಸ ಮಾಡುವಂತಾಯಿತು..

ಇನ್ನು ಇತ್ತ ಅರ್ಜುನ್ ಜನ್ಯ ಅವರೂ ಸಹ ರತ್ನಮ್ಮ ಮಂಜಮ್ಮ ಕುಟುಂಬಕ್ಕೆ ನೆರವಾಗಲು ಮುಂದೆ ಬಂದು ತಾವು ಇರುವವರೆಗೂ ಸಹ ಅವರ ಮನೆಗೆ ತಿಂಗಳಿಗೆ ಬೇಕಾದ ಎಲ್ಲಾ ದಿನಸಿ ಪದಾರ್ಥಗಳನ್ನು ನೀಡುವುದಾಗಿ ಹೇಳಿದ್ದರು.. ಇನ್ನು ಕಾರ್ಯಕ್ರಮದ ಕೊನೆಯಲ್ಲಿ ಜನರು ಕೊಟ್ಟ ಹಣದ ಜೊತೆ ಜೀ ಕನ್ನಡ ವಾಹಿನಿಯೂ ಸಹ ಹಣವನ್ನು ಸೇರಿಸಿ ಅದನ್ನು ಬ್ಯಾಂಕ್ ನಲ್ಲಿರಿಸಿ ಆ ಹಣದಿಂದ ಒರತಿ ತಿಂಗಳು ರತ್ನಮ್ಮ ಹಾಗೂ ಮಂಜಮ್ಮ ಅವರಿಗೆ ಬಡ್ಡಿಯ ರೂಪದಲ್ಲಿ ಹಣ ಕೈ ಸೇರುವಂತೆ ಮಾಡಿದರು.. ಒಮ್ಮೆಲೆ ದೊಡ್ಡ ಮೊತ್ತದ ಹಣ ಕೊಟ್ಟು ಶುರುವಿನಲ್ಲಿಯೇ ಆ ಹಣ ಖರ್ಚಾಗಿ ನಂತರ ಸಾಕಷ್ಟು ತೊಂದರೆ ಪಟ್ಟ ಸಾಕಷ್ಟು ಹಳ್ಳಿಗಾಡಿನ ಸ್ಪರ್ಧಿಗಳನ್ನು ನಾವು ನೋಡಿದ್ದೇವೆ.. ಅದೇ ಕಾರಣಕ್ಕೆ ಜೀ ವಾಹಿನಿ ಹಣವನ್ನು ಠೇವಣಿ ಇಟ್ಟು ರತ್ನಮ್ಮ ಹಾಗೂ ಮಂಜಮ್ಮರಿಗೆ ಬಡ್ಡಿ ಬರುವಂತೆ ಮಾಡಿದ್ದರು..

ಇನ್ನು ಶೋ ಮುಗಿಸಿ ತಮ್ಮ ಮನೆ ಸೇರಿದ ರತ್ನಮ್ಮ ಮಂಜಮ್ಮ ಮುಂದೆ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ.. ಇವರು ಏನಾದರು ಎಂಬ ಕುತೂಹಲ ಜನರಲ್ಲಿ ಇತ್ತು.. ಹೌದು ರತ್ನಮ್ಮ ಮಂಜಮ್ಮ ಸಧ್ಯ ತಮ್ಮ ಮನೆಯಲ್ಲಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.. ಅಷ್ಟೇ ಅಲ್ಲದೇ ಆ ದಿನ ಅರ್ಜುನ್ ಜನ್ಯಾ ಅವರು ನೀಡಿದ್ದ ಮಾತನ್ನೂ ಸಹ ಅವರು ಈಗಲೂ ಸಹ ನೆರವೇರಿಸಿಕೊಂಡು ಬರುತ್ತಿದ್ದು ಪ್ರತಿ ತಿಂಗಳು ರತ್ನಮ್ಮ ಮಂಜಮ್ಮ ಅವರ ಕುಟುಂಬಕ್ಕೆ ದಿನಸಿ ಪದಾರ್ಥಗಳನ್ನು ಕಳುಹಿಸಿಕೊಡುತ್ತಿದ್ದಾರೆ.. ಇತ್ತ ಜಗ್ಗೇಶ್ ಅವರು ಕಟ್ಟಿಸಿಕೊಟ್ಟಿದ್ದ ಮನೆಯಲ್ಲಿ ಸಂಪೂರ್ಣ ಕುಟುಂಬ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದರೆ.. ಜೀ ವಾಹಿನಿ ಕೊಟ್ಟ ಹಣದಿಂದ ಪ್ರತಿ ತಿಂಗಳು ಬರುವ ಹಣ ಔಷಧಿ ಹಾಗೂ ಇನ್ನಿತರ ಖರ್ಚಿಗೆ ಯಾವುದೇ ತೊಂದರೆ ಇಲ್ಲದಂತೆ ಜೀವನ ನಡೆಯುತ್ತಿದೆ.. ಇದರ ಜೊತೆಗೆ ಇವರಿಬ್ಬರು ತುಮಕೂರಿನವರಾದ ಕಾರಣ ಇವರನ್ನು ಸಿದ್ದಗಂಗಾ ಮಠದ ಶ್ರೀಗಳು ಕರೆಸಿ ಪ್ರಾರ್ಥನಾ ಸಮಯದಲ್ಲಿ ದೇವರ ಹಾಡುಗಳನ್ನು ಹಾಡಿಸುತ್ತಿದ್ದಾರೆ..

ಹೌದು ಮೊನ್ನೆಯೂ ಸಹ ಸಿದ್ದಗಂಗಾ ಮಠಕ್ಕೆ ಆಗಮಿಸಿದ್ದ ರತ್ನಮ್ಮ ಮಂಜಮ್ಮ ಪ್ರಾರ್ಥನಾ ಸಮಯದಲ್ಲಿ ಸಾವಿರಾರು ವಿದ್ಯಾರ್ಥಿಗಳ ಎದುರು ಶಿವನಾಮವನ್ನು ಹಾಡಿದರು.. ಜೊತೆಗೆ ಶ್ರೀಗಳು ರತ್ನಮ್ಮ ಮಂಜಮ್ಮರನ್ನು ಗೌರವಿಸಿ ಆರ್ಥಿಕವಾಗಿಯೂ ಸಹಾಯ ಮಾಡಿದ್ದಾರೆ.. ಒಂದು ಶೋ ಒಂದು ಸಂಪೂರ್ಣ ಕುಟುಂಬದ ಜೀವನ ವನ್ನೇ ಬದಲಿಸಿಬಿಟ್ಟಿತು ಎಂಬುದಕ್ಕೆ ಇವರೇ ನೈಜ್ಯ ಉದಾಹರಣೆ.. ದೇವಸ್ಥಾನದ ಮುಂದೆ ಜನರಿಂದ ಹಣ ಪಡೆದು ಬದುಕುತ್ತಿದ್ದ ಕುಟುಂಬವೀಗ ಒಳ್ಳೆಯ ರೀತಿಯಲ್ಲಿ ಗೌರವಯುತವಾಗಿ ಜೀವನ ಸಾಗಿಸಲು ನೆರವಾದ ಜೀ ವಾಹಿನಿ, ಜಗ್ಗೇಶ್ ಅವರು, ಅರ್ಜುನ್ ಜನ್ಯಾ ಅವರು ಹಾಗೂ ಇನ್ನು ಸಾಕಷ್ಟು ಮಂದಿ ಸಹಾಯ ಮಾಡಿದ್ದಾರೆ.. ಪ್ರತಿಯೊಬ್ಬರೂ ಸಹ ಇವರ ಈ ಸುಂದರವಾದ ನೆಮ್ಮದಿಯ ಬದುಕಿಗೆ ಕಾರಣಕರ್ತರೆನ್ನಬಹುದು.. ಸಮಯ ಒಂದೇ ರೀತಿ ಇರದು ಎಂಬುದಕ್ಕೇ ಇವರೇ ಉದಾಹರಣೆ.. ಪ್ರತಿಯೊಬ್ಬರಿಗೂ ಅವರದ್ದೇ ಆದ ಸಮಯ ಬಂದೇ ಬರುತ್ತದೆ.. ಕಾಯಬೇಕಷ್ಟೇ..