ಕೊನೆಯ ಕ್ಷಣದಲ್ಲಿ ರವಿ ಬೆಳೆಗೆರೆ ಬಗ್ಗೆ ಎಲ್ಲಾ ಸತ್ಯ ಬಿಚ್ಚಿಟ್ಟ ಲೀಲಾವತಿ ಅವರು.. 

0 views

ಇಂದು ಅಕ್ಷರ ಲೋಕದ ರವಿ ಹಸ್ತಂಗತವಾಯಿತೆನ್ನಬಹುದು.. ಅದೆಷ್ಟೋ ಯುವ ಜನತೆಗೆ ಓದುವ ಹುಚ್ಚು ಹಚ್ಚಿದ ಅಕ್ಷರ ಮಾಂತ್ರಿಕ ಇನ್ನಿಲ್ಲವೆಂಬ ಸುದ್ದಿ ಅದೆಷ್ಟೋ ಜನರಿಗೆ ಅರಗಿಸಿಕೊಳ್ಳಲು ಕೂಡ ಸಾಧ್ಯವಾಗುತ್ತಿಲ್ಲ.. ಅದರಲ್ಲೂ ರವಿ ಬೆಳೆಗೆರೆ ಅವರ ಮಾತುಗಳಿಂದ ಸ್ಪೂರ್ತಿಯಾಗಿ ಅದೆಷ್ಟೋ‌ ಮಂದಿ ಜೀವನದಲ್ಲಿ ಸಾಧನೆ ಮಾಡಿದ ಉದಾಹರಣೆಗಳೂ ಇವೆ.. ಅವರ ಮಾತುಗಳಿಂದ ಪ್ರೇರಿತರಾಗಿ ಬದುಕು ಕಟ್ಟಿಕೊಂಡವರೂ ಇದ್ದಾರೆ..

ಅಂತಹ ದಿಗ್ಗಜ ಪತ್ರಕರ್ತ.. ಲೇಖಕ.. ಮಾನವೀಯ ಗುಣವುಳ್ಳ ಮನುಷ್ಯ ಇನ್ನುಮುಂದೆ ನೆನಪು ಮಾತ್ರವೇ ಎನ್ನುವುದೇ ಬಹಳ ನೋವು ತರಿಸುತ್ತದೆ.. ಸುದ್ದಿವಾಹಿನಿಗಳು ಅದು ಇದು ಎನ್ನದೇ ಎಲ್ಲಾ ಸುದ್ದಿ ವಾಹಿನಿಗಳಲ್ಲಿಯೂ ರವಿ ಬೆಳೆಗೆರೆ ಅವರ ಅಭಿಮಾನಿಗಳು ಇರುವುದು ವಿಶೇಷ.. ಅವರ ಕಾರಣದಿಂದ ಎಷ್ಟೋ ಜನರು ಪತ್ರಕರ್ತ ಹುದ್ದೆಗೆ ಬಂದದ್ದೂ ಇದೆ.. ಇನ್ನು ನಿನ್ನೆ ಮಧ್ಯರಾತ್ರಿ 12.15 ಕ್ಕೆ ಹಸ್ತಂಗತರಾದ ರವಿ ಬೆಳೆಗೆರೆ ಅವರ ಅಂತಿಮ ಸಂಸ್ಕಾರ ಇಂದು ಬನಶಂಕರಿಯಲ್ಲಿ ನೆರವೇರಿತು.. ಕೊರೊನಾವನ್ನು ಲೆಕ್ಕಿಸದೇ ಆಪ್ತರು ಸಂಬಂಧಿಕರು ಎಲ್ಲದಕ್ಕಿಂತ ಹೆಚ್ಚಾಗಿ ಸ್ನೇಹಿತರು.. ಅಭಿಮಾನಿಗಳು ಹಾಜರಾಗಿ ರವಿ ಬೆಳೆಗೆರೆ ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ..

ಅದರಲ್ಲೂ ಬಹಳ ವಯಸ್ಸಾದ ಜೀವವೊಂದು ಇಂದು ರವಿ ಬೆಳೆಗೆರೆ ಅವರ ಅಂತಿಮ ಸಂಸ್ಕಾರದ ಜಾಗದಲ್ಲಿ ಇದ್ದದ್ದು ಕಂಡು ಬಂತು.. ನಡೆಯಲು ಸಾಧ್ಯವಾಗದೆ ಮಗನ ಸಹಾಯದಿಂದ ನಡೆದು ಬಂದು ರವಿ ಬೆಳೆಗೆರೆ ಮುಂದೆ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟರು.. ಹೌದು ಅವರು ಮತ್ಯಾರು ಅಲ್ಲ ಹಿರಿಯ ನಟಿ‌ ಲೀಲಾವತಿ ಅವರು.. ಅಷ್ಟಕ್ಕೂ ಲೀಲಾವತಿ ಅವರಿಗೂ ರವಿ ಬೆಳೆಗೆರೆ ಅವರಿಗೂ ಏನು ಸಂಬಂಧ? ಲೀಲಾವತಿ ಅವರು ಆರೋಗ್ಯವನ್ನು ಲೆಕ್ಕಿಸದೇ ರವಿ ಬೆಳೆಗೆರೆ ಅವರ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡು ಬಹಳ ದುಃಖಿತರಾಗಲು ಕಾರಣವೇನು.. ಎಲ್ಲಕ್ಕೂ ಉತ್ತರ ಇಲ್ಲಿದೆ ನೋಡಿ..

ಲೀಲಾವತಿ ಅವರು ಇಂದು ರವಿ ಬೆಳೆಗೆರೆ ಅವರನ್ನು‌ ನೋಡಲು ಬಂದಾಗ ಮಾದ್ಯಮದ ಮುಂದೆ ಮಾತನಾಡಿ ಬಿಕ್ಕಿ ಬಿಕ್ಕಿ ಅತ್ತರು.. “ನಾನ್ ಏನ್ ಮಾತಾಡ್ಲಿ? ಈ ಅಮ್ಮನ್ನ ಬಿಟ್ಟ್ ಬಿಟ್ಟು ನೀವ್ ಯಾಕ್ ಹೋದ್ರಿ.. ರವಿ ಅವರೇ.. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ.ಮ್ ನೀವ್ ಮಾಡಿದ್ ಸಾಹಸ.. ನಿಮಗೆ ಇದ್ದಿದ್ದ್ ಎದೆಗಾರಿಕೆ.. ಲೀಲಾವತಿಗೆ ಮರು ಬಾಳು ಕೊಟ್ಟದ್ದು ನೀವೆ.. ದೇವರು ನೀವು.. ದೇವರು ನಿಮ್ಮ ಆತ್ಮಕ್ಕೆ ಶಾಂತಿ‌ ಕೊಡ್ಲಿ.. ಅಯ್ಯೋ ನಿಮ್ಮಂತ ಮನುಷ್ಯ.. ನಿಮ್ಮಂತ ಗಂಡು ಮತ್ತೆ ಎಂದೂ ಹುಟ್ಟೋದಿಲ್ಲ.. ಅಂತಹ ಎದೆಗಾರಿಕೆ ನಿಮಗೆ.. ನಿಮ್ಮ ಹಾರ್ಟ್ ಅನ್ನ ವಜ್ರದಿಂದ ಕೆತ್ತಿದಾರೆ.. ಅದಕ್ಕೆ ಅಷ್ಟು ಗಟ್ಟಿ.. ಯಾವ ಗಂಡಸಿಗೂ ಬರೋದಿಲ್ಲ ಅದು.. ಯಾವ ಗಂಡಸಿಗೂ ಬರೋದಿಲ್ಲ..

ಯಾವ ದೋಷಗಳು ಇರ್ತಾ ಇರ್ಲಿಲ್ಲಾ.. ನಿಮ್ಮ ಶಕ್ತಿ ಬೇರೆ ಯಾರಿಗೂ ಬರೋದಿಲ್ಲ.. ದೇವರೇ.. ನಿಮ್ಮ ಮಕ್ಕಳನ್ನು ದೇವರು ಸಿಂಹದಂತೆ ಬೆಳೆಸಲಿ ಹೊರತು ನರಿ ಅಂತೆ ಬೆಳೆಸೋದು ಬೇಡ.. ನೀವು ಸಿಂಹದಂತೆ ಬದುಕಿದಿರಿ.. ನಿಮ್ಮ ಮಕ್ಕಳು ಹಾಗೆ ಬದುಕಬೇಕು.. ನಿಮ್ಮ ಹೆಸರು ಉಳಿಬೇಕು.. ನಿಮ್ಮ ಕೀರ್ತಿ ಅಮರವಾಗಿ ಇರಬೇಕು.. ರವಿ ಅವರೇ.. ರವಿ ಅವರೇ.. ಒಂದೇ ಒಂದೋ ಬಾರಿ ಅಮ್ಮಾ ಅಂತ ಕರೆದುಬಿಡಿ.. ದಯವಿಟ್ಟು.. ರವಿ ಬೆಳೆಗೆರೆ ಅವರನ್ನು ಯಾರೂ ಮರಿಬೇಡಿ ದಯವಿಟ್ಟು.. ಅವರು ಅಮರವಾಗಿ ಬಾಳಲಿ.. ರವಿ ಬೆಳೆಗೆರೆ ಅವರೇ ದಯವಿಟ್ಟೂ ಅಮ್ಮಾ ಅಂತ ಅಂದುಬಿಡಿ.. ಎಂದು ಕಣ್ಣೀರಿಟ್ಟು ಅಂಗಲಾಚಿತು ಆ ಹಿರಿಯ ಜೀವ..

ಅಷ್ಟರಲ್ಲಿ ಅಮ್ಮಾ ಅಮ್ಮಾ ಸಾಕು ಎಂದ ವಿನೋದ್ ರಾಜ್ ಅವರು‌ ಮಾತನಾಡಿ.. ” ಇದ್ದದ್ದನ್ನ ಇದ್ದ ಹಾಗೆ ಹೇಳುವ ಏಕೈಕ ಪತ್ರಕರ್ತರು.. ನಮ್ಮ ತಾಯಿಯವರ ಕಾಲದಿಂದ ಈಗಿನವರೆಗೆ ಧೈರ್ಯವಾಗಿ‌ ಮಾತಮಾಡಿರುವ ಏಕೈಕ ವ್ಯಕ್ತಿ ರವಿ ಬೆಳೆಗೆರೆ ಅವರು.. ಅವರು ಇದ್ರೂ ಇಲ್ದೇ ಇದ್ರೂ ಆನೆನೆ.. ಅವರ ಮಾತಿನ ಶೈಲಿ ಅವರ ಬರವಣಿಗೆ.. ಅವರು ನಡೆದುಕೊಳ್ಳುತ್ತಿದ್ದ ರೀತಿ ಎಲ್ಲವೂ ಯುವ ಪತ್ರಕರ್ತರಿಗೆ ಪಾಠ ಇದು.. ಈ ಮಹಾನ್ ಸಾಹಸಮಯ ವ್ಯಕ್ತಿ ಅವರು.. ನನ್ನನ್ನ ನನ್ನ ತಾಯಿಯನ್ನ ಯಾವ ಮಟ್ಟಕ್ಕೆ ಅವರು ನೋಡಿದ್ರು ಅಂದ್ರೆ ಹೇಳಿಕೊಳ್ಳುವ ವಿಚಾರ ಅಲ್ಲ ಅದು.. ಇವತ್ತು ನಾನು‌ ನನ್ನ ತಾಯಿ ಇದೀವಿ.. ಬದುಕಿದ್ದೀವಿ ಅಂದರೆ ಅದಕ್ಕೆ ಕಾರಣ ರವಿ ಬೆಳೆಗೆರೆ ಅವರು ಮಾತ್ರ.. ಅಮ್ಮಾ ನಾನ್ ಇದೀನಮ್ಮಾ ಅಂತಿದ್ರು.. ನನ್ನ ತಮ್ಮನ ರೀತಿ ನೋಡಿಕೊಂಡಿದ್ರು.. ನಿಜವಾಗಲು ಯರನ್ನಾದ್ರು ಆತ್ಮೀಯವಾಗಿ ಪ್ರೀತಿಸುತ್ತೀರಾ ಅಂದ್ರೆ.. ರವಿ ಬೆಳೆಗೆರೆ ಅವರ ರೀತಿ ಇರಬೇಕು.. ಎಂದು ಭಾವುಕರಾದರು..

ಹೌದು ಲೀಲಾವತಿ ಅವರು ಹಾಗೂ ವಿನೋದ್ ಅವರ ಜೀವನದಲ್ಲಿ ರವಿ ಬೆಳೆಗೆರೆ ಅವರು ಬಹಳ ಮುಖ್ಯ ಪಾತ್ರವನ್ನಿ ವಹಿಸಿದ್ದರು.. ಅತ್ಯಂತ ಕೆಟ್ಟ ಸಮಯವೊಂದರಲ್ಲಿ ಲೀಲಾವತಿ ಅವರು ಹಾಗೂ ವಿನೋದ್ ಅವರನ್ನು ಕಾಪಾಡಿದ್ದರು.. ಅವರಿಗೆ ಬೆಂಬಲವಾಗಿ ನಿಂತಿದ್ದರು.. ಲೀಲಾವತಿ ಅವರು ಹಾಗೂ ವಿನೋದ್ ಅವರು ಬದುಕಿದ್ದೇ ರವಿ ಬೆಳೆಗೆರೆ ಅವರಿಂದ ಎನ್ನುವ ಮಾತುಗಳು ಸಹ ಪತ್ರಕರ್ತರ ವಲಯದಲ್ಲಿ ಕೇಳಿ ಬರುತ್ತದೆ.. ಒಟ್ಟಿನಲ್ಲಿ ಕಾಣದೇ ಅದೆಷ್ಟೋ ಜೀವಗಳಿಗೆ ಸಹಾಯ ಮಾಡಿದ್ದ ರವಿ ಬೆಳೆಗೆರೆ ಅವರ ಬದುಕು ನಿಜಕ್ಕೂ ಅದೆಷ್ಟೋ ಜನರಿಗೆ ಪಾಠವೂ ಸ್ಪೂರ್ತಿಯೂ ಮಾರ್ಗದರ್ಶನವೂ ಹೌದು.. ಹೋಗಿ ಬನ್ನಿ ಸರ್.. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ..