ತಾನು ಕಷ್ಟದಲ್ಲಿದ್ದರೂ ಸಹ ಖುಷ್ಬೂ ತಾಯಿ ಉಳಿಸಲು ರವಿಚಂದ್ರನ್ ಮಾಡಿದ ಕೆಲಸ ನೋಡಿ..

0 views

ಕನ್ನಡ ಚಿತ್ರರಂಗದ ಶೋಮ್ಯಾನ್ ಎಂದು ಪ್ರಖ್ಯಾತಿ ಪಡೆದುಕೊಂಡಿರುವವರು ನಟ ರವಿಚಂದ್ರನ್. ಕನ್ನಡ ಚಿತ್ರರಂಗಕ್ಕೆ ಅಭೂತಪೂರ್ವ ಕೊಡುಗೆಗಳನ್ನು ನೀಡಿರುವ ನಿರ್ಮಾಪಕ ಎನ್.ವೀರಾಸ್ವಾಮಿ ಅವರ ದೊಡ್ಡ ಮಗ ಕ್ರೇಜಿಸ್ಟಾರ್ ರವಿಚಂದ್ರನ್ ಅವರು. ತಂದೆಯ ಮಾರ್ಗದರ್ಶನದಲ್ಲಿ ಬೆಳೆದ ಕ್ರೇಜಿಸ್ಟಾರ್ ಇಂದು ಕನಸುಗಾರನಾಗಿ ಕನ್ನಡ ವೀಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಇಂದು ರವಿಚಂದ್ರನ್ ಅವರ ಹುಟ್ಟುಹಬ್ಬ. ಇಂದು 61ನೇ ವಸಂತಕ್ಕೆ ಕಾಲಿಟ್ಟಿದ್ದಾರೆ ನಟ ರವಿಚಂದ್ರನ್. ಇವರ ಬಗ್ಗೆ, ಇವರ ಪ್ರತಿಭೆಯ ಬಗ್ಗೆ ಎಷ್ಟು ಬರೆದರು ಸಾಲುವುದಿಲ್ಲ, ಚಿತ್ರರಂಗದ ಎಲ್ಲಾ ವಿಭಾಗದಲ್ಲೂ ಪರಿಣಿತಿ ಹೊಂದಿರುವವರು ನಟ ರವಿಚಂದ್ರನ್. ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಕಲಾವಿದೆಯರನ್ನು ಕರೆತಂದವರು. ರವಿಚಂದ್ರನ್ ಅವರು ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡಿದ ಅದ್ಭುತ ನಟಿಯರಲ್ಲಿ ಒಬ್ಬರು ಖುಷ್ಬೂ, ವರ್ಷಗಳ ಹಿಂದೆ ಖುಷ್ಬೂ ಅವರಿಗೆ ರವಿಚಂದ್ರನ್ ಅವರು ಎಂಥಹ ಸಹಾಯ ಮಾಡಿದ್ದರು ಗೊತ್ತಾ..

ನಟಿ ಖುಷ್ಬೂ ಅವರು ಮೂಲತಃ ಉತ್ತರ ಭಾರತದವರು, ನಟನೆ ಶುರು ಮಾಡಿ, ಇವರು ಫೇಮಸ್ ಆಗಿದ್ದು ದಕ್ಷಿಣ ಭಾರತದಲ್ಲಿ. ಖುಷ್ಬೂ ಅವರು ತೆಲುಗು ತಮಿಳು ಸಿನಿಮಾಗಳಲ್ಲಿ ಅಭಿನಯಿಸಿದ್ದರು, ಅವರನ್ನು ಕನ್ನಡಕ್ಕೆ ಪರಿಚಯ ಮಾಡಿದ್ದು ರವಿಚಂದ್ರನ್ ಅವರು. ರಣಧೀರ ಸಿನಿಮಾ ಮೂಲಕ ಖುಷ್ಬೂ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡಿದರು. ಆಗಿನಿಂದ ಈಗಿನವರೆಗೂ ಖುಷ್ಬೂ ಮತ್ತು ರವಿಚಂದ್ರನ್ ಅವರು ಬೆಸ್ಟ್ ಫ್ರೆಂಡ್ಸ್ ಆಗಿದ್ದಾರೆ. ರಣಧೀರ, ಅಂಜದ ಗಂಡು, ಯುಗಪುರುಷ, ಶಾಂತಿ ಕ್ರಾಂತಿ ಸಿನಿಮಾಗಳಲ್ಲಿ ರವಿಚಂದ್ರನ್ ಅವರು ಖುಷ್ಬೂ ಅವರೊಡನೆ ನಟಿಸಿದ್ದಾರೆ.

ವರ್ಷಗಳು ಉರುಳಿದರು ಇವರಿಬ್ಬರ ಸ್ನೇಹ ಮಾತ್ರ ಕಡಿಮೆಯಾಗಿಲ್ಲ. ಖುಷ್ಬೂ ಅವರಿಗೆ ರವಿಚಂದ್ರನ್ ಅವರ ಮೇಲೆ ಅಗಾಧವಾದ ಗೌರವ ಮತ್ತು ಸ್ನೇಹ ಇದೆ. ಹಾಗಾಗಿ ರವಿಚಂದ್ರನ್ ಅವರ ಕುರಿತಾಗಿ ಯಾವುದೇ ಕಾರ್ಯಕ್ರಮ ಇದ್ದರೂ ಸಹ ಖುಷ್ಬೂ ಅವರು ಬೆಂಗಳೂರಿಗೆ ಬಂದು ಪಾಲ್ಗೊಳ್ಳುತ್ತಾರೆ. ಪ್ರಸ್ತುತ ರವಿಚಂದ್ರನ್ ಅವರು ಜೀಕನ್ನಡ ವಾಹಿನಿಯ ಡ್ರಾಮಾ ಜ್ಯೂನಿಯರ್ಸ್ ಶೋನಲ್ಲಿ ಜಡ್ಜ್ ಆಗಿದ್ದಾರೆ. ರವಿಚಂದ್ರನ್ ಅವರ ಹುಟ್ಟುಹಬ್ಬವನ್ನು ಡ್ರಾಮಾ ಜ್ಯೂನಿಯರ್ಸ್ ತಂಡ ಬಹಳ ವಿಶೇಷವಾಗಿ ಆಚರಿಸಿದೆ.

ಪುಟ್ಟ ಮಕ್ಕಳು ರವಿಚಂದ್ರನ್ ಅವರ ಲೈಫ್ ಜರ್ನಿಯನ್ನು ಒಂದು ಸ್ಕಿಟ್ ಮೂಲಕ ತೋರಿಸಿ, ರವಿಚಂದ್ರನ್ ಅವರನ್ನು ಸರ್ಪ್ರೈಸ್ ಮಾಡಿದ್ದರು. ಹಾಗೆಯೇ ವಿಶೇಷ ಅತಿಥಿಯಾಗಿ ಖುಷ್ಬೂ ಅವರನ್ನು ಕರೆಸಿದ್ದರು. ರವಿಚಂದ್ರನ್ ಅವರಿಗೆ ಹೂಗಳ ಬೊಕ್ಕೆ ನೀಡಿ, ವೆಲ್ಕಮ್ ಮಾಡಿದರು ನಟಿ ಖುಷ್ಬೂ, ರವಿಚಂದ್ರನ್ ಅವರ ಬಗ್ಗೆ ವೇದಿಕೆಯಲ್ಲಿ ಮಾತನಾಡಿ, “ರವಿಚಂದ್ರನ್ ಸರ್ ಸೈಲೆಂಟ್ ಆಗಿದ್ದು ಸಹಾಯ ಮಾಡುತ್ತಾರೆ. ನನ್ನ ತಾಯಿ ಇಂದು ಜೀವಂತವಾಗಿ ಇರೋದಕ್ಕೆ ಅವರೇ ಕಾರಣ. ಅವರ ಸಹಾಯವನ್ನು ನಾನು ಮರೆಯಲು ಸಾಧ್ಯವಿಲ್ಲ. ಅವರಿಗೆ ನಾನು ಸದಾ ಋಣಿಯಾಗಿರುತ್ತೇನೆ..” ಎಂದರು ನಟಿ ಖುಷ್ಬೂ.

ಡ್ರಾಮಾ ಜ್ಯೂನಿಯರ್ಸ್ ವೇದಿಕೆಯ ಮೇಲೆ ಖುಷ್ಬೂ ಅವರಿಂದ ಹೂಗಳನ್ನು ಪಡೆದ ರವಿಚಂದ್ರನ್ ಅವರು, ಫ್ಲವರ್ ಇಂದ ಫ್ಲವರ್ ತಗೊಳ್ತಾ ಇದ್ದೀನಿ ಎಂದು ತಮಾಷೆ ಮಾಡಿದರು. ಖುಷ್ಬೂ ಅವರು ರವಿಚಂದ್ರನ್ ಅವರ ಬಗ್ಗೆ ಮತ್ತು ಡ್ರಾಮಾ ಜ್ಯೂನಿಯರ್ಸ್ ಶೋಗೆ ಬಂದಿದ್ದರ ಬಗ್ಗೆ ಟ್ವೀಟ್ ಸಹ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, “ನಮ್ಮ ಜೀವನದಲ್ಲಿ ಕೆಲವು ವ್ಯಕ್ತಿಗಳು ಬಂದು ಹೋಗುತ್ತಾರೆ, ಇನ್ನೂ ಕೆಲವರು ಜೀವನದ ಭಾಗವಾಗಿರುತ್ತಾರೆ. ಕನ್ನಡ ಚಿತ್ರರಂಗಕ್ಕೆ ನನ್ನನ್ನು ಪರಿಚಯಸಿದ್ದು ಕ್ರೇಜಿಸ್ಟಾರ್ ರವಿಚಂದ್ರನ್ ಸರ್. 35 ವರ್ಷಗಳ ಹಿಂದೆ ರಣಧೀರ ಸೆಟ್‌ ನಲ್ಲಿ ನಾನು ರವಿ ಸರ್‌ ಅವರನ್ನು ಭೇಟಿಯಾದೆ. ಪ್ರೀತಿಯಿಂದ, ಸ್ನೇಹದಿಂದ, ಕುಟುಂಬದ ಹಾಗೆ ಇಷ್ಟು ವರ್ಷ ಕಳೆದಿದ್ದೇವೆ. ಸರ್ ಹುಟ್ಟುಹಬ್ಬದ ವಿಶೇಷ ಸಂಚಿಕೆಯಲ್ಲಿ ಡ್ರಾಮಾ ಜ್ಯೂನಿಯರ್ಸ್ ಶೋ ನಲ್ಲಿ ಭಾಗವಹಿಸಿದ್ದು ತುಂಬ ಖುಷಿ ಕೊಟ್ಟಿದೆ..” ಎಂದು ಬರೆದುಕೊಂಡಿದ್ದಾರೆ ನಟಿ ಖುಷ್ಬೂ.

ಇನ್ನು ಕ್ರೇಜಿಸ್ಟಾರ್ ಅವರ ಬಗ್ಗೆ ಹೇಳುವುದಾದರೆ, ಅವರಿಗೆ 61 ವರ್ಷವಾಗಿದೆ ಎಂದರೆ ನಂಬಲು ಅಸಾಧ್ಯ. ಈಗಲೂ ಕಣ್ಣಲ್ಲೇ ಎಲ್ಲರನ್ನು ಮೋಡಿ ಮಾಡುತ್ತಾರೆ ಕ್ರೇಜಿಸ್ಟಾರ್. ಡ್ರಾಮಾ ಜ್ಯೂನಿಯರ್ಸ್ ಮೂಲಕ ಮಕ್ಕಳ ಜೊತೆಗೆ ಹೊಸ ಜರ್ನಿ ಶುರು ಮಾಡಿದ್ದಾರೆ ರವಿಮಾಮ. ಈ ಜರ್ನಿ ಹೀಗೆ ಮುಂದುವರೆಯಲಿ, ಅವರ ಕನಸುಗಳೆಲ್ಲವೂ ನನಸಾಗಲಿ, ರವಿಚಂದ್ರನ್ ಅವರು ಇನ್ನು ಹೆಚ್ಚು ಸಿನಿಮಾಗಳಲ್ಲಿ ನಟಿಸಲಿ ಎನ್ನುವುದು ಅಭಿಮಾನಿಗಳ ಆಸೆ.