ನಿಜ ಜೀವನದ ಜೊತೆಜೊತೆಯಲಿ ಸ್ಟೋರಿ.. 54 ವಯಸ್ಸಿನವನ ಜೊತೆ 24 ರ ಯುವತಿ ಮದುವೆ.. ಆದರೆ ಮದುವೆ ನಂತರ ಆಗಿದ್ದೇ ಬೇರೆ..

0 views

ಕನ್ನಡ ಕಿರುತೆರೆಯ ಸೂಪರ್ ಹಿಟ್ ಧಾರಾವಾಹಿ ಜೊತೆಜೊತೆಯಲಿ ತಮ್ನ ವಿಭಿನ್ನ ಸ್ಟೋರಿಯಿಂದಲೇ ಜನರ ಮೆಚ್ಚುಗೆ ಗಳಿಸಿದೆ.. ಆದರೆ ಇಲ್ಲೊಂದು ನಿಜ ಜೀವನದ ಜೊತೆಜೊತೆಯಲಿ ಕತೆ ನಡೆದಿದ್ದು 54 ವಯಸ್ಸಿನವನ ಜೊತೆ 24 ರ ಯುವತಿಯ ಮದುವೆ ನಡೆದಿದೆ.. ಆದರೆ ಕೊನೆಗೆ ಮಾತ್ರ ಅವರಿಬ್ಬರು ಊಹಿಸದ ಘಟನೆ ನಡೆದು ಹೋಗಿದೆ.. ಹೌದು ಬಳ್ಳಾರಿ ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ ಡಿಸೆಂಬರ್ 16 ರಂದು ಶ್ವೇತಾ ಎಂಬ ಯುವತಿ ನಾಪತ್ತೆ ಯಾಗಿದ್ದಳು.. ಡಿಸೆಂಬರ್ 20 ರಂದು ಶ್ವೇತಾಳ ಪೋಷಕರು ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದರು..

ಇಂಜಿನಿಯರಿಂಗ್ ಪದವೀಧರೆಯೂ ಆಗಿರುವ ಶ್ವೇತಾ ಡಿಸೆಂಬರ್ 16 ರಂದೇ ಚರ್ಚ್ ಫಾಸ್ಟರ್ ರವಿಕುಮಾರ್ ಎಂಬುವವರ ಜೊತೆ ಪರಾರಿಯಾಗಿದ್ದಳು.. ಆಕೆಗೆ 24 ವರ್ಷ.. ಆತನಿಗೆ 54 ವರ್ಷ.. ಇವರಿಬ್ಬರು ಅದಾಗಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ತನ್ನ 54 ವಯಸ್ಸಿನ ಗಂಡನ ಜೊತೆ ಯಾರಿಗೂ ತಿಳಿಯದ ಸ್ಥಳಕ್ಕೆ ತೆರಳಿದ್ದು ತನ್ನ ಅಪ್ಪ ಅಮ್ಮನಿಂದ ತನ್ನ ಗಂಡನಿಗೆ ತೊಂದರೆ ಆಗಬಾರದೆಂದು ತಾನಿರುವ ಜಾಗದಿಂದಲೇ ವೀಡಿಯೋ ಮಾಡಿ ಹರಿಬಿಟ್ಟಿದ್ದಳು.. “ನಾನು ಎಲ್ಲಿಯೂ ನಾಪತ್ತೆ ಆಗಿಲ್ಲ.. ನಾನು ಚರ್ಚ್ ಗೆ ಆಗಾಗ ಹೋಗುತ್ತಿದ್ದೆ.. ಆದರೆ ನನ್ನ ಅಪ್ಪ ಅಮ್ಮನಿಗೆ ನಾನು ಚರ್ಚ್ ಗೆ ಹೋಗೋದು ಇಷ್ಟ ಇರಲಿಲ್ಲ..

ನಮ್ಮ ಮನೆಯಲ್ಲಿ ಇದೇ ವಿಚಾರವಾಗಿ ಆಗಾಗ ಗಲಾಟೆಯೂ ಆಗುತಿತ್ತು.. ಆದರೆ ನಾನು ಚರ್ಚ್ ಗೆ ಹೋಗೋದು ಬಿಡಲಿಲ್ಲ.. ಫಾಸ್ಟರ್ ಜೊತೆ ನನ್ನ ಅಪ್ಪ ಅಮ್ಮ ಮಾತನಾಡಿ ನಾನು ಚರ್ಚ್ ಗೆ ಹೋಗುವುದನ್ನು ನಿಲ್ಲಿಸಲು ಪ್ರಯತ್ನ ಮಾಡಿದರು.. ಆದರೆ ಅದು ಸಾಧ್ಯವಾಗಲಿಲ್ಲ.. ನಾನೇ ಫಾಸ್ಟರ್ ಅನ್ನು ಮದುವೆ ಆಗುವಂತೆ ಒತ್ತಾಯಿಸಿದೆ.. ಆದರೆ ಫಾಸ್ಟರ್ ಬೇಡ ಎಂದರು.. ನಾನೇ ಬಲವಂತ ಮಾಡಿ ಕರೆತಂದೆ.. ಅದಾಗಲೇ ನಾವಿಬ್ಬರು ಮದುವೆ ಆಗಿದ್ದೇವೆ.. ನನ್ನ ಅಪ್ಪ ಅಮ್ಮನಿಂದ ನನ್ನ ಗಂಡನಿಗೆ ತೊಂದರೆ ಇದೆ ಎಂದಿದ್ದಳು..

ಈ ಮೂಲಕ ಅವರ ತಂದೆ ತಾಯಿ ನೀಡಿದ್ದ ದೂರು ವಜಾ ಆಗಿತ್ತು.. ಯುವತಿ ತಾನೇ ಸ್ವತಃ ಫಾಸ್ಟರ್ ಜೊತೆ ತೆರಳಿರುವುದಾಗಿ ವೀಡಿಯೋ ಹಾಕುವ ಮೂಲಕ ತನ್ನ ಗಂಡನನ್ನು ಪೊಲೀಸರಿಂದ ರಕ್ಷಸಿಕೊಂಡಳು.. ಆದರೆ ಮುಂದೆ ನಡೆದದ್ದೇ ಬೇರೆ.. ಹೌದು ಅದಾಗಲೇ ನಿನ್ನೆ ಜನವತಿ ಒಂದನೇ ತಾರೀಕು ಇನ್ನೂ ಇಬ್ಬರು ಮಹಿಳೆಯರು ಚರ್ಚ್ ಫಾಸ್ಟರ್ ರವಿಕುಮಾರ್ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ತಮ್ಮನ್ನು ಬೇರೆ ರೀತಿಯಲ್ಲಿ ಬಳಸಿಕೊಂಡಿದ್ದಾನೆಂದು ದೂರು ದಾಖಲಿಸಿದ್ದು ಆ ದೂರಿನ ಅನ್ವಯ ಇದೀಗ ಫಾಸ್ಟರ್ ರವಿ ಕುಮಾರ್ ನನ್ನು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿ ಬಳ್ಳಾರಿಗೆ ಕರೆತಂದಿದ್ದಾರೆ.. ಒಟ್ಟಿನಲ್ಲಿ 30 ವರ್ಷ ವಯಸ್ಸಿನ ಅಂತರ ಇದ್ದರೂ ಸಹ ಪ್ರೀತಿಸಿ ಮದುವೆಯಾಗೊದ್ದ ಜೋಡಿ ಇದೀಗ ಪೊಲೀಸರಿಂದ ಆತಿಥ್ಯ ಸ್ವೀಕಾರ ಮಾಡುವಂತಾಗಿದೆ..