ರವಿ ತಾಯಿಗೆ ಕ್ಯಾಮರಾ ಮುಂದೆ ಯಡಿಯೂರಪ್ಪ ಅವರು ಕೊಟ್ಟಿದ್ದು ಐದು ಲಕ್ಷ ರೂಪಾಯಿ.. ಆದರೆ ನಿಜವಾಗಿ ಕೊಟ್ಟ ಹಣವೆಷ್ಟು ಗೊತ್ತಾ..

0 views

ಬಿಜೆಪಿ ನಾಯಕ ಬಿ ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಕಳೆದ ಸೋಮವಾರ ರಾಜೀನಾಮೆ ನೀಡಿದ್ದು ಸಧ್ಯ ಇದೀಗ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಮೂವತ್ತನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು ರಾಜ್ಯ ಸರ್ಕಾರದ ಆಡಳಿತ ಚುಕ್ಕಾಣಿಯನ್ನು ಹಿಡಿದಿದ್ದಾರೆ.. ಆದರೆ ಅತ್ತ ಯಡಿಯೂರಪ್ಪ ಅವರು ರಾಜಿನಾಮೆ ನೀಡುವ ವಿಚಾರವಾಗಿ ಅನೇಕರು ಅಸಮಾಧಾನ ವ್ಯಕ್ತ ಪಡಿಸಿದ್ದು ಸಾಮಾನ್ಯ ಕಾರ್ಯಕರ್ತರಿಂದ ಹಿಡಿದು ಮಠದ ಸ್ವಾಮೀಜಿಗಳ ವರೆಗೂ ಸಹ ಯಡಿಯೂರಪ್ಪ ಅವರ ರಾಜೀನಾಮೆಗೆ ಬೇಸರ ವ್ಯಕ್ತ ಪಡಿಡಿಸಿದ್ದರು..

ಆದರೆ ಒಬ್ಬ ಅಭಿಮಾನಿ ಮಾತ್ರ ಅಭಿಮಾನದ ಎಲ್ಲೆ ಮೀರಿ ದುಡುಕಿ ತನ್ನ ಜೀವವನ್ನೇ ಕಳೆದುಕೊಂಡು ಬಿಟ್ಟ.. ಹೌದು ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದ ರವಿ ಎಂಬಾತ ಯಡಿಯೂರಪ್ಪನವರ ಕಟ್ಟಾ ಅಭಿಮಾನಿಯಾಗಿದ್ದು ಯಡಿಯೂರಪ್ಪ ಎಂದರೇ ಜೀವ ಎನ್ನುತ್ತಿದ್ದ.. ಯಡಿಯೂರಪ್ಪ ಅವರು ರಾಜೀನಾಮೆ ನೀಡುತ್ತಾರೆ ಎಂಬ ಸುದ್ದಿ ಪ್ರಸಾರ ಆದಾಗಿನಿಂದಲೂ ಬಹಳ ಸಂಕಟ ಪಡುತ್ತಿದ್ದ ರವಿ ಯಡಿಯೂರಪ್ಪ ಅವರು ರಾಜೀನಾಮೆ ನೀಡಿದ ಬಳಿಕ ಮನನೊಂದು ಮಾರನೆ ದಿನ ಯಾರಿಗೂ ಹೇಳದೇ ದುಡುಕಿನ ನಿರ್ಧಾರವೊಂದನ್ನು ತೆಗೆದುಕೊಂಡುಬಿಟ್ಟಿದ್ದ..

ಹೌದು ಊರಿನಲ್ಲಿ ರಾಜಾಹುಲಿ ಎಂದೇ ಖ್ಯಾತನಾಗಿದ್ದ ರವಿ ಮಂಗಳವಾರ ಮುಂಜಾನೆ ಜೀವ ಕಳೆದುಕೊಂಡುಬಿಟ್ಟ.. ರವಿಯನ್ನು ನಂಬಿಕೊಂಡು ಆತನ ತಾಯಿ‌ ಒಬ್ಬರೇ ಇದ್ದು ಈಗ ಆ ತಾಯಿಯ ಸಂಕಟ ಹೇಳತೀರದಾಗಿದೆ. ಹೌದು ರವಿಗೆ ತಂದೆ ಇರಲಿಲ್ಲ.. ತಾಯಿಯೇ ಎಲ್ಲವೂ ಆಗಿದ್ದರು.. ಇಬ್ಬರು ಅಕ್ಕಂದಿರಿಗೆ ಮದುವೆ ಮಾಡಿದ್ದು ರವಿ ತನ್ನ ತಾಯಿಯನ್ನು ನೋಡಿಕೊಂಡಿದ್ದನು.. ಆದರೆ ಅಭಿಮಾನದ ಮಿತಿಯನ್ನು ಮೀರಿ ತನ್ನ ತಾಯಿಯ ಬಗ್ಗೆಯೂ ಒಂದು ಕ್ಷಣ ಆಲೋಚಿಸದೇ ಈ ಕೆಲಸ ಮಾಡಿಕೊಂಡಿದ್ದಾನೆ.. ಇನ್ನು ಇತ್ತ ತನ್ನ ಅಭಿಮಾನಿ‌ ಈ ರೀತಿ ಮಾಡಿಕೊಂಡ ವಿಚಾರ ಕೇಳಿ ಯಡಿಯೂರಪ್ಪ ಅವರಿಗೂ ಸಹ ನೋವಾಗಿದ್ದು ಅಂದು ರವಿ ಅವರ ಅಂತ್ಯ ಸಂಸ್ಕಾರ ನಡೆಯುವ ವೇಳೆ ಅವರ ತಾಯಿಗೆ ಫೋನ್ ಮಾಡಿ ಸಮಾಧಾನ ಮಾಡಿ ಮೂರು ದಿನ ಬಿಟ್ಟು ಊರಿಗೆ ಬರುವುದಾಗಿ ಹೇಳಿದ್ದರು..

ಅವರ ಮಾತಿನಂತೆ ಇಂದು ಯಡಿಯೂರಪ್ಪ ಅವರು ಗುಂಡ್ಲುಪೇಟೆಯ ಬೊಮ್ಮಲಾಪುರ ಗ್ರಾಮಕ್ಕೆ ಭೇಟಿ ನೀಡಿ ರವಿ ಅವರ ಮನೆಗೆ ತೆರಳಿ ಅವರ ತಾಯಿಗೆ ಸಮಾಧಾನ ಮಾಡಿದ್ದಾರೆ.. ರವಿ ಇಂತಹ ಕೆಲಸ ಮಾಡಬಾರದಿತ್ತು ದುಡುಕಿಬಿಟ್ಟ.. ಅವನ ಕೆಲಸದಿಂದ ನಿಜಕ್ಕೂ ನನ್ನ ಮನಸ್ಸಿಗೆ ಹೆಚ್ಚು ನೋವಾಗಿದೆ.. ಯಾರೂ ಸಹ ಇಂತಹ ಕೆಲಸ ಮಾಡಬೇಡಿ. ಅಭಿಮಾನ ಇರಲಿ ಆದರೆ ಈ ರೀತಿಯ ಅಭಿಮಾನ ತೋರಬೇಡಿ ಎಂದು ಯಡಿಯೂರಪ್ಪ ಅವರು ತಿಳಿಸಿದ್ದರು.

ಇನ್ನೂ ಇಂದು ರವಿ ಮನೆಗೆ ತೆರಳಿದಾಗ ಯಡಿಯೂರಪ್ಪ ಅವರ ಮುಂದೆ “ಯಾವಗಲೂ ನಿಮ್ಮ ಅಭಿಮಾನಿ ಅಭಿಮಾನಿ ಅಂತಿದ್ದ.. ಒಂದು ವಾರದಿಂದ ಬಹಳ ಮನಸ್ಸಿಗೆ ನೋವು ಮಾಡಿಕೊಂಡಿದ್ದ ಊಟ ತಿಂಡಿನೇ ಮಾಡ್ತಾ ಇರಲಿಲ್ಲ.. ನೀವು ರಾಜೀನಾಮೆ ಕೊಟ್ಟಮೇಲೆ ಇಂತಹ ಕೆಲಸ ಮಾಡಿಕೊಂಡುಬಿಟ್ಟ.. ನಮಗ್ಯಾರ್ ದಿಕ್ಕು ಎಂದು ಕಣ್ಣೀರಿಟ್ಟಿದ್ದು‌ ನಿಜಕ್ಕೂ ಮನಕಲಕುವಂತಿತ್ತು.. ಯಾರ್ ಬಂದರೆ ಏನು ಸ್ವಾಮಿ‌ ನನ್ನ ಮಗ ಬರ್ತಾನಾ ಎಂದು ಗೋಳಿಟ್ಟರು.. ಇತ್ತ ತಮ್ಮನನ್ನು ಕಳೆದುಕೊಂಡ ಅಕ್ಕಂದಿರು ಸಹ ಯಡಿಯೂರಪ್ಪ ಅವರ ಕಾಲಿಗೆ ಬಿದ್ದು ತಮ್ಮ ಯಾವಗಲೂ ನಿಮ್ಮನ್ನ ಜೀವ ಜೀವ ಅಂತಿದ್ದ ಈಗ ಹೀಗೆ ಮಾಡಿಕೊಂಡ ಎಂದು ಕಣ್ಣೀರಿಟ್ಟರು.. ಇನ್ನು ಯಡಿಯೂರಪ್ಪ ಅವರು ಕುಟುಂಬದವರಿಗೆ ಸಾಂತ್ವಾನ ನೀಡಿ ಐದು ಲಕ್ಷ ರೂಪಾಯಿ ಹಣವನ್ನು ಒಂದು ಬ್ಯಾಗ್ ನಲ್ಲಿ ಹಾಕಿ ರವಿ ಅವರ ತಾಯಿಗೆ ಕೊಟ್ಟರು.. ಇದರಲ್ಲಿ ಐದು ಲಕ್ಷ ರೂಪಾಯಿ ಇದೆ ತಗೊಳಮ್ಮ ಜೀವನಕ್ಕೆ ಇಟ್ಟುಕೊಳ್ಳಿ ಎಂದು ಸಂತೈಸಿ ಅಲ್ಲಿಂದ ತೆರಳಿದರು..

ಇನ್ನೂ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಯಡಿಯೂರಪ್ಪ ಅವರು “ಅಭಿಮಾನ ಅತಿರೇಕಕ್ಕೆ ಹೋಗಿ ಜೀವ ಕಳೆದುಕೊಂಡು, ತಮ್ಮನ್ನೇ ನಂಬಿರುವ ಕುಟುಂಬದವರಿಗೆ ಶಾಶ್ವತ ಶೋಕ ನೀಡಿರುವುದು ವೈಯಕ್ತಿಕವಾಗಿ ನನಗೆ ಅತ್ಯಂತ ನೋವನ್ನು ತಂದಿದೆ. ಇಂದು ಗುಂಡ್ಲುಪೇಟೆಯ ಬೊಮ್ಮಲಾಪುರದಲ್ಲಿ, ಅಭಿಮಾನಿ ರವಿ ಅವರ ಮನೆಗೆ ತೆರಳಿ ಶ್ರದ್ಧಾಂಜಲಿ ಸಲ್ಲಿಸಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಲಾಯಿತು.” ಎಂದು ಬರೆದು ಪೋಸ್ಟ್ ಮಾಡಿದ್ದರು.. ಕ್ಯಾಮರಾ ಮುಂದೆ ಒಂದು ಬ್ಯಾಗ್ ನಲ್ಲಿ ಯಡಿಯೂರಪ್ಪ ಅವರು ಹಣ ಕೊಟ್ಟದ್ದು ನಿಜ. ಆದರೆ ನಿಜಕ್ಕೂ ಅವರು ಕೊಟ್ಟ ಹಣ ಐದು ಲಕ್ಷ ವಲ್ಲ.. ಹೌದು ಬ್ಯಾಗ್ ನಲ್ಲಿ ಯಡಿಯೂರಪ್ಪ ಅವರು ಐದು ಲಕ್ಷ ಹಣ ಕೊಟ್ಟರು ಅದರ ಜೊತೆಗೆ ಮತ್ತೆ ಐದು ಲಕ್ಷ ಹಣ ನೀಡಿದ್ದಾರೆ.. ಹೌದು ಕರ್ನಾಟಕ ರಾಜ್ಯ ಪ್ರವಾಸೋಧ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿರುವ ಕಾಪು ಸಿದ್ದಲಿಂಗಸ್ವಾಮಿ ಅವರಿಗೆ ಈ ವಿಚಾರ ತಿಳಿಸಿ ಈ ಹಣವನ್ನು ಆ ತಾಯಿ ತನ್ನ ಜೀವನಕ್ಕೆ ಇಟ್ಟುಕೊಳ್ಳಲಿ.. ನಾನು ಇನ್ನು ಐದು ಲಕ್ಷ ರೂಪಾಯಿ ಕೊಡ್ತೀನಿ ಅದರಲ್ಲಿ ಈ ಮನೆಯನ್ನು ಕಟ್ಟಿಸಿಕೊಡು ಎಂದು ತಿಳಿಸಿದ್ದಾರೆ.

ಹೌದು ಆ ತಾಯಿಯ ಮಗನಿದ್ದರೆ ತನ್ನ ತಾಯಿಯನ್ನು ಮುಂದೆ ಒಂದು ದಿನ ಒಳ್ಳೆಯ ಮನೆ ಕಟ್ಟಿ ಇರಿಸುತ್ತಿದ್ದನೇನೋ ಎಂಬ ಕಾರಣಕ್ಕೆ ಆ ತಾಯಿ ಇರಲು ಒಂದು ಮನೆಯನ್ನು ಕಟ್ಟಿಕೊಡು ಎಂದು ಐದು ಲಕ್ಷ ರೂಪಾಯಿ ನೀಡಿದ್ದು ಒಟ್ಟು ಹತ್ತು ಲಕ್ಷ ರೂಪಾಯಿಯನ್ನು ರವಿ ಕುಟುಂಬಕ್ಕೆ ನೀಡಿದ್ದಾರೆ.. ಆದರೆ ಇತ್ತ ನನಗೆ ಏನೂ ಬೇಡ ನನ್ನ ಮಗ ಬಂದುಬಿಟ್ಟರೆ ಸಾಕು ಎನ್ನುತ್ತಿದ್ದ ಆ ತಾಯಿಯ ನೋವು ನಿಜಕ್ಕೂ ಯಾವ ತಾಯಿಗೂ ಇಂತಹ ನೋವು ಬೇಡವೆನ್ನುವಂತಿತ್ತು.. ಎದೆ ಎತ್ತರಕ್ಕೆ ಬೆಳೆದ ಮಗ ತಾನೇ ತನ್ನ ಕೈಯಾರೆ ಇಂತಹ ಕೆಲಸ ಮಾಡಿಕೊಂಡು ತನ್ನ ತಾಯಿಗೆ ನೋವು ನೀಡೋದು ಎಷ್ಟು ಸರಿ.. ಯಾರೇ ಆಗಲಿ ಅಭಿಮಾನ ಇಟ್ಟುಕೊಳ್ಳಿ.. ಆದರೆ ಅತಿರೇಕದ ಅಭಿಮಾನ ಯಾರ ಮೇಲೆಯೂ ಬೇಡ.. ದಯವಿಟ್ಟು ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನಿಮ್ಮ ಹೆತ್ತ ಆ ತಾಯಿ ನೀವಿಲ್ಲವಾದಾಗ ಜೀವನ ಪೂರ್ತಿ ಆಕೆ ಪಡುವ ನೋವು ಸಂಕಟವನ್ನು ಒಮ್ಮೆ ನೆನಪಿಸಿಕೊಂಡುಬಿಡಿ ಯಾರೂ ಸಹ ಅಂತಹ ಕೆಲಸ ಮಾಡಲಾರಿರಿ.. ಆ ತಾಯಿಗೆ ನೋವು ತಡೆಯುವ ಶಕ್ತಿಯನ್ನು ಆ ಭಗವಂತ ನೀಡಲಿ.. ಜೊತೆಗೆ ಸುಮ್ಮನೆ ಮಾತಿನಲ್ಲಿ ಸಂತಾಪ ಸೂಚಿಸಿ ಸುಮ್ಮನಾಗದೇ ಖುದ್ದು ಹಳ್ಳಿಗೆ ಬಂದು ರವಿ ಮನೆಗೆ ಭೇಟಿ ಕೊಟ್ಟು ತಾಯಿಯನ್ನು ಸಂತೈಸಿ ಮುಂದಿನ ಜೀವನಕ್ಕೆ ನೆರವಾದ ಯಡಿಯೂರಪ್ಪ ಅವರಿಗೆ ಧನ್ಯವಾದಗಳು..