ಮೇಘನಾ ರಾಜ್ ಗಾಗಿ ರವಿಚಂದ್ರನ್ ಅವರು ಮಾಡಿದ ಕೆಲಸ ನೋಡಿ..

0 views

ನಟಿ ಮೇಘನಾ ರಾಜ್.. ಕಳೆದ ವರ್ಷ ಚಿರಂಜೀವಿ ಸರ್ಜಾ ಅತಿ ಚಿಕ್ಕ ವಯಸ್ಸು ಮೂವತ್ತೈದು ವರ್ಷಕ್ಕೆ ಅಕಾಲಿಕವಾಗಿ ಅಗಲಿದ ಬಳಿಕ ಬಹಳಷ್ಟು ಕುಗ್ಗಿ ಹೋಗಿದ್ದ ಮೇಘನಾ ರಾಜ್ ಅವರ ಬಾಳಲ್ಲಿ ಅವರ ಮಗ ರಾಯನ್ ರಾಜ್ ಸರ್ಜಾ ಹೊಸ ಬೆಳಕು ತಂದನು.. ಚಿರು ಇದ್ದಷ್ಟು ದಿನ ಬದುಕು ಒಂದು ರೀತಿಯಿದ್ದರೆ.. ಚಿರು ಹೋದ ನಂತರ ಮೇಘನಾ ರಾಜ್ ಬದುಕಲ್ಲಿ ಸಾಕಷ್ಟು ಬದಲಾವಣೆಗಳಾದವು‌. ಇತ್ತ ಸ್ನೇಹಿತರ ಜೊತೆ ಸಮಯ ಕಳೆದರೂ ಸಹ ಕೆಲವೊಂದಕ್ಕೆ ಬ್ರೇಕ್ ಹಾಕಿದ್ದರು ಮೇಘನಾ ರಾಜ್.. ಅದೇ ರೀತಿ ನೋವಿನಲ್ಲಿದ್ದ ಮೇಘನಾ ರಾಜ್ ಅವರನ್ನು ಹೊರ ಕರೆತರಲು ರವಿಚಂದ್ರನ್ ಅವರ ಮಾಡಿದ ಕೆಲಸ ನಿಜಕ್ಕೂ ಆಗಿನ ಕಲಾವಿದರಲ್ಲಿನ ಕಾಳಜಿ ನಿಜಕ್ಕೂ ಈಗಿನವರಲ್ಲಿ ಕಡಿಮೆ ಎನಿಸುವುದು ಸತ್ಯ..

ಹೌದು ಮೇಘನಾ ರಾಜ್ ಕಳೆದ ವರ್ಷ ಚಿರು ಅಗಲಿದ ಸಮಯದಲ್ಲಿ ಗರ್ಭಿಣಿಯಾಗಿದ್ದು ಕೆಲ ತಿಂಗಳಲ್ಲಿ ಮಗುವಿಗೆ ಜನ್ಮ ನೀಡಿದರು.. ಚಿರುವಿನ ಕೊರತೆಯ ನಡುವೆಯೇ ತಂದೆ ತಾಯಿ ಎರಡೂ ಆಗಿ ಮೇಘನಾ ರಾಯನ್ ನನ್ನು ನೋಡಿಕೊಂಡರು.. ಮಗುವಿನ ಭವಿಷ್ಯಕ್ಕಾಗಿ‌ ಮುಂದಿನ ಜೀವನ ರೂಪಿಸಿಕೊಳ್ಳುವ ಯೋಜನೆಯಲ್ಲಿ ತೊಡಗಿ ಕೊಂಡರು.. ಮನೆಯಲ್ಲಿದ್ದುಕೊಂಡೆ ಸಾಕಷ್ಟು ಜಾಹೀರಾತುಗಳಲ್ಲಿ ಅಭಿನಯಿಸಿ ಸಂಪಾದನೆಯ ದಾರಿ ಹಿಡಿದರು.. ಇನ್ನು ಸಿ‌ನಿಮಾಗೂ ಕೂಡ ಆದಷ್ಟು ಬೇಗ ಮರಳುವೆ ಎಂದಿದ್ದ ಮೇಘನಾ ರಾಜ್ ಈ ನಡುವೆಯೂ ಕೆಲವೊಂದು ಅಭ್ಯಾಸಗಳಿಗೆ ಬ್ರೇಕ್ ಹಾಕಿದ್ದರು..

ಆದರೆ ರವಿಚಂದ್ರನ್ ಅವರು ಇದೀಗ ಮೇಘನಾ ರಾಜ್ ಅವರನ್ನು ಮತ್ತೆ ಮನೆಯಿಂದ ಹೊರ ಕರೆತಂದಿದ್ದಾರೆ.. ಹೌದು ಮೇಘನಾ ರಾಜ್ ಅವರು ಕಳೆದ ಸಾಕಷ್ಟು ವರ್ಷಗಳಿಂದ ಚಿರು ಅವರೊಟ್ಟಿಗೆ ಸಿನಿಮಾ ನೋಡಲು ಹೋಗುತ್ತಿದ್ದರು.. ಆದರೆ ಚಿರು ಅಗಲಿದ ಬಳಿಕ ಥಿಯೇಟರ್ ಮುಖ ನೋಡದ ಮೇಘನಾ ರಾಜ್ ಇದೀಗ ಸಿನಿಮಾ ನೋಡುವ ಸಲುವಾಗಿ ಥಿಯೇಟರ್ ನತ್ತ ಬಂದಿದ್ದಾರೆ.. ಹೌದು ಅದೂ ಸಹ ರವಿಚಂದ್ರನ್ ಅವರ ಕಾರಣದಿಂದ.. ಹೌದು ಮೇಘನಾ ರಾಜ್ ಅವರು ಸಿನಿಮಾ ಕುಟುಂಬದ ಹಿನ್ನೆಲೆ ಇಂದ ಬಂದವರಾಗಿದ್ದು ಸುಂದರ್ ರಾಜ್ ಅವರು ಹಾಗೂ ಪ್ರಮಿಳಾ ಸುಂದರ್ ಅವರು ಕಳೆದ ಮೂವತ್ತು ನಲವತ್ತು ವರ್ಷಗಳಿಂದಲೂ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸೇವೆ ಸಲ್ಲಿಸಿ ತಮ್ಮ ಬದುಕನ್ನು ‌ಕಟ್ಟಿಕೊಂಡಿದ್ದವರು..

ಇನ್ನು ಈ ಇಬ್ಬರು‌ ಪ್ರೀತಿಸಿ‌ ಮದುವೆಯಾಗಿದ್ದು ಮೇಘನಾ ರಾಜ್ ಅಬರು ಜನಿಸಿದ ಬಳಿಕ ತಮ್ಮ ಸಿನಿಮಾ ಚಿತ್ರೀಕರಣದ ಜಾಗಗಳಿಗೆ ಮೇಘನಾ ರಾಜ್ ಅವರನ್ನು ಕರೆದುಕೊಂಡು ಹೋಗುತ್ತಿದ್ದರು.. ಆಗಿನಿಂದಲೂ ವಿಷ್ಣುವರ್ಧನ್ ಅವರು ರವಿಚಂದ್ರನ್ ಅವರನ್ನು ಸೇರಿದಂತೆ ಬಹುತೇಕ ಎಲ್ಲಾ ಸ್ಟಾರ್ ಕಲಾವಿದರಿಗೂ ಮೇಘನಾ ಚಿಕ್ಕ ಮಗುವಿನಿಂದ ಚಿರಪರಿಚಿತ.. ಅದರಲ್ಲೂ ವಿಷ್ಣುವರ್ಧನ್ ಅವರು ತಮ್ಮ ಮಗಳಂತೆಯೇ ಮೇಘನಾ ರಾಜ್ ಅವರನ್ನು ನೋಡಿಕೊಳ್ಳುತ್ತಿದ್ದರು. ಆ ಕಾರಣಕ್ಕಾಗಿಯೇ ವಿಷ್ಣುವರ್ಧನ್ ಅವರ ವಾಚ್ ಅನ್ನು ಕೀರ್ತಿ ವಿಷ್ಣುವರ್ಧನ್ ಅವರು ಮೇಘನಾ ರಾಜ್ ಅವರಿಗೆ ನೀಡಿದ್ದಾರೆ.. ಈಗಲೂ ಸಹ ವಿಷ್ಣುವರ್ಧನ್ ಅವರ ವಾಚ್ ಮೇಘನಾ ಅವರ ಬಳಿಯೇ ಇದೆ..

ಇನ್ನು‌ ಇತ್ತ ರವಿಚಂದ್ರನ್ ಅವರೂ ಸಹ ಮೇಘನಾ ರಾಜ್ ಚಿತ್ರೀಕರಣದ ಜಾಗಕ್ಕೆ ಬರುತ್ತಿದ್ದಾರೆ ಎಂದು ತಿಳಿಯುತ್ತಿದ್ದಂತೆ ಅವರಿಗಾಗಿ ಬಾಕ್ಸ್ ತುಂಬಾ ಒಂದಷ್ಟು ಜಾಕೋಲೇಟ್ ಗಳನ್ನು ತರಿಸಿ ಇಡುತ್ತಿದ್ದರು.. ಈ ಅಭ್ಯಾಸ ಮೇಘನಾ ಚಿಕ್ಕ‌ಮಗುವಾದಾಗಿನಿಂದಲೂ ರವಿಚಂದ್ರಮ್ ಅವರು ತಪ್ಪಿಸಿರಲಿಲ್ಲ..ಇನ್ನು ಮೇಘನಾ ರಾಜ್ ಅವರಿಗೂ ರವಿಚಂದ್ರನ್ ಅವರೆಂದರೆ ತುಂಬಾ ಇಷ್ಟ.. ಇನ್ನು ಚಿರು ಅಗಲಿದಾಗ ಮನೆಗೆ ತೆರಳಿ ಮೇಘನಾ ರಾಜ್ ಅವರನ್ನು ಸಂತೈಸಿದ್ದರು.. ಸಮಾಧಾನ ಹೇಳಿದ್ದರು.. ಇನ್ನು ಆ ದಿನದಿಂದಲೂ ಸಿನಿಮಾ ನೋಡಲು ಥಿಯೇಟರ್ ಗೆ ಹೋಗದ ಮೇಘನಾ ರಾಜ್ ರನ್ನು ಇದೀಗ ರವಿಚಂದ್ರನ್ ಅವರು ಕರೆತಂದರು.. ಹೌದು ಮೇಘನಾ ರಾಜ್ ಅವರನ್ನು ಚಿಕ್ಕ ಮಗುವಿನಂತೆ ನೋಡುವ ರವಿಚಂದ್ರನ್ ಅವರು ಈಗಲೂ ಸಹ ಚಾಕೋಲೇಟ್ ಬಾಕ್ಸ್ ಒಂದರ ಜೊತೆಗೆ ದೃಶ್ಯ ಸಿನಿಮಾದ ಫ್ಯಾಮಿಲಿ ಶೋ ಗೆ ತಪ್ಪದೇ ಬರಲೇಬೇಕೆಂದು ಪತ್ರ ಬರೆದಿದ್ದರು..

ಅದೇ ರೀತಿ ಮೇಘನಾ ರಾಜ್‌ ನಿನ್ನೆ ತಂದೆ ಸುಂದರ್ ರಾಜ್ ಅವರ ಜೊತೆ ದೃಶ್ಯ 2 ಸಿನಿಮಾದ ಫ್ಯಾಮಿಲಿ‌ ಶೋಗೆ ಆಗಮಿಸಿ ರವಿಚಂದ್ರನ್ ಅವರೊಟ್ಟಿಗೆ ಸಿನಿಮಾ ನೋಡಿ ಸಂತೋಷ ಪಟ್ಟರು.. ಅದೇ ಸಮಯದಲ್ಲಿ ಮಾತನಾಡಿದ ಮೇಘನಾ ರಾಜ್ ಈ ವಿಚಾರಗಳನ್ನು ಹಂಚಿಕೊಂಡು ತಮ್ಮ ಜೀವನದಲ್ಲಿ ತಂದೆಯ ಸ್ಥಾನದಲ್ಲಿರುವ ರವಿಚಂದ್ರನ್ ಅವರಿಗೆ ಧನ್ಯವಾದಗಳನ್ನು ತಿಳಿಸಿದರು..ನಿಜಕ್ಕೂ ಆಗಿನ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಯ ಕಲಾವಿದರಲ್ಲಿ ಇದ್ದ ಸಾಮರಸ್ಯ ಚಿಕ್ಕವರಿಗೆ ತೋರುತ್ತಿದ್ದ ಕಾಳಜಿ ಪ್ರೀತಿ ಬಹುಶಃ ಈಗಿನವರಲ್ಲಿ ಕಾಣುವುದು ಅಪರೂಪವೇ ಸರಿ..