ರವಿಚಂದ್ರನ್ ಅವರ ತಾಯಿ ಇನ್ನಿಲ್ಲ.. ಆದರೆ ಅಂದು ರವಿಚಂದ್ರನ್ ಅವರು ಅಮ್ಮನ ಸಾವಿನ ಬಗ್ಗೆ ಹೇಳಿದ ಮಾತು ನೋಡಿ‌.

0 views

ಸ್ಯಾಂಡಲ್ವುಡ್ ನ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ತಾಯಿ ಇಂದು ಕೊನೆಯುಸಿರೆಳೆದಿದ್ದಾರೆ.. ಹೌದು ಕನ್ನಡ ಸಿನಿಮಾ ಇಂಡಸ್ಟ್ರಿ ಕಂಡ ದಿಗ್ಗಜ ನಿರ್ಮಾಪಕರಾದ ಈಶ್ವರಿ ಸಂಸ್ಥೆ ಮೂಲಕ ಸಾವಿರಾರು ಮಂದಿ ಜೀವನಕ್ಕೆ ಬೆಳಕಾಗಿದ್ದ ವೀರಸ್ವಾಮಿ ಅವರ ಪತ್ನಿ ಪಟ್ಟಾಲಮ್ಮ ಅವರು ಇಂದು ಬೆಳಿಗ್ಗೆ ಆರು ಮೂವತ್ತರ ಸಮಯದಲ್ಲಿ ಕೊನೆಯುಸಿರೆಳೆದಿದ್ದಾರೆ.. ಆದರೆ ಕೆಲವೇ ತಿಂಗಳ ಹಿಂದೆ ರವಿಚಂದ್ರನ್ ಅವರು ಆಡಿದ ಮಾತು ತಾಯಿ ಬಗ್ಗೆ ಹೇಳಿದ ಆ ಮಾತುಗಳನ್ನು ನೆನೆದರೆ ನಿಜಕ್ಕೂ ಮನಕಲಕುವಂತಿದೆ..

ಹೌದು ರವಿಚಂದ್ರನ್ ಅವರಿಗೆ ತನ್ನ ತಂದೆ ತಾಯಿ ಕಂಡರೆ ತುಂಬಾನೇ ಪ್ರೀತಿ ಎಂಬ ವಿಚಾರ ಎಲ್ಲರಿಗೂ ತಿಳಿದೇ ಇದೆ.. ಈಗಲೂ ಅವರು ಮನೆಯಿಂದ ಹೊರ ಬರುವ ಮುನ್ನ ಇಂದಿನವರೆಗೂ ಬೆಳಿಗ್ಗೆ ಅವ್ರ ತಾಯಿಯ ಮುಖ ಹಾಗೂ ತಂದೆಯ ಫೋಟೋವನ್ನು ನೋಡದೇ ಹೊರಗೆ ಕಾಲಿಡುತ್ತಿರಲಿಲ್ಲ.. ನನ್ನ ತಂದೆ ಇಲ್ಲದೇ ನಾನಿಲ್ಲ.. ನಾನಿವತ್ತು ದೊಡ್ಡ ಸ್ಟಾರ್ ಆಗಿದ್ದೀನಿ ಎಂದರೆ ಅದಕ್ಕೆ ಕಾರಣ ನನ್ನ ತಂದೆ ನನ್ನ ಮೇಲೆ ಇಟ್ಟಿದ್ದ ನಂಬಿಕೆ ಎಂದು ಸಾಕಷ್ಟು ಕಾರ್ಯಕ್ರಮಗಳಲ್ಲಿ ತಂದೆಯ ಬಗ್ಗೆ ಹೇಳಿಕೊಂಡಿದ್ದರು.. ಇನ್ನು ರವಿಚಂದ್ರನ್ ಅವರ ತಾಯಿ ಪಟ್ಟಾಲಮ್ಮ ಅವರ ಆರೋಗ್ಯ ಸರಿ ಇಲ್ಲದ ಕಾರಣ ಅವರನ್ನು ಮನೆಯಲ್ಲಿಯೇ ಮಗುವಿನ ರೀತಿ ಆರೈಕೆ ಮಾಡುತ್ತಿದರು..

ಅವರು ನಮಗೆ ಒಂದು ಮಗು.. ಕಳೆದ ಹಲವಾರು ವರ್ಷಗಳ ಹಿಂದೆಯೇ ನಿಮ್ಮ ತಾಯಿ ಉಳಿಯೋದಿಲ್ಲ ಅವರ ಬ್ರೇನ್ ಡೆಡ್ಡಾಗುತ್ತಿದೆ ಎಂದಿದ್ದರು ವೈದ್ಯರು.. ಆದರೆ ನನ್ನ ಹೆಂಡತಿ ನಮ್ಮ ತಾಯಿಯನು ಮನೆಗೆ ಕರೆದುಕೊಂಡು ಬಂದು ಆರೈಕೆ ಮಾಡಿ ಮಗುವಿನ ರೀತಿ ನೋಡಿಕೊಂಡರು.. ಎಂದೂ ಸಹ ಬೇಸರ ಪಟ್ಟುಕೊಳ್ಳಲಿಲ್ಲ.. ನನ್ನ ಮಕ್ಕಳು ಸಹ ನಮ್ಮ ತಾಯಿಯ ಜೊತೆ ಸಮಯ ಕಳೆದು ಅವರಿಗೆ ಸಂತೋಷ ಪಡಿಸುತ್ತಿದ್ದರು‌. ಆದ್ದರಿಂದಲೇ ನನ್ನ ತಾಯಿ ಇನ್ನೂ ಸಂತೋಷವಾಗಿ ನಮ್ಮ ಜೊತೆ ಇದ್ದಾರೆ ಎಂದಿದ್ದರು..

ಆದರೆ ಕೆಲ ತಿಂಗಳುಗಳಿಂದ ಪಟ್ಟಾಲಮ್ಮ ಅವರ ಆರೋಗ್ಯ ತೀರಾ ಹದಗೆಟ್ಟಿದ್ದು ಆಗಾಗ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಮರಳಿ ಮನೆಯಲ್ಲಿಯೇ ಇರುತ್ತಿದ್ದರು.. ಇನ್ನು ಕೆಲ ದಿನಗಳ ಹಿಂದೆ ಪಟ್ಟಾಲಮ್ಮ ಅವರ ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ ಹತ್ತಿರದ ಸುಗುಣ ಆಸ್ಪತ್ರೆತಲ್ಲಿ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದರು.. ಆದರೆ ಇಂದು ಬೆಳಿಗ್ಗೆ ಆರು ಮೂವತ್ತರ ಸಮಯದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ರವಿಚಂದ್ರನ್ ಅವರ ತಾಯಿ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.. ಇಂದು ರವಿಚಂದ್ರನ್ ಅವರ ಮನೆಯಲ್ಲಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಸಂಜೆ ಅಂತಿಮ ಸಂಸ್ಕಾರ ನೆರವೇರಲಿದೆ..

ಇನ್ನು ಕೆಲವೇ ತಿಂಗಳ ಹಿಂದಷ್ಟೇ ಪುನೀತ್ ರಾಜ್ ಕುಮಾರ್ ಅವರು ಅಗಲಿದ ದಿನವೇ ಇತ್ತ ರವಿಚಂದ್ರನ್ ಅವರ ತಾಯಿಗೂ ಆರೋಗ್ಯ ಸ್ಥಿತಿ ಗಂಭೀರವಾಗಿ ಐಸಿಯು ನಲ್ಲಿ ಇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.. ಈ ವಿಚಾರವನ್ನು ಖುದ್ದು ರವಿಚಂದ್ರನ್ ಅವರೇ ಪುನೀತ್ ರಾಜ್ ಕುಮಾರ್ ಅವರ ಒಂದು ಕಾರ್ಯಕ್ರಮದಲ್ಲಿ ಹೇಳಿಕೊಂಡು “ಅಕಸ್ಮಾತ್ ಅಪ್ಪು ಐಸಿಯು ನಲ್ಲಿದ್ದು ಭಗವಂತ ಏನಾದರೂ ನನಗೆ ಅವಕಾಶ ಕೊಟ್ಟಿದ್ದರೆ ನನ್ನ ತಾಯಿಯನ್ನು ಕೇಳಿಕೊಳ್ಳುತ್ತಿದ್ದೆ.. ಅವಳ ಜೀವ ಕೊಟ್ಟು ಅಪ್ಪು ಜೀವ ಉಳಿಸಲು ಸಾಧ್ಯವಾಗಿದ್ದರೆ ಅಪ್ಪುವನ್ನು ಉಳಿಸಿಕೊಳ್ಳುತ್ತಿದ್ದೆ..” ಅಮ್ಮನಿಗೆ ವಯಸ್ಸಾಗಿದೆ.. ಆದರೆ ಅಪ್ಪು ಬದುಕಿ ಬಾಳಬೇಕಾದ ಹುಡುಗ ಅವನನ್ನು‌ ಉಳಿಸು ಎಂದು ಕೇಳಿಕೊಳ್ಳುತ್ತಿದ್ದೆ.. ಎಂದು ತನ್ನ ತಾಯಿಯನ್ನು ನೀಡಿ ಅಪ್ಪುವನ್ನು ಉಳಿಸಿಕೊಳ್ಳುವ ದೊಡ್ಡ ಮಾತುಗಳನ್ನು ಆಡಿದ್ದರು..” ಆದರೆ

ಇಅಂದು ಅಪ್ಪು ಸಹ ಉಳಿದಿರಲಿಲ್ಲ.. ಕೆಲವೇ ತಿಂಗಳ ಅಂತರದಲ್ಲಿ ರವಿಚಂದ್ರನ್ ಅವರು ತಮ್ಮ ತಾಯಿಯನ್ನಿ ಸಹ ಕಳೆದುಕೊಳ್ಳುವಂತಾಯಿತು.. ಇತ್ತ ಮೇರು ನಿರ್ಮಾಪಕ ವೀರಸ್ವಾಮಿ ಅವರ ಪತ್ನಿ ಪಟ್ಟಾಲಮ್ಮ ಅವರ ಅಗಲಿಕೆಗೆ ಚಿತ್ರರಂಗ ಕಂಬನಿ ಮಿಡಿದಿದ್ದು ಸಂತಾಪ ಸೂಚಿಸಿದ್ದಾರೆ.. ಇತ್ತ ಸಿನಿಮಾ ಮಂದಿ ಸ್ನೇಹಿತರು ಅಭಿಮಾನಿಗಳು ಎಲ್ಲರೂ ಸಹ ರವಿಚಂದ್ರನ್ ಅವರ ತಾಯಿಯ ಅಗಲಿಕೆಗೆ ಸಂತಾಪ ಸೂಚಿಸಿ ರವಿಚಂದ್ರನ್ ಅವರಿಗೆ ಧೈರ್ಯ ತುಂಬಿದ್ದಾರೆ.. ಸಿನಿಮಾ ಮಂದಿ ಸಾಲು ಸಾಲು ನೋವುಗಳ ಕಾಣುತ್ತಿದ್ದು ಒಂದರ ಹಿಂದೆ ಒಂದಂತೆ ಸಾವಿನ ಸುದ್ದಿಗಳು ಒಂದು ರೀತಿ ಜೀವನ ನಶ್ವರ ಎನಿಸಲು ಶುರುವಾಗಿರೋದು ಮಾತ್ರ ಸತ್ಯ.. ಪಟ್ಟಾಲಮ್ಮ ಅವರಿಗೆ ಶಾಂತಿ ದೊರಕಲಿ..