ತುಂಬಿದ ವೇದಿಕೆಯಲ್ಲಿಯೇ ನೇರವಾಗಿ ರಶ್ಮಿಕಾರನ್ನು ಸೊಸೆ ಮಾಡಿಕೊಳ್ಳುವ ವಿಚಾರ ತಿಳಿಸಿದ ರವಿಚಂದ್ರನ್.. ಇದಪ್ಪಾ ಟ್ವಿಸ್ಟ್ ಅಂದರೆ‌‌..

0 views

ಸಾಮಾಜಿಕ ಜಾಲತಾಣದಲ್ಲಿ ರಶ್ಮಿಕಾ ಮಂದಣ್ಣ ಒಂದಲ್ಲಾ ಒಂದು ವಿಚಾರಕ್ಕೆ ಟ್ರೋಲ್ ಆಗುತ್ತಲೇ ಇರುತ್ತಾರೆ.. ಸಿನಿಮಾ ವಿಚಾರಗಳಿಗೆ ಸುದ್ದಿಯಾಗುತ್ತಲೇ ಇರುತ್ತಾರೆ. ಸಧ್ಯ ಪುಷ್ಪಾ ಸಿನಿಮಾಸ ವಿಚಾರವಾಗಿ ಸಾಕಷ್ಟು ಸದ್ದನ್ನೂ ಸಹ ಮಾಡಿದರು.. ಆದರೆ ಇದೀಗ ರಶ್ಮಿಕಾ ಮಂದಣ್ಣ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಂತೆ ಕಾಣುತ್ತಿದೆ.. ಹೌದು ತುಂಬು ವೇದಿಕೆಯಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ಸೊಸೆ ಮಾಡಿಕೊಳ್ಳುವ ವಿಚಾರ ಪ್ರಸ್ತಾಪಿಸಿದ್ದು ಇತ್ತ ರವಿಚಂದ್ರನ್ ಅವರ ಮಾತಿಗೆ ಮರು ಮಾತನಾಡದೇ ರಶ್ಮಿಕಾ ಕೂಡ ಪ್ರತಿಕ್ರಿಯೆ ಕೊಟ್ಟು ನಾಚಿ ನೀರಾದ ಘಟನೆ ನಡೆದಿದೆ.. ಹೌದು ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಅವರ ಪ್ರೀತಿ ನಿಶ್ಚಿತಾರ್ಥ ಬ್ರೇಕಪ್ ಇದೆಲ್ಲವೂ ಹಳೆಯ ವಿಚಾರಗಳಾಗಿ ಹೋದವು.. ಇತ್ತ ಇಬ್ಬರೂ ಸಹ ತಮ್ಮ ತಮ್ಮ ಜೀವನದ ಜರ್ನಿಯಲ್ಲಿ ಬಹಳ ಮುಂದೆ ಸಾಗಿಯಾಗಿದೆ..

ಅತ್ತ ರಕ್ಷಿತ್ ಶೆಟ್ಟಿ ಅವರು ತಮ್ಮ ವಯಸ್ಸು ಮೂವತ್ತೈದು ದಾಟಿದರು ಸಹ ಅದ್ಯಾಕೋ ಮದುವೆಯ ಬಗ್ಗೆ ಯೋಚನೆ ಮಾಡುತ್ತಿಲ್ಲ.. ನಟನಾಗಿ ಮಾತ್ರವಲ್ಲ ನಿರ್ಮಾಪಕನಾಗಿಯೂ ಗುರುತಿಸಿಕೊಂಡಿರುವ ರಕ್ಷಿತ್ ಶೆಟ್ಟಿ ಅವರು ಸಧ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ರಕ್ಷಿತ್ ಶೆಟ್ಟಿ ತಮ್ಮ ಸಿನಿಮಾ ಮೇಲೆ ಮಾತ್ರ ಗಮನ ವಹಿಸಿದಂತೆ ಕಾಣುತ್ತಿದೆ… ಇತ್ತ ರಶ್ಮಿಕಾ ಮಂದಣ್ಣ ಮಾತ್ರ ಎಂದಿನಂತೆ ಎಲ್ಲಾ ಭಾಷೆಗಳಲ್ಲಿಯೂ ಮಿಂಚುತ್ತಿದ್ದು ಸಧ್ಯ ಪುಷ್ಪಾ ಸಿನಿಮಾದ ಯಶಸ್ಸಿನ ಸಂತೋಷದಲ್ಲಿದ್ದಾರೆ.. ಈ ನಡುವೆ ಹಿಂದಿ ಸಂದರ್ಶನವೊ‌ಂದರಲ್ಲಿ ತಮ್ಮ ಬ್ರೇಕಪ್ ಕುರಿತು ಮಾತನಾಡಿ ಈಗಲೂ ಸಹ ಹಳೆಯ ನೆನಪುಗಳು ಕಾಡುತ್ತವೆ.. ವರ್ಷದಲ್ಲಿ ಸಾಕಷ್ಟು ದಿನಗಳ ಕಾಲ ನಾನು ಕಣ್ಣೀರಿಡುತ್ತಲೇ ಮಲಗುತ್ತಿರುವೆ ಎಂದಿದ್ದರು.. ಇದಾದ ಬಳಿಕ ಮುಂಬೈ ನ ಹೊಟೆಲ್ ಒಂದರಲ್ಲಿ ತಡರಾತ್ರಿ ವಿಜಯ್ ದೇವರಕೊಂಡ ಜೊತೆ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ ಮತ್ತೆ ಅವರಿಬ್ಬರ ನಡುವಿನ ಮದುವೆ ವಿಚಾರಕ್ಕೆ ಜೀವ ಬಂದಂತೆ ಕಂಡಿತು.. ಆದರೀಗ ಅದ್ಯಾಕೋ ನಮ್ಮ ಕ್ರೇಜಿ ಸ್ಟಾರ್ ಹೊಸ ಟ್ವಿಸ್ಟ್ ಅನ್ನೇ ನೀಡಿದಂತೆ ಕಾಣುತ್ತಿದೆ..

ಹೌದು ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಸ್ಯಾಂಡಲ್ವುಡ್ ನ ಶೋ‌ ಮ್ಯಾನ್ ಎನ್ನುವುದು ಎಲ್ಲರಿಗೂ ತಿಳಿದೇ ಇದೆ.. ರವಿಚಂದ್ರನ್ ಅವರನ್ನು ಇಷ್ಟ ಪಡದ ಹುಡುಗಿಯರಿಲ್ಲ.. ಅದರಲ್ಲೂ ಪ್ರೇಮಲೋಕ ರಣಧೀರ ರಾಮಾಚಾರಿ ಯಾರೇ ನೀನು ಚೆಲುವೆ ಸಮಯದಲ್ಲಿ ರವಿಚಂದ್ರನ್ ಅವರನ್ನೇ ಮದುವೆ ಮಾಡಿಕೊಳ್ತೀವಿ ಎಂದು ಹೆಣ್ಣು ಮಕ್ಕಳು ಪಟ್ಟು ಹಿಡಿಯುತ್ತಿದ್ದ ಉದಾಹರಣೆಗಳೂ ಸಹ ಸಿಗುತ್ತಿದ್ದವು.. ಸಧ್ಯ ಇದೀಗ ರವಿಚಂದ್ರನ್ ಅವರಿಗೇ ವಯಸ್ಸಾಗಿದ್ದರೂ ಸಹ ಇನ್ನೂ ಅವರ ಹೀರೋ ಬ್ರ್ಯಾಂಡ್ ವ್ಯಾಲ್ಯೂ ಕಡಿಮೆಯಾಗಿಲ್ಲ.‌ ಸಧ್ಯ ದೃಶ್ಯ 2 ಸಿನಿಮಾ ತೆರೆ ಕಂಡಿದ್ದು ಭರ್ಜರಿ ಯಶಸ್ಸನ್ನೂ ಸಹ ನೀಡಿದೆ.. ಇನ್ನು ಇತ್ತ ರವಿಚಂದ್ರನ್ ಅವರು ಎಷ್ಟೇ ಯಂಗ್ ಆಗಿ ಕಂಡರೂ ಅವರಿಗೆ ವಯಸ್ಸಾಗಿರೋದು ನಿಜ.. ಅದಾಗಲೇ ಇಬ್ಬರೂ ಗಂಡು ಮಕ್ಕಳು ಸಹ ಮದುವೆ ವಯಸ್ಸಿಗೆ ಬಂದಿದ್ದಾರೆ ಎಂಬ ಸತ್ಯವನ್ನು ಮನಸ್ಸಿಲ್ಲದಿದ್ದರೂ ಸಹ ರವಿ ಸರ್ ಒಪ್ಪಿಕೊಳ್ಳಲೇಬೇಕಾಗಿರೋದು ಸಹ ವಾಸ್ತವ..

ಇನ್ನು ಅದಾಗಲೇಎರಡು ವರ್ಷದ ಹಿಂದೆ ಮಗಳ ಮದುವೆಯನ್ನು ಅದ್ಧೂರಿಯಾಗಿ ನೆರವೇರಿಸಿರುವ ರವಿಚಂದ್ರನ್ ಅವರು ಇದೀಗ ಮಗನ ಮದುವೆ ಅದರಲ್ಲೂ ರಶ್ಮಿಕಾ ಮಂದಣ್ಣನನ್ನು ಸೊಸೆ ಮಾಡಿಕೊಳ್ಳುವ ಮಾತನಾಡಿದ್ದು ಇತ್ತ ರಶ್ಮಿಕಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.. ಹೌದು ಕೆಲ ದಿನದ ಹಿಂದಷ್ಟೇ ಟಿವಿ 9 ಕನ್ನಡ ವಾಹಿನಿ ಪ್ರತಿ ವರ್ಷ ನಡೆಸುವ ಟಿವಿ 9 ನವ ನಕ್ಷತ್ರ ಕಾರ್ಯಕ್ರಮ ನಡೆದಿದ್ದು ಆ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ.. ಹೌದು ಸಾಧನೆ ಮಾಡಿರುವ ಸಾಧಕರಿಗೆ ನವನಕ್ಷತ್ರ ಎಂಬ ಬಿರುದು ಕೊಟ್ಟು ಸನ್ಮಾನಿಸುವ ಕಾರ್ಯಕ್ರಮದಲ್ಲಿ ರವಿಚಂದ್ರನ್ ಅವರು ಹಾಗೂ ರಶ್ಮಿಕಾ ಮಂದಣ್ಣರನ್ನು ಆಹ್ವಾನ ಮಾಡಲಾಗಿತ್ತು.. ಅದೇ ಕಾರ್ಯಕ್ರಮದಲ್ಲಿ ಅದರಲ್ಲೂ ವೇದಿಕೆ ಮೇಲೆಯೇ ರವಿಚಂದ್ರನ್ ಅವರು ನೇರವಾಗಿ‌ ಮದುವೆ ವಿಚಾರ ಮಾತನಾಡಿದ್ದಾರೆ..

ಹೌದು ರಶ್ಮಿಕಾ ಮಂದಣ್ಣ ನವನಕ್ಷತ್ರ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಂತೆ ರವಿಚಂದ್ರನ್ ಅವರನ್ನು ನೋಡಿ ತಕ್ಷಣ ಓಡಿ ಹೋಗಿ ಆಲಿಂಗಿಸಿ ವಿಶ್ ಮಾಡಿದರು.. ನಂತರ ಇಬ್ಬರೂ ಸಹ ಒಟ್ಟಿಗೆ ವೇದಿಕೆ ಮೇಲೆ ತೆರಳಿದಾಗ ಮೈಕ್ ಹಿಡಿದ ರವಿಚಂದ್ರನ್ ಅವರು ಈ ಹುಡುಗಿ ರಶ್ಮಿಕಾ ಹಾಗೂ ನನ್ನ ಮಗ ಒಟ್ಟಿಗೆ ಜಿಮ್ ಮಾಡುತ್ತಿದ್ದರು.. ಒಂದು ದಿನ ನಾನು ಟಿವಿ ನೋಡುತ್ತಾ ಕುಳಿತಿರುವಾಗ ಟಿವಿಯಲ್ಲಿ ರಶ್ಮಿಕಾ ಮಂದಣ್ಣನನ್ನು ನೋಡಿದ ನನ್ನ ಮಗ ನನ್ನ ಬಳಿ ಬಂದು ಈ ಹುಡುಗಿ ನಮ್ ಜೊತೆನೇ ಜಿಮ್ ಮಾಡೋಕೆ ಬರೋದು ಎಂದ.. ಆ ತಕ್ಷಣ ನಾನು ಒಂದ್ ಮಾತ್ ಹೇಳಿದೆ.. ಮತ್ಯಾಕೋ ಬಿಟ್ಬಿಟ್ಟೆ ಈ ಹುಡುಗೀನಾ ಎಂದೆ.. ಮದುವೆ ಮಾಡಿಕೊಳ್ಳಬಹುದಿತ್ತು ನೋಡು ಎಂದರು.. ಇತ್ತ ರವಿಚಂದ್ರನ್ ಅವರ ಮಾತಿಗೆ ತಮ್ಮ ನಗುವಿನ ಮೂಲಕವೇ ಉತ್ತರ ಕೊಟ್ಟ ರಶ್ಮಿಕಾ ಮಂದಣ್ಣ ನಾಚಿ ನೀರಾಗಿ ತಲೆ ಬಗ್ಗಿಸಿದರು..

ಅದೇನೇ ಹೇಳಿ ಯಾರನ್ನಾದರೂ ಇಷ್ಟ ಪಟ್ಟರೆ ಅದನ್ನು ಹೇಳಿಕೊಳ್ಳೊಕೆ ವರ್ಷಗಳನ್ನೇ ತೆಗೆದುಕೊಳ್ಳುವ ಈ ಕಾಲದಲ್ಲಿ ಇದ್ದಕಿದ್ದ ಹಾಗೆ ವೇದಿಕೆ ಮೇಲೆಯೇ ಮಗನ ಮದುವೆ ಪ್ರಪೋಸಲ್ ಇಟ್ಟ ನಮ್ ಕ್ರೇಜಿಸ್ಟಾರ್ ಗೆ ಅವರೇ ಸಾಟಿ.. ಇತ್ತ ರವಿಚಂದ್ರನ್ ಅವರ ನೇರ ಮಾತು ಕೇಳಿ ಕೆಲವರು ಶಾಕ್ ಆದರೆ ಮತ್ತಷ್ಟು ಮಂದಿ ಜೋಶ್ ನಿಂದ ಕೂಗಿದ್ದು ಉಂಟು.. ಆದರೆ ರಶ್ಮಿಕಾ ಮಂದಣ್ಣ ಮಾತ್ರ ಅದ್ಯಾಕೋ ನಾಚಿ ಮುಖ ಕೆಂಪಾಗಿಸಿ ತಲೆ ಬಗ್ಗಿಸಿದವರು ಮುಖದ ಕೆಂಪು ಇಳಿಯಲೇ ಇಲ್ಲ.. ಇನ್ನು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ನೋಡಿದ ಜನ ಬಹುಶಃ ಈ ಪ್ರಪೋಸಲ್ ಗಂಭೀರವಾಗಿ ರಶ್ಮಿಕಾ ಮಂದಣ್ಣ ರವಿಚಂದ್ರನ್ ಮನೆಯ ಸೊಸೆಯಾದರೂ ಸಹ ಆಶ್ಚರ್ಯ ಪಡಬೇಕಿಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು‌.. ಒಟ್ಟಿನಲ್ಲಿ ಕನ್ನಡದಿಂದ ಹೊರಟು ಎಲ್ಲಾ ಭಾಷೆಗಳನ್ನು ನೋಡಿ ಮತ್ತೆ ಹುಟ್ಟಿದ ನೆಲದ ಗಂಡನ್ನೇ ಮದುವೆಯಾಗುವರೋ ಅಥವಾ ತೆಲುಗಿನ ಮನೆ ಸೊಸೆಯಾಗುವರೋ ಕಾದು ನೋಡಬೇಕಷ್ಟೇ..