ಅಪ್ಪು ವನ್ನು ಉಳಿಸೋಕೆ ರವಿಚಂದ್ರನ್ ಅವರು ಯಾರ ಜೀವ ಕೊಡ್ತೀನಿ ಎಂದಿದ್ದರು ಗೊತ್ತಾ.. ಆ ಮಾತು ಕೇಳುತ್ತಿದ್ದಂತೆ ಬಿಕ್ಕಿ ಬಿಕ್ಕಿ ಅತ್ತ ಶಿವಣ್ಣ..

0 views

ಪುನೀತ್ ರಾಜ್ ಕುಮಾರ್ ಅವರ ಅಗಲಿಕೆಯ ನೋವು ಅದ್ಯಾಕೋ ಒಂದಿಷ್ಟೂ ಸಹ ಕಡಿಮೆಯಾಗುತ್ತಿಲ್ಲ‌. ಜನರು ತಮ್ಮ ತಮ್ಮ ಸಹಜ ಜೀವನದಲ್ಲಿ ತೊಡಗಿಕೊಂಡಿದ್ದಾರೆ ನಿಜ.. ಅದು ಅನಿವಾರ್ಯವೂ ಹೌದು.. ಆದರೆ ಅಕಸ್ಮಾತ್ ಎಲ್ಲಿಯಾದರೂ ಪುನೀತ್ ಅವರ ಫೋಟೋ ಕಂಡರೂ ಸಾಕು ಒಮ್ಮೆಲೆ ಮನಸ್ಸಿನಲ್ಲಿ ಏನೋ ಒಂದು ರೀತಿ ಆಕಾಶದಷ್ಟು ಸಂಕಟ ಬರುತ್ತದೆ.. ಪುನೀತ್ ಮತ್ತೆ ಮಾತನಾಡಲ್ವಾ ಎಲ್ಲರ ಜೊತೆ ನಗೋದಿಲ್ಲವಾ ಎಂಬ ಸತ್ಯವನ್ನು ನೆನೆಯಲೂ ಸಹ ಸಂಕಟವಾಗುತ್ತದೆ.. ಇನ್ನು ಅತ್ತ ಚಿತ್ರರಂಗದವರು ಪುನೀತ್ ಅವರನ್ನು ಹತ್ತಿರದಿಂದ ಕಂಡವರು ಇನ್ನೂ ಸಹ ಯಾವುದೇ ಕಾರ್ಯಕ್ರಮವಾದರೂ ಪುನೀತ್ ಅವರನ್ನು ನೆನೆದು ಕಣ್ಣೀರಿಡುತ್ತಿದ್ದಾರೆ.. ಇನ್ನು ಈ ನಡುವೆ ರವಿಚಂದ್ರನ್ ಅವರು ಪುನೀತ್ ಅವರ ಬಗ್ಗೆ ಆಡಿರುವ ಮಾತು ನಿಜಕ್ಕೂ ಕಣ್ಣೀರು ತರಿಸುತ್ತಿದೆ..

ಹೌದು ಪುನೀತ್ ಅವರನ್ನು ಉಳಿಸಲು ತಮ್ಮ ಜೀವನದ ಆ ಮುಖ್ಯ ವ್ಯಕ್ತಿಯ ಜೀವವನ್ನೇ ಬೇಕಿದ್ದರೂ ಕೊಟ್ಟುಬಿಡುತ್ತಿದ್ದೆ ಎಂದು ವೇದಿಕೆ ಮೇಲೆಯೇ ಹೇಳಿ ಕಣ್ಣೀರಿಟ್ಟು ಬಿಟ್ಟರು.. ಹೌದು ಜೀ ಕನ್ನಡ ವಾಹಿನಿಯವರು ಪುನೀತ್ ರಾಜ್ ಕುಮಾರ್ ಅವರಿಗೆ ನಮಿಸುವ ಸಲುವಾಗಿ ಕರುನಾಡ ರತ್ನ ಎಂಬ ಕಾರ್ಯಕ್ರಮ ಮಾಡಿದ್ದು ಪುನೀತ್ ಅವರ ಹುಟ್ಟಿನಿಂದ ಈವರೆಗೂ ಪ್ರತಿಯೊಂದು ಹೆಜ್ಜೆಯನ್ನು ನೆನಪಿಸುವಂತಹ ಅರ್ಥಪೂರ್ಣ ಕಾರ್ಯಕ್ರಮವೊಂದನ್ನು ಮಾಡಿದ್ದಾರೆ.. ಹೌದು ಆ ದಿನ ಚಲನಚಿತ್ರ ವಾಣಿಜ್ಯ ಮಂಡಳಿಯವರು ಮಾಡಿದ ಪುನೀತ್ ಗೀತ ನಮನ ಕಾರ್ಯಕ್ರಮದಲ್ಲಿ ರಾಜಕಾರಣಿಗಳೇ ಅತಿ ಹೆಚ್ಚಾಗಿದ್ದು ಸಿನಿಮಾರಂಗದ ಹಿರಿಯರು ಎಲ್ಲರೂ ಪುನೀತ್ ಅವರ ಬಗ್ಗೆ ಮಾತನಾಡಲು ಅವರ ಒಡನಾಟವನ್ನು ಹಂಚಿಕೊಳ್ಳಲು ಸಾಧ್ಯವಾಗಿರಲಿಲ್ಲ..

ಆದರೆ ಇಲ್ಲಿ ಜೀ ಕನ್ನಡ ವಾಹಿನಿಯವರು ಆಯೋಜಿಸಿದ ಕರುನಾಡ ರತ್ನ ಕಾರ್ಯಕ್ರಮದಲ್ಲಿ ಬಹುತೇಕ ಚಿತ್ರರಂಗದ ಎಲ್ಲರೂ ಹಾಗೂ ಕಿರುತೆರೆಯವರು ಪಾಲ್ಗೊಂಡು ಪುನೀತ್ ಅವರಿಗೆ ನಮಿಸಿದರು.. ಈ ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ಅವರನ್ನು ಹೊರತುಪಡಿಸಿ ಶಿವಣ್ಣ ರಾಘಣ್ಣ ಲಕ್ಷ್ಮಿ ಪೂರ್ಣಿಮಾ ಅವರೆಲ್ಲರನ್ನೂ ಸೇರಿದಂತೆ ದೊಡ್ಮನೆ ಕುಟುಂಬದ ಎಲ್ಲರೂ ಸಹ ಪಾಲ್ಗೊಂಡಿದ್ದರು.. ಇದೇ ಕಾರ್ಯಕ್ರಮದಲ್ಲಿ ರವಿಚಂದ್ರನ್ ಅವರ ಮಾತುಗಳು ನೆರೆದಿದ್ದ ಎಲ್ಲರಲ್ಲಿಯೂ ಕಣ್ಣೀರು ತರಿಸಿತು.. ಹೌದು ರವಿಚಂದ್ರನ್ ಅವರು ಪುನೀತ್ ಅವರ ಬಗ್ಗೆ ಮಾತನಾಡಿ ಪುನೀತ್ ಗಾಗಿ ಸಂಯೋಜಿಸಿದ್ದ ಹಾಡನ್ನು ಹಾಡಿ ಸ್ವತಃ ರವಿಚಂದ್ರನ್ ಅವರೇ ಕಣ್ಣೀರಿಟ್ಟರು..

ಅಷ್ತೇ ಅಲ್ಲದೇ ಮಾತನಾಡುವಾಗ ಪುನೀತ್ ಗಾಗಿ ತನ್ನ ತಾಯಿಯ ಜೀವವನ್ನೇ ಕೊಡುತ್ತಿದ್ದೆ ಎಂದರು.. ಹೌದು ಇತ್ತ ಪುನೀತ್ ಅವರು ಅಗಲಿದ ದಿನವೇ ರವಿಚಂದ್ರನ್ ಅವರ ತಾಯಿಗೂ ಆರೋಗ್ಯದ ಸ್ಥಿತಿ ಗಂಭೀರವಾಗಿ ಐಸಿಯುಗೆ ದಾಖಲಿಸಿದ್ದರು.. ಅದನ್ನು ನೆನೆದು ಮಾತನಾಡಿದ ರವಿಚಂದ್ರನ್ ಅವರು ಅಕಸ್ಮಾತ್ ಯಾರದ್ದಾದರು ಜೀವ ಕೊಟ್ಟು ಪುನೀತ್ ಅವರನ್ನು ಬದುಕಿಸಬಹುದು ಎಂದು ಸಣ್ಣ ಅವಕಾಶ ವಿದ್ದಿದ್ದರೂ ಸಹ ಅಪ್ಪು ಏನಾದರೂ ಐಸಿಯು ನಲ್ಲಿ ಇದ್ದಿದ್ದರೆ ನಾನು ನನ್ನ ತಾಯಿಗೆ ಕೇಳಿಕೊಳ್ಳುತ್ತಿದ್ದೆ.. ಅವರು ಸಂಪೂರ್ಣ ಬದುಕನ್ನು ಬದುಕಿದ್ದಾರೆ.. ಇಷ್ಟು ಸಾಕು ಅವರ ಜೀವನ ಪರಿಪೂರ್ಣ ವಾಗಿದೆ.. ಆದರೆ ಅಪ್ಪು.. ಅಪ್ಪು ಇಷ್ಟು ಚಿಕ್ಕ ವಯಸ್ಸಿಗೆ ಹೋಗಬೇಕಿತ್ತಾ.. ನನ್ನ ತಾಯಿಗೆ ನಾನೇ ಹೇಳುತ್ತಿದ್ದೆ..

ಆ ಹುಡುಗ ಬದುಕಲಿ ನೀನೆ ಹೋಗಮ್ಮಾ ಎಂದುಬಿಡುತ್ತಿದ್ದೆ ಎಂದು ಕಣ್ಣೀರಿಟ್ಟರು.. ರವಿಚಂದ್ರನ್ ಅವರ ಮಾತು ಕೇಳಿ ಶಿವಣ್ಣ ಬಿಕ್ಕಿ ಬಿಕ್ಕಿ ಅತ್ತದ್ದು ನಿಜಕ್ಕೂ ಮನಕಲಕುವಂತಿತ್ತು.. ಅಲ್ಲಿ ಅಪ್ಪುವಿನ ಅಗಲಿಕೆ ಪ್ರತಿಯೊಬ್ಬರಿಗೂ ಅದೆಷ್ಟು ನೋವನ್ನು ನೀಡಿದೆಂಬುದನ್ನು ತೋರುತಿತ್ತು.. ತನ್ನ ತಾಯಿಯ ಜೀವವನ್ನೇ ಅಪ್ಪುಗೆ ಕೊಡುತ್ತಿದ್ದೆ ಎನ್ನುವ ಮಾತುಗಳನ್ನಾಡುತ್ತಾರೆ ಎಂದರೆ ಆ ಪುಣ್ಯಾತ್ಮ ಅದೆಷ್ಟು ಒಳ್ಳೆಯ ಮನುಷ್ಯನಾಗಿ ಒಳ್ಳೆಯ ವ್ಯಕ್ತಿತ್ವದಿಂದ ಒಳ್ಳೆಯ ಗುಣಗಳಿಂದ ಬದುಕಿ ಹೋಗಿರಬಹುದು.. ಈ ಹಿಂದೆಯು ಸಹ ಸಾಕಷ್ಟು ಬಾರಿ ರವಿಚಂದ್ರನ್ ಅವರು ಪುನೀತ್ ಅವರ ಬಗ್ಗೆ ಮಾತನಾಡಿ ಭಾವುಕರಾಗಿದ್ದರು.. ಎಂದೂ ಸಹ ಕಣ್ಣೀರಿಡದ ರವಿಚಂದ್ರನ್ ಅವರು ಪುನೀತ್ ಅವರ ವಿಚಾರದಲ್ಲಿ ಗದ್ಗದಿತರಾಗಿ ಕಣ್ಣೀರಿಟ್ಟರು..

ಅಷ್ಟೇ ಅಲ್ಲದೇ ಜೀವನದಲ್ಲಿ ನಾನು ಕುಸಿದು ಬಿದ್ದಂತೆ ಆಗಿದ್ದು ನನಗೆ ಅದೇ ಮೊದಲು.. ಅಪ್ಪು ಎಲ್ಲರಿಗೂ ಜೀವನದ ಪಾಠವನ್ನು ಚೆನ್ನಾಗಿ ಕಲಿಸಿ ಹೋಗಿದ್ದಾರೆ.. ಹಣ ಆಸ್ತಿ ಹಿಂದೆ ಹೋಗಬೇಡಿ.. ಏನೇ ಸಂಪಾದನೆ ಮಾಡಿದ್ರು..‌ ನಾಲೇ ಅನ್ನೋದು ಕನಸು ಆಸೆ ಅಷ್ಟೇ.. ಭರವಸೆಯಲ್ಲ.. ಇರೋವಷ್ಟು ಜೀವನ ನಿಮ್ಮವರ ಜೊತೆ ಚೆನ್ನಾಗಿರಿ ಎಂದಿದ್ದರು.. ನಲವತ್ತಾರಕ್ಕೆ ಜೀವನ ಮುಗಿಸಿ ಇಡೀ ಕರುನಾಡನ್ನು ಕಣ್ಣೀರಲ್ಲಿ ಮುಳುಗಿಸಿ ಪುನೀತ್ ಅವರು ಹೋಗಿರಬಹುದು.. ಆದರೆ ನಿಜಕ್ಕೂ ನಿಮ್ಮದು ಸಾರ್ಥಕ ಜೀವನ ಅಪ್ಪು ಸರ್.. ಬದುಕಿದರೆ ನಿಮ್ಮಂತೆ ಬದುಕಬೇಕು.. ದಯವಿಟ್ಟು ದೊಡ್ಮನೆಯಲ್ಲಿಯೇ ಮತ್ತೆ ಹುಟ್ಟಿ ಬನ್ನಿ.. ದೀರ್ಘಾಯುಷಿಯಾಗಿ ಬದುಕಿ ಬಾಳಿ.. ಇದೇ ಕೋಟ್ಯಾಂತರ ಕನ್ನಡಿಗರ ಕೋರಿಕೆ ಹಾರೈಕೆ ಎಲ್ಲವೂ..