ಮಜಾ ಟಾಕೀಸ್ ಶೋ ಗೆ ಹೋಗುವ ಮುನ್ನ ರವಿಶಂಕರ್ ಗೌಡ ಅವರು ಮಾಡಿರುವ ಕೆಲಸ ನೋಡಿ‌..

0 views

ಸದ್ಯ ಕನ್ನಡ ಕಿರುತೆರೆಯಲ್ಲಿ ಒಂದರ ಹಿಂದೆ ಒಂದರಂತೆ ಸಾಲು ಸಾಲು ಮನರಂಜನಾ ಶೋಗಳು ಪ್ರಸಾರವಾಗುತ್ತಿವೆ.. ಬಿಗ್ ಬಾಸ್ ನಲ್ಲಿ ಭಾಗವಹಿಸಿ ಹೊರ ಬಂದ ನಂತರ ಸೃಜನ್ ಲೋಕೇಶ್ ಆರಂಭಿಸಿದ ಮಜಾ ಟಾಕೀಸ್ ಊಹೆಗೂ ಮೀರಿದ ಯಶಸ್ಸು ಪಡೆಯಿತು.. ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು.. ಅದುವರೆಗೂ ಕಿರುತೆರೆಗೆ ಬಾರದ ಸೂಪರ್ ಸ್ಟಾರ್ ಎಲ್ಲರೂ ಸೃಜನ್ ಲೋಕೇಶ್ ಅವರ ಶೋನಲ್ಲಿ ಹಾಜರಾಗಿ ಮಜಾ ಮಾಡಿದರು.. ಸೃಜನ್ ಲೋಕೇಶ್ ಅವರಿಗೆ ಟಾಕಿಂಗ್ ಸ್ಟಾರ್ ಎಂಬ ಬಿರುದು ಸಹ ಬಂತು.. ಕಲರ್ಸ್ ಕನ್ನಡದಲ್ಲಿ ಒಂದು ಸೀಸನ್ ಅನ್ನು ಯಶಸ್ವಿಯಾಗಿ ಮುಗಿಸಿದ ನಂತರ ಕಲರ್ಸ್ ಸೂಪರ್ ವಾಹಿನಿಯಲ್ಲಿ‌ ಮತ್ತೊಂದು ಸೀಸನ್ ನಡೆದು ಬರೋಬ್ಬರಿ 500 ಸಂಚಿಕೆ ಪೂರೈಸಿ ಮುಕ್ತಾಯಗೊಂಡಿತ್ತು.

ಇದೀಗ ಲಾಕ್ ಡೌನ್ ಬಳಿಕ ಮತ್ತೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮಜಾ ಟಾಕೀಸ್ ಶುರುವಾಗಿದ್ದು ಬಹಳಷ್ಟು ಬದಲಾವಣೆಗಳ ಜೊತೆ ಶೋವನ್ನು ಹಿಟ್ ಮಾಡಲು ಮುಂದಾಗಿದ್ದಾರೆ.. ಬಹಳಷ್ಟು ಹೊಸ ಮುಖಗಳನ್ನು ಶೋಗೆ ಕರೆತಂದಿದ್ದರೆ ಎಂದಿನಂತೆ ಹಳೆಯ ಕಲಾವಿದರು ಸಹ ಮಜಾ ಟಾಕೀಸಿನ ಭಾಗವಾಗಿದ್ದಾರೆ..

ಇನ್ನು ಮಜಾ ಟಾಕೀಸಿನಲ್ಲಿ ಇನ್ನುಮುಂದೆ ಡಬಲ್ ಮನರಂಜನೆ ಎನ್ನಬಹುದು.. ಹೌದು ಇದಕ್ಕೆ ಕಾರಣ ಮತ್ಯಾರೂ ಅಲ್ಲ ನಮ್ಮ ಡಾಕ್ಟರ್ ವಿಠಲ್ ರಾವ್.. ತೊಂಬತ್ತರ ದಶಕದ ಮಕ್ಕಳ ಪಾಲಿನ ಟಿವಿ ಹೀರೋ ಆಗಿದ್ದ ಸಿಲ್ಲಿ ಲಲ್ಲಿ ಖ್ಯಾತಿಯ ನಮ್ ಡಾಕ್ಟರ್ ವಿಠಲ್ ರಾವ್ ಅವರು ಇನ್ನು ಮುಂದೆ ಮಜಾ ಟಾಕೀಸಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ..

ಹೌದು ರವಿಶಂಕರ್ ಗೌಡ ಅವರನ್ನು ಕಳೆದ ಸೀಸನ್ ನಿಂದಲೂ ಸೃಜನ್ ಆಹ್ವಾನ ನೀಡಿದ್ದರು.. ಆದರೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದ ರವಿಶಂಕರ್ ಅವರು ಕಿರುತೆರೆಗೆ ಮತ್ತೆ ಬರುವ ಮನಸ್ಸು ಮಾಡಿರಲಿಲ್ಲ.. ಆದರೀಗ ಲಾಕ್ ಡೌನ್ ನಂತರ ತ್ರಿಬಲ್ ರೈಡಿಂಗ್ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ರವಿಶಂಕರ್ ಗೌಡ ಅವರು ಇದೀಗ ಮಜಾ ಟಾಕೀಸಿನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ..

ಹೌದು ಬೇಡದೇ ಇರುವುದನ್ನು ಕಂಡುಹಿಡಿಯುವ ವಿಜ್ಞಾನಿ ಪಾತ್ರದಲ್ಲಿ ರವಿಶಂಕರ್ ಗೌಡ ಅವರು ಕಾಣಿಸಿಕೊಳ್ಳುತ್ತಿದ್ದು ಅದಾಗಲೇ ಸಾಮಾಜಿಕ ಜಾಲತಾಣದಲ್ಲಿ ರವಿಶಂಕರ್ ಅವರ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದು ಜನರು ಕಿರುತೆರೆಗೆ ಮತ್ತೊಮ್ಮೆ ರವಿಶಂಕರ್ ಗೌಡ ಅವರನ್ನು ಸ್ವಾಗತಿಸಿದ್ದಾರೆ..

ಇನ್ನು ಕಲಾವಿದರಿಗೆ ತಮ್ಮ ಕೆಲಸದ ಬಗ್ಗೆ ಎಷ್ಟು ಭಯ ಭಕ್ತಿ ಇರುತ್ತದೆ ಎಂಬುದಕ್ಕೆ ರವಿಶಂಕರ್ ಅವರೇ ನೈಜ್ಯ ಉದಾಹರಣೆ.. ಕಷ್ಟ ಪಟ್ಟು ತಮ್ಮ ಜೀವನ ಕಟ್ಟಿಕೊಂಡಿರುವ ರವಿಶಂಕರ್ ಅವರು ತಮ್ಮ ನಟನಾ ವೃತ್ತಿಯನ್ನೇ ದೇವರೆಂದುಕೊಂಡವರು.. ಇದೀಗ ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟು ಮಜಾ ಟಾಕೀಸಿನಲ್ಲಿ ತಮ್ಮ ಸೆಕೆಂಡ್ ಇನ್ನಿಂಗ್ಸ್ ಅನ್ನು ಶುರು ಮಾಡಿದ್ದಾರೆ.. ಈ ಸಮಯದಲ್ಲಿ‌ ತಾವು ಅಭಿನಯಿಸಿದ ಸಂಚಿಕೆ ಪ್ರಸಾರವಾಗುವ ಮುನ್ನ ರವಿಶಂಕರ್ ಅವರು ಮನೆದೇವರಿಗೆ ಭೇಟಿ‌ಕೊಟ್ಟು ದರ್ಶನ ಮಾಡಿ ಬಂದಿದ್ದಾರೆ..

ಹೌದು ಮೈಸೂರು ಬಳಿ ಇರುವ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ಸನ್ನಿಧಿಗೆ ಕುಟುಂಬ ಸಮೇತರಾಗಿ ಭೇಟಿ‌ಕೊಟ್ಟ ರವಿಶಂಕರ್ ಗೌಡ ಅವರು ದೇವರ ದರ್ಶನ ಪಡೆದು ಬೆಂಗಳೂರಿಗೆ ಮರಳಿದ್ದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.. ರವಿಶಂಕರ್ ಅವರ ಕಿರುತೆರೆಯ ಈ ಹಿಸ ಜರ್ನಿಗೆ ಶುಭವಾಗಲೆಂದು ಅಭಿಮಾನಿಗಳು ಕಮೆಂಟ್ ಮೂಲಕ ಶುಭ ಹಾರೈಸಿದ್ದಾರೆ..