ಎರಡೂ ಕುಟುಂಬದ ನಡುವಿನ ಮನಸ್ತಾಪದ ಬಗ್ಗೆ ಬಿಚ್ಚಿಟ್ಟ ಪ್ರಮಿಳಾ ಸುಂದರ್ ಹಾಗೂ ಧೃವ ಸರ್ಜಾ..

0 views

ಇಂದು ಸ್ಯಾಂಡಲ್ವುಡ್ ನ ಸ್ಟಾರ್ ಜೋಡಿ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಅವರ ಮಗ ಪುಟ್ಟ ಚಿರುವಿನ ನಾಮಕರಣ ಸಂಭ್ರಮ ಅದ್ಧೂರಿಯಾಗಿ ನೆರವೇರಿತು.. ಪ್ರಮಿಳಾ ಸುಂದರ್ ಅವರ ಸಂಪ್ರದಾಯದಂತೆ ಚರ್ಚ್ ನಲ್ಲಿ ಹಾಗೂ ಸರ್ಜಾ ಕುಟುಂಬದ ಸಂಪ್ರದಾಯದಂತೆ ಪುರೋಹಿತರ ಸಮ್ಮುಖದಲ್ಲಿ ಎರಡೂ ರೀತಿಯಲ್ಲಿಯೂ ಪುಟ್ಟ ಕಂದನಿಗೆ ನಾಮಕರಣ ಸಮಾರಂಭ ನೆರವೇರಿದ್ದು ರಾಯನ್ ರಾಜ್ ಸರ್ಜಾ ಎಂದು ಮಗುವಿಗೆ ಹೆಸರಿಡಲಾಗಿದ್ದು ನೆರದಿದ್ದ ಕುಟುಂಬದವರು ಸ್ನೇಹಿತರು ಅಭಿಮಾನಿಗಳು ಎಲ್ಲರೂ ಸಹ ಪುಟ್ಟ ಕಂದನಿಗೆ ಶುಭ ಹಾರೈಸಿದರು.. ಇನ್ನು ಕಾರ್ಯಕ್ರಮಕ್ಕೆ ಮಾದ್ಯಮದವರನ್ನೂ ಸಹ ಆಹ್ವಾನ ಮಾಡಿದ್ದ ಮೇಘನಾ ರಾಜ್ ಅವರು ನಾಮಕರಣದ ಸಮಾರಂಭದ ನಂತರ ಸಂಪೂರ್ಣ ಕುಟುಂಬ ಮಾದ್ಯಮದ ಮುಂದೆ ಹಾಜರಾದರು.. ಮಾದ್ಯಮದ ಮುಂದೆ ಅನೇಕ ವಿಚಾರಗಳನ್ನು ಕುಟುಂಬ ತೆರೆದಿಟ್ಟಿತು..

ಹೌದು ಮೇಘನಾ ರಾಜ್, ಮೇಘನಾ ಅವರ ತಂದೆ ಸುಂದರ್ ರಾಜ್, ತಾಯಿ ಪ್ರಮಿಳಾ ಸುಂದರ್ ಅವರು ಹಾಗೂ ಇತ್ತ ಧೃವ ಸರ್ಜಾ ಪ್ರೇರಣಾ ಸರ್ಜಾ ಹಾಗೂ ಸೂರಜ್ ಸರ್ಜಾ ಸುದ್ಧಿಗೋಷ್ಟಿಯಲ್ಲಿ ಹಾಜರಿದ್ದು ಪ್ರತಿಯೊಬ್ಬರೂ ಸಹ ಮಾತನಾಡಿದರು.. ಇದೇ ಸಮಯದಲ್ಲಿ ಸುಂದರ್ ರಾಜ್ ಅವರು ಹಾಗೂ ಸರ್ಜಾ ಕುಟುಂಬದ ನಡುವಿನ ಮನಸ್ತಾಪದ ವಿಚಾರವಾಗಿಯೂ ಮಾತು ಹೊರ ಬಂತು..

ಹೌದು ಮೊದಲಿಗೆ ಮಾತು ಶುರು ಮಾಡಿದ ಸುಂದರ್ ರಾಜ್ ಅವರು ಈ ಒಂದೂವರೆ ವರ್ಷಗಳ ಕಾಲ ನಮಗೆ ಬೆಂಬಲವಾಗಿ ನಿಂತ ಪ್ರತಿಯೊಬ್ಬರಿಗೂ ಧನ್ಯವಾದಗಳು.. ನಮ್ಮ ಮನೆಗೆ ಹೊಸ ಬೆಳಕು ಈ ಮಗು.. ಈ ಮಗುವಿಗೆ ಇದೀಗ ರಾಯನ್ ರಾಜ್ ಸರ್ಜಾ ಎಂಬ ಹೆಸರನ್ನು ಇಟ್ಟಿದ್ದೇವೆ.. ಕಳೆದ ಒಂದೂವರೆ ವರ್ಷದ ಹಿಂದೆ ನಾವು ನೋವಿನಲ್ಲಿದ್ದಾಗ ಇದನ್ನೆಲ್ಲಾ ಹೇಗೆ ನಿಭಾಯಿಸಬೇಕು ಎಂದೂ ಸಹ ತಿಳಿಯದಿದ್ದಾಗ ನಮಗೆ ಪ್ರತಿಯೊಂದು ಹೆಜ್ಜೆಯಲ್ಲಿಯೂ ಜೊತೆಯಾಗಿ ನಿಂತದ್ದು ಪನ್ನಗ ಭರಣ ಹಾಗೂ ಸ್ನೇಹಿತರು.. ಚಿರು ಸ್ನೇಹ ಜೀವಿ ಅವನು ಹೋಗ್ತಾ ಅವನ ಸ್ನೇಹಿತರನ್ನು ನಮ್ಮ ಕಷ್ಟದಲ್ಲಿ ನೆರವಾಗಲು ಬಿಟ್ಟು ಹೋದ.‌ ಅವರಿಗೆಲ್ಲಾ ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು.. ಹಾಗೆಯೇ ಮಾದ್ಯಮದ ಪ್ರತಿಯೊಬ್ಬರಿಗೂ ನನ್ನ ಧನ್ಯವಾದಗಳು.. ನಿಮ್ಮೆಲ್ಲರ ಬೆಂಬಲ ನನ್ನ ಮೊಮ್ಮಗನಿಗೂ ಇರಲಿ ಎಂದರು..

ಇನ್ನು ಮೇಘನಾ ರಾಜ್ ಅವರು ಮಾತನಾಡಿ ಮಗುವಿಗೆ ಐದು ಅಥವಾ ಏಳನೇ ತಿಂಗಳಲ್ಲಿ ನಾಮಕರಣ ಮಾಡಬೇಕು ಎಂದುಕೊಂಡೆವು.. ಆದರೆ ಸಾಧ್ಯವಾಗಲಿಲ್ಲ. ಒಂಭತ್ತನೇ ತಿಂಗಳಿನಲ್ಲೂ ಸಾಧ್ಯವಾಗಲಿಲ್ಲ.. ಕೊನೆಗೆ ಹನ್ನೊಂದನೇ ತಿಂಗಳಿನಲ್ಲಿ ಕಾಲ‌ಕೂಡಿ ಬಂತು.. ಮೊದಲಿಗೆ ಈ ಹೆಸರನ್ನು ನಾನು ನಿರ್ಧಾರ ಮಾಡಿದೆ.. ರಾಯನ್ ಎಂದರೆ ಯುವರಾಜ ನಮ್ಮ ಮನೆಗೆ ಚಿರು ಯಾವಾಗಲೂ ರಾಜ.. ರಾಯನ್ ಯುವರಾಜ ಆಗಿರ್ತಾನೆ.. ನಾನು ಸೂಚಿಸಿದ ಹೆಸರಿಗೆ ಕುಟುಂಬದ ಎಲ್ಲರೂ ಸಹ ಇದೇ ಹೆಸರನ್ನು ಇಷ್ಟಪಟ್ಟರು.. ಜೊತೆಗೆ ಎರಡೂ ಕುಟುಂಬದ ಹೆಸರನ್ನು ಸೇರಿಸಿ ರಾಯನ್ ರಾಜ್ ಸರ್ಜಾ ಅಂತ ಇಡಲಾಗಿದೆ.. ನಿಮ್ಮೆಲ್ಲರ ಆಶೀರ್ವಾದ ಮಗುವಿನ ಮೇಲಿರಲಿ.. ಅವನು ನನ್ನ ಜೀವನದ ಬೆಳಕು.. ನಮ್ಮ ಜೀವನದ ಸ್ವರ್ಗದ ಬಾಗಿಲನ್ನು ತೆರೆದವನು ಎಂದರು..‌

ಇನ್ನು ಮೇಘನಾ ರಾಜ್ ರ ಬಳಿಕ ಅವರ ತಾಯಿ ಸುಂದರ್ ರಾಜ್ ಅವರು ಮಾತನಾಡಿ ಮಗು ಬಂದ ಬಳಿಕ ಮೇಘನಾ ಬಾಳಲ್ಲಿ ಹೊಸ ಬೆಳಕು ಮೂಡಿದೆ.. ನನ್ನ ಮಗಳ ಜೀವನಕ್ಕೆ ಅವನು ಭರವಸೆ ಆಗಿದ್ದಾನೆ.. ಅಜ್ಜಿ ತಾತನನ್ನು ಒಂದು ಕ್ಷಣವೂ ಬಿಟ್ಟಿರೋದಿಲ್ಲ ಅಷ್ಟು ಪ್ರೀತಿ ಎಂದರು.. ಜೊತೆಗೆ ನಮ್ಮ ಮಗಳು ಮೇಘನಾ ರಾಜ್ ಹುಟ್ಟಿದಾಗಿನಿಂದ ಈ ಕ್ಷಣದ ವರೆಗೆ ಅವಳ ಜವಾಬ್ದಾರಿಯನ್ನು ನಾನು ಮತ್ತು ಅವಳ ತಂದೆಯೇ ನಿಭಾಯಿಸುತ್ತಿರುವುದು ಮುಂದೆಯೂ ಸಹ ನಾವೇ ಅವಳಿಗೆ ಬೇಕು ಬೇಡವನ್ನು ಕೇಳುವವರು.. ಯಾರೂ ಸಹ ನಮಗೆ ಯಾವ ಹಣವನ್ನೂ ಕೊಟ್ಟಿಲ್ಲ.. ಕೊಡೋದು ಬೇಡ.. ಈ ಮಾತನ್ನು ಯಾಕೆ ಹೇಳ್ತಿದ್ದೀನಿ ಅಂದರೆ ಕೆಲವರು ಪ್ರಚಾರ ಮಾಡ್ತಾ ಇದ್ದಾರೆ.. ಅವರು ಅಷ್ಟು ಕೊಟ್ಟರು ಇವರು ಇಷ್ಟು ಕೊಟ್ಟರು ಅವರ ಜವಾಬ್ದಾರಿಯನ್ನು ಮತ್ತೆ ಇನ್ಯಾರೋ ತೆಗೆದುಕೊಂಡರಂತೆ ಅನ್ನೋ ಮಾತುಗಳು ಬಂದಿವೆ.. ನನ್ನ ಮಗಳ ಸಂಪೂರ್ಣ ಜವಾಬ್ದಾರಿ ನಮ್ಮದೇ.. ಮುಂದೆಯೂ ಸಹ ಮೊಮ್ಮಗನನ್ನು ದೊಡ್ಡಾವನನ್ನಾಗಿ ಮಾಡಿ ನನ್ನ ಮಗಳಿಗೆ ಬೆಂಬಲವಾಗಿ ನಿಲ್ಲುವ ತನಕ ನಾವೇ ಜವಾಬ್ದಾರಿಯನ್ನು ನಿಭಾಯಿಸುತ್ತೇವೆ.. ಇಲ್ಲಿ ಯಾವ ಪ್ರಚಾರವೂ ಬೇಡ ಅದರಿಂದ ಮನಸ್ಸು ನೋವಾಗುತ್ತದೆ ಎಂದರು..

ಇನ್ನು ಪ್ರಮಿಳಾ ಸುಂದರ್ ಅವರ ಬಳಿಕ ಮಾತನಾಡಿದ ಧೃವ ಸರ್ಜಾ ನಮ್ಮ ಹಾಗೂ ಸುಂದರ್ ರಾಜ್ ಅವರ ಕುಟುಂಬದ ನಡುವೆ ಯಾವುದೇ ಮನಸ್ತಾಪ ಇಲ್ಲ.. ಕೆಲವರು ಯೂಟ್ಯೂಬ್ ಗಳಲ್ಲಿ ಮನಸ್ತಾಪ ತರುವಂತ ಕೆಲಸ ಮಾಡ್ತಾರೆ ದಯವಿಟ್ಟು ಮಾಡಬೇಡಿ.. ನಾವು ಚೆನ್ನಾಗಿದ್ದೇವೆ ಮುಂದೆಯೂ ಚೆನ್ನಾಗಿರ್ತೇವೆ.. ಸರ್ಜಾ ಹಾಗೂ ಸುಂದರ್ ರಾಜ್ ಅವರ ಎರಡೂ ಕುಟುಂಬ ಯಾವಗಲೂ ಒಂದೇ.. ನಮ್ಮ ಅಣ್ಣನ ಮಗನಿಗೆ ರಾಯನ್ ರಾಜ್ ಸರ್ಜಾ ಅಂತ ಹೆಸರಿಡಲಾಗಿದೆ ರಾಯನ್ ಎಂದರೆ ಸಂಸ್ಕೃತದಲ್ಲಿ ಯುವರಾಜ ಅಂತ ಅರ್ಥ.. ರಾಜ್ ಎಂದರೆ ಸುಂದರ್ ರಾಜ್ ಅಂಕಲ್ ಹೆಸರು.. ಸರ್ಜಾ ಎಂದರೆ ನಮ್ಮ ಕುಟುಂಬದ ಹೆಸರು.. ಹೀಗೆ ಎಲ್ಲವನ್ನೂ ಸೇರಿಸಿ ನಮ್ಮ ಅಣ್ಣನ ಮಗನಿಗೆ ಇಡಲಾಗಿದೆ.. ಈ ಸಮಯದಲ್ಲಿ ನನ್ನ ಅಣ್ಣನನ್ನು ನಮ್ಮ ಅಂಕಲ್ ನನ್ನು ನೆನಪಿಸಿಕೊಳ್ಳೋಕೆ ಇಷ್ಟ ಪಡ್ತೀನಿ ದಯವಿಟ್ಟು ಎಲ್ಲರೂ ಮಗುವಿಗೆ ಆಶೀರ್ವಾದ ಮಾಡಿ ಎಂದರು..

ಇನ್ನು ಈ ಎರಡೂ ಕುಟುಂಬದ ನಡುವೆ ಮನಸ್ತಾಪ ಎಂಬ ವಿಚಾರಕ್ಕೆ ಧೃವ ಸರ್ಜಾ ತೆರೆ ಎಳೆದರು.. ಈ ಎಲ್ಲಾ ಮಾತುಗಳಿಗೂ ಕಾರಣ ಯೂಟ್ಯುಬ್ ಗಳಲ್ಲಿ‌ ಕೆಲವರು ಮೇಘನಾರಿಗೆ ಅವರು ಅಷ್ಟು ಹಣ ಕೊಟ್ಟರು.. ಇವರು ಇಷ್ಟು ಹಣ ಕೊಟ್ಟರು.. ಮಗುವಿನ ಜವಾಬ್ದಾರಿಯನ್ನು ಧೃವ ಸರ್ಜಾ ಅವರೇ ವಹಿಸಿಕೊಂಡಿದ್ದಾರೆ ಹೀಗೆ ಸಾಕಷ್ಟು ಇಲ್ಲ ಸಲ್ಲದ ಸುದ್ದಿಗಳು ಹರಿದಾಡಿದ್ದವು.. ಇದೇ ಕಾರಣಕ್ಕೆ ಈ ಎಲ್ಲಾ ಮಾತುಗಳು ಬಂದವು ಎನ್ನಲಾಗಿದೆ..