ಕೊರೊನಾದಿಂದ ಜೀವ ಕಳೆದುಕೊಂಡ ಮಗನನ್ನು ಹಳ್ಳಿಗೆ ತರಬೇಡಿ ಎಂದ ಜನ.. ಆದರೆ ಶಾಸಕ ರೇಣುಕಾಚಾರ್ಯ ಮಾಡಿದ ಕೆಲಸ ನೋಡಿ..

0 views

ಕೆಲವೊಮ್ಮೆ ಜನ ನಾಯಕರ ಕೆಲಸಗಳು ಹಿಡಿಸಲಿಲ್ಲ ವೆಂದಾಗ.. ಅವರು ತಪ್ಪು ಮಾಡಿದಾಗ ಸಾಮಾಜಿಕ ಜಾಲತಾಣಗಳು ಅವುಗಳನ್ನು ಟೀಕೆ ಮಾಡುತ್ತವೆ.. ಕಾಲೆಳೆದು ಸರಿಯಾಗಿ ನಡೆಯುವಂತೆ ತಿಳಿಸುತ್ತವೆ.. ಆದರೆ ಅದೇ ರೀತಿ ಅದೇ ಜನ ನಾಯಕ‌ ಒಳ್ಳೆಯ ಕೆಲಸ ಮಾಡಿದಾಗಲೂ ಸಹ ಆತನ ಬಗ್ಗೆ ಮಾತನಾಡುವುದ ಮರೆಯುವುದಿಲ್ಲ.. ಹೌದು ಅದೇ ರೀತಿ ಹೊನ್ನಾಳಿ ಶಾಸಕರಾದ ರೇಣುಕಾಚಾರ್ಯ ಅವರು ಮಾಡುತ್ತಿರುವ ಕೆಲಸಕ್ಕೆ ಹ್ಯಾಟ್ಸ್ ಆಫ್ ಹೇಳಲೇ ಬೇಕು.. ಹೌದು ಪ್ರತಿ‌ ಮನೆಗೂ ತೆರಳಿ ಆಹಾರ ಕಿಟ್ ನೀಡುತ್ತಿದ್ದಾರೆ.. ಜನರನ್ನು ಕೈ ಮುಗಿದು ಮಾಸ್ಕ್ ಹಾಕೋಳಿ.. ಮನೆಲೆ ಇರಿ.. ಏನೆ ತೊಂದರೆ ಆದ್ರು ನನಗೆ ಫೋನ್‌ ಮಾಡಿ ಅಂತ ಫೋನ್ ನಂಬರ್ ಸಹ ಕೊಡ್ತಾರೆ.. ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರ ಹತ್ತಿರವೇ ತೆರಳಿ ಆರೋಗ್ಯ ವಿಚಾರಿಸಿ ಅವರಿಗೆ ಮನಸ್ಥೈರ್ಯ ತುಂಬುತ್ತಾರೆ.. ಕೊರೊನಾ ಸೋಂಕಿತರಿಗಾಗಿ ಕೋವಿಡ್ ಕೇರ್ ಗಳಲ್ಲಿ ಸಂಗೀತ ಸಂಜೆ ಏರ್ಪಡಿಸಿ ತಾವೂ ಸಹ ಡ್ಯಾನ್ಸ್ ಮಾಡಿ ಅವರುಗಳನ್ನು ಮನರಂಜಿಸ್ತಾರೆ..

ಅಷ್ಟೇ ಅಲ್ಲ ಆಸ್ಪತ್ರೆಗಳಲ್ಲೊ ಆಕ್ಸಿಜನ್ ಕೊರತೆಯಾದರೆ ಮಧ್ಯ ರಾತ್ರಿಯಾದರೂ ಖುದ್ದು ಅವರೇ ಎದ್ದು ಬಂದು ಆಕ್ಸಿಜನ್ ಸಿಲಿಂಡರ್ ಗಳನ್ನು ತರ್ತಾರೆ.. ಹೀಗೆ ಹೇಳ್ತಾ ಹೋದ್ರೆ ಸಾಲು ಸಾಲು ಕೆಲಸಗಳು.. ನಿಜಕ್ಕೂ ಜನ ನಾಯಕ ಅನ್ನೋನು ಜನರ ಮಧ್ಯೆ ನಿಂತು ಕೆಲಸ ಮಾಡಬೇಕು ಅನ್ನೋದು ಇದೇ ಕಾರಣಕ್ಕೆ.. ಅದನ್ನು ಶೇಕಡ ನೂರರಷ್ಟು ಸತ್ಯ ಮಾಡಿದವರು ಶಾಸಕರಾದ ರೇಣುಕಾಚಾರ್ಯ ಅವರು.. ಹೌದು ನಿಜಕ್ಕೂ ಆ ಪುಣ್ಯಾತ್ಮ ನೂರ್ಕಾಲ ಸುಖವಾಗಿರಲಿ ಎಂದು ಸಾವಿರಾರು ಕುಟುಂಬಗಳು ಇಂದು ಹಾರೈಸಿವೆ.. ಆದರೆ ಇದೆಲ್ಲದರ ನಡುವೆ ಮತ್ತೊಂದು ಮನಕಲಕುವ ಘಟನೆ ನಡೆದಿದೆ.. ಹೌದು ಕೊರೊನಾ ಸೋಂಕಿತರೊಬ್ಬರನ್ನ ಆಸ್ಪತ್ರೆಗೆ ಹೋಗಿ ಭೇಟಿ ಮಾಡಿ ಬಂದ ರೇಣುಕಾ ಚಾರ್ಯ ಅವರಿಗೆ ಶಾಕ್ ಕಾದಿತ್ತು.. ಹೌದು ಆತ ಇನ್ನಿಲ್ಲವಾದ ಸುದ್ದಿ ಕೇಳಿ ನೊಂದುಹೋದರು.. ಹತ್ತು ನಿಮಿಷಗಳ ಹಿಂದಷ್ಟೇ ಮಾತನಾಡಿಸಿದೆ ಆದರೆ ಈಗಿಲ್ಲ ಎಂದು ಕುಗ್ಗಿದರು..

ಆದರೆ ಶಾಸಕನಾಗಿ ಮುಂದಾಗುವ ಕಾರ್ಯದ ಬಗ್ಗೆ ಗಮನ ನೀಡಬೇಕೆಂದು ನಿರ್ಧರಿಸಿ ಆ ಯುವಕನ ತಂದೆಗೆ ಸಮಧಾನ‌ಪಡಿಸಿ ಮಾತನಾಡಿ.. ಊರಿಗೆ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡುವೆ ನೀವು ಕರೆದುಕೊಂಡು ಹೋಗಿ ಎಂದರು.. ಆದರೆ ಆ ಬಡ ತಂದೆ ಕಣ್ಣೀರಿಟ್ಟು ಊರಿನಲ್ಲಿ ಮಗನನ್ನು ಕರೆತರಬೇಡ ಎನ್ನುತ್ತಿದ್ದಾರೆ ಎಂದು ಗೋಳಿಟ್ಟರು.. ತಕ್ಷಣ ಆ ತಂದೆಯ ಕಣ್ಣೊರೆಸಿದ ರೇಣುಕಾಚಾರ್ಯ ಅವರು.. ಖುದ್ದು ತಾವೇ ಜೀವ ಕಳೆದುಕೊಂಡ ಆ ಮಗನನ್ನು ಆಂಬ್ಯುಲೆನ್ಸ್ ನಲ್ಲಿ ಹಾಕಿಕೊಂಡು ಖುದ್ದು ರೇಣುಕಾಚಾರ್ಯ ಅವರೇ ಚಾಲನೆ ಮಾಡಿಕೊಂಡು ಬೇರೆಡೆ ಕೊಂಡೊಯ್ದು ಸಕಲ ಮರ್ಯಾದೆಗಳೊಂದಿಗೆ ಅಂತ್ಯ ಸಂಸ್ಕಾರ ನಡೆಸಿ ಬಂದಿದ್ದಾರೆ.. ನಿಜಕ್ಕೂ ನೋವಿನಲ್ಲಿನ ಜನರಿಗೆ ಈ ರೀತಿ ಹೆಗಲು ಕೊಡುವ ಜನನಾಯಕರು ಬೇಕು ನಮಗೆ..

ಇನ್ನು ಈ ಬಗ್ಗೆ ತಿಳಿಸಿರುವ ರೇಣುಕಾ ಚಾರ್ಯ ಅವರು “ವಿಧಿಯೇ ನಿನ್ನೆಷ್ಟು ಕಲ್ಲು ಮನಸ್ಸಿನವನು.. ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಉಪ ವಿಭಾಗ ಕಚೇರಿಯ ಡಿ ಗ್ರೂಪ್ ನೌಕರನ 30 ವರ್ಷದ ಸಾಫ್ಟ್ ವೇರ್ ಇಂಜಿನಿಯರ್ ಪುತ್ರನನ್ನು ಉಳಿಸಿಕೊಳ್ಳಲು ಸಕಲ ಪ್ರಯತ್ನಗಳನ್ನು ಮಾಡಲಾಯಿತು, ಆದ್ರೆ ವಿಧಿಯಾಟವೇ ಬೇರೆ ಇತ್ತು. ಇಂದು ಬೆಳಗ್ಗೆ ಕೋವಿಡ್ ವಾರ್ಡ್ ಗೆ ಹೋಗಿ ಆರೋಗ್ಯ ವಿಚಾರಿಸಿಕೊಂಡು ಬಂದಿದ್ದೆ, ನಾನು ಬಂದ ಸ್ವಲ್ಪ ಸಮಯದ ನಂತರ ಯುವಕ ಕೊರೊನಾ ಸೊಂಕಿಗೆ ಬಲಿಯಾಗಿದ್ದು ಮನಸ್ಸಿಗೆ ತುಂಬಾ ನೋವಾಯಿತು. ಆತನನ್ನು ಊರಿಗೆ ತರುವುದು ಬೇಡ ಎಂದು ಗ್ರಾಮಸ್ಥರು ಹೇಳಿರುವುದಾಗಿ ಪೋಷಕರು ನನ್ನ ಬಳಿ ದುಃಖ ತೋಡಿಕೊಂಡಾಗ ನಾನೇ ಸ್ವತಃ ಮುಂದೆ ನಿಂತು ಹೊನ್ನಾಳಿ ಪಟ್ಟಣದ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡಿಸಿದೆನು. ಆತನ ಪೋಷಕರ ಆಕ್ರಂದನ ನೋಡಿ ನನಗೆ ದುಃಖ ತಡೆದುಕೊಳ್ಳಲು ಸಾಧ್ಯವಾಗಲಿಲ್ಲ, ಆ ಯುವಕನ ತಾಯಿ ಕರುಳ ಗೋಳಾಟ ನನ್ನ ಕಣ್ಣಲ್ಲಿ ನೋಡಲು ಸಾಧ್ಯವಾಗಲಿಲ್ಲ.. ಎಂದು ಬರೆದು ಕಂಬನಿ ಮಿಡಿದಿದ್ದಾರೆ..

ಇವರ ಬಗ್ಗೆ ಈ ಮುನ್ನ ಕೆಲ ವಿಚಾರಗಳಿಗೆ ಸಾಕಷ್ಟು ಟೀಕೆ ಮಾಡಿರಬಹುದು.. ಆದರೆ ಇಂದು ಈ ಮನುಷ್ಯನ ದೊಡ್ಡ ಗುಣಗಳನ್ನು ಮೆಚ್ಚಿ ಈತನಿಗೆ ಇನ್ನಷ್ಟು ಶಕ್ತಿ ನೀಡಲೆಂದು ಹಾರೈಸುವ ಸಮಯ.. ಒಳ್ಳೆದಾಗ್ಲಿ ಸರ್ ನಿಮಗೆ.. ನಿಮ್ಮ ಈ ಕೆಲಸ ಹೀಗೆ ಮುಂದುವರೆಯಲಿ.. ನೋವಿನಲ್ಲಿದ್ದ ಸಾವಿರಾರು ಕುಟುಂಬಗಳ ನೆರವಿಗೆ ನಿಂತು ಜೊತೆಯಲ್ಲಿ ನಾನಿದ್ದೇನೆ ಎನ್ನುವ ಮಾತಿನ ಜೊತೆಗೆ ಕೆಲಸವನ್ನು ಸಹ ಮಾಡಿರುವ ನಿಮಗೆ ಹ್ಯಾಟ್ಸ್ ಆಫ್.. ನಿಮ್ಮನ್ನು ನೋಡಿ ಸಾಕಷ್ಟು ಜನ ಪ್ರತಿನಿಧಿಗಲು ಕಲಿಯಬೇಕಾದದ್ದು ಸಾಕಷ್ಟಿದೆ..