ನಿನ್ನೆಯಷ್ಟೇ ಆ ಯುವಕನ ಅಂತ್ಯ ಸಂಸ್ಕಾರ ಮಾಡಿ ಬಂದಿದ್ದ ಶಾಸಕ ರೇಣುಕಾಚಾರ್ಯ ಅವರಿಗೆ ರಾತ್ರಿ ಎಂತಹ ಅನುಭವವಾಗಿದೆ ನೋಡಿ..

0 views

ಕೊರೊನಾ ಎರಡನೇ ಅಲೆ ಎಲ್ಲೆಲ್ಲೂ ಆವರಿಸಿದ್ದು ಈ ಬಾರಿ ಸೋಂಕಿತರ ಸಂಖ್ಯೆ ಯಾವ ರೀತಿಯಲ್ಲಿ ಹೆಚ್ಚುತ್ತಿದೆಯೋ ಅದೇ ರೀತಿ ಕೊರೊನಾದಿಣ್ದ ಜೀವ ಕಳೆದುಕೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚಾಗಿ ಹೋಗುತ್ತಿದೆ.. ಇತ್ತ ಕೊರೊನಾವನ್ನು ನಿಯಂತ್ರಣ ಮಾಡುವ ಸಲುವಾಗಿ ಸರ್ಕಾರ ಒಂದಿಲ್ಲೊಂದು ಪ್ರಯತ್ನ ಮಾಡುತ್ತಿದ್ದು ಸಧ್ಯ ಲಾಕ್ ಡೌನ್ ಮೊರೆ ಹೋಗಿದೆ.. ಆದರೆ ಒಂದು ಕಡೆ ಲಾಕ್ ಡೌನ್ ನಿಂದಾಗಿ ಜನರ ಜೀವನ ಬೀದಿಗೆ ಬಿದ್ದಿದ್ದು ಬಡವರು ದಿನಗೂಲಿ ನೌಕರರು ತಿನ್ನುವ ಊಟಕ್ಕೂ ಕಷ್ಟ ಪಡುವಂತಾಗಿದೆ.. ಇನ್ನೊಂದು ಕಡೆ ಕೊರೊನಾ ಸೊಂಕು ಬಂದ ಜನರ ಪಾಡು ಹೇಳಲಾಗದಂತಿದೆ.. ಆ ಕುಟುಂಬದ ಪರಿಸ್ಥಿತಿ ಯಾರಿಗೂ ಬೇಡವೆನ್ನುವಂತಾಗಿದೆ.. ಒಂದು ಕಡೆ ಸೋಂಕಿತರು ಕೋವಿಡ್ ಸೆಂಟರ್ ಗೆ ಹೋಗಿ ದಾಖಲಾಗಬೇಕು.. ಮತ್ತೊಂದು ಕಡೆ ಕುಟುಂಬದವರು ಮನೆ ಆಸ್ಪತ್ರೆ ಅಂತ ಅಲೆಯಬೇಕಿದೆ..

ಇದರ ನಡುವೆ ದುಡಿಮೆಯೂ ಇಲ್ಲ.. ಆದಾಯವೂ ಇಲ್ಲ.. ಜೊತೆಗೆ ಪ್ರೀತಿಸುವ ಜೀವಗಳನ್ನುಇ ಸಹ ಕಳೆದುಕೊಳ್ಳುತ್ತಿರುವ ಸಾವಿರಾರು ಕುಟುಂಬಗಳು.. ಒಟ್ಟಿನಲ್ಲಿ‌ ಇಂತಹ ಪರಿಸ್ಥಿತಿ ಯಾರಿಗೂ ಬಾರದಿರಲಿ ಎಂಬ ಮಾತನ್ನು ಹೇಖುವುದ ಬಿಟ್ಟು ಅಸಹಾಯಕರಾಗಿ ಬಿಟ್ಟಿದ್ದೇವೆ‌.. ಇನ್ನು ಇದೆಲ್ಲದರ ನಡುವೆ ಕೆಲವೇ ಕೆಲ ಜನಪ್ರತಿನಿಧಿಗಳು ಜನರ ಸಹಾಯಕ್ಕೆ ನಿಂತಿದ್ದಾರೆ.. ಹೌದು ಅದರಲ್ಲೂ ಶಾಸಕರಾದ ರೇಣುಕಾಚಾರ್ಯ ಅವರು ಮಾಡುತ್ತಿರುವ ಕೆಲಸ ನಿಜಕ್ಕೂ ಶ್ಲಾಘನೀಯ.. ಹೊರಗೆ ಬಂದರೆ ತಮಗೆಲ್ಲಿ ಕೊರೊನಾ ಬಂದುಬಿಡುವುದೋ ಎಂದು ಮನೆಯಲ್ಲಿ ಬೆಚ್ಚಗೆ ಕುಳಿತಿರುವ ಹಲವಾರು ಜನಪ್ರತಿನಿಧಿಗಳ ನಡುವೆ ಶಾಸಕರಾದ ರೇಣುಕಾಚಾರ್ಯ ಅವರ ಕಾರ್ಯ ನಿಜಕ್ಕೂ ಹ್ಯಾಟ್ಸ್ ಆಫ್ ಹೇಳುವಂತದ್ದು.. ಒಂದು ಕಡೆ ಮನೆ ಮನೆಗೂ ಹೋಗು ಖುದ್ದಾಗಿ ರೇಷನ್ ಕಿಟ್ ತಲುಪಿಸುತ್ತಿದ್ದಾರೆ.. ಇನ್ನೊಂದು ಕಡೆ ಸೋಂಕಿತರ ಬಳಿ ಹೋಗಿ ಧೈರ್ಯ ಹೇಳುತ್ತಿದ್ದಾರೆ..

ಮತ್ತೊಂದು ಕಡೆ ಸೋಂಕಿತರು ಕುಗ್ಗಬಾರದೆಂದು ರಾತ್ರಿ ಸಮಯದಲ್ಲಿ ಕೋವಿಡ್ ಸೆಂಟರ್ ಗಳಲ್ಲಿ ಸಂಗೀತ ಸಂಜೆ ಏರ್ಪಡಿಸಿ ತಾವೂ ಸಹ ಸೋಂಕಿತರ ಜೊತೆಯಲ್ಲಿಯೇ ಡ್ಯಾನ್ಸ್ ಮಾಡುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ತುಂಬುತ್ತಾರೆ.. ಬೆಳಿಗ್ಗೆ ಎದ್ದು ಮತ್ತೆ ಕೋವಿಡ್ ಸೆಂಟರ್ ಗೆ ಭೇಟಿ ಕೊಟ್ಟು ಸೋಂಕಿತರಿಗೆ ಯೋಗ ಹೇಳಿಕೊಡುತ್ತಾರೆ.. ನಿಜಕ್ಕೂ ಜನಪ್ರತಿನಿಧಿ ಎಂದರೆ ಹೀಗಿರಬೇಕು ಎಂದು ರೇಣುಕಾಚಾರ್ಯ ಅವರು ತಿಳಿಸಿಕೊಟ್ಟಿರುವುದು ಸುಳ್ಳಲ್ಲ.. ಇಷ್ಟೆಲ್ಲದರ ನಡುವೆ ಸೋಂಕಿತರು ಜೀವ ಕಳೆದುಕೊಂಡರೆ ಖುದ್ದಾಗಿ ತಾವೇ ನಿಂತು ಅಂತ್ಯ ಸಂಸ್ಕಾರ ಮಾಡಿಸುತ್ತಾರೆ.. ಆಂಬ್ಯುಲೆನ್ಸ್ ಚಾಲನೆ ಮಾಡಿಕೊಂಡು ತಾವೇ ಅಂತವರನ್ನು ಕರೆದೊಯ್ಯುತ್ತಾರೆ.. ಅದೇ ರೀತಿ ನಿನ್ನೆ ಒಬ್ಬ ಯುವಕ ಕೊರೊನಾ ಸೋಂಕಿನಿಂದ ಜೀವ ಕಳೆದುಕೊಂಡಿದ್ದನು.. ಆತನನ್ನು ಹಳ್ಳಿಗೆ ಕರೆತರಬೇಡಿ ಎಂದು ಗ್ರಾಮಸ್ಥರು ಹೇಳಿರುವುದಾಗಿ ಆತನ ತಂದೆ ತಾಯಿ ಗೋಳಾಡುತ್ತಿದ್ದರು.. ಇತ್ತ ಕಷ್ಟದಲ್ಲಿದ್ದ ಆ ತಂದೆ ತಾಯಿಯ ಜೊತೆ ನಿಂತ ರೇಣುಕಾಚಾರ್ಯ ಅವರು ಖುದ್ದಾಗಿ ಅವರೇ ಆ ಯುವಕನಿಗೆ ಆಗಬೇಕಾದ ಎಲ್ಲಾ ಕಾರ್ಯಗಳನ್ನು ನೆರವೇರಿಸಿದ್ದಾರೆ..

ಹೌದು ನಿನ್ನೆ ಬೇರೊಂದು ಜಾಗಕ್ಕೆ ಆ ತಂದೆ ತಾಯಿ ಹಾಗೂ ಯುವಕನಪಾ ರ್ಥೀವವನ್ನ ಆಂಬ್ಯುಲೆನ್ಸ್ ಚಾಲನೆ ಮಾಡಿಕೊಂಡು ಕೊಂಡೊಯ್ದ ರೇಣುಕಾಚಾರ್ಯ ಅವರು ಮುಂದೆ ನಿಂತು ಅಂತ್ಯ ಸಂಸ್ಕಾರ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ.. ಇನ್ನು ಅದೇ ರಾತ್ರಿ ರೇಣುಕಾಚಾರ್ಯ ಅವರಿಗೆ ಬೇರೆ ರೀತಿಯ ಅನುಭವವೇ ಆಗಿದೆ.. ಹೌದು ದಿನ ಬೆಳಿಗ್ಗೆ ರಾತ್ರಿ ಜನರ ಸೇವೆಯಲ್ಲಿಯೇ ನಿರತರಾಗಿರುವ ರೇಣುಕಾಚಾರ್ಯ ಅವರಿಗೆ ನಿನ್ನೆ ನಡೆದ ಘಟನೆ ಅವರ ಮನಸ್ಸನ್ನು ಕುಗ್ಗಿಸಿ ಬಿಟ್ಟಿದೆ.. ಈ ಬಗ್ಗೆ ಹೇಳಿಕೊಂಡಿರುವ ರೇಣುಕಾ ಚಾರ್ಯ ಅವರು “ನನ್ನ ಜೀವನದಲ್ಲಿ ನೆನ್ನೆ ಸಂಜೆ ನನಗಾದಷ್ಟು ದುಃಖ ಎಂದೂ ಆಗಿರಲಿಲ್ಲ. ವಯಸ್ಸಿಗೆ ಬಂದ ಮಗನನ್ನು ಕಳೆದುಕೊಂಡ ತಂದೆ ತಾಯಿಗಳ ದುಃಖ ಮನಕಲಕುವಂತಿತ್ತು. ಅಂತ್ಯ ಸಂಸ್ಕಾರ ಮುಗಿಸಿಬಂದ ಕೆಲವು ಗಂಟೆಗಳು ಆ ತಾಯಿಯ ಕರುಳ ಆಕ್ರಂದನ ನನ್ನ ಕಿವಿಯಲ್ಲಿ ಪ್ರತಿಧ್ವನಿಸುತ್ತಿತ್ತು.. ಇದರಿಂದ ನನಗೆ ರಾತ್ರಿ ಪೂರ್ತಿ ಸರಿಯಾಗಿ ನಿದ್ದೆಯೂ ಬರಲಿಲ್ಲ.. ರಾಜಕೀಯ.. ಅಧಿಕಾರ.. ಹಣ.. ಅಂತಸ್ತು ಏನೇ ಇರಲಿ ವಿಧಿಯ ಮುಂದೆ ಎಲ್ಲವೂ ಶೂನ್ಯ..

ಹುಟ್ಟಿದ ಮೇಲೆ ಎಲ್ಲರೂ ಒಂದು ದಿನ ಹೋಗಲೇ ಬೇಕು.. ಆದರೆ ಈ ರೀತಿಯ ಜೀವ ಕಳೆದುಕೊಳ್ಳುವ ನೋವುಗಳನ್ನು ತಡೆದುಕೊಳ್ಳುವುದು ಕಷ್ಟ.. ರಾಜಕೀಯ ವಿರೋಧಿಗಳು ನನ್ನ ಬಗ್ಗೆ ಏನೇ ಟೀಕೆ ಮಾಡಲಿ.. ನಾನು ಮಾತ್ರ ನನ್ನ ಅವಳಿ ತಾಲೂಕಿನ ಬಂಧುಗಳ ಕಷ್ಟದಲ್ಲಿ ಅವರ ಮನೆಮಗನಾಗಿ ಭಾಗಿಯಾಗುತ್ತೇನೆ.. ಸರ್ವರಿಗೂ ಆಯುರಾರೋಗ್ಯ ನೀಡಿ ಈ ಸಂಕಷ್ಟದ ಸಮಯದಿಂದ ಪಾರುಮಾಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ..” ಎಂದು ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ.. ಕಷ್ಟದಲ್ಲಿ ಜನರಿಗೆ ನಿಜಕ್ಕೂ ಮನೆ ಮಗನಾಗಿ ನಿಲ್ಲುತ್ತಿರುವ ರೇಣುಕಾಚಾರ್ಯ ಅವರಿಗೆ ಹ್ಯಾಟ್ಸ್ ಆಫ್.. ಮಿಕ್ಕ ಜನಪ್ರತಿನಿಧಿಗಳು ರೇಣುಕಾಚಾರ್ಯ ಅವರನ್ನು ನೋಡಿ ಒಂದಿಷ್ಟಾದರೂ ಕಲಿತು ತಮ್ಮ ತಮ್ಮ ಕ್ಷೇತ್ರದ ಜನರ ನೆರವಿಗೆ ಧಾವಿಸಿದರೆ ಒಳ್ಳೆಯದು‌‌..