ಮಗನನ್ನು ನೋಡಿ ಭಾವುಕರಾದ ನಿಖಿಲ್ ಮಗ ಹಾಗೂ ರೇವತಿಗೆ ಹೇಳಿದ ಮೊದಲ ಮಾತೇನು ಗೊತ್ತಾ..

0 views

ಇಂದು ದೊಡ್ಡ ಗೌಡರ ಮನೆಯಲ್ಲಿ‌ ನಾಲ್ಕನೇ ತಲೆಮಾರಿನ ಜನನ.. ಹೌದು ದೊಡ್ಡ ಗೌಡರ ಕುಟುಂಬದ ಯುವರಾಜ ನಿಖಿಲ್ ಅವರು ಸಧ್ಯ ತಂದೆಯಾದ ಸಂಭ್ರಮದಲ್ಲಿದ್ದು ಕುಮಾರಸ್ವಾಮಿ ಅವರು ತಾತನಾದ ಸಂತೋಷವನ್ನು ಹಂಚಿಕೊಂಡಿದ್ದಾರೆ.. ಇತ್ತ ಮರಿ ಮಗುವನ್ನು ನೋಡುವ ಸಲುವಾಗಿ ಖುದ್ದು ದೇವೇ ಗೌಡರು ಹಾಗೂ ಅವರ ಪತ್ನಿ ಶ್ರೀಮತಿ ಚೆನ್ನಮ್ಮನವರು ಆಸ್ಪತ್ರೆಗೆ ಹಾಜರಾಗಿ ಪುಟ್ಟ ಕಂದನನನ್ನು ಮಡಿಲಲ್ಲಿ ಹಾಕಿಕೊಂಡು ಮುದ್ದಾಡಿದ್ದಾರೆ.. ಇನ್ನು ಇತ್ತ ಮಡದಿಯನ್ನು ನಿಖಿಲ್ ಪ್ರೀತಿಸುವ ಪರಿ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಹೊರಬರುತ್ತಿದ್ದು ಮಡದಿಗಾಗಿ ಕವಿಯೂ ಸಹ ಆಗಿದ್ದ ನಿಖಿಲ್ ಇದೀಗ ಮಗನಿಗಾಗಿ ಮೊದಲ ಮಾತನಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಸಂತೋಷ ಹಂಚಿಕೊಂಡಿದ್ದಾರೆ..

ಹೌದು ಕಳೆದ ವರ್ಷ ರೇವತಿ ಅವರೊಟ್ಟಿಗೆ ಹೊಸ ಜೀವನ ಪ್ರಾರಂಭಿಸಿದ್ದ ನಿಖಿಲ್ ಮಡದಿಯನ್ನು ಪ್ರೀತಿಯಿಂದ ಮಾತ್ರವಲ್ಲ ಅವರಿಗೆ ಅಷ್ಟೇ ಗೌರವವನ್ನು ನೀಡಿತ್ತಿದ್ದ ಪರಿಗೆ ಅಭಿಮಾನಿಗಳು ಫಿದಾ ಆಗಿದ್ದರು.. ಇನ್ನೂ ಈ ವರ್ಷ ರೇವತಿ ಅವರ ಹುಟ್ಟುಹಬ್ಬದ ದಿನ ತಂದೆಯಾಗುತ್ತಿರುವ ವಿಚಾರ ಹಂಚಿಕೊಂಡಿದ್ದರು.. ಇನ್ನು ಮನೆಗೆ ಮೊಮ್ಮಗುವಿನ ಆಗಮನದ ಸುದ್ದಿಯನ್ನು ಅಧಿಕೃತವಾಗಿ ತಿಳಿಸಿದ್ದ ಕುಮಾರಸ್ವಾಮಿ ಅವರು ಸೊಸೆ ರೇವತಿ ಗರ್ಭಿಣಿಯಾಗಿದ್ದು ಸದ್ಯದಲ್ಲಿಯೇ ಮಗುವಿನ ಆಗಮನವಾಗಲಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದರು.. ಇನ್ನು ಕೆಲ ದಿನಗಳ ಹಿಂದಷ್ಟೇ ಮಡದಿಗೆ ಆಕೆಯ ಇಷ್ಟದಂತೆ ಸೀಮಂತ ಶಾಸ್ತ್ರ ನೆರವೇರಿಸಿದ್ದ ನಿಖಿಲ್ ಇದೀಗ ತಂದೆಯಾದ ಸಂಭ್ರಮದಲ್ಲಿದ್ದಾರೆ.. ಹೌದು ರೇವತಿ ಅವರು ಇಂದು ಹನ್ನೆರೆಡು ಗಂಟೆ ಸಮಯದಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು ತಾಯಿ ಹಾಗೂ ಮಗು ಇಬ್ಬರೂ ಸಹ ಆರೋಗ್ಯವಾಗಿದ್ದಾರೆಂದು ವೈದ್ಯರು ತಿಳಿಸಿದ್ದಾರೆ..

ಇನ್ನು ಹೆರಿಗೆಯ ಸಮಯದಲ್ಲಿ ರೇವತಿ ಅವರ ಪಕ್ಕದಲ್ಲಿಯೇ ಇದ್ದ ನಿಖಿಲ್ ಮಡದಿಯ ನೋವಿನಲ್ಲಿ ಜೊತೆಯಾಗಿ ನಿಂತು ಇದೀಗ ಮಗು ಆಗಮನದ ಸಂಭ್ರಮವನ್ನು ಆನಂದಿಸುತ್ತಿದ್ದಾರೆ.. ಮಗುವನ್ನು ಮೊದಲು ನೋಡಿದ ನಿಖಿಲ್ ತನ್ನ ಕೈಗಳಲ್ಲಿ ಮಗುವನ್ನು ಎತ್ತಿಕೊಂಡಿರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.. ಹೌದು “ನನ್ನ ಜೀವನದ ಈ ವಿಶೇಷ ಕ್ಷಣವನ್ನು ನಿಮ್ಮ ಜೊತೆ ಹಂಚಿಕೊಳ್ಳಲು ಸಂತೋಷವಾಗುತ್ತಿದೆ.. ಲವ್ ಯು ಮೈ ಸನ್” ಎಂದು ಬರೆದು ಮಗನಿಗೆ ಪ್ರೀತಿಯ ಮೊದಲ ಮಾತುಗಳ ಜೊತೆಗೆ ಅವರಿಗಾಗುತ್ತಿರುವ ಸಂತೋಷದಲ್ಲಿ ತಂದೆಯಾದ ಹೊಸ ರೀತಿಗ ಭಾವನೆಗಳ ಜೊತೆಗೆ ಕಣ್ಣಂಚಲ್ಲಿ ಆನಂದದ ಬಿಂದುಗಳ ಜೊತೆಗೆ ಸಂತೋಷ ಹಂಚಿಕೊಂಡಿದ್ದಾರೆ..

ಇತ್ತ ನಿಖಿಲ್ ಪತ್ನಿ ರೇವತಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆಯೇ ಈ ವಯಸ್ಸಿನಲ್ಲಿಯೂ ದೇವೇ ಗೌಡರು ತಮ್ಮ ಪತ್ನಿ ಸಮೇತ ಆಸ್ಪತ್ರೆಗೆ ಆಗಮಿಸಿ ಮಗುವಿನ ಆಗಮನಕ್ಕಾಗಿ ಕಾದು ಕುಳಿತಿದ್ದರು.. ಇನ್ನು ನಿಖಿಲ್ ಅವರು ಮಗುವನ್ನು ಕರೆತಂದು ದೇವೇಗೌಡರಿಗೆ ಕೊಟ್ಟಿದ್ದು ಮಗು ಹಾಗೂ ರೇವತಿ ಅವರನ್ನು ನೋಡಿ ಹಾರೈಸಿದ್ದಾರೆ.. ಮಗುವನ್ನು ತಮ್ಮ ಮಡಿಲಿನಲ್ಲಿ ಇರಿಸಿಕೊಂಡು ಕುಟುಂಬದ ಹಿರಿಯ ಜೀವಗಳು ಮರಿಮಗನಿಗೆ ಮನಃತುಂಬಿ ಹಾರೈಸಿದ್ದು ನಿಜಕ್ಕೂ ಕುಟುಂಬದಲ್ಲಿ ಹಿರಿಯರು ಇರಬೇಕು ಎನ್ನುವ ಮಾತಿಗೆ ನಿಜವಾದ ಅರ್ಥವನ್ನು ನೀಡಿದಂತಿತ್ತು..

ಇನ್ನು ಇತ್ತ ಕುಮಾರಸ್ವಾಮಿ ಅವರೂ ಸಹ ಸಾಮಾಜಿಕ ಜಾಲತಾಣದಲ್ಲಿ ಮೊಮ್ಮಗುವಿನ ಆಗಮನದ ಸಂತೋಷ ಹಂಚಿಕೊಂಡಿದ್ದು “ನನ್ನ ಜೀವನದಲ್ಲಿ ಇನ್ನೊಂದು ಶುಭ ಘಳಿಗೆ ಬಂದಿದೆ. ನಮ್ಮ ಪರಿವಾರಕ್ಕೆ ಹೊಸ ಸದಸ್ಯನ ಆಗಮನವಾಗಿದೆ. ತಾತನಾದೆ ಎಂದು ಹೇಳಲು ಅತೀವ ಸಂತಸವಾಗುತ್ತಿದೆ. ಕಂದನಿಗೆ ನಿಮ್ಮೆಲ್ಲರ ಹಾರೈಕೆ ಮತ್ತು ಆಶೀರ್ವಾದ ಇರಲಿ ಎಂದು ಪ್ರಾರ್ಥನೆ ಮಾಡುತ್ತೇನೆ.” ಎಂದು ಬರೆದು ಪೋಸ್ಟ್ ‌ಮಾಡಿದ್ದಾರೆ.. ಇನ್ನು ಇತ್ತ ತಂದೆಯಾದ ಸಂಭ್ರಮದಲ್ಲಿ ಮಡದಿಗೆ ಧನ್ಯವಾದಗಳನ್ನು ಹೇಳುವ ಮೂಲಕ ಈಗಲೂ ಸಹ ಪತ್ನಿಗೆ ಪ್ರೀತಿ ಹಾರೈಕೆಗಳ ಜೊತೆಗೆ ನಿಖಿಲ್ ಮಡದಿಯನ್ನು ಗೌರವಿಸಿದ ಪರಿ ನಿಜಕ್ಕೂ‌ ಮೆಚ್ಚುವಂತದ್ದು.. ಸದ್ಯ ಸಾಮಾಜಿಕ ಜಾಲತಾಣದಲ್ಲಿ ನಿಖಿಲ್ ರೇವತಿ ಮಗುವಿನ ಫೋಟೋಗಳು ವೈರಲ್ ಆಗಿದ್ದು ಆ ಪಕ್ಷ ಈ ಪಕ್ಷ ಎನ್ನದೇ ನಾಡಿನ ಜನರು ದೊಡ್ಡ ಗೌಡರ ಕುಟುಂಬದ ಕುಡಿಗೆ ಮನಃ ತುಂಬಿ ಶುಭ ಹಾರೈಸಿದ್ದಾರೆ..