ಮಡದಿ ರೇವತಿಗಾಗಿ ಸೀಮಂತ ಶಾಸ್ತ್ರವನ್ನು ಹೇಗೆ ಮಾಡಿದ್ರು ಗೊತ್ತಾ ನಿಖಿಲ್.. ಸಂಪೂರ್ಣ ಫೋಟೋ ಗ್ಯಾಲರಿ..

0 views

ನಿಖಿಲ್‌ ಕುಮಾರಸ್ವಾಮಿ ಸದ್ಯ ಸಿನಿಮಾ ಜೊತೆಗೆ ರಾಜಕೀಯದಲ್ಲಿಯೂ ಸಿಕ್ಕಾಪಟ್ಟೆ ಬ್ಯುಸಿ ಇರುವ ನಟ ನಿಖಿಲ್ ಅವರು ಇದೀಗ ತಮ್ಮ ಮಡದಿಯ ಸೀಮಂತ ಶಾಸ್ತ್ರವನ್ನು ಅದ್ಧೂರಿಯಾಗಿ ನೆರವೇರಿಸಿದ್ದು ಸಂತೋಷ ಹಂಚಿಕೊಂಡಿದ್ದಾರೆ.. ಹೌದು ಕೆಲವೇ ತಿಂಗಳ ಹಿಂದೆ ಜೂನ್ ತಿಂಗಳಿನಲ್ಲಿ ರೇವತಿ ಅವರ ಹುಟ್ಟುಹಬ್ಬದ ದಿನ ತಮ್ಮ ಕುಟುಂಬಕ್ಕೆ ಮೊಮ್ಮಗುವಿನ ಆಗಮನವಾಗುತ್ತಿರುವ ವಿಚಾರ ತಿಳಿಸಿ ಕುಮಾರಸ್ವಾಮಿ ಅವರು ಸಂತೋಷ ಹಂಚಿಕೊಂಡಿದ್ದರು.. ಆದರೆ ನಿಖಿಲ್ ಅವರಾಗಲಿ ರೇವತಿ ಅವರಾಗಲಿ ಹೊರಗೆಲ್ಲೂ ವಿಚಾರ ತಿಳಿಸಿರಲಿಲ್ಲ.. ಮಡದಿಯ ಹುಟ್ಟುಹಬ್ಬದ ದಿನ ವಿಶೇಷ ಮಕ್ಕಳ ಆಶ್ರಮಕ್ಕೆ ಆಗಮಿಸಿ ಅವರಿಗೆ ಬಟ್ಟೆ ಹಾಗೂ ಊಟವನ್ನು ನೀಡುವ ಸಂದರ್ಭದಲ್ಲಿ ರೇವತಿ ಅವರು ಗರ್ಭಿಣಿ ಎಂಬ ವಿಚಾರ ತಿಳಿದಿದ್ದು ಕುಮಾರಸ್ವಾಮಿ ಅವರು ಈ ಬಗ್ಗೆ ಮಾದ್ಯಮದ ಜೊತೆ ತಮ್ಮ ಕುಟುಂಬಕ್ಕೆ ಹೊಸ ಅತಿಥಿ ಆಗಮನವಾಗುತ್ತಿರುವುದು ನಿಜ. ಸೊಸೆ ರೇವತಿ ಅವರು ಗರ್ಭಿಣಿಯಾಗಿದ್ದು ಕೆಲವೇ ತಿಂಗಳಲ್ಲಿ ಮೊಮ್ಮಗುವಿನ ಆಗಮನವಾಗಲಿದೆ ಎಂದಿದ್ದರು.

ಇನ್ನು ಕೆಲ ದಿನಗಳ ನಂತರ ನಿಖಿಲ್ ಅವರು ಸಹ ರಾಜಕೀಯ ಸಭೆಯೊಂದರಲ್ಲಿ ಭಾಗವಹಿಸಿದ ಸಮಯದಲ್ಲಿ ಮಾದ್ಯಮದ ಜೊತೆ ಮಾತನಾಡಿ ವಿಚಾರವನ್ನು ಖಚಿತ ಪಡಿಸಿ ಸಂತೋಷ ಹಂಚಿಕೊಂಡಿದ್ದರು.. ಸದ್ಯದಲ್ಲಿಯೇ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದಷ್ಟೇ ಹೇಳಿ ಸುಮ್ಮನಾಗಿದ್ದರು.. ಸಧ್ಯ ರೇವತಿ ಅವರು ಎಂಟು ತಿಂಗಳ ತುಂಬು ಗರ್ಭಿಣಿಯಾಗಿದ್ದು ಮಡದಿಯ ಸೀಮಂತ ಶಾಸ್ತ್ರವನ್ನು ಖುದ್ದು ನಿಖಿಲ್ ಅವರೇ ಎಲ್ಲಾ ತಯಾರಿ ನಡೆಸಿ ಅದ್ಧೂರಿಯಾಗಿ ಬೆಂಗಳೂರಿನಲ್ಲಿ ನೆರವೇರಿಸಿದ್ದಾರೆ..

ಹೌದು ಬೆಂಗಳೂರಿನಲ್ಲಿನ ಹೆಚ್ ಎಸ್ ಆರ್ ಲೇಔಟ್ ನಲ್ಲಿನ ಮಾನ್ವಿ ಕನ್ವೆನ್ಷನ್ ಹಾಲ್ ನಲ್ಲಿ‌ ಇಂದು ದೊಡ್ಡ ಗೌಡರ ಮನೆ ಸೊಸೆ ರೇವತಿ ಅವರ ಸೀಮಂತ ಶಾಸ್ತ್ರ ನೆರವೇರಿದ್ದು ಕುಟುಂಬದವರು ರಾಜಕೀಯ ಆಪ್ತರು ಆತ್ಮೀಯರು ಸ್ನೇಹಿತರು ಎಲ್ಲರೂ ಆಗಮಿಸಿ ರೇವತಿ ಅವರಿಗೆ ಶುಭ ಹಾರೈಸಿ ನಿಖಿಲ್ ಅವರಿಗೆ ಶುಭಾಶಯ ತಿಳಿಸಿದ್ದಾರೆ..

ಹೌದು ಕಳೆದ ವರ್ಷ ಏಪ್ರಿಲ್ ಹದಿನೇಳರಂದು ನಿಖಿಲ್ ಹಾಗೂ ರೇವತಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಮದುವೆ ಅದ್ಧೂರಿಯಾಗಿ ರಾಮನಗರದ ಜನಗಳ ನಡುವೆ ನಡೆಯಬೇಕಿತ್ತು.. ಆದರೆ ಕೊರೊನಾ ಕಾರಣದಿಂದ ರಾಮನಗರದ ತೋಟದ ಮನೆಯಲ್ಲಿ ಸರಳವಾಗಿ ಕುಟುಂಬದ ಕೆಲವೇ ಸದಸ್ಯರ ನಡುವೆ ನೆರವೇರಿತ್ತು.. ನಂತರದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದ ಬಳಿಕ ಅದ್ಧೂರಿಯಾಗಿ ಅರತಕ್ಷತೆ ನೆರವೇರಿಸುವ ಯೋಜನೆ ಮಾಡಿದ್ದರು.. ಆದರೆ ಕಳೆದ ಒಂದೂವರೆ ವರ್ಷದಿಂದ ಅಂತಹ ಯಾವುದೇ ಸಂದರ್ಭ ಒದಗಿ ಬಾರಲಿಲ್ಲ.. ಆದರೀಗ ವರ್ಷದ ಬಳಿಕ ನಿಖಿಲ್ ಅವರು ತಂದೆಯಾಗುವ ಸಂಭ್ರಮದಲ್ಲಿದ್ದು ಮಡದಿಯ ಸೀಮಂತವನ್ನು ಕೆಲವೇ ಜನರ ನಡುವೆಯಾದರೂ ಸಹ ಅದ್ಧೂರಿಯಾಗಿ ರೇವತಿ ಅವರ ಕನಸಿನಂತೆ ನೆರವೇರಿಸಿದ್ದಾರೆ..

ಹೌದು ಕೆಲವೇ ದಿನಗಳಲ್ಲಿ ತಿಂಗಳಲ್ಲಿ ನಿಖಿಲ್ ಅವರು ತಂದೆಯಾಗಿತ್ತಿದ್ದು ಮಡದಿ ರೇವತಿ ಅವರಿಗೆ ಎಂಟು ತಿಂಗಳು ತುಂಬಿದ ಕಾರಣ ಅದ್ಧೂರೊಯಾಗಿ ಮಾನ್ವಿ ಕನ್ವೆನ್ಷನ್ ಹಾಲ್ ನಲ್ಲಿ ಸೀಮಂತ ಶಾಸ್ತ್ರ ನೆರವೇರಿಸಿದ್ದಾರೆ. ಸಮಾರಂಭದಲ್ಲಿ ದೇವೇ ಗೌಡರ ಸಂಪೂರ್ಣ ಕುಟುಂಬ.. ಭವಾನಿ ರೇವಣ್ಣ ಅವರನ್ನೂ ಸೇರಿದಂತೆ ಕುಟುಂಬದ ಪ್ರತಿಯೊಬ್ಬರು ಪಾಲ್ಗೊಂಡು ಸಧ್ಯದಲ್ಲಿಯೇ ಆಗಮಿಸುವ ಕುಟುಂಬದ ಕುಡಿಗೆ ಹಾರೈಸಿದರು.. ಇನ್ನು ಇತ್ತ ರೇವತಿ ಅವರ ಕುಟುಂಬ ಹಾಗೂ ರಾಜಕೀಯದ ಕೆಲ ಮುಖಂಡರು ಜೆ ಡಿ ಎಸ್ ಪಕ್ಷದ ಶರವಣ, ಸಾ ರಾ ಮಹೇಶ್ ಸೇರಿದಂತೆ ಇನ್ನೂ ಅನೇಕ ನಾಯಕರು.. ಮುನಿರತ್ನ ಅವರು ಹಾಗೂ ಇನ್ನಿತರ ಸಿನಿಮಾ ಮಂದಿ ಹಾಗೂ ನಿಖಿಲ್ ಮತ್ತು ರೇವತಿ ಅವರ ಆಪ್ತ ಸ್ನೇಹಿತರು ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಕೋರಿ ಮಗುವಿಗೆ ಶುಭ ಹಾರೈಸಿದರು..