ನಿನ್ನ ನೆರಳಂತೆ ನಾ ಜೊತೆಯಾಗಿರುವೆ.. ಆಸ್ಪತ್ರೆಯಲ್ಲಿ ಪತ್ನಿ ಜೊತೆಗಿನ ಮೊದಲ ಫೋಟೋ ಹಂಚಿಕೊಂಡ ನಿಖಿಲ್.. ಹೇಗಿದ್ದಾರೆ ಗೊತ್ತಾ ರೇವತಿ..

0 views

ಮಾಜಿ‌ ಪ್ರಧಾನಿಗಳು ಕರ್ನಾಟಕದ ದೊಡ್ಡ ಗೌಡರು ಹೆಚ್ ಡಿ ದೇವೇಗೌಡರ ಕುಟುಂಬದಲ್ಲಿ ಇಂದು ಹೇಳಲಾಗದಷ್ಟು ಸಂಭ್ರಮ ಮನೆ ಮಾಡಿದೆ.. ಹೌದು ಇಂದು ದೊಡ್ಡ ಗೌಡರ ನಾಲ್ಕನೇ ತಲೆಮಾರಿನ ಜನನವಾಗಿದ್ದು ಮರಿ‌ಮಗನನ್ನು ಸ್ವಾಗತ ಮಾಡಲು ಖುದ್ದು ದೇವೇಗೌಡರೇ ದಂಪತಿ ಸಮೇತ ಆಸ್ಪತ್ರೆಯಲ್ಲಿ ಗಂಟೆಗಟ್ಟಲೇ ಕಾದು ಕುಳಿತು‌ಮರಿ ಮಗನನ್ನು ಬರಮಾಡಿಕೊಂಡಿದ್ದಾರೆ.. ಹೌದು ದೊಡ್ಡ ಗೌಡರ ಮನೆಯ ಯುವರಾಜ ನಿಖಿಲ್ ಕುಮಾರಸ್ವಾಮಿ ಅವರಿಂದು ತಂದೆಯಾದ ಸಂಭ್ರಮದಲ್ಲಿದ್ದಾರೆ.. ರೇವತಿ ಅವರು ಇಂದು ಮಧ್ಯಾಹ್ನ ಗಂಡು ಮಗುವಿಗೆ ಜನ್ಮ ನೀಡಿದ್ದು ಕುಮಾರಸ್ವಾಮಿ ಅವರ ಕುಟುಂಬದ ವಾರಸ್ದಾರನ ಆಗಮನವಾಗಿದೆ..

ಇನ್ನು ಇತ್ತ ಕೆಲ ದಿನಗಳ ಹಿಂದಷ್ಟೇ ಗರ್ಭಿಣಿ ಪತ್ನಿ ರೇವತಿ ಅವರು ಆಸೆ ಪಟ್ಟಂತೆ ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್ ನಲ್ಲಿ ಅದ್ಧೂರಿಯಾಗಿ ಸೀಮಂತ ಶಾಸ್ತ್ರವನ್ನು ನೆರವೇರಿಸಿದ್ದರು.. ಮದುವೆ ಸರಳವಾಗಿ ಆದ ಕಾರಣ ಹುಟ್ಟುವ ಮಗುವಿಗೆ ಎಲ್ಲರ ಆಶೀರ್ವಾದ ಸಿಗಲೆಂದು ಅದ್ಧೂರಿಯಾಗಿ ಸೀಮಂತ ಶಾಸ್ತ್ರ ನೆರವೇರಿಸಿ ಸ್ನೇಹಿತರು ಸಂಬಂಧಿಕರು ಆಪ್ತರು ಎಲ್ಲರೂ ಆಗಮಿಸಿ ರೇವತಿ ಹಾಗೂ ಮಗುವಿಗೆ ಶುಭ ಹಾರೈಸಿದ್ದರು.. ಇನ್ನು ಪತ್ನಿ‌ ಗರ್ಭಿಣಿಯಾದ ದಿನದಿಂದಲೂ ಮಡದಿಯ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದ ನಿಖಿಲ್ ಅವರು ಸೀಮಂತ ಶಾಸ್ತ್ರದಲ್ಲಿಯೂ ಸದಾ ರೇವತಿ ಅವರ ಅಕ್ಕಪಕ್ಕವೇ ನಿಂತು ಮಡದಿಯ ಮನಸ್ಸನ್ನಿ ಅರ್ಥ ಮಾಡಿಕೊಂಡು ನಡೆದುಕೊಂಡ ರೀತಿ‌ ನಿಜಕ್ಕೂ ಮೆಚ್ಚುವಂತದ್ದು..

ಇನ್ನು ಹೆರಿಗೆಯಾದ ನಂತರ ಸಂಪೂರ್ಣ ಸಮಯ ರೇವತಿ ಅವರೊಟ್ಟಿಗೆಯೇ ಇರಬೇಕೆಂದು ಹೆರಿಗೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಎರಡು ದಿನಗಳ ಮುನ್ನವೇ ತಮ್ಮ ರೈಡರ್ ಸಿನಿಮಾದ ಉಳಿದ ಕೆಲಸ ಗಳನ್ನು ಮುಗಿಸಿ ಸಿನಿಮಾದ ಎಲ್ಲಾ ಕೆಲಸ ಮುಗಿಯಿತು ಎಂದು ನಿರ್ಮಾಪಕ ನಿರ್ದೇಶ ಸಾಮಾಜಿಕ ಜಾಲತಾಣದಲ್ಲಿ ಧನ್ಯವಾದಗಳನ್ನು ತಿಳಿಸಿದ್ದರು.. ಇನ್ನು ಇಂದು ಬೆಳಿಗ್ಗೆ ರೇವತಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಳ್ಳುತ್ತಿದ್ದಂತೆ ಈ‌ಮೊದಲೇ ಸಕಲ ತಯಾರಿ ಮಾಡಿಕೊಂಡಿದ್ದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಮಧ್ಯಾಹ್ನ ರೇವತಿ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು.. ಸಧ್ಯ ಒಂದೂವರೆ ವರ್ಷದ ತಮ್ಮ ಪ್ರೀತಿಯ ಪ್ರತೀಕವಾಗಿ ಹೊಸ ಜೀವದ ಆಗಮನವಾಗಿದ್ದು ನಿಖಿಲ್ ಹಾಗೂ ರೇವತಿ ಅವರ ಬಾಳಿಗೆ ಹೊಸ ಅರ್ಥ ನೀಡಿದೆ.. ಇನ್ನು ಇತ್ತ ಮಗನಿಗೆ ತಂದೆಯಾದ ಕೆಲವೇ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಂತೋಷ ಹಂಚಿಕೊಂಡಿದ್ದ ನಿಖಿಲ್ ಅವರು ಮಗನನ್ನು ಎತ್ತಿಕೊಂಡಿರುವ ಫೋಟೋ ಹಂಚಿಕೊಂಡು ಲವ್ ಯು ಮಗನೇ ಎಂದು ಬರೆದು ಮಗನಿಗೆ ಮೊದಲ ಪ್ರೀತಿಯ ಮಾತನ್ನು ತಿಳಿಸಿ ಲವ್ ಯು ಎಂದಿದ್ದರು..

ಇನ್ನು ಇದೀಗ ರೇವತಿ ಅವರ ಫೋಟೋವನ್ನು ಹಂಚಿಕೊಂಡಿದ್ದಾರೆ.. ಹೌದು ನಿಖಿಲ್ ಅವರು ಮದುವೆಯಾದ ದಿನದಿಂದಲೂ ಮಡದಿಯನ್ನು ತುಂಬಾನೇ ಪ್ರೀತಿಸುತ್ತಿದ್ದು ಸಾಮಾಜಿಕ ಜಾಲತಾಣದಲ್ಲಿ ರೇವತಿ ಅವರೊಟ್ಟಿಗಿನ ಫೋಟೋ ಜೊತೆಗೆ ಮನದ ಮಾತುಗಳನ್ನು ಕವಿತೆಗಳಾಗಿ ಬರೆದು ಹಂಚಿಕೊಳ್ಳುತ್ತಿದ್ದರು.. ಇನ್ನು ಪ್ರೀತಿ ಮಾತ್ರವಲ್ಲದೇ ರೇವತಿ ಅವರಿಗೆ ಅಷ್ಟೇ ಗೌರವವನ್ನೂ ಸಹ ನೀಡುತ್ತಿದ್ದ ನಿಖಿಲ್ ಅವರು ರೇವತಿ ಅವರು ಆರ್ಕಿಟೆಕ್ಟ್ ಆಗಿದ್ದ ಕಾರಣ ಅವರ ಕನಸಿನ ಪರಿಸರ ಸ್ನೇಹಿ ಮನೆಯನ್ನು ನಿರ್ಮಾಣ ಮಾಡಲು ಸಹ ಮದುವೆಯಾದ ಬಳಿಕ ಪ್ರೋತ್ಸಾಹ ನೀಡಿದ್ದರು.. ಇನ್ನು ಪತ್ನಿ ಗರ್ಭಿಣಿಯಾದ ನಂತರ ಆದಷ್ಟು ಸಮಯ ರೇವತಿ ಅವರೊಟ್ಟಿಗೆ ಕಳೆಯುತ್ತಿದ್ದ ನಿಖಿಲ್ ಅವರು ಅವರ ಎಲ್ಲಾ ಆಸೆಗಳನ್ನು ನೆರವೇರಿಸಿಕೊಂಡು ಬರುತ್ತಿದ್ದರು.. ಇದೀಗ ರೇವತಿ ಅವರು ಮಗುವಿಗೆ ಜನ್ಮ ಕೊಟ್ಟು ತಾವು ಮರುಜನ್ಮ ಪಡೆಯುವ ವೇಳೆ ಪ್ರತಿ ಕ್ಷಣವೂ ರೇವತಿ ಅವರ ಜೊತೆಯಾಗಿಯೇ ನಿಂತು ಮಗುವಿನ ಆಗಮನದ ಸಂಭ್ರಮದಲ್ಲಿ ಮಾತ್ರವಲ್ಲ ಮಡದಿಯ ನೋವಿನಲ್ಲಿಯೂ ಜೊತೆಯಾಗಿ ನಿಂತಿದ್ದು ಇದೀಗ ಮಡದಿಯ ಮಡಿಲಿನಲ್ಲಿ ಮಗ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ಇಹೌದು ತಾತ ಅಜ್ಜಿ ಅಮ್ಮ ಹಾಗೂ ತಾವು ರೇವತಿ ಹಾಗೂ ಮಗುವಿನ ಜೊತೆಯಿರುವ ಫೊಟೋಗಳನ್ನು ಹಂಚಿಕೊಂಡಿದ್ದಾರೆ.. ಅಷ್ಟೇ ಅಲ್ಲದೇ ಹಳೆಯ ಬೇರುಗಳು ಹೊಸ ಚಿಗುರಿಗೆ ಹಾರೈಸಿವ ಕ್ಷಣ ನಿಖಿಲ್ ಅವರ ಮುಖದಲ್ಲಿನ ಸಂತೋಷ ನೋಡಿ ಅಭಿಮಾನಿಗಳಿಗೆ ಮತ್ತಷ್ಟು ಸಂತೋಷ ನೀಡಿದೆ.. ಇನ್ನು ಇತ್ತ ಪತ್ನಿ ರೇವತಿ ಅವರಿಗೆ ಹೆರಿಗೆ ನೋವು ಬಂದಾಗಿನಿಂದಲೂ ರೇವತಿ ಅವರನ್ನು ಬಿಟ್ಟು ಒಂದಿಂಚು ಕದಲದ ನಿಖಿಲ್ ಸಧ್ಯ ತಂದೆಯಾದ ಸಂಭ್ರಮದಲ್ಲಿ ಮಾತ್ರವಲ್ಲ ಪತಿಯ ಕರ್ತವ್ಯವನ್ನೂ ಮರೆಯದೇ ನಿನ್ನ ಜೊತೆಯಲ್ಲೇ ನಾ ಸದಾ ಜೊತೆಯಾಗಿರುವೆ ಎನ್ನುವಂತೆ ರೇವತಿ ಅವರಿಗೆ ಈ ಸಮಯದಲ್ಲಿ ನೀಡಬೇಕಾದ ಸಂಪೂರ್ಣ ಪ್ರೀತಿ ನೀಡುತ್ತಾ ಜೊತೆಯಾಗಿ ನಿಂತಿರುವುದ ಕಂಡರೆ ನಿಜಕ್ಕೂ ಈ ಜೋಡಿಯ ನಡುವಿನ ಪ್ರೀತಿ ಸದಾಕಾಲ ಹೀಗೆ ಇರಲೆಂದು ಹಾರೈಸೋದು ಖಚಿತ.. ರಾಜಕೀಯ ಅಥವಾ ಮತ್ತಿನೇನೋ ಎಲ್ಲವನ್ನೂ ಸಹ ಪಕ್ಕಕ್ಕಿಟ್ಟು ಇಂದು ನಾಡಿನ ಜನತೆ ದೊಡ್ಡ ಗೌಡರ ಕುಟುಂಬದ ಕುಡಿಗೆ ಹಾರೈಸಿದ್ದು ನೂರ್ಕಾಲ ಸುಖವಾಗಿ ಬಾಳಲೆಂದು ಶುಭ ಹಾರೈಸಿದ್ದಾರೆ.. ಇತ್ತ ನಿಖಿಲ್ ಅವರು ಪತ್ನೊ ರೇವತಿ ಅವರ ಮೇಲಿನ ಪ್ರೀತಿಗೆ ಫಿದಾ ಆಗಿದ್ದಾರೆ..