ಎರಡನೇ ಮಗುವಿಗೆ ತಂದೆಯಾದ ರಿಷಭ್ ಶೆಟ್ಟಿ.. ಆದರೆ ಈ ಸಮಯದಲ್ಲಿ ಭಾವುಕರಾಗಿ ಪತ್ನಿಯ ಬಗ್ಗೆ ಆಡಿದ ಮಾತು ನೋಡಿ.. ಮಗು..

0 views

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ರಿಷಭ್ ಶೆಟ್ಟಿ ಇದೀಗ ಎರಡನೇ ಮಗುವಿಗೆ ತಂದೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮ ಹಂಚಿಕೊಂಡಿದ್ದಾರೆ.. ಹೌದು ರಿಷಭ್ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ ಅವರು ಇಂದು ಬೆಳಿಗ್ಗೆ ಎಂಟು ಗಂಟೆ ಸಮಯದಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡುದ್ದಾರೆ.. ರಿಷಭ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ಅವರು ಸಧ್ಯ ತಮ್ಮ ಕುಟುಂಬಕ್ಕೆ ದೇವತೆಯನ್ನು ಬರ ಮಾಡಿಕೊಂಡಿದ್ದು ಎರಡೂ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ..

ಹೌದು ರಿಷಭ್ ಶೆಟ್ಟಿ ಅವರು ಕಿರಿಕ್ ಪಾರ್ಟಿ ಸಿನಿಮಾದ ಸಮಯದಲ್ಲಿ ಥಿಯೇಟರ್ ಭೇಟಿಗೆ ತೆರಳಿದಾಗ ಪರಿಚಯವಾದ ಪ್ರಗತಿ ಶೆಟ್ಟಿ ಅವರೊಡನೆ ಸ್ನೆಹವಾಗಿ ಸ್ನೇಹ ಫೇಸ್ಬುಕ್ ಮೂಲಕ ಪ್ರೀತಿಯಾಗಿ ನಂತರ 2017 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಮದುವೆಯಾದ ನಂತರ ಗಂಡು ಮಗುವಿಗೆ ಜನ್ಮ ನೀಡಿದ್ದು ಇದೀಗ ಎರಡನೇ ಮಗು ಹೆಣ್ಣು ಮಗುವನ್ನು ತಮ್ಮ ಕುಟುಂಬಕ್ಕೆ ಬರಮಾಡಿಕೊಂಡಿದ್ದಾರೆ..

ಹೌದು ಕೆಲ ದಿನಗಳ ಹಿಂದಷ್ಟೇ ಗೋಲ್ಡನ್ ಗ್ಯಾಂಗ್ ಶೋಗೆ ಬಂದಿದ್ದ ರಿಷಭ್ ಶೆಟ್ಟಿ ಅವರು ತಮ್ಮ ಮಡದಿ ಪ್ರಗತಿ ಅವರ ಬಗ್ಗೆ ಬಹಳಷ್ಟು ಮಾತನಾಡಿ ಸಂತೋಷ ವ್ಯಕ್ತ ಪಡಿಸಿದ್ದರು.. ಮೊದಲೆಲ್ಲಾ ಕೆಲಸವಿಲ್ಲದೇ ಇದ್ದಾಗ ಖಾಲಿ ಕೂರುತ್ತಿದ್ದ ರಿಷಭ್ ಮದುವೆಯಾದ ನಂತರ ಅದೃಷ್ಟದ ದೇವತೆ ಮನೆಗೆ ಬಂದಂತೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆದರು.. ಕುಟುಂಬಕ್ಕೂ ಸಮಯ ನೀಡಕಾಗದಷ್ಟು ಕೆಲಸಗಳು ರಿಷಭ್ ಅವರ ಕೈಯಲ್ಲಿತ್ತು.. ಅವರೇ ನಿರ್ದೇಶನ ಮಾಡಿ ನಿರ್ಮಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾಗೆ ರಾಷ್ಟ್ರ ಪ್ರಶಸ್ತಿಯನ್ನು ಸಹ ಪಡೆದುಕೊಂಡರು..

ನಂತರ ಆರ್ಥಿಕವಾಗಿಯೂ ಸಧೃಡವಾದ ರಿಷಭ್ ಅವರು ಹನ್ನೊಂದು ಕೋಟಿ ಕೊಟ್ಟು ಬೆಂಗಳೂರಿನಲ್ಲಿ ದ್ವಾರಕೀಶ್ ಅವರ ಬಂಗಲೆಯನ್ನೂ ಸಹ ಕೊಂಡುಕೊಂಡಿದ್ದರು.. ಪ್ರಗತಿ ಅವರ ಮೇಲೆ ಅಪಾರ ಪ್ರೀತಿ ಇಟ್ಟಿರುವ ರಿಷಭ್ ಅವರಿಗಾಗಿ ಸರಿಯಾಗಿ ಸಮಯ ನೀಡಲಾಗುತ್ತಿಲ್ಲ ಎಂದು ಕ್ಷಮೆ ಕೇಳಿದ್ದರು.. ಇತ್ತ ಪ್ರಗತಿ ಅವರೂ ಸಹ ಗಂಡನ ಕಷ್ಟದ ದಿನಗಳನ್ನೂ ಸಹ ನೋಡಿ ಬಂದಿದ್ದು ಅವರ ಸಿನಿಮಾ ಕ್ಷೇತ್ರದಲ್ಲಿ ರಿಷಭ್ ಅವರ ಬೆಳವಣಿಗೆಗೆ ಸಾಕಷ್ಟು ಬೆಂಬಲವನ್ನು ನೀಡಿದ್ದು ಅವರ ಸಂತೋಷದ ಯಶಸ್ಸಿನ ದಿನಗಳನ್ನೂ ಸಹ ನೋಡಿದರು..

ಇನ್ನು ಪತ್ನಿಯ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದ ರಿಷಭ್ ಅವರು ಕೆಲ ತಿಂಗಳ ಹಿಂದೆ ಮಡದಿಯ ಹುಟ್ಟುಹಬ್ಬದ ದಿನದಂದು “ನಾನು ಪ್ರೀತಿಸಿದವಳು ಹುಟ್ಟಿದ ಈ ದಿನ ನನ್ನೊಳಗೆ ಪ್ರೀತಿ ಹುಟ್ಟಿದ ದಿನದಷ್ಟೇ ವಿಶೇಷ.. ಭೂಮಿ ಸುತ್ತೋದರಲ್ಲಿ ಹೆಚ್ಚು ಕಮ್ಮಿಯಾಗಿ ನಾಳೆ ಬರಬೇಕಿದ್ದ ಈ ಶುಭ ದಿನ ನಂಗೋಸ್ಕರ ಇಂದೇ ಬಂದಿದೆ.. ಕಳೆದ ವರ್ಷಕ್ಕಿಂತ ಮತ್ತಷ್ಟು ಪ್ರೀತಿಯನ್ನು ಕೊಡು ಎಂದಿದೆ.. ಒಲವಿನ ಸತಿಗೆ ಹೃದಯದ ಗತಿಗೆ ನನ್ನ ಪ್ರಗತಿಗೆ ಹ್ಯಾಪಿ ಹ್ಯಾಪಿ ಬರ್ತಡೆ.. ಎಂದು ವಿಶೇಷವಾಗಿ ಹಾರೈಸಿದ್ದರು.. ಇದೀಗ

ಇದೀಗ ಇಂದು ಪ್ರಗತಿ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಸಾಮಾಜಿಕ ಜಾಲತಾಣದಲ್ಲಿ ರಿಷಭ್ ಶೆಟ್ಟಿ ಅವರು ತಮ್ಮ ಹಾಗೂ ಪ್ರಗತಿ ಅವರ ಫೋಟೋ ಹಂಚಿಕೊಂಡು ಸಂತೋಷ ವ್ಯಕ್ತ ಪಡಿಸಿದ್ದಾರೆ.. ಹೌದು ಮಡದಿಗೆ ಸೀಮಂತ ಮಾಡಿದ ಫೋಟೋ ಹಂಚಿಕೊಂಡ ರಿಷಭ್ ಶೆಟ್ಟಿ ಅವರು ” ಇಷ್ಟೇ ಚೆಂದದ ಮಗಳು ಹುಟ್ಟಿದ್ದಾಳೆ.. ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.. ಇತ್ತ ರಿಷಭ್ ಅವರ ಸಂತೋಷವನ್ನು ಸ್ನೇಹಿತರು ಅಭಿಮಾನಿಗಳು ಸಿನಿಮಾ ಮಂದಿ ತಾಯಿ ಹಾಗೂ ಮಗುವಿಗೆ ಹಾರೈಸಿ ಶುಭಾಶಯ ತಿಳಿಸುವ ಮೂಲಕ ಸಂತೋಷವನ್ನು ಮತ್ತಷ್ಟು ಹೆಚ್ಚು ಮಾಡಿದ್ದಾರೆ..