ಮನೆ ಕೊಂಡುಕೊಂಡ ಸಂತೋಷದಲ್ಲಿದ್ದ ರಿಷಭ್ ಶೆಟ್ಟಿ ಅವರಿಗೆ ಶಾಕ್..

0 views

ರಿಷಭ್ ಶೆಟ್ಟಿ.. ಸದ್ಯ ಕನ್ನಡ ಸಿನಿಮಾ ಇಂಡಸ್ಟ್ರಿಯ ಇಂಟೆಲಿಜೆಂಟ್ ನಿರ್ದೇಶಕರಲ್ಲಿ ಒಬ್ಬರಾಗಿರುವ ರಿಷಭ್ ಶೆಟ್ಟಿ ಅವರು ಸದ್ಯ ಮನೆ ಕೊಂಡುಕೊಂಡ ಸಂತೋಷದಲ್ಲಿದ್ದರು.. ಆದರೆ ಅವರೀಗೀಗ ಶಾಕಿಂಗ್ ವಿಚಾರವೊಂದು ಎದುರಾಗಿದ್ದು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.. ಹೌದು ಮೊನ್ನೆ ಮೊನ್ನೆಯಷ್ಟೇ ನಟ ದ್ವಾರಕೀಶ್ ಅವರು ಸಾಲದ ಸುಳಿಯಿಂದ ಮನೆ ಮಾರುವ ಪ್ರಯತ್ನದಲ್ಲಿದ್ದಾಗ ನಿರ್ದೇಶಕ ರಿಷಭ್ ಶೆಟ್ಟಿ ಅವರೇ ದ್ವಾರಕೀಶ್ ಅವರ ಮನೆಯನ್ನು ಕೊಂಡುಕೊಂಡಿದ್ದರು..

ಹೆಚ್ ಎಸ್ ಆರ್ ಲೇಔಟ್ ನಲ್ಲಿದ್ದ ದ್ವಾರಕೀಶ್ ಅವರ ಬಂಗಲೆಯನ್ನು ಹತ್ತೂವರೆ ಕೋಟಿ ಹಣ ಕೊಟ್ಟು ಕೊಂಡುಕೊಂಡಿದ್ದರು.. ಮದುವೆ.. ಮಗು ನಂತರ ಮನೆ ಕೊಂಡುಕೊಂಡ ರಿಷಭ್ ಶೆಟ್ಟಿ ಅವರು ಬಹಳ ಸಂತೋಷದಲ್ಲಿದ್ದರು.. ಇದರ ಜೊತೆಗೆ ಲಾಕ್ ಡೌನ್ ನಲ್ಲಿಯೇ ತಯಾರಾದ ರಿಷಭ್ ಶೆಟ್ಟಿ ಅವರ ಹೀರೋ ಸಿನಿಮಾ ಕೂಡ ಬಿಡುಗಡೆಯಾಗಿದ್ದು ಮತ್ತಷ್ಟು ಸಂತೋಷ ತಂದುಕೊಟ್ಟಿತ್ತು..

ಇಪ್ಪತ್ತೈದು ದಿನ ಸ್ಕ್ರಿಪ್ಟ್ ಬರೆದು ಒಂದು ತಿಂಗಳಲ್ಲಿಯೇ ಚಿತ್ರೀಕರಣ ಮುಗಿಸಿ ಮೂರು ತಿಂಗಳು ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ ಇನ್ನೆರೆಡು ತಿಂಗಳಲ್ಲಿ ಚಿತ್ರದ ಪ್ರಮೋಷನ್ ಕೆಲಸ ಸಂಪೂರ್ಣಗೊಳಿಸಿ ಮೊನ್ನೆಯಷ್ಟೇ ಸಿನಿಮಾವನ್ನು ಬಿಡುಗಡೆ ಮಾಡಿದ್ದರು..

ಸಂಪೂರ್ಣ ಚಿತ್ರತಂಡ ಲಾಕ್ ಡೌನ್ ನಲ್ಲಿ ಎಲ್ಲರೂ ಮನೆಯಲ್ಲಿದ್ದ ಸಮಯದಲ್ಲಿ ಸಿನಿಮಾ ತಯಾರು ಮಾಡಿ ಇದೀಗ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿದ ಸಂತೋಷದಲ್ಲಿದ್ದರು.. ಚಿತ್ರದ ನಿರ್ನಾಪಕರು ಕೂಡ ರಿಷಭ್ ಶೆಟ್ಟಿ ಅವರೇ ಆಗಿದ್ದು ಅದಾಗಲೇ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾ ಮೂಲಕ ಸಕ್ಸಸ್ ಕಂಡಿದ್ದ ನಿರ್ಮಾಪಕ ರಿಷಭ್ ಅವರು ಈ ಸಿನಿಮಾದಲ್ಲಿಯೂ ಅದೇ ಸಕ್ಸಸ್ ನ ನಿರೀಕ್ಷೆಯಲ್ಲಿದ್ದರು.. ಅಂದುಕೊಂಡಂತೆ ಸಿನಿಮಾ ಬಿಡುಗಡೆಯಾಗಿ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು..

ಆದರೆ ಇದೀಗ ರಿಷಭ್ ಶೆಟ್ಟಿ ಅವರಿಗೆ ಶಾಕಿಂಗ್ ಸಂಗತಿಯೊಂದು ಎದುರಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.. ಹೌದು ಹೀರೋ ಸಿನಿಮಾವನ್ನು ಅದಾಗಲೆ ನಕಲು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.. ಇದೇ ಕಾರಣಕ್ಕಾಗಿ ಒಬ್ಬ ನಿರ್ಮಾಪಕನಾಗಿ ಎಷ್ಟು ಬೇಸರ ತರಲಿದೆ ಎಂಬುದನ್ನು ಹೊರ ಹಾಕಿದ್ದಾರೆ..

ನಮ್ಮ ಸಿನಿಮಾ ಹೀರೋ ಎರಡು ಕಡೆ ಬಹಳ ಚೆನ್ನಾಗಿ ಓಡ್ತಾ ಇದೆ.. ಒಂದು ಥಿಯೇಟರ್ ಗಳಲ್ಲಿ.. ಮತ್ತೊಂದು ಫೋನ್ ಗಳಲ್ಲಿ.. ನಮ್ಮ ಸಿನಿಮಾ ಕೂಡ ಕೆಲವರ ಕೆಟ್ಟ ಅಭ್ಯಾಸಗಳಿಗೆ ಆಹಾರ ವಾಗಿ ಹೋಯ್ತು.. ಎಷ್ಟೋ ತಿಂಗಳು ಚಿತ್ರಮಂದಿರ ತೆರೆದಿರಲಿಲ್ಲ.. ಆದರೆ ಈಗ ಎಲ್ಲಾ ತೆರೆದಿದ್ದು ಲಾಕ್ ಡೌನ್ ನಲ್ಲಿ ಕಷ್ಟ ಪಟ್ಟು ಮಾಡಿದ ಸಿನಿಮಾವನ್ನು ಬಿಡುಗಡೆ ಮಾಡಿದ್ದೇವೆ.. ಆದರೆ ಸಿನಿಮಾವನ್ನು ಅದಾಗಲೇ ನಕಲು ಮಾಡಿ ಹರಿಬಿಟ್ಟಿದ್ದಾರೆ.. ಥಿಯೇಟರ್ ಒಳಗೆ ಕ್ಯಾಮರಾ ತೆಗೆದುಕೊಂಡು ಹೋಗಲು ಅದ್ಯಾರು ಅನುಮತಿ ಕೊಟ್ಟರೋ ಅವರಿಗೆ ಸ್ವಲ್ಪನಾದರು ಜವಾಬ್ದಾರಿ ಅನ್ನೋದು ಇರಬೇಕು.. ಎಂದು ಬಹಳ ಖಾರವಾಗಿಯೇ ಸಿನಿಮಾ ನಕಲು ಮಾಡಿದವರಿಗೆ ಹಾಗೂ ಅದಕ್ಕೆ ಅವಕಾಶ ಮಾಡಿಕೊಟ್ಟವರಿಗೆ ಮಾತನಾಡಿದ್ದಾರೆ..