ಯುವತಿಯ ಪ್ರಕರಣಕ್ಕೆ ರೋಚಕ ತಿರುವು.. ಅವನು ಗಂಡಸೇ ಅಲ್ಲ.. ಹೇಳಿಕೆ ಕೊಟ್ಟ ರಮೇಶ್ ಜಾರಕಿಹೋಳಿ..

0 views

ರಮೇಶ್ ಜಾರಕಿಹೋಳಿ ಪ್ರಕರಣಕ್ಕೆ ಊಹಿಸಲಾಗದ ತಿರುವು ದೊರೆತಿದೆ.‌ ಹೌದು ರಾಜ್ಯದಲ್ಲಿ ಬೇರೆ ಯಾವ ವಿಚಾರಕ್ಕೂ ರಾಜಕಾರಣಿಗಳು ಯೋಚನೆ ಮಾಡದಂತೆ ಮಾಡಿರುವ ರಮೇಶ್ ಜಾರಕಿಹೋಳಿ ಪ್ರಕರಣದಲ್ಲಿ ಇದೀಗ ಖುದ್ದು ರಮೇಶ್ ಜಾರಕಿಹೋಳಿ ಅವರೇ ಆ ಮಹಾನಾಯಕನ ಹೆಸರನ್ನು ಬಹಿರಂಗ ಮಾಡಿದ್ದಾರೆ.. ಹೌದು ನಿನ್ನೆ ಮಾದ್ಯಮದವರ ಜೊತೆ ಮಾತನಾಡಿದ್ದ ರಮೇಶ್ ಜಾರಕಿಹೋಳಿ ಅವರು ನಾಳೆ ನಾಲ್ಕರಿಂದ ಆರು ಗಂಟೆಯ ಒಳಗೆ ದೊಡ್ಡ ಸುದ್ದಿ ಕೊಡ್ತೀನಿ ಎಂದಿದ್ದರು.. ಇದೀಗ ಆ ದೊಡ್ಡ ಸುದ್ದಿ ಹೊರಬಿದ್ದಿದೆ..

ಹೌದು ಇಂದು ಮಾದ್ಯಮದವರ ಜೊತೆ ಮಾತನಾಡಿರುವ ರಮೇಶ್ ಜಾರಕಿಹೋಳಿ ಅವರು ತಮ್ಮ ವಿರುದ್ಧ ಒಬ್ಬ ಮಹಾನಾಯಕ ಹೆಣ್ಣು ಮಗಳನ್ನು ಇಟ್ಟು ಷಡ್ಯಂತ್ರ ಮಾಡಿದ್ದಾನೆ ಎಂದಿದ್ದರು.. ಇಂದು ಆ ಮಹಾನಾಯಕನ ಹೆಸರನ್ನು ಬಹಿರಂಗ ಮಾಡಿದ್ದಾರೆ.. ಹೌದು ಅವನೊಬ್ಬ ಗಾಂ.. ಅವನು ಗಂಡಸೇ ಅಲ್ಲ ಎಂದಿದ್ದಾರೆ.‌. ಆ ಮಹಾನಾಯಕ ಮತ್ಯಾರೂ ಅಲ್ಲ..

ಅವರು ಡಿ ಕೆ ಶಿವಕುಮಾರ್.. ಹೌದು ಖುದ್ದು ರಮೇಶ್ ಜಾರಕಿಹೋಳಿ ಅವರೇ ಈ ವಿಚಾರವನ್ನು ಮಾದ್ಯಮದ ಮುಂದೆ ಬಹಿರಂಗ ಪಡಿಸಿದ್ದಾರೆ.‌. ಹೌದು ಆ ಯುವತಿಯ ಹಿಂದೆ ನಿಂತು ಷಡ್ಯಂತ್ರ ಮಾಡಿರುವವನು ಡಿ ಕೆ ಶಿವಕುಮಾರ್.. ಅವನ ಹೆಸರು ಹೇಳಲು ನನಗೆ ಯಾವ ಭಯವೂ ಇಲ್ಲ.. ಆ ಯುವತಿಯ ಮನೆಯವರೇ ಅವನ ಹೆಸರು ಹೇಳಿದ್ದಾರೆ.. ಅವನು ರಾಜಕಾರಣ ಮಾಡಲು ಲಾಯಕ್ಕೇ ಅಲ್ಲ.. ಅವನೊಬ್ಬ ಗಾಂ.. ಗಂಡಸೇ ಅಲ್ಲ.. ನಾನು ಗಂಡಸು.. ಎದುರು ನಿಂತು ಹೋರಾಡ್ತೇನೆ..

ಪೊಲೀಸರು ಸರಿಯಾಗಿ ತನಿಖೆ ನಡೆಸಿ ನನ್ನದು ತಪ್ಪಿದ್ದರೆ ನನಗೆ ಶಿಕ್ಷೆ ನೀಡಲಿ.. ಆ ಯುವತಿಯದ್ದು ತಪ್ಪಿದ್ದರೆ ಅವಳಿಗೆ ಶಿಕ್ಷೆ ನೀಡಲಿ.. ಆ ಮಹಾನಾಯಕನದ್ದು ತಪ್ಪಿದ್ದರೆ ಅವನಿಗೆ ಶಿಕ್ಷೆ ಆಗಬೇಕು.. ಸರಿಯಾದ ತನಿಖೆ ನಡೆಸಬೇಕು ಎಂದಿದ್ದಾರೆ.. ಇನ್ನು ಕನಕಪುರದಲ್ಲಿ ಅವನನ್ನು ನಾನು ಸೋಲಿಸುವೆ.‌ ಬೆಳಗಾವಿಗೆ ಬಂದರೆ ಸ್ವಾಗತಿಸುವೆ.. ರಾಜಕೀಯವಾಗಿಯೂ ನಾನು ಅವನನ್ನು ಎದುರಿಸುವೆ ಎಂದಿದ್ದಾರೆ..

ನಮ್ಮ ಕುಟುಂಬದವರು ಯಾವ ಹುಡುಗಿಯನ್ನೂ ಸಹ ಮೂಸಿ ನೋಡಿಲ್ಲ.. ಡಿ ಕೆ ಶಿವಕುಮಾರ್ ವಿರುದ್ಧ ನೇರ ಹೋರಾಟ ಮಾಡುತ್ತೇವೆ ಎಂದಿದ್ದಾರೆ.‌ ಒಟ್ಟಿನಲ್ಲಿ ಸಿಡಿ ಪ್ರಕರಣ ಇದೀಗ ರಾಜಕೀಯದಲ್ಲಿ ಇಬ್ಬರು ದೊಡ್ಡ ನಾಯಕರ ನಡುವಿನ ಜಿದ್ದಿಗೆ ಕಾರಣವಾಗಿ ಹೋಯ್ತು.‌. ಅತ್ತ ಆ ಯುವತಿಯ ಕುಟುಂಬದವರು ಸಹ ವಿಚಾರಣೆ ಮುಗಿಸಿ ಬಂದು ಮಾತನಾಡಿ ಇದರ ಹಿಂದೆ ಡಿ ಕೆಶಿವಕುಮಾರ್ ಇದ್ದಾರೆ.. ಅವರು ನಮ್ಮ ಅಕ್ಕನನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ ಎಂದಿದ್ದಾರೆ.. ಸದ್ಯ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಕೆಶಿವಕುಮಾರ್ ಅವರು ನಿನ್ನೆ ಒಂದು ರೀತಿ ಹೇಳ್ತಾರೆ ಇವತ್ತು ಒಂದು ಹೇಳಿಕೆ ಕೊಡ್ತಾರೆ.. ಎಲ್ಲದಕ್ಕೂ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ..