ರೋಹಿಣಿ ಸಿಂಧೂರಿ ನಂತರ ಇದೀಗ ಇದ್ದಕಿದ್ದ ಹಾಗೆ ರವಿ ಡಿ ಚೆನ್ನಣ್ಣನವರ್ ವರ್ಗಾವಣೆ.. ಕಾರಣವೇನು ಗೊತ್ತಾ.. ವರ್ಗಾವಣೆ ಆಗಿದ್ದೆಲ್ಲಿಗೆ ಗೊತ್ತಾ..

0 views

ಮೈಸೂರಿನ ಜಿಲ್ಲಾಧಿಕಾರಿಗಳಾಗಿ ಕಳೆದ ಎಂಟು ತಿಂಗಳಿಂದ ಕಾರ್ಯ ನಿರ್ವಹಿಸಿದ್ದ ಐ ಎ ಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಮೈಸೂರಿನಲ್ಲಿ ನಡೆದ ವಿವಾದದ ಬಳಿಕ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಾಗಿ ವರ್ಗಾವಣೆ ಮಾಡಲಾಯಿತು.. ಅವರ ಜೊತೆಗೆ ಮೈಸೂರು ಪಾಲಿಕೆಯ ಆಯುಕ್ತರಾಗಿದ್ದ ಶಿಲ್ಪಾ ನಾಗ್ ಅವರನ್ನು ಸಹ ವರ್ಗಾವಣೆ ಮಾಡಲಾಗಿತ್ತು.. ಇನ್ನೂ ಸಹ ಮೈಸೂರಿಗರಲ್ಲಿ ಜಿಲ್ಲಾಧಿಕಾರಿ ದಕ್ಷ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನಿ ವರ್ಗಾವಣೆ ಮಾಡಿದ್ದಕ್ಕೆ ಈಗಲೂ ಸಹ ಅಸಮಾಧಾನವಿದೆ.. ಇನ್ನು ಅದರ ಬೆನ್ನಲ್ಲೇ ಇದೀಗ ಐ ಪಿ ಎಸ್ ಅಧಿಕಾರಿ ರವಿ ಡಿ ಚೆನ್ನಣ್ಣನವರ್ ಅವರನ್ನು ವರ್ಗಾವಣೆ ಮಾಡಲಾಗಿದೆ..

ಹೌದು ಕೆಲ ವರ್ಷದ ಹಿಂದೆ ಮೈಸೂರಿನ ಎಸ್ ಪಿ ಆಗಿ ಕಾರ್ಯ ನಿರ್ವಹಿಸಿ ಜನರ ಮೆಚ್ಚುಗೆ ಗಳಿಸೊದ್ದ ರವಿ ಡಿ ಚೆನ್ನಣ್ಣನವರ್ ಅವರನ್ನು ನಂತರ ಬೆಂಗಳೂರಿನ ಉತ್ತರಕ್ಕೆ ವರ್ಗಾವಣೆ ಮಾಡಿದ್ದರು.. ಅಲ್ಲಿ ಕರುನಾಡ ಸಿಂಗಂ ರವಿ ಚೆನ್ನಣ್ಣನವರ್ ರ ಆರ್ಭಟ ಹೆಚ್ಚಾಗಿ ಅಲ್ಲಿ ಅದು ಇದು ಅಂತ ಬಾಲ ಬಿಚ್ಚುತ್ತಿದ್ದವರೆಲ್ಲಾ ಬಾಲ ಮುದುರಿಕೊಂಡು ಇದ್ದರು.. ಆದರೆ ಅಲ್ಲಿಯೂ ಸಹ ಹೆಚ್ಚು ದಿನ ರವಿ ಚೆನ್ನಣ್ಣನವರ್ ರನ್ನು ಉಳಿಸಿಕೊಳ್ಳಲಿಲ್ಲ.. ನಂತರ ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ಎಸ್ ಪಿ ಆಗಿ ವರ್ಗಾವಣೆ ಮಾಡಲಾಗಿತ್ತು.. ಆಗಲೂ ಸಹ ರವಿ ಡಿ ಚೆನ್ನಣ್ಣನವರ್ ಅವರ ವರ್ಗಾವಣೆಯಿಂದ ಮೈಸೂರಿಗರು ಬೇಸರಗೊಂಡಿದ್ದರು..

ನಂತರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್ ಪಿ ಆಗಿ ಕೆಲ ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ ರವಿ ಡಿ ಚೆನ್ನಣ್ಣನವರ್ ಅಲ್ಲಿಯೂ ಸಹ ಒಳ್ಳೆಯ ಹೆಸರನ್ನು ಮಾಡಿದರು.. ಆರ್ ಟಿ ಓ ದವರು ಲಾರಿ ಚಾಲಕರ ಬಳಿ ಹಣ ಪಡೆಯುತ್ತಿದ್ದ ವಿಚಾರ ತಿಳಿದು ಮಾರು ವೇಷದಲ್ಲಿ ಲಾರಿ ಡ್ರೈವರ್ ಆಗಿ ಲಾರಿ ಚಾಲನೆ ಮಾಡಿಕೊಂಡು ಹೋಗಿ ಆರ್ ಟಿ ಓ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದು ದೊಡ್ಡ ಸುದ್ದಿಯಾಗಿತ್ತು.. ಅದರ ಜೊತೆಗೆ ಅನೇಕರನ್ನು ಮನಃ ಪರಿವರ್ತನೆ ಮಾಡಿ ಒಳ್ಳೆಯ ಜೀವನ ಮಾಡಲು ಸಹಾಯ ಮಾಡಿದ್ದರು ಎಂದು ಹೇಳಲಾಗುತ್ತದೆ.. ಇನ್ನು ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದಲೂ ರವಿ ಡಿ ಚೆನ್ನಣ್ಣನವರ್ ರನ್ನು ವರ್ಗಾವಣೆ ಮಾಡಲಾಗಿದೆ..

ಹೌದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಬೆಂಗಳೂರಿನ ಸಿ ಐ ಡಿ ವಿಭಾಗಕ್ಕೆ ಎಸ್ ಪಿ ಆಗಿ ವರ್ಗಾವಣೆ ಮಾಡಲಾಗಿದೆ.. ಹೌದು ಸಾಮಾನ್ಯ ವರ್ಗದಲ್ಲಿಯೇ ಇವರ ಕಂಡು ಬೆಚ್ಚಿ ಬೀಳುತ್ತಿದ್ದರು.. ಇನ್ನು ಸಿ ಐ ಡಿ ವಿಭಾಗದಲ್ಲಿ ಇವರ ಆರ್ಭಟ ಇನ್ನೂ ಸಹ ಹೆಚ್ಚಾಗಲಿದೆ ಎನ್ನಬಹುದು.. ಒಟ್ಟಿನಲ್ಲಿ ರವಿ ಚೆನ್ನಣ್ಣನವರ್ ಅವರ ವರ್ಗಾವಣೆ ವಿಚಾರ ಸದ್ಯ ಬೆಂಗಳೂರು ಗ್ರಾಮಾಂತರದ ಇತರ ಪೊಲೀಸ್ ಅಧಿಕಾರಿಗಳು ಹಾಗೂ ಸಾಮನಯ ಜನರಲ್ಲಿ ಬೇಸರ ಮೂಡಿಸಿರುವುದಂತೂ ಸತ್ಯ.. ಅಷ್ಟೇ ಅಲ್ಲದೇ

ಅಷ್ಟೇ ಅಲ್ಲದೇ ಮೈಸೂರಿನಲ್ಲಿ ಜಿಲ್ಲಾಧಿಕಾರಿಗಳಾಗಿದ್ದ ರೋಹಿಣಿ ಸಿಂಧೂರಿ ಅವರ ವರ್ಗಾವಣೆಯ ಬಳಿಕ ಮೈಸೂರಿನ ಎಸ್ ಪಿ ಆಗಿದ್ದ ರಿಷ್ಯಂತ್ ಅವರನ್ನು ಸಹ ವರ್ಗಾವಣೆ ಮಾಡಲಾಗಿದೆ.. ಜೊತೆಗೆ ಡಿಸಿಪಿ ಪ್ರಕಾಶ್ ಗೌಡ ಅವರನ್ನೂ ಸಹ ವರ್ಗಾವಣೆ ಮಾಡಲಾಗಿದೆ.. ಹೌದು ರೋಹಿಣಿ ಸಿಂಧೂರಿ ಅವರಿಗಿಂತಲೂ ಮುನ್ನ ಮೈಸೂರಿನ ಜಿಲ್ಲಾಧಿಕಾರಿಗಳಾಗಿದ್ದ ಅಭಿರಾಂ ಶಂಕರ್ ಅವರ ಸಮಯದಿಂದಲೂ ಎಸ್ ಪಿ ಆಗಿದ್ದ ರಿಷ್ಯಂತ್ ಅವರನ್ನು ಇದೀಗ ದಾವಣಗೆರೆ ಜಿಲ್ಲೆಯ ಎಸ್ ಪಿ ಆಗಿ ವರ್ಗಾವಣೆ ಮಾಡಲಾಗಿದೆ.. ಇನ್ನು ಡಿಸಿಪಿ ಆಗಿದ್ದ ಪ್ರಕಾಶ್ ಗೌಡ ಅವರನ್ನು ಆಂತರಿಕ ಭದ್ರತಾ ವಿಭಾಗದ ಎಸ್ ಪಿ ಆಗಿ ವರ್ಗಾವಣೆ ಮಾಡಲಾಗಿದೆ.. ಒಟ್ಟಿನಲ್ಲಿ ರಾಜ್ಯದಲ್ಲಿ ಕೊರೊನಾ ಹಾವಳಿ ಹೆಚ್ಚಾಗಿರುವ ಈ ಸಂದರ್ಭದಲ್ಲಿ ಮೈಸೂರಿನ ಮಹಿಳಾ ಅಧಿಕಾರಿಗಳ ವಿವಾದದ ಬಳಿಕ ಇದೀಗ ಸಾಲು ಸಾಲು ವರ್ಗಾವಣೆ ಪರ್ವವೇ ಶುರುವಾಗಿದೆ ಎನ್ನಬಹುದು..