ರೋಹಿಣಿ ಸಿಂಧೂರಿ ಅವರಿಗೆ ಸೆಡ್ಡು ಹೊಡೆದ ಮೈಸೂರಿನ ಹೊಸ ಜಿಲ್ಲಾಧಿಕಾರಿ ಗೌತಮ್.. ಮೊದಲ ದಿನವೇ ಮಾಡಿದ್ದೇನು ಗೊತ್ತಾ..

0 views

ಎಲ್ಲರಿಗೂ ತಿಳಿದೇ ಇರುವಂತೆ ಕಳೆದ ಒಂದು ತಿಂಗಳಿಂದ ಮೈಸೂರಿನ ನಿರ್ಗಮಿತ ಜಿಲ್ಲಾಧಿಕಾರಿಗಳಾಗಿದ್ದ ರೋಹಿಣಿ ಸಿಂಧೂರಿ ಅವರು ಹಾಗೂ ಮೈಸೂರು ಪಾಲಿಕೆಯ ನಿರ್ಗಮಿತ ಆಯುಕ್ತರಾದ ಶಿಲ್ಪಾ ನಾಗ್ ಅವರ ಮನಸ್ತಾಪಗಳು ಬಹಿರಂಗವಾಗಿ ರಾಜ್ಯದಲ್ಲಿ ದೊಡ್ಡ ಸುದ್ದಿಯಾಗಿತ್ತು.. ರಾಜಕಾರಣಿಗಳು ರೋಹಿಣಿ ಸಿಂಧೂರಿ ಅವರ ಮೇಲೆ ಮುಗಿಬಿದ್ದಿದ್ದರೂ ಯಾವುದಕ್ಕೂ ಅಂಜದೇ ದಿಟ್ಟತನವಾಗಿ ತನ್ನ ಕರ್ತವ್ಯ ನಿರ್ವಹಿಸಿದ್ದ ರೋಹಿಣಿ ಸಿಂಧೂರಿ ಅವರಿಗೆ ಕೊನೆಯದಾಗಿ ಆಯುಕ್ತರಾದ ಶಿಲ್ಪಾ ನಾಗ್ ಅವರು ಮಾದ್ಯಮದ ಮುಂದೆ ಬಂದು ರೋಹಿಣಿ ಸಿಂಧೂರಿ ಅವರ ಬಗ್ಗೆ ಆರೋಪಿಸಿ ರಾಜೀನಾಮೆ ನೀಡುವುದಾಗಿ ತಿಳಿಸಿದ್ದರು.. ಕೊನೆಗೆ ಮುಖ್ಯ ಕಾರ್ಯದರ್ಶಿಗಳ ಮೈಸೂರಿಗೆ ಭೇಟಿ ನೀಡಿ ಶಿಲ್ಪಾ ನಾಗ್ ಅವರ ವಿಚಾರಣೆ ನಡೆಸಿ ಕೊನೆಗೆ ಮುಖ್ಯಮಂತ್ರಿಗಳಿಗೆ ವರದಿಯನ್ನೂ ಸಹ ನೀಡಿದರು.. ಕೊನೆಗೆ ಶನಿವಾರ ರಾತ್ರೋ ರಾತ್ರಿ ಮೈಸೂರು ಡಿಸಿ ರೋಹಿಣಿ ಸಿಂಧೂರಿ ಅವರನ್ನು ಹಾಗೂ ಶಿಲ್ಪಾ ನಾಗ್ ರನ್ನು ಮೈಸೂರಿನಿಂದ ವರ್ಗಾವಣೆ ಮಾಡಿದರು..

ರಾಜಕೀಯ ನಾಯಕರ ಆಟಕ್ಕೆ ನಿಷ್ಠಾವಂತ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಬಲಿಯಾದರೆನ್ನುವ ಮಾತು ಮೈಸೂರಿಗರಲ್ಲಿ ಕೇಳಿ ಬರುತ್ತಿದ್ದು ವರ್ಗಾವಣೆಯ ಬಗ್ಗೆ ಅಸಮಾಧಾನವನ್ನು ಹೊರಹಾಕಿದ್ದರು.. ಇನ್ನು ಇತ್ತ ಮೈಸೂರಿಗೆ ಡಾ. ಬಗಾದಿ ಗೌತಮ್ ಅವರನ್ನು ವರ್ಗಾವಣೆ ಮಾಡಲಾಗಿತ್ತು.. ಭಾನುವಾರ ಅತ್ತ ರೋಹಿಣಿ ಸಿಂಧೂರಿ ಅವರು ವರ್ಗಾವಣೆ ಕುರಿತು ಮಾತನಾಡಲು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಬಳಿ ಮಾತನಾಡಲು ತೆರಳಿದ್ದಾಗ ಇತ್ತ ಅದೇ ದಿನ ಗೌತಮ್ ಅವರು ಮೈಸೂರಿನ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದರು..

ಇನ್ನು ಇಂದು ರೋಹಿಣಿ ಸಿಂಧೂರಿ ಅವರು ಮೈಸೂರಿಗೆ ಭೇಟಿ ನೀಡಿ ನೂತನ ಜಿಲ್ಲಧಿಕಾರಿಗಳನ್ನು ಭೇಟಿ ಮಾಡಿ ಶುಭಾಶಯ ತಿಳಿಸಿ ಮೈಸೂರಿನಲ್ಲಿ ಕೊರೊನಾದ ಸಧ್ಯದ ಪರಿಸ್ಥಿತಿಯನ್ನು ವಿವರಿಸಿ ತೆರಳಿದರು.. ಹೋಗುವ ಮುನ್ನ ಮಾದ್ಯಮದ ಜೊತೆ ಮಾತನಾಡಿದ ರೋಹಿಣಿ ಸಿಂಧೂರಿ ಅವರು ಮೈಸೂರು ನನಗೆ ತಾಯಿಯ ಪ್ರೀತಿ ಕೊಟ್ಟಿದೆ.. ತವರು ಮನೆಯಿಂದ ಹೋಗುತ್ತಿರುವ ರೀತಿ ಅನಿಸುತ್ತಿದೆ.. ಪ್ರಾಮಾಣಿಕವಾಗಿ ಕೆಲಸ ಮಾಡುವ ಸಮಯದಲ್ಲಿ ವರ್ಗಾವಣೆ ಮಾಡಿದ್ದು ಬೇಸರ ತಂದಿದೆ.. ಎಲ್ಲವೂ ಜನರಿಗೆ ಗೊತ್ತು ಎಂದು.. ಮೈಸೂರಿಗರಿಗೆ ಇಷ್ಟು ಪ್ರೀತಿ ಕೊಟ್ಟಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿ ಹೊರಟರು..

ಆದರೆ ಅತ್ತ ರೋಹಿಣಿ ಸಿಂಧೂರಿ ಅವರು ಹೋಗುತ್ತಿದ್ದಂತೆ ಇತ್ತ ನೂತನ ಜಿಲ್ಲಾಧಿಕಾರಿ ಗೇತಮ್ ಅವರು ರೋಹಿಣಿ ಸಿಂಧೂರಿ ಅವರಿಗೆ ಸೆಡ್ಡು ಹೊಡೆದಿದ್ದು ಹೊಸ ಆದೇಶ ಹೊರಡಿಸಿದ್ದಾರೆ.. ಹೌದು ರೋಹಿಣಿ ಸಿಂಧೂರಿ ಅವರು ಮೈಸೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆ ತರುವ ಸಲುವಾಗಿ ಜೂನ್ ಏಳನೇ ತಾರೀಕಿನವರೆಗೆ ವಾರದಲ್ಲಿ ಎರಡು ದಿನ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿದ್ದರು.. ಇನ್ನು ಮೊನ್ನೆ ಶನಿವಾರ ರೋಹಿಣಿ ಸಿಂಧೂರಿ ಅವರು ಹೊಸ ಆದೇಶ ಹೊರಡಿಸಿ ಜೂನ್ ಏಳರಿಂದ ಹದಿನಾಲ್ಕನೇ ತಾರೀಕಿನವರೆಗೆ ವಾರದಲ್ಲಿ ಮೂರು ದಿನ ಸೋಮವಾರ ಬುಧವಾರ ಶುಕ್ರವಾರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಿದ್ದರು.. ಇನ್ನು ಅದೇ ದಿನ ರಾತ್ರಿ ರೋಹಿಣಿ ಸಿಂಧೂರಿ ಅವರ ವರ್ಗಾವಣೆಯ ಆದೇಶ ಹೊರಬಿದ್ದಿತ್ತು..

ಇನ್ನು ನಿನ್ನೆ ಅಧಿಕಾರ ಸ್ವೀಕಾರ ಮಾಡಿದ ನೂತನ ಜಿಲ್ಲಾಧಿಕಾರಿ ಗೌತಮ್ ಅವರು ಇಂದು ಕರ್ತವ್ಯಕ್ಕೆ ಹಾಜರಾಗಿ ರೋಹಿಣಿ ಸಿಂಧೂರಿ ಅವರ ಆದೇಶವನ್ನು ರದ್ದು ಮಾಡಿ.. ವಾರದ ಅಷ್ಟೂ ದಿನಗಳಬ್ಕಾಲ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿ ಹೊಸ ಆದೇಶ ಹೊರಡಿಸಿದ್ದಾರೆ.. ಜೂನ್ ಹದಿನಾಲ್ಕನೇ ತಾರೀಕಿನವರೆಗೆ ರಾಜ್ಯದಲ್ಲಿ‌ ಲಾಕ್ ಡೌನ್ ಇದ್ದು ಅಲ್ಲಿಯವರೆಗೂ ಇದೇ ಆದೇಶ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.. ಒಟ್ಟಿನಲ್ಲಿ ಅಧಿಕಾರ ಸ್ವೀಕಾರ ಮಾಡಿದ ಮೊದಲ ದಿನವೇ ರೋಹಿಣಿ ಸಿಂಧೂರಿ ಅವರಿಗೆ ಸೆಡ್ಡು ಹೊಡೆದು ಹೊಸ ಆದೇಶ ಹೊರಡಿಸಿದ್ದಾರೆ‌.. ಅಷ್ಟೇ ಅಲ್ಲದೇ ನಾನು ಜನಸ್ನೇಹಿಯಾಗಿ ನನ್ನ ಕರ್ತವ್ಯ ನಿರ್ವಹಿಸುವೆ. ನಾನು ಲೋ ಪ್ರೊಫೈಲ್ ಉಳ್ಳವನು.. ನನ್ನ ಹೆಸರು ಬಹುಶಃ ನೀವ್ಯಾರೂ ಸಹ ಕೇಳಿಯೂ ಇರುವುದಿಲ್ಲ.. ಎಲ್ಲರ ಸಹಕಾರ ಪಡೆದು ಕರ್ತವ್ಯ ನಿರ್ವಹಿಸುವೆ ಎಂದಿದ್ದು ಮುಂಬರುವ ದಿನಗಳಲ್ಲಿ ಅವರ ಕಾರ್ಯ ವೈಖರಿ ಕುತೂಹಲವನ್ನು ಮೂಡಿಸಿದೆ..