ರೋಹಿಣಿ ಸಿಂಧೂರಿ ಅವರು ಮರಳಿ ಮೈಸೂರಿನ ಜಿಲ್ಲಾಧಿಕಾರಿಯಾಗಿ ವರ್ಗಾವಣೆ..? ಮೈಸೂರಿನ ಕೆಲ ರಾಜಕಾರಣಿಗಳ ಎದೆಯಲ್ಲಿ ಶುರುವಾಯ್ತು ನಡುಕ..

0 views

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಳೆದ ಒಂದು ತಿಂಗಳಿಂದ ನಡೆದ ಘಟನೆಗಳು ಎಲ್ಲರಿಗೂ ತಿಳಿದೇ ಇದೆ.. ಮೈಸೂರಿನ ದಕ್ಷ ಅಧಿಕಾರಿ ಜಿಲ್ಲಾಧಿಕಾರಿಗಳಾದ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಲಾಗಿದೆ.. ಆದರೆ ವರ್ಗಾವಣೆಯ ನಂತರ ಮೈಸೂರಿನಲ್ಲಿ ಬಹುದೊಡ್ಡ ಬೆಳವಣಿಗೆಯೂ ಸಹ ನಡೆದಿದೆ.. ಹೌದು ಕೆಲ ನಾಲಾಯಕ್ ರಾಜಕಾರಣಿಗಳ ಕಳ್ಳಾಟಗಳಿಗೆ ಕಡಿವಾಣ ಹಾಕುತ್ತಿದ್ದ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಿಸುವ ಸಲುವಾಗಿ ಸಾಕಷ್ಟು ಪ್ರಯತ್ನಗಳು ನಡೆದಿತ್ತು.. ಒಂದು ಕಡೆ ಚಾಮರಾಜನಗರದ ಆಸ್ಪತ್ರೆಯಲ್ಲಿ ಆಕ್ಸಿಜನ್ ಇಲ್ಲದೇ 24 ಮಂದಿ ಜೀವ ಕಳೆದುಕೊಂಡ ಪ್ರಕರಣದಲ್ಲಿ ರೋಹಿಣಿ ಸಿಂಧೂರಿ ಅವರನ್ನು ಸಿಕ್ಕಿಸಲು ಹೋಗಿ ಮಣ್ಣು ಮುಕ್ಕಿದ್ದರು.. ನಂತರ ರೋಹಿಣಿ ಸಿಂಧೂರಿ ಅವರ ಮನೆಯ ಸ್ವಿಮ್ಮಿಂಗ್ ಪೂಲ್ ವಿಚಾರ ತೆಗೆದು ಮುಖಭಂಗವನ್ನು ಅನುಭವಿಸಿದ್ದರು..

ಕೊನೆಗೆ ಸಂಸದರೇ ರೋಹಿಣಿ ಸಿಂಧೂರಿ ಅವರ ವಿರುದ್ಧ ಮಾತನಾಡುವ ಹಂತಕ್ಕೂ ಹೋಯಿತು.. ಆದರೆ ಯಾವುದನ್ನೂ ಲೆಕ್ಕಿಸದ ದಿಟ್ಟ ಅಧಿಕಾರಿ ರೋಹಿಣಿ ಸಿಂಧೂರಿ ಅವರು ನಿಜಕ್ಕೂ ಸಿಂಹಿಣಿಯಂತೆಯೇ ನಡೆದುಕೊಂಡರು.. ತಮ್ಮ ಕರ್ತವ್ಯ ಪಾಲನೆಯಲ್ಲಿ ಎಲ್ಲಿಯೂ ಸಹ ಹಿಂದೇಟು ಹಾಕದೆ ಕೊರೊನಾ ನಿಯಂತ್ರಣ ಮಾಡುವ ದಾರಿಯಲ್ಲಿ ಯಶಸ್ಸು ಕಾಣುತ್ತಿದ್ದ ಸಮಯದಲ್ಲಿಯೇ ಅವರ ಮೇಲೆ ಮಹಿಳಾಸ್ತ್ರ ಪ್ರಯೋಗ ಮಾಡಲಾಯಿತು.. ಪಾಲಿಕೆ ಆಯುಕ್ತರಾದ ಶಿಲ್ಪಾ ನಾಗ್ ಅವರು ಮೇಲಾಧಿಕಾರಿಗಳಿಗೆ ದೂರು ನೀಡದೇ ನೇರವಾಗಿ ಮಾದ್ಯಮದ ಮುಂದೆ ಬಂದು ರಾಜಿನಾಮೆ ನೀಡುತ್ತಿರುವುದಾಗಿ ತಿಳಿಸೊ ದೊಡ್ಡ ಸೀನ್ ನಿರ್ಮಾಣವಾಯಿತು.. ನಂತರ ವಿಚಾರ ದೊಡ್ಡದಾಗಿ ಕೊನೆಗೆ ಮುಖ್ಯ ಕಾರ್ಯದರ್ಶಿಗಳ ವಿಚಾರಣೆ ನಂತರ ಮುಖ್ಯಮಂತ್ರಿಗಳು ಮೈಸೂರಿನ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಿಯೇ ಬಿಟ್ಟರು..

ಆದರೆ ವರ್ಗಾವಣೆ ಆಗುವ ಎರಡು ದಿನದ ಮುನ್ನವೇ ಎಚ್ಚೆತ್ತ ರೋಹಿಣಿ ಸಿಂಧೂರಿ ಅವರು ಮೈಸೂರಿನಲ್ಲಿ ಭೂ ಹೊತ್ತುವರಿ ಬಗ್ಗೆ ಸಂಪೂರ್ಣವಾಗಿ ಅರಿತಿದ್ದ ದಕ್ಷ ಅಧಿಕಾರಿ ತನಿಖೆಗೆ ಆದೇಶವನ್ನೂ ಸಹ ನೀಡಿಯಾಗಿತ್ತು.. ಇದರಿಂದ ಕೆಲ ರಾಜಕಾರಣಿಗಳಿಗೆ ನಡುಕ ಹುಟ್ಟಿ ರೋಹಿಣಿ‌ ಸಿಂಧೂರಿ ಅವರು ಮೈಸೂರಿನಿಂದ ಹೊರ ಹೋದರೂ ಸಹ ಅದ್ಯಾಕೋ ಎಲ್ಲೋ ಸುಟ್ಟವರಂತೆ ಆಡುತ್ತಿದ್ದರು.. ಕೊನೆಗೆ ಇದೆಲ್ಲವನ್ನೂ ಕಣ್ಣಾರೆ ಕಂಡರೂ ಸಹ ಅಸಮಾಧಾನವನ್ನು ವ್ಯಕ್ತ ಪಡಿಸುವುದ ಬಿಟ್ಟರೆ ಬೇರೇನೂ ಮಾಡದ ಪರಿಸ್ಥಿತಿಯಲ್ಲಿ ಮೈಸೂರಿಗರು ಇದ್ದರು.. ರೋಹಿಣಿ ಸಿಂಧೂರಿ ಅವರನ್ನು ಮೈಸೂರಿನಿಂದ ಕಳುಹಿಸಲು ಮನಸ್ಸಿಲ್ಲವಾದರೂ ಏನೂ ಮಾಡಲಾಗುತ್ತಿರಲಿಲ್ಲ.. ಅತ್ತ ರೋಹಿಣಿ‌ ಸಿಂಧೂರಿ ಅವರೂ ಸಹ ಮೈಸೂರಿನಿಂದ ಹೊರಡುವ ಸನಯದಲ್ಲಿ ಕೊನೆಯದಾಗಿ ಮಾತನಾಡಿ ಭಾವುಕರಾದ ಅವರು ಮೈಸೂರು ನನಗೆ ತವರು ಮನೆಯ ಪ್ರೀತಿ ನೀಡಿದೆ..

ತವರಿನಿಂದ ಮಗಳು ಹೋಗುವ ರೀತಿಯಲ್ಲಿ ಆಗುತ್ತಿದೆ.. ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು ಮೈಸೂರು ಎಂದು ಹೇಳಿ ಹೊರಟರು.. ಆದರೆ ಹೇಗಾದರು ಮಾಡಿ ರೋಹಿಣಿ ಸಿಂಧೂರಿ ಅವರನ್ನು ಮತ್ತೆ ಕರೆತರಲೇ ಬೇಕೆಂದು ಮೈಸೂರಿಗರು ಪಣ ತೊಟ್ಟಿದ್ದು ಇದೀಗ ಬ್ರಿಂಗ್ ಬ್ಯಾಕ್ ರೋಹಿಣಿ ಸಿಂಧೂರಿ ಎಂಬ ಆನ್ಲೈನ್ ಸಹಿ ಸಂಗ್ರಹ ಅಭಿಯಾನವನ್ನು ಆರಂಭ ಮಾಡಿದ್ದಾರೆ.. ಹೌದು ಮೈಸೂರಿಗರ ಈ ನಡೆಗೆ ರಾಜ್ಯಾದ್ಯಂತ ಬೆಂಬಲ ವ್ಯಕ್ತವಾಗಿದ್ದು ಈ ರೀತಿ ಜಿಲ್ಲಾಧಿಕಾರಿಯೊಬ್ಬರನ್ನು ಮರಳಿ ಕರೆತರಲು ಇಂತಹ ಪ್ರಯತ್ನ ಇದೇ ಮೊದಲಾಗಿದೆ.. ಅಷ್ಟೇ ಅಲ್ಲದೆ ಇಂತಹ ಪ್ರಯತ್ನಕ್ಕೆ ಅದಾಗಲೇ ಬರೋಬ್ಬರಿ ನಲವತ್ತು ಸಾವಿರಕ್ಕೂ ಅಧಿಕ ಜನರು ಸಹಿ ಮಾಡಿ ರೋಹಿಣಿ ಅವರನ್ನು ಮತ್ತೆ ಮೈಸೂರಿ ಜಿಲ್ಲಾಧಿಕಾರಿಯನ್ನಾಗಿ ಮಾಡಿ ಎಂದಿದ್ದಾರೆ..

ಈ ವಿಚಾರ ಬಹಳ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು ಕೇಂದ್ರವನ್ನೂ ಸಹ ತಲುಪಲು ಬಹಳ ಸಮಯ ಬೇಕಿಲ್ಲವಾಗಿದೆ.. ರೋಹಿಣಿ ಸಿಂಧೂರಿ ಅವರ ವಿಚಾರ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾದರೆ ಬಹುಶಃ ರೋಹಿಣಿ ಸಿಂಧೂರಿ ಅವರು ಮರಳಿ ಮೈಸೂರಿನ ಜಿಲ್ಲಾಧಿಕಾರಿಯಾಗುವುದು ಬಹುತೇಕ ಖಚಿತವಾಗಿದ್ದು ಮೈಸೂರಿಗರ ಪ್ರಯತ್ನಕ್ಕೆ ಕೈ ಜೋಡಿಸಿದ ರಾಜ್ಯದ ಎಲ್ಲಾ ಜನತೆಗೆ ಸಂತೋಷ ಆಗುವುದಂತೂ ಸತ್ಯ.. ಜೊತೆಗೆ ಈಗಾಗಲೇ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ರೋಹಿಣಿ ಸಿಂಧೂರಿ ಅವರನ್ನು ಮರಳಿ ಮೈಸೂರು ಡಿಸಿ ಮಾಡುವ ವಿಚಾರ ಮೈಸೂರಿನ ಕೆಲ ರಾಜಕಾರಣಿಗಳ ಎದೆಯಲ್ಲಿ ನಡುಕ ಹುಟ್ಟಿಸಿರುವುದು ಸಹ ಅಷ್ಟೇ ಸತ್ಯವೆನ್ನಬಹುದು.. ಒಟ್ಟಿನಲ್ಲಿ ಅಧಿಕಾರಿಗಳು ಈ ರಾಜಕಾರಣಿಗಳ ಕೈಗೊಂಬೆ ಆಗದ ರೀತಿಯ ಅಧಿಕಾರ ಅವರಿಗೆ ಸಿಗುವಂತಾಗಬೇಕು.. ಆಗಲೇ ನಿಷ್ಠಾವಂತ ಅಧಿಕಾರಿಗಳಿಗೆ ಬೆಕೆ ಸಿಗುವುದು..