ತನ್ನ ಬಗ್ಗೆ ಸಿನಿಮಾ ಮಾಡುತ್ತಿರುವುದಕ್ಕೆ ಪ್ರತಿಕ್ರಿಯೆ ಕೊಟ್ಟ ರೋಹಿಣಿ ಸಿಂಧೂರಿ ಅವರು ನಿಜಕ್ಕೂ ಹೇಳಿದ್ದೇನು ಗೊತ್ತಾ..

0 views

ಮೈಸೂರಿನ ನಿರ್ಗಮಿತ ಜಿಲ್ಲಾಧಿಕಾರಿಗಳಾದ ರೋಹಿಣಿ ಸಿಂಧೂರಿ ಅವರು ಸದ್ಯ ಸಾಮಾಜಿಕ ಜಾಲತಾಣದ ಸೆನ್ಸೇಷನ್ ಎನ್ನಬಹುದು.. ಕಳೆದ ಒಂದು ತಿಂಗಳಿಂದ ನಡೆದ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಹಾಗೂ ಪಾಲಿಕೆ ಆಯುಕ್ತರಾದ ಶಿಲ್ಪಾ ನಾಗ್ ಅವರ ನಡುವಿನ ಮನಸ್ತಾಪಗಳು ಬಹಿರಂಗವಾಗಿ ಮಾದ್ಯಮದ ಮುಂದೆ ಬಂದ ಶಿಲ್ಪಾ ನಾಗ್ ಅವರು ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿ ರೋಹಿಣಿ ಸಿಂಧೂರಿ ಅವರ ಮೇಲೆ ಸಾಕಷ್ಟು ಆರೋಪಗಳನ್ನು ಸಹ ಮಾಡಿದ್ದರು.. ಇನ್ನು ಇದಾದ ಬಳಿಕ ಕೆಲ ರಾಜಕೀಯ ಬೆಳವಣಿಗೆಗಳು ನಡೆದು ಕೊನೆಗೆ ದಕ್ಷ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಧಾರ್ಮಿಕ ದತ್ತಿ ಇಲಾಖೆಗೆ ವರ್ಗಾವಣೆ ಮಾಡಲಾಯಿತು.. ಆದರೆ ಸಾಮಾಜಿಕ ಜಾಲತಾಣದಲ್ಲಿ ರೋಹಿಣಿ ಸಿಂಧೂರಿ ಅವರಿಗೆ ಸಾಕಷ್ಟು ಬೆಂಬಲ ವ್ಯಕ್ತವಾಗಿತ್ತು..

ರೋಹಿಣಿ ಸಿಂಧೂರಿಯವರಿಗೆ ದೊಡ್ಡ ಅಭಿಮಾನಿ ಬಳಗವೇ ಸೃಷ್ಟಿಯಾಯಿತು.. ಮೈಸೂರಿನಿಂದ ಹೊರ ನಡೆಯುವ ಸಮಯದಲ್ಲಿ ಭಾವುಕರಾಗಿದ್ದ ರೋಹಿಣಿ ಸಿಂಧೂರಿ ಅವರು ಮಗಳು ತವರು ಮನೆಯಿಂದ ಹೊರ ಹೋದಂತೆ ಆಗ್ತಾ ಇದೆ ಎಂದು ಬಹಳ ಬೇಸರ ಪಟ್ಟುಕೊಂಡಿದ್ದರು.. ಇದಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ದೊಡ್ಡದೊಂದು ಸುದ್ದಿ ಕೇಳಿ ಬಂತು.. ಅದುವೇ ರೋಹಿಣಿ ಸಿಂಧೂರಿ ಅವರ ಜೀವನಾಧರಿತ ಸಿನಿಮಾ‌.. ಹೌದು ನಿರ್ದೇಶಕರೊಬ್ಬರು ರೋಹಿಣಿ ಸಿಂಧೂರಿ ಅವರ ಜೀವನಾಧರಿತ ಸಿನಿಮಾ ಮಾಡಲು ಮುಂದಾಗಿದ್ದು ಅದಾಗಲೇ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಹೆಸರನ್ನು ಸಹ ದಾಖಲು ಮಾಡಿಸಿಕೊಂಡಿದ್ದಾರೆ.. ಹೌದು ಭಾರತ ಸಿಂಧೂರಿ ಎಂಬ ಹೆಸರಿನ ಜೊತೆಗೆ ರೋಹಿಣಿ ಸಿಂಧೂರಿ ಅವರ ಜೀವನ ಚಿತ್ರ ಮೂಡಿ ಬರಲಿದೆ..

ಇನ್ನು ರೋಹಿಣಿ ಸಿಂಧೂರಿ ಅವರ ಪಾತ್ರದಲ್ಲಿ ಬಿಗ್ ಬಾಸ್ ಸ್ಪರ್ಧಿ ಮಂಡ್ಯ ಮೂಲದ ಅಕ್ಷತಾ ಪಾಂಡವಪುರ ಅವರು ಕಾಣಿಸಿಕೊಳ್ಳಲಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.. ಇನ್ನು ಈ ಬಗ್ಗೆ ರೋಹಿಣಿ ಸಿಂಧೂರಿ ಅವರು ಇದೀಗ ಪ್ರತಿಕ್ರಿಯೆ ಸಹ ನೀಡಿದ್ದಾರೆ.. ಹೌದು ಮಂಡ್ಯ ಮೂಲದ ಕವಿ ಪತ್ರಕರ್ತ ಸಂಘಟಕ ಎಸ್ ಕೃಷ್ಣ ಸ್ವರ್ಣ ಸಂದ್ರ ಅವರು ಈ ಸಿನಿಮಾದ ಕಥೆ ಚಿತ್ರಕತೆ.. ರಚನೆ ಹಾಗೂ ನಿರ್ದೇಶನವನ್ನು ಮಾಡಲಿದ್ದು ಮಂಡ್ಯದವರೇ ಆದ ಅಕ್ಷತಾ ಪಾಂಡವಪುರ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ..

ಇನ್ನು ಒಬ್ಬ ವ್ಯಕ್ತಿಯ ಜೀವನ ಚರಿತ್ರೆಯನ್ನು ಸಿನಿಮಾ ಮಾಡಬೇಕು ಎಂದರೆ ಕೆಲ ನಿಯಮಗಳು ಇರುತ್ತವೆ.. ಯಾರೇ ಆಗಲಿ ಆ ನಿಯಮಗಳನ್ನು ಪಾಲಿಸಬೇಕಾಗುತ್ತದೆ‌. ಹೌದು ಮೊದಲು ಆ ವ್ಯಕ್ತಿಯ ಅನುಮತಿಯನ್ನು ಪಡೆದು ನಂತರವಷ್ಟೇ ಸಿನಿಮಾ ಮಾಡಬೇಕಾಗುತ್ತದೆ.. ಅಷ್ಟೇ ಅಲ್ಲದೇ ಸಿನಿಮಾದಲ್ಲಿ ಸತ್ಯಾಂಶಗಳನ್ನು ಮಾತ್ರ ತೋರಿಸಬೇಕಾಗುತ್ತದೆ.. ಅದರಲ್ಲಿಯೂ ಈಗ ಇನ್ನೂ ಸಹ ರೋಹಿಣಿ ಸಿಂಧೂರಿ ಅವರು ಅಧಿಕಾರದಲ್ಲಿರುವ ಸಮಯದಲ್ಲಿ ಈ ರೀತಿ ಸಿನಿಮಾ ಮಾಡುವುದರ ಬಗ್ಗೆ ರೋಹಿಣಿ ಅವರ ಬಳಿಯೇ ಚರ್ಚಿಸಬೇಕಾಗಿದೆ..

ಇನ್ನು ಮಾದ್ಯಮದವರು ಈ ವಿಚಾರದ ಕುರಿತು ರೋಹಿಣಿ ಸಿಂಧೂರಿ ಅವರಿಗೆ ಫೋನ್ ಮಾಡಿದ್ದು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.. ಹೌದು ತಮ್ಮ ಜೀವನಾಧಾರಿತ್ ಸಿನಿಮಾ ಬಗ್ಗೆ ಮಾತನಾಡಿದ ರೋಹಿಣಿ ಸಿಂಧೂರಿ ಅವರು ಸಿನಿಮಾ ಬಗ್ಗೆ ಯಾವುದೇ ಮಾಹಿತಿಯಿಲ್ಲ.. ನನ್ನನು ಸಹ ಯಾರೂ ಕೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ..