ಮರದಲ್ಲಿ ಸಿಲುಕಿದ್ದ ಮತ್ತೊಂದು ಜೀವ ರಕ್ಷಣೆ ಮಾಡಲು ಹೋದ.. ಆದರೆ ಕೊನೆಗೆ ನಡೆದದ್ದೇ ಬೇರೆ.. ಬೆಂಗಳೂರಿನಲ್ಲಿ ನಡೆದ ಮನಕಲಕುವ ಘಟನೆ..

0 views

ಮಾನವೀಯತೆ ಅನ್ನೋದು ಪ್ರತಿಯೊಬ್ಬರಲ್ಲೂ ಇರಬೇಕು ಅನ್ನೋ ಮಾತನ್ನ ಎಲ್ಲರೂ ಹೇಳ್ತೀವಿ.. ಅದರಲ್ಲೂ ಯಾರಾದರೂ ತೊಂದರೆಯಲ್ಲಿದ್ದರೆ ಅಥವಾ ರಸ್ತೆಯಲ್ಲಿ ಜನರು ಬಿದ್ದು ಒದ್ದಾಡುವಾಗ ಅಯ್ಯೋ ಎಂದು ಮರುಗಿ ಅವರ ಸಹಾಯಕ್ಕೂ ಕೆಲವರು ಹೋಗ್ತೀವಿ‌.. ಮಾನವೀಯತೆ ತೋರದವರನ್ನ ನಾವು ಕೀಳಾಗಿ ಕಾಣೋದು ಉಂಟು.. ಆದರೆ ಅದೇ ಮಾನವೀಯತೆ ಒಬ್ಬ ಹುಡುಗನ ಜೀವವನ್ನೇ ಕಸಿದುಕೊಂಡಿತೆಂದರೆ ನಂಬಲೇ ಬೇಕು.. ಹೌದು ಬೆಂಗಳೂರಿನಲ್ಲೊಂದು ಇಂತಹ ಘಟನೆ ನಡೆದಿದ್ದು ಮರದಲ್ಲಿ ಸಿಲುಕಿದ್ದ ಜೀವವೊಂದನ್ನು ರಕ್ಷಿಸಲು ಹೋದ ಯುವಕ ತಾನೇ ಜೀವ ಕಳೆದುಕೊಂಡ ಘಟನೆ ನಡೆದಿದ್ದು ಮನಕಲಕುವಂತಿದೆ.. ಆ ಹುಡುಗನ ಹೆತ್ತವರ ಆಕ್ರಂದನ ನೋಡಿದರೆ ಯಾವ ಶತ್ರುವಿಗೂ ಇಂತಹ ನೋವು ಬಾರದಿರಲಿ ಎನ್ನುವಂತಿದೆ..

ಹೌದು ಈ ಹುಡುಗನ ಹೆಸರು ರೋಷನ್.. ವಯಸ್ಸು ಕೇವಲ 25.. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ನಿವಾಸಿ.. ರೋಷನ್ ತನ್ನ ಊರಿನಲ್ಲಿಯೇ ಕೆಲಸ ಮಾಡಿಕೊಂಡು ಹೆತ್ತವರನ್ನು ನೋಡಿಕೊಂಡು ನೆಮ್ಮದಿಯಾಗಿ ಜೀವನ ಸಾಗಿಸುತ್ತಿದ್ದ ಹುಡುಗ‌.. ಆದರೆ ವಿಧಿಯಾಟ.. ರೋಷನ್ ಜೀವನದಲ್ಲಿ ಎಂದಿನಂತೆ ಸಾಮಾನ್ಯ ದಿನವಾಗಬೇಕಿದ್ದ ನಿನ್ನೆ ಆತನ ಸಾವಿನ ದಿನವಾಗಿ ಹೋಯ್ತು‌‌‌.. ಹೌದು ರೋಷನ್ ದೊಡ್ಡಬಳ್ಳಾಪುರದ ಡೈರಿ ಮುಂಭಾಗದಲ್ಲಿರುವ ಗ್ಯಾರೆಜ್ ನಲ್ಲಿ ಕೆಲಸ ಮಾಡುತ್ತಿದ್ದ..

ಎಂದಿನಂತೆ ನಿನ್ನೆಯೂ ಕೆಲಸಕ್ಕೆ ಬಂದು ತನ್ನ ಪಾಡಿಗೆ ತಾನು ಕೆಲಸದಲ್ಲಿ ತೊಡಗಿಕೊಂಡಿದ್ದ.. ಆದರೆ ಗ್ಯಾರೇಜ್ ಎದುರಿನಲ್ಲಿದ್ದ ಮರದಲ್ಲಿ ಬೆಕ್ಕೊಂದು ಸಿಲುಕಿಕೊಂಡಿದ್ದು.. ಆಚೆ ಬರಲಾಗದೇ ಒದ್ದಾಡುತ್ತಿತ್ತು.. ಅದನ್ನು ನೋಡಿದ ರೋಷನ್ ಅಯ್ಯೋ ಎಂದು ಸುಮ್ಮನೆ ಬಾಯಲ್ಲಿ ಹೇಳಿ ಸುಮ್ಮನಾಗಲಿಲ್ಲ‌.. ಬದಲಿಗೆ ಆ ಬೆಕ್ಕನ್ನು ರಕ್ಷಣೆ ಮಾಡಲು ಮುಂದಾದ.. ಆದರೆ ವಿಧಿಯ ನಿರ್ಣಯ ಆ ಬೆಕ್ಕಿನ ಜೀವ ಏನೋ ಉಳಿಯಿತು.. ಆದರೆ ರೋಷನ್ ಅದೇ ಮರದ ಮೇಲೆ ಜೀವ ಬಿಡುವಂತಾಯಿತು..

ಹೌದು ರೋಷನ್ ಮರದಲ್ಲಿ ಸಿಲುಕಿಕೊಂಡಿದ್ದ ಬೆಕ್ಕನ್ನು ನೋಡಿ ಮರುಗಿ ಅದನ್ನು ರಕ್ಷಣೆ ಮಾಡಬೇಕೆಂದು ಮರವನ್ನೇರಿದ.. ಆದರೆ ಮರದ ನಡುವೆಯೇ ಹದೌ ಹೋಗಿದ್ದ ವಿದ್ಯುತ್ ತಂತಿಗಳು ತಗುಲಿ ರೋಷನ್ ಅದೇ ಮರದ ಮೇಲೆಯೇ ಜೀವ ಕಳೆದುಕೊಂಡ.. ಮತ್ತೊಂದು ಜೀವ ಉಳಿಸಲು ಹೋಗಿ ತಾನೇ ಜೀವ ಕಳೆದುಕೊಂಡ ರೋಷನ್ ನನ್ನು ಕಂಡು ಅಲ್ಲಿನ ಜನ ಕಣ್ಣೀರಿಟ್ಟರು.. ಇತ್ತ ವಿಚಾರ ತಿಳಿಯುತ್ತಿದ್ದಂತೆ ಬೆಸ್ಕಾಂ ಸಿಬ್ಬಂದಿ ಹಾಗೂ ಪೋಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡರು.. ಆದರೆ ಕೆಲಸಕ್ಕೆಂದು ಮನೆಯಿಂದ ಹೊರ ಹೋದ ಮಗ ಈ ರೀತಿ ಮರದ ಮೇಲೆ ಜೀವ ಕಳೆದುಕೊಂಡು ನೇತಾಡುತ್ತಿದ್ದ ದೃಶ್ಯ ಕಂಡ ರೋಷನ್ ನ ತಂದೆ ತಾಯಿಯ ಆಕ್ರಂದನ ಅಕ್ಷರಶಃ ಮುಗಿಲು ಮುಟ್ಟುವಂತಿತ್ತು..

ವಿಧಿ ಯಾವ ಯಾವ ರೀತಿಯಲ್ಲಿ ಬದುಕು ಮುಗಿಸುವನೋ ಹೇಳಲಾಗದು‌.. ರೋಷನ್ ನ ಮಾನವೀಯತೆಯೇ ಆತನ ಜೀವ ಪಡೆದು ಹೋಯಿತು.. ಆತನ ಹೆತ್ತವರಿಗೆ ಈ ನೋವ ತಡೆಯುವ ಧೈರ್ಯ ಭಗವಂತ ನೀಡಲಿ ಅಷ್ಟೇ.. ಮಗನಂತೂ ಮರಳಿ ಬರುವುದಿಲ್ಲ.. ಬೆಸ್ಕಾಂ ಕಡೆಯಿಂದ ಆ ಕುಟುಂಬಕ್ಕೆ ಆರ್ಥಿಕ ನೆರವಾದರೂ ಸಿಗುವಂತಾಗಲಿ..

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.