ಹೊರ ಬಿತ್ತು ಸಮೀಕ್ಷೆ.. ಆರ್ ಆರ್ ನಗರದಲ್ಲಿ ಗೆಲುವು ಯಾರಿಗೆ ಗೊತ್ತಾ?

0 views

ವಿಧಾನಸಭಾ ಉಪಚುನಾವಣೆ ಮತದಾನ ಮುಗಿದರೂ ಫಲಿತಾಂಶದ ಕುತೂಹಲ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.. ಅದರಲ್ಲೂ ರಾಜ್ಯದ ಹೈವೋಲ್ಟೇಜ್ ಕಣವಾಗಿರುವ ರಾಜ ರಾಜೇಶ್ವರಿ ನಗರದಲ್ಲಿ ಆಗಲೇ ಬಿಜೆಪಿ ಮುನಿರತ್ನ ಅವರು ಹಾಗೂ ಕಾಂಗ್ರೆಸ್ ನ ಕುಸುಮಾ ಅವರ ಪರ ವಿರೋಧವಾಗಿ ಬಹಳಷ್ಟು ಬ್ಯಾಟಿಂಗ್ ಗಳು ನಡೆಯುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ.. ಇಬ್ಬರೂ ಅಭ್ಯರ್ಥಿಗಳಲ್ಲಿಯೂ ಗೆಲುವಿನ ವಿಶ್ವಾಸವಿದ್ದರೂ ವಾಸ್ತವವಾಗಿ ಗೆಲುವಿನ‌ ಮಾಲೆ ಒಬ್ಬರಿಗೆ ಬೀಳುವುದರಿಂದ ಫಲಿತಾಂಶದ ದಿನ ಹತ್ತಿರವಾಗುತ್ತಿದ್ದಂತೆ ಅವರಲ್ಲಿಯೂ ಕುತೂಹಲ ಹೆಚ್ಚಾಗಿದೆ..

ಇನ್ನು ನವೆಂಬರ್ ಹತ್ತರಂದು ಚುನಾವಣಾ ಫಲಿತಾಂಶ ಹೊರ ಬೀಳಲಿದೆ.. ಆದರೆ ಅದಾಗಲೇ ಸಿ ವೋಟರ್ ಸಮೀಕ್ಷೆ ನಡೆದಿದ್ದು ವಿಜಯ ಮಾಲೆ ಯಾರ ಕೊರಳಿಗೆ ಎಂಬುವ ಲೆಕ್ಕಾಚಾರ ಹೊರ ಬಂದಿದೆ.. ಹೌದು ಇದುವರೆಗೂ ಪ್ರತಿ ಚುನಾವಣೆಯಲ್ಲಿಯೂ ನಡೆಸಲಾಗಿರುವ ಸಿ ವೋಟರ್ ಸಮೀಕ್ಷೆ ಬಹುತೇಕ ಖಚಿತವಾಗಿದೆ.. ಇದೀಗ ಆರ್ ಆರ್ ನಗರದಲ್ಲಿಯೂ ಸಿ ವೋಟರ್ ಸಮೀಕ್ಷೆ ನಡೆಸಲಾಗಿದ್ದು ಸಮೀಕ್ಷೆಯ ಪ್ರಕಾರ ಬಿಜೆಪಿ‌ ಮುನಿರತ್ನ ಅವರಿಗೆ ವಿಜಯಮಾಲೆ ದೊರೆಯಲಿದೆ ಎನ್ನಲಾಗುತ್ತಿದೆ..

ಹೌದು ಆರ್ ಆರ್ ನಗರದ ಸಿ ವೋಟರ್ ಸಮೀಕ್ಷೆಯ ಪ್ರಕಾರ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಪರವಾಗಿ ಶೇಕಡ 37.8 ರಷ್ಟು‌ ಮತಗಳು ಬಿದ್ದಿವೆ ಎನ್ನಲಾಗಿದೆ.. ಇನ್ನು ಇದೇ ಮೊದಲ ಬಾರಿಗೆ ಚುನಾವಣೆ ಎದುರಿಸಿರುವ ಕಾಂಗ್ರೆಸ್ ಅಭ್ಯರ್ಥಿ‌ ಡಿ ಕೆ ರವಿ ಅವರ ಪತ್ನಿ ಕುಸುಮಾ ಅವರ ಪರವಾಗಿ ಶೇಕಡ 31.1 ರಷ್ಟು ಮತಗಳು ಬಿದ್ದಿವೆ ಎನ್ನಲಾಗಿದೆ.. ಇನ್ನುಳಿದಂತೆ ಜೆಡಿಎಸ್ ನ ಅಭ್ಯರ್ಥಿ ಕೃಷ್ಣಮೂರ್ತಿ ಅವರ ಪರವಾಗಿ ಶೇಕಡ 14 ರಷ್ಟು ಮತದಾನ ಆಗಿದೆ ಎನ್ನಲಾಗಿದ್ದು ಇನ್ನು ಒಂದು ದಿನದಲ್ಲಿ ಎಲ್ಲಾ ಲೆಕ್ಕಾಚಾರ ಅಧಿಕೃತವಾಗಿ ಫಲಿತಾಂಶದ ಮೂಲಕ ಹೊರ ಬೀಳಲಿದೆ..

ಒಟ್ಟಿನಲ್ಲಿ ಮುನಿರತ್ನ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಗೆ ಸೇರಿ ಇದೀಗ ಉಪಚುನಾವಣೆ ಎದುರಿಸುತ್ತಿದ್ದು ಕಾಂಗ್ರೆಸ್ ಹಾಗೂ ಬಿಜೆಪಿಗೆ ಅದರಲ್ಲೂ ಮುನಿರತ್ನ ಹಾಗೂ ಡಿ ಕೆ ಶಿವಕುಮಾರ್ ಅವರಿಗೆ ರಾಜಕೀಯ ಪ್ರತಿಷ್ಟೆಯ ಕಣವಾಗಿದೆ.‌ ಇತ್ತ ಬಿಜೆಪಿ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಪ್ರಮುಖ ಕಾರಣರಾಗಿದ್ದ ಮುನಿರತ್ನ ಅವರು ಗೆದ್ದ ಕೂಡಲೇ ಅವರಿಗೆ ಸಚಿವ ಸ್ಥಾನ ನೀಡುವುದಾಗಿ ಯಡಿಯೂರಪ್ಪನವರು ತಿಳಿಸಿದ್ದಾರೆ ಎನ್ನಲಾಗಿದೆ..

ಆದರೆ ಸಮೀಕ್ಷೆಯಲ್ಲಿ ಶೇಕಡವಾರು ಮತದಾನದಲ್ಲಿ ಮುನಿರತ್ನ ಹಾಗೂ ಕುಸುಮಾ ಅವರ ನಡುವೆ ಮತದಾನದ ಅಂತರ ಕಡಿಮೆ ಇರುವುದರಿಂದ ಫಲಿತಾಂಶ ಹೊರ ಬೀಳುವವರೆಗೆ ಏನೂ ಹೇಳಲು ಸಾಧ್ಯವಿಲ್ಲ..‌ ಕುಸುಮಾ ಅವರಿಗೆ ತಾವು ಗೆಲ್ಲುವುದು ಖಚಿತ ಎಂಬ ವಿಶ್ವಾಸವಿದ್ದು ದೇವರ ಮೊರೆ ಹೋಗಿದ್ದಾರೆ.. ಅದಾಗಲೇ ಕೆಲ ಶಕ್ತಿ ದೇವತೆಗಳ ದೇವಸ್ಥಾನಗಳಿಗೆ ಭೇಟಿ‌ ನೀಡಿ ದರ್ಶನ ಪಡೆದಿದ್ದಾರೆ.. ಮೊನ್ನೆ ಮೊನ್ನೆಯಷ್ಟೇ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾದ್ಯಮದ ಜೊತೆ ಮಾತನಾಡಿ ಇದೇ ವಿಚಾರ ಮಾತನಾಡಿದ್ದರು..‌ಗೆಲುವು ಖಚಿತ ಎಂಬ ವಿಶ್ವಾಸವಿದೆ ಎಂದಿದ್ದರು.. ಒಟ್ಟಿ‌ನಲ್ಲಿ ಇನ್ನು ಎರಡು ದಿನದಲ್ಲಿ ಈ ಎಲ್ಲಾ ಕುತೂಹಲಕ್ಕೆ ತೆರೆ ಬೀಳಲಿದ್ದು ರಾಜರಾಜೇಶ್ವರಿ ನಗರದ ಮತದಾರ ಪ್ರಭುಗಳು ಯಾರ ಕೈ ಹಿಡಿದಿದ್ದಾರೋ ತಿಳಿಯಲಿದೆ..‌