ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸಹನಾ ಪಾತ್ರ ಮಾಡಿರುವ ಈ ನಟಿ ನಿಜಕ್ಕೂ ಯಾರು ಗೊತ್ತಾ..

0 views

ಕನ್ನಡ ಕಿರುತೆರೆಯ ಸಧ್ಯ ಟಾಪ್ ಎರಡನೇ ಧಾರಾವಾಹಿಯಾಗಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಕಲಾವಿದರೀಗ ಕರ್ನಾಟಕದ ತುಂಬೆಲ್ಲಾ ಮನೆ ಮಾತಾಗಿದ್ದಾರೆಂದರೆ ಸತ್ಯ.. ಅದರಲ್ಲೂ ಪುಟ್ಟಕ್ಕನ ಮೂವರು ಹೆಣ್ಣು ಮಕ್ಕಳನ್ನು ತಮ್ಮದೇ ಮನೆಯ ಹೆಣ್ಣು ಮಕ್ಕಳೆಂದು ಕಿರುತೆರೆ ಪ್ರೇಕ್ಷಕರು ನೋಡುತ್ತಿದ್ದು ಅಭಿಮಾನದ ಜೊತೆಗೆ ಸಿಕ್ಕಾಪಟ್ಟೆ ಪ್ರೀತಿಯನ್ನೂ ಸಹ ನೀಡುತ್ತಿದ್ದಾರೆ.. ಇನ್ನು ಧಾರಾವಾಹಿ ಶುರುವಾದ ವಾರದಿಂದಲೇ ದಾಖಕೆಯ ರೇಟಿಂಗ್ ಪಡೆದು ಟಾಪ್ ಒಂದನೇ ಸ್ಥಾನದಲ್ಲಿಯೇ ಮುಂದುವರೆಯುತ್ತಿದ್ದ ಪುಟ್ಟಕ್ಕನ ಮಕ್ಕಳು ಇತ್ತೀಚೆಗೆ ಕತೆಯನ್ನು ಎಳೆಯುತ್ತಿರುವ ಕಾರಣ ಎರಡನೇ ಸ್ಥಾನಕ್ಕೆ ತೃಪ್ತಿ‌ ಪಟ್ಟುಕೊಳ್ಳುವಂತಾಗಿದೆ..

ಇನ್ನು ಇತ್ತ ಧಾರಾವಾಹಿ ಶುರುವಾದ ಕೆಲವೇ ತಿಂಗಳಲ್ಲಿ ಯಶಸ್ವಿಯಾಗಿದ್ದು ಮಾತ್ರವಲ್ಲದೇ ಧಾರಾವಾಹಿಯ ಎಲ್ಲಾ ಕಲಾವಿದರೂ ಸಹ ಅಷ್ಟೇ ಖ್ಯಾತಿ ಗಳಿಸಿದರು.. ಕಿರುತೆರೆಯಲ್ಲಿ ಬದುಕು ಕಟ್ಟಿಕೊಳ್ಳಲೆಂದು ಬಂದ ಸಾಕಷ್ಟು ಕಲಾವಿದರು ಪುಟ್ಟಕ್ಕನ ಮಕ್ಕಳು ಧಾರಾವಾಹಿ‌ ಮೂಲಕ ತಮ್ಮ ಬಣ್ಣದ ಬದುಕಿಗೆ ಭದ್ರ ಬುನಾದಿಯನ್ನು ಹಾಕಿಕೊಂಡರು.. ಇನ್ನು ಈ ಧಾರಾವಾಹಿಯ ಪ್ರಮುಖ ಪಾತ್ರಗಳೆಂದರೆ ಅದು ಪುಟ್ಟಕ್ಕ ಹಾಗೂ ಮಕ್ಕಳು.. ಮತ್ತು ಇತ್ತ ಬಂಗಾರಮ್ಮ ಹಾಗೂ ಮಗ.. ಈ ಧಾರಾವಾಹಿ ನಿಂತಿರುವುದೇ ಪುಟ್ಟಕ್ಕ ಹಾಗೂ ಆಕೆಯ ಮಕ್ಕಳ ಜೀವನದ ಕತೆಯ ಮೇಲೆ.. ಇನ್ನು ಪುಟ್ಟಕ್ಕನ ಮೂರು ಮಕ್ಕಳ ಪಾತ್ರಕ್ಕೂ ಹೇಳಿ ಮಾಡಿಸಿದಂತಹ ಕಲಾವಿದರನ್ನು ಆಯ್ಕೆ ಮಾಡಿಕೊಂಡಿದ್ದು ಪ್ರೇಕ್ಷಕರು ಮನಸಾರೆ ಮೆಚ್ಚಿಕೊಂಡಿದ್ದಾರೆ..

ಇನ್ನು ಪುಟ್ಟಕ್ಕನ ಹಿರಿಯ ಮಗಳು ಸೌಮ್ಯ ಸ್ವಭಾವದ ಸಹನಾ ಪಾತ್ರ ಮಾಡಿರುವ ನಟಿ ನಿಜಕ್ಕೂ ಯಾರು ಎಂಬ ಕುತೂಹಲ ಇದೆ.. ಹೌದು ತನ್ನ ತಂಗಿಯರಿಗಾಗಿ ತಾನು ತನ್ನ ಭವಿಷ್ಯವನ್ನು ತ್ಯಾಗ ಮಾಡಿ ಅವ್ವನಿಗೆ ನೆರವಾಗಿ ನಿಂತು ಸ್ವಾವಲಂಭಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಅವ್ವನಿಗೆ ನೆರವಾದ ಸಹನಾ ನೋಡಲೂ ಸಹ ಅಷ್ಟೇ ಮುದ್ದಾಗಿದ್ದು ಸಿಕ್ಕಾಪಟ್ಟೆ ಇಷ್ಟವಾಗ್ತಾರೆ.. ಹೌದು ಸಹನಾ ಪಾತ್ರ ಮಾಡಿರುವ ನಟಿಯ ಹೆಸರು ಅಕ್ಷರಾ.. ಹೌದು ಮುದ್ದು ಮುಖದ ಸುಂದರಿ ಅಕ್ಷರಾ ಹುಟ್ಟಿ ಬೆಳೆದದ್ದೆಲ್ಲಾ ಬೆಂಗಳೂರಿನಲ್ಲಿಯೇ. ತಮ್ಮ ವಿಧ್ಯಾಭ್ಯಾಸ ಮುಗಿಸಿ ನಟನೆಯ ಕಡೆಗೆ ಮುಖ ಮಾಡಿದ ಅಕ್ಷರಾಗೆ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಮೊದಲ ಧಾರಾವಾಹಿಯೇನೂ ಅಲ್ಲ..

ಹೌದು ಈ ಹಿಂದೆಯೂ ಸಹ ಧಾರಾವಾಹಿಗಳಲ್ಲಿ ಅದರಲ್ಲೂ ಪ್ರಮುಖ ಪಾತ್ರದಲ್ಲಿ ಅಕ್ಷರಾ ನಟಿಸಿದ್ದರು.. ಆದರೆ ಪುಟ್ಟಕ್ಕನ ಮಕ್ಕಳು ಧಾರಾವಾಹಿ ದೊಡ್ಡ ಬ್ರೇಕ್ ನೀಡಿತೆನ್ನಬಹುದು. ಹೌದು ಅಕ್ಷರಾ ಈ ಹಿಂದೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಮ್ನೋರು ಧಾರಾವಾಹಿಯಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದರು.. ಧಾರಾವಾಹಿ ಯಶಸ್ಸು ಕಂಡಿತಾದರೂ ಅಕ್ಷರಾಗೆ ಹೇಳಿಕೊಳ್ಳುವಂತಹ ಬ್ರೇಕ್ ನೀಡಲಿಲ್ಲ.. ನಂತರ ನಟನೆಯಿಂದ ಕೊಂಚ ಬ್ರೇಕ್ ತೆಗೆದುಕೊಂಡ ಅಕ್ಷರಾ ಸಿನಿಮಾದಲ್ಲಿ ಅಭಿನಯಿಸುವ ಸಲುವಾಗಿ ತಯಾರಿಯಲ್ಲಿ ತೊಡಗಿಕೊಂಡರು.. ಆನಂತರ ಅಕ್ಷರಾಗೆ ಸಿಕ್ಕ ಅವಕಾಶವೇ ಈ ಪುಟ್ಟಕ್ಕನ ಮಕ್ಕಳು ಧಾರಾವಾಹಿ..

ಹೌದು ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ನಾಯಕಿಯ ಪಾತ್ರವಲ್ಲದಿದ್ದರೂ ಸಹ ಅಷ್ಟೇ ತೂಕವಿರುವ ಪ್ರಮುಖ ಪಾತ್ರವಾಗಿರುವ ಪುಟ್ಟಕ್ಕನ ಹಿರಿಯ ಮಗಳು ಸಹನಾ ಪಾತ್ರಕ್ಕೆ ಅಕ್ಷರಾ ಒಪ್ಪಿಕೊಂಡರು.. ಅವರ ನಿರ್ಧಾರ ಸರಿಯಾಗಿತ್ತು.. ಜನರು ಸಹನಾ ಪಾತ್ರವನ್ನು ಮನಸಾರೆ ಒಪ್ಪಿಕೊಂಡರು.. ಇದ್ದರೆ ಇಂತಹ ಮಗಳಿರಬೇಕು ಎನ್ನುವಷ್ಟು ಅಕ್ಷರಾ ಸಹನಾ ಪಾತ್ರದ ಮೂಲಕ ಜನರ ಮನಸ್ಸಿಗೆ ಹತ್ತಿರವಾದರು.. ಇನ್ನು ಸಹನಾ ಪಾತ್ರದಲ್ಲಿ ಹೆಸರು ಮಾಡಿ ಜನರ ಪ್ರೀತಿ ಪಡೆದದ್ದಕ್ಕೆ ಅಕ್ಷರಾಳ ಅಪ್ಪ ಅಮ್ಮನಿಗೂ ಬಹಳ ಸಂತೋಷ ವಿದೆ ಎನ್ನುತ್ತಾರೆ ಅಕ್ಷರ.. ಇನ್ನು ಧಾರಾವಾಹಿ ಮಾತ್ರವಲ್ಲ ಕಿರುತೆರೆಯ ಜೊತೆಗೆ ಸಿನಿಮಾಗಳಲ್ಲಿಯೂ ಅಕ್ಷರಾ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ..

ಹೌದು ಅಕ್ಷರಾ ಅಭಿಷೇಕ್ ಅಂಬರೀಶ್ ಅವರ ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.. ಹೌದು ಅಭಿಷೇಕ್ ಅಂಬರೀಶ್ ಅವರ ಬಹು ನಿರೀಕ್ಷೆಯ ಸಿನಿಮಾ ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ಅಭಿಷೇಕ್ ಅಂಬರೀಶ್ ಅವರ ಜೊತೆ ತೆರೆ ಹಂಚಿಕೊಂಡಿದ್ದು ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ.. ಅಷ್ಟೇ ಅಲ್ಲದೇ ಶೀಘ್ರಮೇವ ಕಲ್ಯಾಣ ಪ್ರಾಪ್ತಿರಸ್ತು ಸಿನಿಮಾದಲ್ಲಿಯೂ ಅಭಿನಯಿಸಿರುವ ಅಕ್ಷರಾ ಸಿನಿಮಾರಂಗದಲ್ಲಿ ವೃತ್ತಿ ಬದುಕು ಕಟ್ಟಿಕೊಳ್ಳುವ ಕನಸು ಕಂಡಿದ್ದು ಅದನ್ನು ಸಾಕಾರ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.. ಇನ್ನು ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಬಗ್ಗೆ ಮಾತನಾಡಿರುವ ಅಕ್ಷರಾ ಉಮಾಶ್ರೀ ಅಮ್ಮನ ಜೊತೆ ಅಭಿನಯಿಸೋದು ನಿಜಕ್ಕೂ ಅದೃಷ್ಟ ಅನ್ನಬೇಕು.. ಅವರಿಂದ ಕಲಿಯೋದು ಸಾಕಷ್ಟಿದೆ.. ಧಾರಾವಾಹಿಯಲ್ಲಿ ತುಂಬಾ ಹಿರಿಯ ಕಲಾವಿದರುಗಳು ಇದ್ದಾರೆ ಅವರೆಲ್ಲರ ಜೊತೆ ಅಭಿನಯಿಸುವ ಅವಕಾಶ ಸಿಕ್ಕಿದ್ದು ನಿಜಕ್ಕೂ ಖುಷಿ ಇದೆ.. ಜನರು ತೋರುತ್ತಿರುವ ಪ್ರೀತಿಗೆ ಧನ್ಯವಾದಗಳು‌. ಮುಂದಿನ ದಿನಗಳಲ್ಲಿ‌ ಸಿನಿಮಾದಲ್ಲಿ‌ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು ಎಂದಿದ್ದಾರೆ..