ನನ್ನಮ್ಮ ಸೂಪರ್ ಸ್ಟಾರ್ ನ ಪುಟ್ಟ ಕಂದ ಸಾನ್ವಿ ಇನ್ನಿಲ್ಲ.. ಆದರೆ ನಿಜಕ್ಕೂ ನಡೆದದ್ದೇ ಬೇರೆ.. ಆ ಜಾಗದಲ್ಲಿ ಪ್ರತ್ಯಕ್ಷವಾಗಿ ಕಂಡವ ಹೇಳಿದ್ದೇನು ಗೊತ್ತಾ..

0 views

ಮಕ್ಕಳು.. ಮಕ್ಕಳೆಂದೊಡನೆ ತಾಯಂದಿರು ಭಾವುಕರಾಗಿ ಬಿಡ್ತಾರೆ.. ಮಕ್ಕಳೇ ಆ ತಾಯಂದಿರ ಜೀವಾಳವಾಗಿರುತ್ತಾರೆ.. ಹೊಟ್ಟೆಯಲ್ಲಿದ್ದ ಸಮಯದಿಂದ ಮಗುವಿಬ ಬಗ್ಗೆ ಸಾಕಷ್ಟು ಕನಸುಗಳನ್ನು ಕಂಡು ಆ ಮಗುವಿಗಾಗಿಯೇ ಜೀವಿಸುತ್ತಿರುತ್ತಾರೆ.. ಆದರೆ ಅಂತಹ ಮಕ್ಕಳನ್ನು ಚಿಕ್ಕ ಪುಟ್ಟ ವಯಸ್ಸಿನಲ್ಲಿ ಕಳೆದುಕೊಳ್ಳುವಾಗ ಆಗುವ ನೋವು ನಿಜಕ್ಕೂ ಅನುಭವಿಸಿದವರಿಗೆ ಮಾತ್ರವೇ ಗೊತ್ತು.. ಅದರಲ್ಲೂ ಪುಟ್ಟ ಮಗುವಿನ ಅಗಲಿಕೆ ನಿಜಕ್ಕೂ ಎಂತಹವರಿಗೂ ಸಂಕಟ ತರುತ್ತದೆ. ನಿನ್ನೆ ಬೆಂಗಳೂರಿನಲ್ಲಿಯೂ ಅಂತಹುದೇ ಘಟನೆ ನಡೆದಿದ್ದು, ಪ್ರತ್ಯಕ್ಷದರ್ಶಿ ಹೇಳಿದ ಮಾತು ಕೇಳಿದರೆ ಮನಕಲಕುವಂತಿದೆ.. ಮೊನ್ನೆಮೊನ್ನೆ ವರೆಗೂ ಟಿವಿ ಪರದೆ ಮೇಲೆ ಜನರನ್ನು ಮನರಂಜಿಸಲು ಒಟ್ಟಾಗಿ ವಿಧ ವಿಧವಾದ ಪ್ರಯತ್ನ ಮಾಡುತ್ತಾ ಬರುತ್ತಿದ್ದ ಅದೇ ಅಮ್ಮ ಮಗಳು ಇದೀಗ ದೂರಾದರು ಎಂದರೆ ನಿಜಕ್ಕೂ ನಂಬಲಸಾಧ್ಯ.. ಮಗಳು ನಮ್ಮನ್ನೆಲ್ಲಾ ಬಿಟ್ಟು ಅಗಲಿದರೆ ಅತ್ತ ತಾಯಿಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ..

ಹೌದು ಕನ್ನಡ ಕಿರುತೆರೆಯ ಖ್ಯಾತ ಶೋ ನನ್ನಮ್ಮ ಸೂಪರ್ ಸ್ಟಾರ್ ಶೋ ನ ಅಮ್ಮ ಮಗಳು ನಟಿ ಅಮೃತಾ ನಾಯ್ಡು ಹಾಗೂ ಮಗಳು ಸಮನ್ವಿ ಜನರ ಮನಗೆದ್ದಿದ್ದರು.. ಕಳೆದ ವಾರವಷ್ಟೇ ಅಮೃತಾ ಹಾಗೂ ಸಮನ್ವಿ ಶೋನಿಂದ ಎಲಿಮಿನೇಟ್ ಆಗಿದ್ದರು.. ಆದರೆ ಇದೀಗ ನಿನ್ನೆ ಆ ಪುಟ್ಟ ಕಂದ ಸಮನ್ವಿ ನಮ್ಮನ್ನೆಲ್ಲಾ ಬಿಟ್ಟು ಕೊನೆಯುಸಿರನ್ನೇ ಎಳೆದು ಬಿಟ್ಟಳು.. ನಿನ್ನೆ ಸಂಜೆಯ ವೇಳೆಯಲ್ಲಿ ಈ ಘಟನೆ ನಡೆದಿದ್ದು ಈ ಬಗ್ಗೆ ಸಾಕಷ್ಟು ಸುದ್ದಿಗಳು ಹಬ್ಬಿದವು.. ಆದರೆ ಘಟನೆ ನಡೆದ ಜಾಗದಲ್ಲಿಯೇ ಇದ್ದ ಪ್ರತ್ಯಕ್ಷ ದರ್ಶಿಗಳು ಘಟನೆ ಕುರಿತು ಸತ್ಯ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ‌‌..

ಹೌದು ಅಮೃತಾ ನಾಯ್ಡು ಸಾಕಷ್ಟು ಧಾರಾವಾಹಿಗಳಲ್ಲಿ ಅಭಿನಯಿಸಿದ ಕಲಾವಿದೆ.. ಇತ್ತ ಅವರು ಹರಿಕಥಾ ವಿದ್ವಾನ್ ಗುರುರಾಜುಲು ನಾಯ್ಡು ಅವರ ಮಗಳು ಅಮೃತಾ ನಾಯ್ಡು ಕಿರುತೆರೆಯಲ್ಲಿ ಗುರುತಿಸಿಕೊಂಡ ನಟಿ.. ಆದರೆ ಈಕೆಯ ಬಾಳಲ್ಲಿ ವಿಧಿ ಈ ರೀತಿ ಪದೇ ಪದೇ ಆಟವಾಡುತ್ತದೆ ಎಂದರೆ ನಿಜಕ್ಕೂ ಸಂಕಟವಾಗುತ್ತದೆ.. ಹೌದು ಅಮೃತಾ ನಾಯ್ಡು ಧಾರಾವಾಹಿಯ ಜೊತೆಗೆ ನನ್ನಮ್ಮ ಸೂಪರ್ ಸ್ಟಾರ್ ಶೋನಲ್ಲಿ ಮಗಳ ಜೊತೆ ಭಾಗವಹಿಸಿದ್ದರು.. ಸಾಕಷ್ಟು ವಾರಗಳು ಜನರ ಮನರಂಜಿಸಿದ ಬಳಿಕ ಕಳೆದ ವಾರವಷ್ಟೇ ಶೋನಿಂದ ಹೊರ ನಡೆದಿದ್ದರು.. ಹೌದು ಅಮೃತಾ ನನ್ನಮ್ಮ ಸೂಪರ್ ಸ್ಟಾರ್ ಶೋನ ಶುರುವಿನಲ್ಲಿಯೇ ಹೇಳಿಕೊಂಡಂತೆ ಅಮೃತಾ ಸಮನ್ವಿಗಿಂತಲೂ ಮೊದಲು ಒಂದು ಮಗುವಿಗೆ ಜನ್ಮ ನೀಡಿದ್ದು ಅದನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಪಟ್ಟರೂ ಸಹ ಮಗು ಉಳಿದಿರಲಿಲ್ಲ..

ಆದರೆ ಈಗ ಸಮನ್ವಿ ಬಂದ ಮೇಲೆ ನನ್ನ ಜೀವನ ಬದಲಾಗಿದೆ.. ಹೊಸ ಜೀವನ ಕಟ್ಟಿಕೊಂಡಿದ್ದೇನೆ.. ಮಗಳೇ ನಮಗೆ ಸರ್ವಸ್ವ ಎಂದಿದ್ದರು.. ಆದರೆ ವಿಧಿಯ ಆಟ ಇದೀಗ ಈ ಮಗುವನ್ನೂ ಸಹ ಕಳೆದುಕೊಳ್ಳುವಂತಾಗಿ ಹೋಯ್ತು..ಹೌದು ಅಮೃತಾ ನಾಯ್ಡು ಈಗ ಮತ್ತೊಂದು ಮಗುವಿಗೆ ನಾಲ್ಕು ತಿಂಗಳ ಗರ್ಭಿಣಿ.. ಇದೇ ಕಾರಣಕ್ಕೆ ಕಳೆದ ವಾರವಷ್ಟೇ ಅಮೃತಾ ನಾಯ್ಡು ಅವರು ಶೋನಿಂದ ಹೊರ ಬಂದಿದ್ದರು.. ಆದರೆ ಕೆಲವೇ ದಿನಗಳಲ್ಲಿ ಇಂತಹ ಘಟನೆ ನಡೆದು ಹೋಯಿತು.. ಅಷ್ಟಕ್ಕೂ ನಿನ್ನೆ ಆ ಜಾಗದಲ್ಲಿ ನಡೆದದ್ದೇನು..ಪ್ರತ್ಯಕ್ಷ ದರ್ಶಿ ಹೇಳಿದ ಮಾತು ನೋಡಿ.. ಅಮೃತಾ ನಾಯ್ಡು ಅವರು ಕನಕಪುರ ರಸ್ತೆಯಲ್ಲಿನ ಅಪಾರ್ಟ್ಮೆಂಟ್ ಒಂದರಲ್ಲಿ ವಾಸವಾಗಿದ್ದಾರೆ..

ನಿನ್ನೆ ಸಂಜೆ ನಾಲ್ಕು ಮೂವತ್ತರ ಸಮಯದಲ್ಲಿ ಅಮೃತಾ ನಾಯ್ಡು ಸಮನ್ವಿಯ ಜೊತೆ ದ್ವಿಚಕ್ರ ವಾಹನದಲ್ಲಿ ಮನೆಯಿಂದ ಹೊರಟಿದ್ದಾರೆ.. ಅಮೃತಾ ನಾಯ್ಡು ಗಾಯತ್ರಿ ನಗರಕ್ಕೆ ಹೊರಟಿದ್ದರು.. ವಾಜರಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಸ್ಕೂಟಿಯನ್ನು ಪಾರ್ಕ್ ಮಾಡಬೇಕಾಗಿತ್ತು.. ಮೆಟ್ರೋ ನಿಲ್ದಾಣಕ್ಕೆ ಇನ್ನು ಕೇವಲ ನೂರು ಮೀಟರ್ ಅಷ್ಟೇ ದೂರವಿತ್ತು.. ಆದರೆ ಅಷ್ಟರಲ್ಲಿ ಈ ಘಟನೆ ನಡೆದಿದೆ.. ಹೌದು ಸ್ಕೂಟಿಯಲ್ಲಿ ಹೋಗುತ್ತಿದ್ದ ಅಮೃತಾ ಹಾಗೂ ಸಮನ್ವಿ ಒಂದು ಕಡೆ ಟಿಪ್ಪರ್ ಲಾರಿ.. ಮತ್ತೊಂದು ಕಡೆ ಟಾಟ ಸುಮೋ ನಡುವೆ ಸಿಲುಕಿ ಬಿಟ್ಟರು.. ಈ ಸಮಯದಲ್ಲಿ ಹಂಪ್ ಕೂಡ ಇದ್ದ ಕಾರಣ ಆಯ ತಪ್ಪಿ ಅಮೃತಾ ಕೆಳಗೆ ಬಿದ್ದರು.. ಟಾಟಾ ಸುಮೋ ಮುಂದೆ ತೆರಳಿತು.. ಅದರ ಹಿಂದೆ ಅಮೃತಾ ತಮ್ಮ ಎಡಭಾಗಕ್ಕೆ ಬಿದ್ದರು.. ಆದರೆ ದುರ್ಧೈವ ಸಮನ್ವಿ ಮಾತ್ರ ಟಿಪೊಅರ್ ಲಾರಿ ಸಾಗುತ್ತಿದ್ದ ಬಲಭಾಗಕ್ಕೆ ಬಿದ್ದು ಬಿಟ್ಟಳು.. ಟಿಪ್ಪರ್ ಲಾರಿಯ ನಡಿವೆಯೇ ಸಮನ್ವಿ ಬಿದ್ದ ಕಾರಣ ಆಕೆಯ ಮೇಲೆಯೇ ಟಿಪ್ಪರ್ ಸಾಗಿ ಬಿಟ್ಟಿತು..

ನೆನೆದರೆ ಹೊಟ್ಟೆಯಲ್ಲಿ ಸಂಕಟ ತರುವಂತಾಗಿದೆ.. ತಕ್ಷಣ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದರೂ ಸಹ ಅದಾಗಲೇ ಸ್ಥಳದಲ್ಲಿಯೇ ಸಮನ್ವಿ ಎಲ್ಲರನ್ನೂ ಬಿಟ್ಟು ಹೊರಟು ಹೋಗಿಯಾಗಿತ್ತು.. ಪುಟ್ಟ ಕಂದನ ಮೇಲೆ ಟಿಪ್ಪರ್ ಸಾಗಿತೆಂದರೆ ಆ ಕಂದ ಆ ಕೊನೆ ಕ್ಷಣದಲ್ಲಿ ಅದೆಷ್ಟು ನೋವು ಅನುಭವಿಸಿದಳೋ ದೇವರು ನಿಜಕ್ಕೂ ಇರುವನಾ ಎನಿಸಿಬಿಡುತ್ತದೆ.. ಇತ್ತ ಅಮೃತಾ ನಾಯ್ಡು ಅವರು ದೇವರ ದಯೆಯಿಂದ ಪಾರಾಗಿದ್ದು ಅವರೀಗ ನಾಲ್ಕು ತಿಂಗಳ ಗರ್ಭಿಣಿಯೂ ಆಗಿದ್ದಾರೆ.. ಸಮನ್ವಿ ಮತ್ತೆ ಹುಟ್ಟಿಬರಲಿ ಎಂದು ನೆಟ್ಟಿಗರು ಪ್ರಾರ್ಥಿಸಿದ್ದಾರೆ.. ಕಂದನ ಅಗಲಿಕೆಗೆ ಸೃಜನ್ ಲೋಕೇಶ್ ತಾರಮ್ಮ ಹಾಗೂ ನನ್ನಮ್ಮ ಸೂಪರ್ ಸ್ಟಾರ್ ನ ಎಲ್ಲರೂ ಸಹ ಕಂಬನಿ ಮಿಡಿದಿದ್ದು ಕಣ್ಣೀರಿಟ್ಟಿದ್ದಾರೆ.. ಇದು ನಿಜಕ್ಕೂ ಆಗಬಾರದಿತ್ತು ಎಂದು ಸಂಕಟದಿಂದಲೇ ಮಾತನಾಡಿದ್ದಾರೆ..