ನನ್ನಮ್ಮ ಸೂಪರ್ ಸ್ಟಾರ್ ನ ಸಮನ್ವಿ ಇಲ್ಲವಾಗಿ ತಿಂಗಳು ಕಳೆಯುವ ಮುನ್ನವೇ ಏನಾಗಿ ಹೋಯ್ತು ನೋಡಿ..

0 views

ಕೆಲವೊಮ್ಮೆ ಜೀವನದಲ್ಲಿ ನಡೆಯುವ ಘಟನೆಗಳು ಕೆಲವರ ಬದುಕನ್ನೇ ಬದಲಿಸಿ ಬಿಡುತ್ತದೆ.. ಅದೇ ರೀತಿ ಕಳೆದ ಎರಡು ವರ್ಷದ ಹಿಂದೆಯೂ ಪುಟ್ಟ ಕಂದಮ್ಮನ ಬಾಳಲ್ಲಿ ಇಂತಹದೊಂದು ಘಟನೆ ನಡೆದಿತ್ತು.. ಅಪ್ಪನ ಗಾಡಿಯಲ್ಲಿ ಕೂತಿರುವಾಗ ರಸ್ತೆಯಲ್ಲಿನ ಒಣಗಿದ ಮರದ ಕೊಂಬೆ ಬಿದ್ದು ಪುಟ್ಟ ಮಗುವೊಂದು ಗಂಭೀರವಾಗಿ ಗಾಯಗೊಂಡಿತ್ತು.. ಆ ದಿನದಿಂದ ಇಂದಿನವರೆಗೂ ಆ ಮಗುವಿಗಾಗಿ ಹೆತ್ತವರು ಸ್ನೇಹಿತರು ಸಂಬಂಧಿಕರು ಎಲ್ಲರೂ ಸಹ ಪ್ರಾರ್ಥಿಸಿದ್ದರು.. ಆದರೆ ಇಂದು ನಡೆದ ಘಟನೆ ನಿಜಕ್ಕೂ ಮನಕಲಕುತ್ತಿದೆ..

ಹೌದು ಕೆಲ ದಿನಗಳ ಹಿಂದಷ್ಟೇ ನನ್ನಮ್ಮ ಸೂಪರ್ ಸ್ಟಾರ್ ಶೋನ ಪುಟ್ಟ ಮಗು ಸಮನ್ವಿ ರಸ್ತೆಯಲ್ಲಿ ಟಿಪ್ಪರ್ ಟಚ್ ಆದ ಕಾರಣ ಸ್ಕೂಟರ್ ನಿಂದ ಬಿದ್ದು ಕೊನೆಯುಸಿರೆಳೆದ ಘಟನೆ ಇನ್ನೂ ಸಹ ಮನಸ್ಸಿನಲ್ಲಿ ಒಂದು ರೀತಿ ಸಂಕಟವನ್ನು ತರುತ್ತದೆ. ರಸ್ತೆಯಲ್ಲಿ ಯಾರದ್ದೋ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಎನ್ನುವಂತಾಗಿತ್ತು ಆ ಘಟನೆ.. ಮುಂದಿನ ಭವಿಷ್ಯದ ನೂರಾರು ಕನಸು ಕಂಡಿದ್ದ ಸಮನ್ವಿ ಆ ದಿನ ಹಬ್ಬ ಆಚರಿಸಲು ಹೋಗುತ್ತಾ ಈ ಲೋಕವನ್ನೇ ಬಿಟ್ಟು ಹೋಗುವಂತಾಗಿ ಹೋಯ್ತು..

ಅದೇ ರೀತಿ ಕಳೆದ ಎರಡು ವರ್ಷದ ಹಿಂದೆ ಸಮನ್ವಿ ರೀತಿಯೇ ರಸ್ತೆಯಲ್ಲಿ ಯಾರದ್ದೋ ತಪ್ಪಿಗೆ ನಡೆದ ಘಟನೆ ದೊಡ್ಡ ಸುದ್ದಿಯಾಗಿತ್ತು.. ರಸ್ತೆಗಳಲ್ಲಿ ಒಣಗಿದ ಮರಗಳನ್ನು ಆಗಾಗೆ ತೆರವುಗೊಳಿಸಬೇಕಾದದ್ದು ಬಿಬಿಎಂಪಿ ಅವರ ಕರ್ತವ್ಯವಾಗಿದೆ.. ಆದರೆ ಅವರ ಕರ್ತವ್ಯ ಪಾಲನೆಯಾಗದೆ ಬೆಂಗಳೂರಿನಲ್ಲಿ ಎಂಟು ವರ್ಷದ ಮಗುವೊಂದು ತನ್ನ ತಂದೆಯ ಸ್ಕೂಟರ್ ನಲ್ಲಿ ತೆರಳುವಾಗ ಹತ್ತು ಅಡಿಯ ಮರದ ಕೊಂಬೆಯೊಂದು ಬಿದ್ದು ಗಂಭೀರವಾಗಿ ಗಾಯವಾಗಿತ್ತು.. ಅಷ್ಟೇ ಅಲ್ಲದೇ ಸತತ ಎರಡು ವರ್ಷಗಳ ಕಾಲ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ಸಹ ಪಡೆಯಿತಿತ್ತು..

ಹೌದು ಈ ಮುದ್ದು ಕಂದನ ಹೆಸರು ರೆಚೆಲ್ ಪ್ರಿಷಾ‌.. ಬೆಂಗಳೂರಿನ ಅಕ್ಷಯನಗರದ ನಿವಾಸಿ.. ಕಳೆದ ಎರಡು ವರ್ಷದ ಹಿಂದೆ ಮಾರ್ಚ್ ಹನ್ನೆರೆಡನೇ ತಾರೀಕಿನಂದು ಬೆಳಿಗ್ಗೆ ಎಂಟು ಗಂಟೆ ಸುಮಾರಿಗೆ ರಿಚೆಲ್ ತನ್ನ ತಂದೆಯ ಜೊತೆ ಶಾಲೆಗೆ ತೆರಳುತ್ತಿದ್ದಳು.. ರಾಮಮೂರ್ತಿ ನಗರದ ಕೌದಳ್ಳಿಯ ಬಳಿ ಬರುತ್ತಿದ್ದಂತೆ ಮರದ ಒಣಗಿದ ಕೊಂಬೆಯೊಂದು ರಿಚೆಲ್ ಮೇಲೆ ಬಿದ್ದು ಮಗು ಗಂಭೀರವಾಗಿ ಗಾಯಗೊಂಡಿತ್ತು..

ಆ ದಿನ ಈ ಘಟನೆ ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗಿತ್ತು.. ಆಕೆಯನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತಿತ್ತು‌. ವಿಚಾರ ತಿಳಿದ ಕಿಚ್ಚ ಸುದೀಪ್ ಅವರು ನಿಖಿಲ್ ಕುಮಾರಸ್ವಾಮಿ ಅವರು ಕುಮಾರಸ್ವಾಮಿ ಅವರನ್ನು ಸೇರಿದಂತೆ ಅನೇಕರು ರಿಚೆಲ್ ನ ಆರೋಗ್ಯ ವಿಚಾರಿಸಿ ಬೇಗ ಗುಣಮುಖವಾಗುವಂತೆ ಹಾರೈಸಿದ್ದರು.. ಆಕೆಯ ತಲೆಗೆ ವಿಪಿ ಸ್ಟಂಟ್ ಅಳವಡಿಸಲಾಗಿತ್ತು.. ಸ್ವಲ್ಪ ಚೇತರಿಕೆಯೂ ಕಂಡಿದ್ದಳು.. ಆದರೆ ಯಾವುದೇ ರೀತಿಯ ರೆಸ್ಪಾನ್ಸ್ ಮಾಡುತ್ತಿರಲಿಲ್ಲ..

ಅತ್ತ ಸಾಕಷ್ಟು ಜನ ಆ ಕಂದಮ್ಮನಿಗಾಗಿ ಪ್ರಾರ್ಥಿಸಿದ್ದರೆ.. ರಿಚೆಲಾರ ತಂದೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ತನ್ನ ಮಗಳು ಖಂಡಿತ ಉಳಿಯುತ್ತಾಳೆ ಎಂದುಕೊಂಡಿದ್ದರು‌‌.. ಆದರೆ ಇಂದು ಎರಡು ವರ್ಷ ಚಿಕಿತ್ಸೆ ಪಡೆದರೂ ಸಹ ಪ್ರಯೋಜನವಾಗಲಿಲ್ಲ.. ಆ ಮುದ್ದು ಕಂದಮ್ಮ ಕೊನೆಯುಸಿರೆಳೆದುಬಿಟ್ಟಳು.. ಇತ್ತ ಇದ್ದ ಒಬ್ಬಳೇ ಮಗಳನ್ನು ಕಳೆದು ಕೊಂಡ ಆಕೆಯ ತಂದೆ ತಾಯಿಯ ಆಕ್ರಂದನ ಮುಗಿಲು ಮುಟ್ಟುವಂತಿತ್ತು.. ಯಾರದ್ದೋ ನಿರ್ಲಕ್ಷ್ಯಕ್ಕೆ ಹತ್ತೇ ವರ್ಷಕ್ಕೆ ಬದುಕಿನ ಪಯಣ ಮುಗಿಸಿ ಬಿಟ್ಟಳು ರಿಚೆಲಾ.. ರಿಚೆಲಾಳ ಅಗಲಿಕೆಗೆ ಸಂತಾಪ ಸೂಚಿಸಿರುವ ನೆಟ್ಟಿಗರು ಕಂಬನಿ ಮಿಡಿದಿದ್ದಾರೆ.. ಇನ್ನಾದರೂ ಈ ರೀತಿ ಯಾರದ್ದೋ ನಿರ್ಲಕ್ಷ್ಯಕ್ಕೆ ಬದುಕಿ ಬಾಳಬೇಕಾದ ಪುಟ್ಟ ಮಕ್ಕಳು ತಮ್ಮ ಜೀವ ಕಳೆದುಕೊಳ್ಳದಿರಲಿ..