ಮಿಥುನ ರಾಶಿ ಧಾರಾವಾಹಿಯ ಈ ನಟಿ ನಿಜಕ್ಕೂ ಯಾರು ಗೊತ್ತಾ?

0 views

ಮೊದ ಮೊದಲು ಕನ್ನಡ ಕಿರುತೆರೆಯಲ್ಲಿ ನಟಿಸಿ ನಂತರ ಹಲವಾರು ಕಲಾವಿದರು ಬೆಳ್ಳಿತೆರೆಗೆ ಎಂಟ್ರಿ ಕೊಟ್ಟು, ಅಲ್ಲಿಯೂ ಸಹ ಸಾಕಷ್ಟು ಹೆಸರು ಮಾಡುತ್ತಾರೆ. ಅಂತೆಯೇ ಇದೀಗ ಕನ್ನಡ ಕಿರುತೆರೆಯಿಂದ ತನ್ನ ವೃತ್ತಿ ಜೀವನ ಶುರು ಮಾಡಿ ಇದೀಗ ಬೆಳ್ಳಿತೆರೆಲ್ಲಿ ಮಿಂಚುತ್ತಿರುವ ನಟಿ ಸಂಪದಾ ಹುಲಿವಾನ. ಕನ್ನಡದ ಜೋತೆಗೆ ಇದೀಗ ಬೇರೆ ಬಾಷೆಗಳಲ್ಲಿ ಸಹ ನಟಿಸಿ ಅಲ್ಲಿಯೂ ಸಹ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ ನಟಿ ಸಂಪದಾ. ತನ್ನ ಅದ್ಭುತ ನಟನೆ ಹಾಗೂ ಸೌಂದರ್ಯದ ಮೂಲಕ ನಟಿ ಸಾಕಷ್ಟು ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ. ಒಂದಾದ ಮೇಲೆ ಒಂದು ಸಿನಿಮಾಗಳ ಅಫ್ಹರ್ ಇದೀಗ ನಟಿಯನ್ನು ಹುಡುಕಿಕೊಂಡು ಬರುತ್ತಿದೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿಗಳಲ್ಲಿ ಮಿಥುನ ರಾಶಿ ಧಾರವಾಹಿ ಕೂಡ ಒಂದು. ತಮ್ಮ ವಿಭಿನ್ನವಾದ ಕಥೆಯ ಮೂಲಕ ಮಿಥುನ ರಾಶಿ ಧಾರವಾಹಿ ಜನರನ್ನು ತನ್ನ ಕಡೆ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ದುಡ್ಡಿನ ಮನುಷ್ಯ ದೊಡ್ಡ ಬಿಸ್ನೆಸ್ ಮ್ಯಾನ್ ಮಿಥುನ್ ಹಾಗೂ ಸರಳ ಹಾಗೂ ಮಧ್ಯಮ ಕುಟುಂಬದ ಹುಡುಗಿ ರಾಶಿ, ಈ ಇಬ್ಬರ ನಡುವೆ ಭೂಮಿ ಆಕಾಶಕ್ಕೆ ಇರುವಷ್ಟು ಅಂತರ. ಇಷ್ಟೆಲ್ಲಾ ವ್ಯತ್ಯಾಸಗಳ ನಡುವೆ ಈ ಇಬ್ಬರೂ ಮದುವೆಯಾಗಿ ಹೇಗೆ ಜೀವನ ನಡೆಸುತ್ತಾರೆ ಎನ್ನುವುದು ಧಾರವಾಹಿಯ ಮುಖ್ಯ ಕಥೆಯಾಗಿತ್ತು. ಮಿಥುನ ರಾಶಿ ಧಾರವಾಹಿ ಪ್ರಸಾರವಾದ ಮೊದಲ ದಿನದಿಂದಲೂ ಜನರಿಂದ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿತ್ತು.

ಮಿಥುನ ರಾಶಿ ಧಾರವಾಹಿಯಲ್ಲಿ ಅಭಿನಯಿಸುವ ಮೂಲಕ ನಟಿ ಸಂಪದಾ ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು. ಈ ಧಾರಾವಾಹಿಯಲ್ಲಿ ನೆಗಟಿವ್ ಪಾತ್ರದಲ್ಲಿ ನಟಿ ಸಂಪದಾ ಕಾಣಿಸಿಕೊಂಡಿದ್ದರು. ಮಿಥುನ್ ಮತ್ತು ರಾಶಿ ಬದುಕಿನಲ್ಲಿ ಸಾಕಷ್ಟು ತೊಂದರೆಗಳನ್ನು ಸುರಕ್ಷಾಳ ಪಾತ್ರದಲ್ಲಿ ನಟಿ ಸಂಪದಾ ಅಭಿನಯಿಸಿದ್ದರು. ಈ ಪಾತ್ರದ ಮೂಲಕ ನಟಿ ಕನ್ನಡದ ಜನತೆಗೆ ಸಾಕಷ್ಟು ಹತ್ತಿರವಾದರು. ಸುಮಾರು 10 ತಿಂಗಳುಗಳ ಕಾಲ ನಟಿ ಮಿಥುನ ರಾಶಿ ಧಾರಾವಾಹಿಯಲ್ಲಿ ಅಭಿನಯಿಸಿ ಜನರನ್ನು ರಂಜಿಸಿದ್ದರು. ನಂತರ ನಟಿ ಸಂಪದಾ ಕಿರುತೆರೆಯಿಂದ ಏಕಾಏಕಿ ಬೆಳ್ಳಿತೆರೆಯಲ್ಲಿ ಮಿಂಚಲು ಶುರು ಮಾಡಿದರು.

ನಟ ನಿಖಿಲ್ ಕುಮಾರ್ ಸ್ವಾಮಿ ಅವರ ರೈಡರ್ ಸಿನಿಮಾದಲ್ಲಿ ನಟಿಸುವ ಅವಕಾಶ ನಟಿ ಪ್ರಣೀತಾ ಅವರಿಗೆ ಒದಗಿ ಬಂತು. ಹೌದು ರೈಡರ್ ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ನಟಿಸುವ ಅವಕಾಶ ನಟಿ ಸಂಪದಾ ಅವರಿಗೆ ದೊರೆಕಿತ್ತು. ತಮ್ಮ ಮೊದಲ ಸಿನಿಮಾದಲ್ಲೇ ಸ್ಟಾರ್ ನಟನ ಜೊತೆ ಲೀಡ್ ರೋಲ್ ನಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡರು ನಟಿ ಸಂಪದಾ. ಈ ಮೂಲಕ ನಟಿ ದೊಡ್ಡ ಪರದೆಯ ಮೇಲೆ ತಮ್ಮ ಜಾದು ತೋರಿಸಲು ಮುಂದಾದರು. ರೈಡರ್ ಸಿನಿಮಾದ ಯಶಸ್ಸಿನ ನಂತರ ನಟಿ ಸಂಪದಾ ಅವರಿಗೆ ಸಾಲು ಸಾಲು ಸಿನಿಮಾಗಳ ಅಫ್ಹರ್ ಹುಡುಕಿಕೊಂಡು ಬರಲು ಶುರುವಾಯಿತು. ಕನ್ನಡದ ಜೊತೆಗೆ ನಟಿ ತೆಲುಗು ಸಿನಿಮಾರಂಗದಲ್ಲಿ ಸಹ ಅಭಿನಯಿಸುತ್ತಿದ್ದಾರೆ.

ಹೌದು ನಟಿ ಸಂಪದಾ ತೆಲುಗು ಸಿನಿಮಾಗಳಲ್ಲಿ ಸಹ ನಟಿಸಲು ಶುರು ಮಾಡಿದ್ದಾರೆ. ತೆಲುಗಿನ ನಟ ನಿತಿನ್ ಅಭಿನಯದ ಶ್ರೀ ಶ್ರೀ ಶ್ರೀ ರಾಜ ವಾರು ಸಿನಿಮಾದಲ್ಲಿ ನಟಿ ಸಂಪದಾ ಅಭಿನಯಿಸುತ್ತಿದ್ದಾರೆ. ಜೊತೆಗೆ ರಾಜ್ ತರುಣ್ ಅಭಿನಯದ ಮಾಸ್ ಮಹಾರಾಜು ಸಿನಿಮಾದಲ್ಲಿ ಸಹ ನಟಿ ಸಂಪದಾ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ನಟಿ ಸಂಪದಾ ತೆಲುಗಿನ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದ ನಟಿ ಬೇರೆ ಬಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಳ್ಳುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟಿವ್ ಇರುವ ನಟಿ ಸಂಪದಾ ಆಗಾಗ ತಮ್ಮ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಸಂಪರ್ಕದಲ್ಲಿರಲು ಬಯಸುತ್ತಾರೆ.