ಸ್ಯಾಂಡಲ್ವುಡ್ ನಲ್ಲಿ ಕಳೆದ ಎರಡು ತಿಂಗಳ ಹಿಂದೆ ನಡೆದ ಬೆಳವಣಿಗೆಗೆ ಸಂಬಂಧಪಟ್ಟಂತೆ ಸದ್ಯ ನಟಿ ರಾಗಿಣಿ ದ್ವಿವೇದಿ ಹಾಗೂ ನಟಿ ಸಂಜನಾ ಪರಪ್ಪನ ಅಗ್ರಹಾರದಲ್ಲಿ ಎರಡು ತಿಂಗಳಿಂದ ಕಾಲ ಕಳೆಯುತ್ತಿದ್ದಾರೆ.. ಇತ್ತೀಚಿನ ದಿನಗಳಲ್ಲಿ ವಿಧಾನಸಭಾ ಉಪಚುನಾವಣೆ ಹಾಗೂ ಇನ್ನಿತರ ವಿಚಾರಗಳ ನಡುವೆ ಆ ವಿಚಾರದ ಸದ್ದು ಕಡಿಮೆಯಾಯಿತು.. ಆದರೆ ಆ ಇಬ್ಬರು ನಟಿಯರು ಮಾತ್ರ ಜಾಮೀನಿಗಾಗಿ ಎಷ್ಟೇ ಅರ್ಜಿ ಸಲ್ಲಿಸಿದರು ಸಹ ಹೊರ ಬರಲೇ ಇಲ್ಲ.. ಅತ್ತ ಜಾಮೀನಿಗಾಗಿ ರಾಗಿಣಿ ಅವರ ತಂದೆ ತಾಯಿ ಪ್ರತಿದಿನ ಕೋರ್ಟು ಕಚೇರಿ ಅಂತ ಅಲೆಯುತ್ತಲೇ ಇದ್ದಾರೆ.. ಇದೀಗ ರಾಗಿಣಿ ಅವರ ವಿಚಾರದಲ್ಲೀಗ ಬಹುದೊಡ್ಡ ಬೆಳವಣಿಗೆಯೊಂದು ಆಗಿದೆ..
ಹೌದು ಶುರುವಿನಿಂದಲೂ ರಾಗಿಣಿ ಅವರ ತಂದೆ ತಾಯಿ ಮಗಳ ಪರ ನಿಂತಿದ್ದು ಮಗಳಿಗೆ ಹೇಗಾದರು ಮಾಡಿ ಜಾಮೀನು ಕೊಡಿಸಬೇಕು ಎಂದು ಪ್ರಯತ್ನ ಪಡುತ್ತಲೇ ಇದ್ದಾರೆ.. ಅತ್ತ ಜಾಮೀನಿನ ಖರ್ಚಿಗಾಗಿ ಮನೆಯನ್ನೇ ಮಾರಲು ಮುಂದಾಗಿದ್ದರು.. ಆದರೆ ಎರಡು ತಿಂಗಳಾದರು ಮನೆಯನ್ನು ಕೊಂಡುಕೊಳ್ಳಲು ಯಾರೂ ಸಹ ಮುಂದೆ ಬಾರದ ಕಾರಣ ಇದೀಗ ತಮ್ಮ ಕಾರುಗಳನ್ನು ಮಾರಲು ಮುಂದಾಗಿದ್ದಾರೆ.. ಅಷ್ಟೇ ಅಲ್ಲದೇ ಶುರುವಿನಲ್ಲಿ ಇದ್ದ ವಕೀಲರನ್ನು ಸಹ ಬದಲಾಯಿಸಿ ಗುಜರಾತ್ ಮೂಲದ ವಕೀಲರೊಬ್ಬರನ್ನು ನೇಮಕ ಮಾಡಿಕೊಂಡಿದ್ದಾರೆ..
ಆದರೆ ಸದ್ಯ ಸೆಷನ್ಸ್ ಕೋರ್ಟ್ ನಲ್ಲಿ ಜಾಮೀನು ಸಿಗದ ಕಾರಣಕ್ಕೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.. ಇದೀಗ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿ ಸಹ ವಜಾ ಆಗಿದೆ.. ಹೌದು ರಾಗಿಣಿಗೆ ಹೈಕೋರ್ಟ್ ನಲ್ಲಿಯೂ ಜಾಮೀನು ಸಿಗದ ಕಾರಣ ಇದೀಗ ಅವರ ತಂದೆ ಬೇರೆಯದ್ದೇ ನಿರ್ಧಾರ ಮಾಡಿದ್ದಾರೆ.. ಹೌದು ಸಾಮಾನ್ಯವಾಗಿ ಹೈಕೋರ್ಟ್ ನಲ್ಲಿ ಅರ್ಜಿ ವಜಾ ಆದರೆ ಮತ್ತೊಮ್ಮೆ ಮೇಲ್ಮನವಿ ಸಲ್ಲಿಸ ಬಹುದಾಗಿದೆ.. ಆದರೆ ರಾಗಿಣಿ ಅವರ ತಂದೆ ನೇರವಾಗಿ ಸುಪ್ರಿಂ ಕೋರ್ಟ್ ಗೆ ಮಗಳ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ.. ಹೌದು ಗುಜರಾತ್ ಮೂಲದ ವಕೀಲರಿಂದ ಸುಪ್ರಿಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ..
ಇತ್ತ ನಟಿ ಸಂಜನಾ ಅವರಿಗೂ ಹೈಕೋರ್ಟ್ ನಲ್ಲಿ ಜಾಮೀನು ಸಿಗಲಿಲ್ಲ.. ಅವರ ಅರ್ಜಿಯೂ ವಜಾ ಆಗಿದೆ.. ಆದರೆ ಸಂಜನಾ ಪರ ವಕೀಲರು ಮತ್ತೊಮ್ಮೆ ಹೈಕೋರ್ಟ್ ನಲ್ಲಿಯೇ ಮೇಲ್ಮನವಿ ಸಲ್ಲಿಸಿದ್ದು ವಿಚಾರಣೆ ನಡೆಯಲಿದೆ.. ಅತ್ತ ಸುಪ್ರಿಂ ಕೋರ್ಟ್ ನಲ್ಲಿ ರಾಗಿಣಿಯ ಜಾಮೀನಿನ ಅರ್ಜಿ ವಿಚಾರಣೆಯನ್ನು ಡಿಸೆಂಬರ್ 5 ಕ್ಕೆ ಮುಂದೂಡಲಾಗಿದ್ದು ಅಂದು ರಾಗಿಣಿ ಹೊರ ಬರುವ ವಿಚಾರ ನಿರ್ಧಾರವಾಗಲಿದೆ.. ಅಕಸ್ಮಾತ್ ಅಲ್ಲಿಯೂ ಜಾಮೀನು ಅರ್ಜಿ ವಜವಾದರೆ ರಾಗಿಣಿ ಹೊರ ಬರುವುದು ಸದ್ಯ ಕನಸಿನ ಮಾತಾಗಲಿದೆ..
ಇನ್ನುಳಿದಂತೆ ಆ ಸಮಯದಲ್ಲಿ ಕೆಲ ಕಲಾವಿದರನ್ನು ವಿಚಾರಣೆ ನಡೆಸಿ ಮರಳಿ ಕಳುಹಿಸಿದ್ದು.. ಮತ್ತೆ ಇದೀಗ ಯಾವ ಕಲಾವಿದರ ಹೆಸರೂ ಸಹ ಆ ವಿಚಾರದಲ್ಲಿ ಕೇಳಿ ಬಂದಿಲ್ಲದೇ ಇರುವುದು ಆ ವಿಚಾರ ತೆರೆ ಮರೆಗೆ ಸರಿಯಿತಾ ಎಂಬ ಮಾತು ಜನಸಾಮಾನ್ಯರಲ್ಲಿ ಕೇಳಿ ಬರುತ್ತಿದೆ..