ಎದೆ ತುಂಬಿ ಹಾಡುವೆನು ಶೋನಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದ ಸಂದೇಶ್ ಗೆ ಕೊನೆಗೆ ಸಿಕ್ಕ ಹಣವೆಷ್ಟು ಗೊತ್ತಾ..

0 views

ಕಿರುತೆರೆಯ ರಿಯಾಲಿಟಿ ಶೋಗಳು ಅದರಲ್ಲೂ ವಾರಾಂತ್ಯದಲ್ಲಿ ವಾಹಿನಿಗಳು ನಡೆಸಿಕೊಡುವ ಹಾಡು ಡ್ಯಾನ್ಸು ಆಟಗಳು ಹೀಗೆ ಸಾಕಷ್ಟು ರೀತಿಯ ರಿಯಾಲಿಟಿ ಶೋಗಳು ಇತ್ತೀಚಿನ ದಿನಗಳಲ್ಲಿ ವಾಹಿನಿಗಳಿಗೆ ಒಂದು ರೀತಿಯ ಟಿ ಆರ್ ಪಿ ಯ ಸರಕೆನ್ನಬಹುದು.. ಹೌದು ರಾಜ್ಯದ ನಾನಾ ಮೂಲೆಗಳಿಂದ ಬರುವ ಸ್ಪರ್ಧಿಗಳ ಜೀವನದ ಕತೆ ಅವರು ಪಟ್ಟ ಕಷ್ಟಗಳು ಅವರ ಪ್ರತಿಭೆ ಎಲ್ಲವೂ ಮಿಶ್ರಿತವಾಗಿ ವೇದಿಕೆ ಮೇಲೆ ಪ್ರಸಾರಗೊಂಡಾಗ ಪ್ರೇಕ್ಷಕ ಮಹಾಪ್ರಭು ಕೆಲವೊಬ್ಬರನ್ನು ಒಪ್ಪಿಕೊಂಡರೆ ಮತ್ತೆ ಕೆಲವರನ್ನು ಇಷ್ಟ ಪಡದೇ ಸಹ ಇರಬಹುದು ಇರುವ ಸ್ಪರ್ಧಿಗಳಲ್ಲಿ ಒಬ್ಬರು ಇಷ್ಟವಾದರೂ ಸಹ ಶೋ ವನ್ನು ತಪ್ಪದೇ ನೋಡುವುದು ಖಚಿತ ಇದರಿಂದ ಕಾರ್ಯಕ್ರದ ರೇಟಿಂಗ್ ಕೂಡ ಹೆಚ್ಚಾಗುವುದು..

ಇನ್ನು ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಶೋಗಳಲ್ಲಿಯೂ ಎಲ್ಲಾ ವಾಹಿನಿಗಳಲ್ಲಿಯೂ ಒಬ್ಬೊಬ್ಬ ಸ್ಪರ್ಧಿಯನ್ನು ಅದರಲ್ಲೂ ಕಷ್ಟದ ಹಿನ್ನೆಲೆಯುಳ್ಳ ಸ್ಪರ್ಧಿಗಳನ್ನು ಹೈಲೈಟ್ ಮಾಡೊದು ಖಚಿತ.. ಇನ್ನು ಇತ್ತ ತಮ್ಮ ಪ್ರತಿಭೆ ತೋರುವ ಅವಕಾಶ ಸಿಕ್ಕಾಗ ಅವರುಗಳು ಹೇಳಿದಂತೆ ಕೇಳೋದು ಸಹ ಅನಿವಾರ್ಯವೆನ್ನಬಹುದು. ಇನ್ನು ಇತ್ತ ಕೆಲ ವರ್ಷಗಳಿಂದ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಗಳನ್ನು ಬಳಸಿಕೊಂಡಂತೆ ಅವರಿಗೆ ದೊಡ್ಡ ಮೊತ್ತದ ಸಂಭಾವನೆ ಹಾಗೂ ದೊಡ್ಡ ಮೊತ್ತದ ಬಹುಮಾನವನ್ನು ನೀಡಲಾಗುತ್ತಿರುವುದು ಒಳ್ಳೆಯ ವಿಚಾರ.. ಹೌದು ಕೋಟ್ಯಾಧಿಪತಿಯಲ್ಲಿ ಕೋಟಿಯವರೆಗೂ ಬಹುಮಾನ ಗೆಲ್ಲಬಹುದಾದರೆ ಇತ್ತ ಬಿಗ್ ಬಾಸ್ ನಲ್ಲಿ ಅರ್ಧ ಕೋಟಿಯಷ್ಟು ಹಣ ಗೆಲ್ಲಬಹುದು.. ಇನ್ನುಳಿದಂತೆ ಹಾಡು ಡ್ಯಾನ್ಸಿನ ಶೋಗಳಲ್ಲಿ ಸಂಭಾವನೆಯ ಜೊತೆಗೆ ಹತ್ತರಿಂದ ಇಪ್ಪತ್ತು ಲಕ್ಷದ ವರೆಗೂ ಬಹುಮಾನ ನೀಡುವುದು ನಿಜಕ್ಕೂ ಬಡ ಪ್ರತಿಭಾವಂತ ಸ್ಪರ್ಧಿಗಳಿಗೆ ಒಂದು ರೀತಿ ಈ ಬಹುಮಾನದ ಹಣ ಮುಂದಿನ ಜೀವನ ಕಟ್ಟಿಕೊಳ್ಳಲು ನೆರವಾಗುವುದು ಸತ್ಯ..

ಇನ್ನು ಕಳೆದ ಮೂರು ತಿಂಗಳ ಹಿಂದೆ ಶುರುವಾಗಿದ್ದ ಎದೆ ತುಂಬಿ ಹಾಡುವೆನು ಶೋ ನಲ್ಲಿ ಅದೇ ರೀತಿ ಮಂಗಳೂರು ಮೂಲದ ಸ್ಪರ್ಧಿ ಸಂದೇಶ್ ಬಹಳ ಖ್ಯಾತಿಗಳಿಸಿದ್ದರು. ಇದೀಗ ಸಧ್ಯ ಎದೆ ತುಂಬಿ ಹಾಡುವೆನು ಕಾರ್ಯಕ್ರಮ ಮುಕ್ತಾಯಗೊಂಡಿದ್ದು ಫಿನಾಲೆಯಲ್ಲಿ ಸಂದೇಶ್ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.. ಹೌದು ಈ ಹಿಂದೆ ಸಾಕಷ್ಟು ವರ್ಷಗಳ ಹಿಂದೆ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ನಡೆಸಿಕೊಡುತ್ತಿದ್ದ ಎದೆ ತುಂಬಿ ಹಾಡುವೆನು ಕಾರ್ಯಕ್ರಮವನ್ನು ನಿಲ್ಲಿಸಲಾಗಿತ್ತು.. ಆನಂತರ ಸಾಕಷ್ಟು ಸಂಗೀತದ ಶೋಗಳು ಬಂದವು ಹಾಡು ಕರ್ನಾಟಕ, ಕನ್ನಡ ಕೋಗಿಲೆ ಹೀಗೆ ಸಾಕಷ್ಟು ಶೋಗಳು ಬಂದರೂ ಸಹ ಎದೆ ತುಂಬಿ ಹಾಡುವೆನು ಶೋನಷ್ಟು ದೊಡ್ಡ ಮಟ್ಟದ ಯಶಸ್ಸನ್ನು ಪಡೆದಿರಲಿಲ್ಲ.. ಇನ್ನು ಕಳೆದ ವರ್ಷ ನಮ್ಮನ್ನೆಲ್ಲಾ ಅಗಲಿದೆ ಎಸ್ ಪಿ ಬಿ ಅವರ ನೆನಪಿನಲ್ಲಿ ಎದೆ ತುಂಬಿ ಹಾಡುವೆನು ಶೋ ಮತ್ತೆ ಪ್ರಾರಂಭವಾಯಿತು.. ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ ಆಗಸ್ಟ್ ತಿಂಗಳಿನಲ್ಲಿ ಶುರುವಾದ ಎದೆ ತುಂಬಿ ಹಾಡುವೆನು‌ ಕಾರ್ಯಕ್ರಮಕ್ಕೆ ಎಸ್ ಪಿ ಬಿ ಅವರ ಪುತ್ರ ಚರಣ್ ಅವರು ಬಂದು ಶೋಗೆ ಹಾಗೂ ಸ್ಪರ್ಧಿಗಳಿಗೆ ಶುಭ ಹಾರೈಸಿದ್ದರು..

ಇನ್ನು ಇತ್ತ ಜೀ ಕನ್ನಡ ವಾಹಿನಿಯಲ್ಲಿ‌ ಕಳೆದ ಸಾಕಷ್ಟು ವರ್ಷಗಳಿಂದ ಸರಿಗಮಪ ಶೋನಲ್ಲಿ ಜಡ್ಜ್ ಆಗಿದ್ದ ರಾಜೇಶ್ ಕೃಷ್ಣನ್ ಅವರೂ ಸಹ ಜೀ ವಾಹಿನಿ ಬಿಟ್ಟು ಕಲರ್ಸ್ ಕನ್ನಡಕ್ಕೆ ಬಂದು ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ತೀರ್ಪುಗಾರರಾಗಿ ಕಾಣಿಸಿಕೊಂಡರು.. ಇವರ ಜೊತೆ ಗುರು ಕಿರಣ್ ಅವರು ಹಾಗೂ ರಘು ದೀಕ್ಷಿತ್ ಅವರೂ ಸಹ ಜಡ್ಜ್ ಗಳಾಗಿದ್ದು ಕಾರ್ಯಕ್ರಮ ಯಶಸ್ವಿಯಾಗಿ ನಾಲ್ಕು ತಿಂಗಳ ಕಾಲ ಪ್ರಸಾರವಾಗಿದ್ದು ನಿನ್ನೆ ಭಾನುವಾರ ಕಾರ್ಯಕ್ರಮದ ಫಿನಾಲೆ ನಡೆಯುವ ಮೂಲಕ ಈ ಸೀಸನ್ ನನ್ನು ಮುಕ್ತಾಯ ಮಾಡಲಾಯಿತು.. ನಿನ್ನೆ ಫಿ‌ನಾಲೆಯ ಸಂಚಿಕೆಗೂ ಸಹ ವಿಶೇಷ ಜಡ್ಜ್ ಆಗಿ ಎಸ್ ಪಿಬಿ ಅವರ ಪುತ್ರ ಚರಣ್ ಅವರು ಆಗಮಿಸಿ ವಿಜೇತರು ಯಾರೆಂದು ತಿಳಿಸಿದರು..

ಇನ್ನು ಸಾಕಷ್ಟು ಸ್ಪರ್ಧಿಗಳ ಪೈಕಿ ಆರು ಮಂದಿ ಅಂತಿಮ ಹಂತಕ್ಕೆ ತಲುಪಿ ಅವರುಗಳಲ್ಲಿ ನಾಲ್ಕು ಮಂದಿ ಫಿನಾಲೆಗೆ ಆಯ್ಕೆಯಾಗಿದ್ದರು. ಬಳ್ಳಾರಿಯ ಚಿನ್ಮಯ್, ಮಂಗಳೂರಿನ ಸಂದೇಶ್, ಕಿರಣ್ ಹಾಗೂ ನಾದಿರಾ ಬಾನು ಫಿನಾಲೆಯ ಟಾಪ್ ನಾಲ್ಕು ಸ್ಪರ್ಧಿಗಳಾದರು.. ಇನ್ನು ಇತ್ತ ಮಂಗಳೂರು ಮೂಲಾದ ಸಂದೇಶ್ ಜನರ ನೆಚ್ಚಿನ ಸ್ಪರ್ಧಿಯಾಗಿದ್ದು ಉಂಟು.. ಜೀವನದಲ್ಲಿ ಸಾಕಷ್ಟು ಕಷ್ಟ ಪಟ್ಟು ನಂತರ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಾ.. ಸಂಸಾರದ ನೌಕೆಯ ಜೊತೆಗೆ ತನ್ನ ಕನಸಾದ ಸಂಗೀತದಲ್ಲಿ ಏನಾದರೂ ಸಾಧಿಸಬೇಕೆಂದು ಎದೆ ತುಂಬಿ ಹಾಡುವೆನು ಶೋನಲ್ಲಿ ಅವಕಾಶ ಪಡೆದು ಜನರ ಮನಗೆದ್ದಿದ್ದೂ ಸುಳ್ಳಲ್ಲ.. ಇನ್ನು ಫಿನಾಲೆ ವರೆಗೂ ಬರುವಲ್ಲಿ ಯಶಸ್ವಿಯಾದ ಸಂದೇಶ್ ಫಿನಾಲೆಯಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುವಂತಾಯಿತು.. ಇತ್ತ ಬಳ್ಳಾರಿಯ ಚಿನ್ಮಯ್ ಮೊದಲ ಸ್ಥಾನ ಪಡೆದರೆ ಮಂಗಳೂರಿನ ಸಂದೇಶ್ ಎರಡನೇ ಸ್ಥಾನ.. ಹಾಗೂ ಕಿರಣ್ ಮೂರನೇ ಸ್ಥಾನ ಹಾಗೂ ಬೆಂಗಳೂರಿನ ನಾದಿರ ಬಾನು ನಾಲ್ಕನೇ ಸ್ಥಾನ ಪಡೆದುಕೊಂಡರು.

ಇನ್ನು ಬಹುಮಾನದ ವಿಚಾರಕ್ಕೆ ಬಂದರೆ ಶೋ ಗೆದ್ದ ಚಿನ್ಮಯ್ ಗೆ ಹತ್ತು ಲಕ್ಷ ರೂಪಾಯಿ ನಗದು ಬಹುಮಾನ ಸಿಕ್ಕರೆ ಮಂಗಳೂರಿನ ಸಂದೇಶ್ ಗೆ ಐದು ಲಕ್ಷ ರೂಪಾಯಿ ದೊರೆಯಿತು.. ಇನ್ನು ಮೂರನೇ ಸ್ಥಾನ ಪಡೆದ ಕಿರಣ್ ಗೆ ಮೂರು ಲಕ್ಷ ರೂಪಾಯಿ ಸಿಕ್ಕರೆ ನಾಲ್ಕನೇ ಸ್ಥಾನ ಪಡೆದ ನಾದಿರ ಬಾನುಗೆ ಒಂದು ಲಕ್ಷ ರೂಪಾಯಿ ನಗದು ಬಹುಮಾನ‌ ದೊರೆಯಿತು.. ಇನ್ನು ಇದರ ಜೊತೆಗೆ ಪ್ರತಿಯೊಬ್ಬ ಸ್ಪರ್ಧಿಗೂ ಪ್ರತಿ ವಾರಕ್ಕೂ ಹತ್ತು ಸಾವಿರ ರೂಪಾಯಿ ಸಂಭಾವನೆ ನೀಡಲಾಗುತಿತ್ತು ಎನ್ನಲಾಗಿದೆ.. ಒಟ್ಟಿನಲ್ಲಿ ಟಿ ಆರ್ ಪಿ ರೇಟಿಂಗ್ ಅದು ಇದು ಎಲ್ಲವನ್ನೂ ಸಹ ಪಕ್ಕಕ್ಕಿಟ್ಟು ನೋಡಿದರೂ ಪ್ರತಿಯೊಬ್ಬ ಸ್ಪರ್ಧಿಗೆ ಅವಕಾಶದ ಜೊತೆಗೆ ಆರ್ಥಿಕವಾಗಿಯೂ ಸಹಾಯವಾಗಿದ್ದು ಸಧ್ಯ ಈ ಅವಕಾಶವನ್ನು ಬಳಸಿಕೊಂಡು ಮುಂದಿನ ಜೀವನವನ್ನು ಹೇಗೆ ರೂಪಿಸಿಕೊಳ್ಳುವರೋ ಅದೆಲ್ಲವೂ ಅವರವರ ಕೈನಲ್ಲಿದೆ ಎನ್ನಬಹುದು.. ಸಿಕ್ಕ ಯಶಸ್ಸನ್ನು ಸರಿಯಾಗಿ ಬಳಸಿಕೊಂಡು ಸಿನಿಮಾಗಳಲ್ಲಿ ಅವಕಾಶ ಪಡೆದು‌ ಒಳ್ಳೆಯ ಜೀವನ ಕಟ್ಟಿಕೊಳ್ಳುವಂತಾಗಲಿ..