ಬೆಂಗಳೂರಿನ ಪ್ಯಾಟೆ ಹುಡುಗಿ ಹಳ್ಳಿ ಹುಡುಗನನ್ನು ಮದುವೆ ಆದಳು.. ಎರಡು ಮಕ್ಕಳೂ ಆದವು.. ಆದರೆ ಇಂದು ಎಂತಹ ಸ್ಥಿತಿಯಲ್ಲಿದ್ದಾಳೆ ನೋಡಿ.. ದಯವಿಟ್ಟು ಇಂತಹ ಕೆಲಸ ಯಾರೂ ಮಾಡಬೇಡ್ರಮ್ಮಾ..

0 views

ಜೀವನದಲ್ಲಿ ಯಾರ ಋಣ ಯಾರ ಜೊತೆ ಇರುವುದೋ ಆ ಭಗವಂತನೇ ಬಲ್ಲ.. ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಹೆಣ್ಣು ಮಕ್ಕಳು ಮತ್ಯಾವುದೋ ಊರಿಗೆ ಮದುವೆಯಾಗಿ ಆ ಕುಟುಂಬದ ಬೆಳಕಾಗುವಳು.. ಗಂಡನ ಮನೆಯಲ್ಲಿ ಪ್ರೀತಿ ಸಿಕ್ಕು ಗಂಡನಿಂದ ಕಾಳಜಿ ಸಿಕ್ಕು ಇತ್ತ ಈಕೆಯೂ ಸಹ ಆ ಕುಟುಂಬವನ್ನು ತನ್ನ ಕುಟುಂಬವೆಂದು ಮುಂದೆ ಸಾಗಿದಾಗ ಆಕೆಯ ಜೀವನ ಬಂಗಾರವಾಗುವುದು.. ಆದರೆ ಅಕಸ್ಮಾತ್ ಗಂಡನ ಕುಟುಂಬದಿಂದ ಆ ಪ್ರೀತಿ ದೊರಕದೇ ಹೋದರೇ.. ಅಥವಾ ಸೊಸೆಯೇ ಗಂಡನ ಕುಟುಂಬವನ್ನು ತನ್ನ ಕುಟುಂಬ ಎಂದುಕೊಳ್ಳದೇ ಹೋದರೆ ಬದುಕು ವಿಚಿತ್ರವಾಗಿ ಹಾದಿ ತಪ್ಪಿ ಬಿಡುವುದು ಸತ್ಯ.. ಅಥವಾ ನೋವಿನಲ್ಲಿಯೇ ಜೀವನ ಸಾಗಿಸುವುದು ಸುಳ್ಳಲ್ಲ.. ಇನ್ನೂ ಹೆಣ್ಣು ಮಕ್ಕಳು ತಾನು ಹುಟ್ಟಿದ ಊರು ಬಿಟ್ಟು ಮತ್ತೊಂದು ಊರಿಗೆ ದೂರದ ಜಾಗಗಳಿಗೆ ಮದುವೆಯಾಗೋದು ಸಹ ಹೊಸದಲ್ಲ.. ಅದೇ ರೀತಿ ಇಲ್ಲೊಬ್ಬ ಹೆಣ್ಣು ಮಗಳು ಪ್ಯಾಟೆ ಯಲ್ಲಿ ಹುಟ್ಟಿ ಬೆಳೆದಳು.. ಹಳ್ಳಿಯ ಹುಡುಗನ ಜೊತೆ ಮದುವೆಯಾಗಿ ಎರಡು ಮಕ್ಕಳೂ ಆದವು.. ಆದರೀಗ ಆಕೆಯ ಒಂದು ಸಣ್ಣ ಆಸೆಗೆ ಇಂದು ಆಕೆಗೆ ಬಂದ ಸ್ಥಿತಿ ನಿಜಕ್ಕೂ ಮನಕಲಕುವಂತಿದೆ..

ಹೌದು ಈಕೆಯ ಹೆಸರು ಸಂಧ್ಯಾ.. ವಯಸ್ಸಿನ್ನೂ ಕೇವಲ ಇಪ್ಪತ್ತ ನಾಲ್ಕು.. ಯಲಹಂಕದ ಮಾರುತಿ ನಗರದ ನಿವಾಸಿ.. ಹುಟ್ಟಿ ಬೆಳೆದದ್ದು ಪ್ಯಾಟೆಯ ಜೀವನ ಶೈಲಿಯಲ್ಲಿ.. ಇನ್ನು ಕಳೆದ ಐದು ವರ್ಷದ ಹಿಂದೆ ಸಂಧ್ಯಾಳನ್ನು ದೊಡ್ಡಬಳ್ಳಾಪುರ ತಾಲೂಕಿನ ಎಸ್ ಎಂ ಗೊಲ್ಲಹಳ್ಳಿಯ ನಿವಾಸಿ ಶ್ರೀಕಾಂತ್ ಎಂಬುವವರಿಗೆ ಕೊಟ್ಟು ಮದುವೆ ಮಾಡಲಾಗಿತ್ತು.. ಇಬ್ಬರದ್ದು ಮನೆಯವರು ನೋಡಿ ಮಾಡಿದ ಮದುವೆಯಾಗಿತ್ತು.. ಆರಂಭದಲ್ಲಿ ಎಲ್ಲವೂ ಸರಿ ಇತ್ತು.. ಇತ್ತ ಸಂಧ್ಯಾ ಶ್ರೀಕಾಂತ್ ಜೋಡಿಗೆ ಇಬ್ಬರು ಮಕ್ಕಳೂ ಆದವು.. ನಾಲ್ಕು ವರ್ಷದ ಕುಸುಮ, ಎರಡು ವರ್ಷದ ರೋಹಿತ್ ಎಂಬ ಪುಟ್ಟ ಮಕ್ಕಳೂ ಇದ್ದು ಸರಿಯಾಗಿ ಸಾಗಿದ್ದರೆ ಇದೊಂದು ಸುಂದರ ಕುಟುಂಬವಾಗುತಿತ್ತು.. ಶ್ರೀಕಾಂತ್ ತಂದೆ ತಾಯಿ ಸಹ ಇವರ ಜೊತೆಯೇ ಇದ್ದರು..

ಆದರೆ ಸಂಧ್ಯಾ ಪೇಟೆಯಲ್ಲಿ ಹುಟ್ಟಿ ಬೆಳೆದಿದ್ದಳು.. ಆಕೆಗೂ ಕೆಲ ಆಸೆ ಆಕಂಕ್ಷೆಗಳು ಇದ್ದವು.. ಸಣ್ಣ ಪುಟ್ಟ ಆಸೆಗಳನ್ನು ಗಂಡನ ಬಳಿ ಹೇಳಿಕೊಳ್ಳುತ್ತಿದ್ದಳು.. ಆತನೂ ಕೈಲಾದ ಆಸೆಗಳನ್ನು ಪೂರೈಸಿ ಆಗದ್ದನ್ನು ಪೂರೈಸದೇ ಸುಮ್ಮನಾಗುತ್ತಿದ್ದನು.. ಇದೇ ವಿಚಾರಕ್ಕೆ ದಿನದಿಂದ ದಿನಕ್ಕೆ ಇಬ್ಬರ ನಡುವೆ ಮನಸ್ತಾಪ ಮೂಡಲು ಶುರುವಾಯಿತು.. ಆದರೆ ಸಂಧ್ಯಾಳ ಆ ಒಂದು ಸಣ್ಣ ಆಸೆಯನ್ನು ಗಂಡ ಈಡೇರಿಸಲಿಲ್ಲ ವೆಂದು ಇಂದು ಸಂಧ್ಯಾ ತನ್ನ ಎರಡು ಪುಟ್ಟ ಮಕ್ಕಳ ಜೊತೆ ಜೀವವನ್ನೇ ಕಳೆದುಕೊಂಡು ಬಿಟ್ಟಿದ್ದಾಳೆ.. ಅದರಲ್ಲೂ ಆಕೆಯ ಆಸೆಯ ಬಗ್ಗೆ ಕೇಳಿದರೆ ಆಕೆಗೆ ಏನು ಹೇಳಬೇಕೋ ಎನ್ನುವಂತಾಗುತ್ತದೆ..

ಹೌದು ಸಂಧ್ಯಾಳದ್ದು ದೊಡ್ಡ ಆಸೆಯೇನೂ ಅಲ್ಲ.. ಹಾಗಂತ ಅವರಿದ್ದ ಹಳ್ಳಿಯಲ್ಲಿ ಇಂತಹ ಆಸೆಗಳನ್ನು ನೆರವೇತಿಸುವುದಾದರೂ ಹೇಗೆ ಅನ್ನೋದು ಶ್ರೀಕಾಂತನ ಪ್ರಶ್ನೆ.. ಆದರೆ ಅರ್ಥವಿಲ್ಲದ ಆ ಆಸೆಗಳಿಗಾಗಿ ದುಡುಕಿಯೇ ಬಿಟ್ಟಳು ಸಂಧ್ಯಾ.. ಕೊನೆಗೆ ಒಂದು ಕುಟುಂಬವೂ ಇಲ್ಲವಾಗಿ ಹೋಯ್ತು‌. ಹೌದು ಸಂಧ್ಯಾಳಿಗೆ ಹೊರಗಡೆ ಹೊಟೆಲ್ ನಲ್ಲಿ ಊಟ ಮಾಡಬೇಕು ಎಂಬ ಆಸೆಯಂತೆ.. ವಾರಕ್ಕೆ ಒಂದು ಅಥವಾ ಎರಡು ಬಾರಿ ಹೊರಗಡೆ ಹೊಟೆಲ್ ಗೆ ಕರೆದುಕೊಂಡು ಹೋಗಿ ಎನ್ನುತ್ತಿದ್ದಳಂತೆ.. ಆದರೆ ಇತ್ತ ಹಳ್ಳಿಯಲ್ಲಿ ವಾಸವಿದ್ದ ಶ್ರೀಕಾಂತ್ ಇದೆಲ್ಲಾ ಸಾಧ್ಯವಿಲ್ಲ ಎಂದಿದ್ದನಂತೆ.. ಪ್ರತಿದಿನ ಹೊರಗೆ ಊಟಕ್ಕೆ ಕರೆದುಕೊಂಡು ಹೋಗಿ ಎಂದು ಕೇಳುತ್ತಿದ್ದಳಂತೆ.. ಆದರೆ ಶ್ರೀಕಾಂತ್ ಕರೆದುಕೊಂಡು ಹೋಗುತ್ತಿರಲಿಲ್ಲವಂತೆ.. ಇದನ್ನು ಸಂಧ್ಯಾ ತನ್ನ ಹೆತ್ತವರ ಬಳಿಯೂ ಹೇಳಿಕೊಂಡಿದ್ದು ಗಂಡನ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಳಂತೆ..

ಆದರೆ ಇದೊಂದು ಸಣ್ಣ ಕಾರಣಕ್ಕೆ ಬೇಸರಗೊಂಡ ಸಂಧ್ಯಾ ತನ್ನ ಜೀವನವನ್ನೇ ಮುಗಿಸಿಕೊಳ್ಳುವ ದುಡುಕಿನ ನಿರ್ಧಾರ ಮಾಡಿ ಬಿಟ್ಟಳು.. ಹೌದು ಎಸ್ ಎಂ ಗೊಲ್ಲಹಳ್ಳಿಯಲ್ಲಿ ಗಂಡನ ಮನೆಯಲ್ಲಿದ್ದ ಸಂಧ್ಯಾ ಗಂಡ ಅತ್ತೆ ಮಾವ ಇಲ್ಲದ ಸಮಯ ನೋಡಿಕೊಂಡು ನಿನ್ನೆ ಮಧ್ಯಾಹ್ನ ಪೆಟ್ರೋಲ್ ಹಾಕಿಕೊಂಡು ತಾನು ಹಾಗೂ ತನ್ನ ಎರಡು ಪುಟ್ಟ ಮಕ್ಕಳ ಜೊತೆಯೇ ಜೀವ ಕಳೆದುಕೊಂಡು ಬಿಟ್ಟಿದ್ದಾಳೆ.. ಹೌದು ಹೊಟೆಲ್ ನಲ್ಲಿ ಆಗಾಗ ಊಟ ಮಾಡುವ ಆ ಒಂದು ಆಸೆಗಾಗಿ ತನ್ನನ್ನೇ ಇಲ್ಲವಾಗಿಸಿಕೊಂಡಿದ್ದಾಳೆ.. ಇನ್ನು ಸಂಧ್ಯಾ ಈ ರೀತಿ‌ ಮಾಡಿಕೊಂಡದ್ದನ್ನು ನೋಡಿದ ಅಕ್ಕ ಪಕ್ಕದ ಮನೆಯವರು ತಕ್ಷಣ ಆಕೆಯನ್ನು ಹಾಗೂ ಮಕ್ಕಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ.. ಹಳ್ಳಿಗೆ ಹೋಗಿ ಮದುವೆಯ ಬದುಕು ಕಟ್ಟಿಕೊಳ್ಳಬೇಕಾದವಳು ಅರ್ಥವಿಲ್ಲದ ಆಸೆಗಾಗಿ ಇಂದು ಆಸ್ಪತ್ರೆಯಲ್ಲಿ ಜೀವ ಕಳೆದುಕೊಂಡು ಮಲಗಿದ್ದ ಸ್ಥಿತಿ ನಿಜಕ್ಕೂ ಆಕೆಯ ಮೇಲೆ ಒಂದು ರೀತಿ ಬೇಸರವನ್ನುಂಟು ಮಾಡಿತ್ತು..

ಹೆಣ್ಣು ಮಕ್ಕಳ‌ ಮನಸ್ಸು ಸೂಕ್ಷ್ಮ ನಿಜ.. ಅವರ ಸಣ್ಣ ಸಣ್ಣ ಆಸೆಗಳನ್ನು ಗಂಡ ಪೂರೈಸಬೇಕು ನಿಜ.. ಆದರೆ ಹೆಣ್ಣಿನ ಆಸೆಯ ನಡುವೆ ಸಂಧ್ಯಾ ತಾನೊಬ್ಬ ತಾಯಿ ಎನ್ನುವ ಅದರಲ್ಲೂ ಮಕ್ಕಳಿಗಾಗಿ ಏನು ಬೇಕಾದರೂ ಮಾಡುವ ಗಟ್ಟಿತನದ ತಾಯಿಯಾಗಬೇಕು ಎಂಬುದನ್ನು ಮರೆತು ಬಿಟ್ಟಳು.. ದಯವಿಟ್ಟು ಯಾರೇ ಆಗಲಿ ಇಂತಹ ಅರ್ಥವಿಲ್ಲದ ಆಸೆಗಳಿಗಾಗಿ ಅಮೂಲ್ಯವಾದ ಜೀವವನ್ನು ಕಳೆದುಕೊಳ್ಳಬೇಡಿ.. ಸಂಧ್ಯಾ ನಿನ್ನೆ ಕೊನೆ ಕ್ಷಣದಲ್ಲಿ ಒಬ್ಬ ತಾಯಿಯಾಗಿ ಯೋಚನೆ ಮಾಡಿದ್ದರೆ ಆ ಎರಡು ಪುಟ್ಟ ಕಂದಮ್ಮಗಳ ಬಗ್ಗೆ ಯೋಚನೆ ಮಾಡಿದ್ದರೆ ಇಂದು ಇಂತಹ ಸ್ಥಿತಿ ಬರುತ್ತಿರಲಿಲ್ಲ.. ಇತ್ತ ಆಕೆಯೂ ಇಲ್ಲ.. ಅತ್ತ ಶ್ರೀಕಾಂತನೂ ಸಹ ಜೀವನ ಪೂರ್ತಿ ಕೊರಗುವಂತಾಯ್ತು.. ದಯವಿಟ್ಟು ಪ್ರಬುದ್ಧರಾಗಿ.. ಪ್ರಬುದ್ಧತೆಯಿಂದ ಆಲೋಚನೆ ಮಾಡಿ.. ಜೀವನ ಅನ್ನೋದು ಬೇರೆಯೇ ಇದೆ.. ಒಬ್ಬರನೊಬ್ಬರು ಅರ್ಥ ಮಾಡಿಕೊಂಡು ಮುಂದೆ ಸಾಗಿದಾಗ ಮಾತ್ರ ಜೀವನಕ್ಕೆ ನಿಜವಾದ ಅರ್ಥ ಸಿಗಲಿದೆ..