ರಕ್ಷಿತ್ ಶೆಟ್ಟಿ ಜೊತೆ ಚಾರ್ಲಿ ಸಿನಿಮಾದಲ್ಲಿ ಅಭಿನಯಿಸಿರುವ ಈ ನಟಿ ನಿಜಕ್ಕೂ ಯಾರು ಗೊತ್ತಾ.. ಎಲ್ಲರಿಗೂ ಗೊತ್ತಿರುವ ಹುಡುಗಿಯೇ.. ಶಾಕ್ ಆಗ್ತೀರಾ..

0 views

ಸ್ಯಾಂಡಲ್ ವುಡ್ ನಲ್ಲಿ ತಮ್ಮ ಪ್ರತಿಭೆ ಮತ್ತು ವಿಭಿನ್ನ ರೀತಿಯ ಪ್ರಯೋಗಾತ್ಮಕ ಸಿನಿಮಾಗಳಿಂದ ಗುರುತಿಸಿಕೊಂಡಿರುವವರು ನಟ ರಕ್ಷಿತ್ ಶೆಟ್ಟಿ. ಇವರು ನಟಿಸುವ ಮಾತೃ ನಿರ್ದೇಶನ ಮಾಡುವ ಸಿನಿಮಾಗಳಲ್ಲಿ ಒಂದು ರೀತಿಯ ಹೊಸತನ ಬುದ್ಧಿವಂತಿಕೆ ಕಾಣಸಿಗುತ್ತದೆ. ರಕ್ಷಿತ್ ಶೆಟ್ಟಿ ಸಿನಿಮಾ ಅಂದ್ರೆ, ಇಲ್ಲೇನೋ ಬೇರೆ ರೀತಿಯ ವಿಷಯ ಇದೆ ಎಂದು ಜನರು ಕುತೂಹಲದಿಂದ ಸಿನಿಮಾ ನೋಡಲು ಬರುತ್ತಾರೆ. ರಕ್ಷಿತ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿದ ಅವನೇ ಶ್ರೀಮನ್ನಾರಾಯಣ ಸಿನಿಮಾ ಯಶಸ್ಸಿನ ನಂತರ ರಕ್ಷಿತ್ ಶೆಟ್ಟಿ ಅವರು, 777 ಚಾರ್ಲಿ ಸಿನಿಮಾ ಮೂಲಕ ಬೆಳ್ಳಿತೆರೆಗೆ ಬರಲಿದ್ದಾರೆ, ಇದು ಪ್ರಾಣಿಗಳ ಬಗ್ಗೆ ವಿಶೇಷವಾಗಿ ತೆಗೆದಿರುವ ಸಿನಿಮಾ, ಈ ಸಿನಿಮಾ ನಾಯಕಿ ಯಾರು ಗೊತ್ತಾ? ಇವರು ನಿಮಗೆ ಪರಿಚಯ ಇರುವವರೇ..

777 ಚಾರ್ಲಿ ಸಿನಿಮಾ ನಾಯಕಿ ಮತ್ಯಾರು ಅಲ್ಲ, ಕನ್ನಡ ಕಿರುತೆರೆಯಲ್ಲಿ ಬಹಳ ಜನಪ್ರಿಯತೆ ಪಡೆದುಕೊಂಡಿದ್ದ ಹುಡುಗಿ. ಪೌರಾಣಿಕ ಧಾರಾವಾಹಿ ಹರ ಹರ ಮಹಾದೇವ ಧಾರಾವಾಹಿಯಲ್ಲಿ ಪರಶಿವನ ಪತ್ನಿ, ಸತಿದೇವಿ ಪಾತ್ರದಲ್ಲಿ ಅಭಿನಯಿಸಿದ್ದ ಕಲಾವಿದೆಯೇ ಇಂದು ರಕ್ಷಿತ್ ಶೆಟ್ಟಿ ಅವರ 777 ಚಾರ್ಲಿ ಸಿನಿಮಾದ ನಾಯಕಿಯಾಗಿದ್ದಾರೆ. ಈ ನಟಿಯ ಹೆಸರು ಸಂಗೀತ ಶೃಂಗೇರಿ. ಮೂಲತಃ ಕೊಡಗಿನವರು ಸಂಗೀತ. ಇತ್ತೀಚಿನ ದಿನಗಳಲ್ಲಿ ಕೊಡಗಿನ ಸಾಕಷ್ಟು ಪ್ರತಿಭೆಗಳು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಯಶಸ್ಸು ಪಡೆಯುತ್ತಿದ್ದಾರೆ. ಚಂದನವನದಲ್ಲಿ ನೆಲೆಯೂರಿದ್ದಾರೆ. ಅವರಲ್ಲಿ ಸಂಗೀತ ಸಹ ಒಬ್ಬರು. ಇವರ ಜೀವನ ಶೈಲಿ ಹೇಗಿದೆ ಎನ್ನುವುದನ್ನು ತಿಳಿಸುತ್ತೇವೆ ನೋಡಿ..

ಸಂಗೀತ ಅವರಿವೆ ನಟನೆಯಲ್ಲಿ ಆಸಕ್ತಿ ಏನು ಇರಲಿಲ್ಲ, ಸ್ನೇಹಿತರು ಒತ್ತಾಯ ಮಾಡಿದ ಕಾರಣ ಶಾರ್ಟ್ ಫಿಲ್ಮ್ ಒಂದರಲ್ಲಿ ನಟಿಸಿದ್ದರು ಸಂಗೀತ. ಬಳಿಕ ಇವರಿಗೆ ಹರ ಹರ ಮಹಾದೇವ ಧಾರಾವಾಹಿಯ ಆಡಿಷನ್ ನಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿತು. ಪೌರಾಣಿಕ ಧಾರಾವಾಹಿ ಅಂದ್ರೆ, ಅಭಿನಯ ಮಾಡುವ ರೀತಿ ಬೇರೆಯೇ ಆಗಿರುತ್ತದೆ. ಜನರಿಗೆ ಭಕ್ತಿಭಾವ ಮೂಡಿಸುವ ಹಾಗೆ ಅಭಿನಯ ಇರಬೇಕಾಗುತ್ತದೆ, ಅದೇ ರೀತಿ ಅಭಿನಯಿಸಿ ಆಡಿಷನ್ ನಲ್ಲಿ ಸಲೆಕ್ಟ್ ಆಗುತ್ತಾರೆ. ಹರ ಹರ ಮಹಾದೇವ ಧಾರಾವಾಹಿ ಮೂಲಕ ಸತಿದೇವಿ ಪಾತ್ರದಲ್ಲಿ ಮನೆಮಾತಾಗುತ್ತಾರೆ ಸಂಗೀತ. ಪೌರಾಣಿಕ ಧಾರಾವಾಹಿಯ ಪ್ರಮುಖ ಪಾತ್ರ ಇವರಿಗೆ ದೊಡ್ಡ ಮಟ್ಟದ ಮನರಂಜನೆ ತಂದು ಕೊಟ್ಟಿತು.

ಸಂಗೀತ ಅವರು ಹರ ಹರ ಮಹಾದೇವ ನಂತರ ಬೇರೆ ಧಾರಾವಾಹಿಯಲ್ಲಿ ನಟಿಸಿಲ್ಲ. ನಿಜ ಜೀವನದಲ್ಲಿ ಇವರಿಗೆ ಒಂದು ಒಳ್ಳೆಯ ಅಭ್ಯಾಸ ಇದೆ. ಸಂಗೀತ ಅವರು ಬೆಳಗ್ಗಿನ ಜಾವ 3:30ಕ್ಕೆ ಎದ್ದು ಯೋಗಾಭ್ಯಾಸ ಮಾಡುತ್ತಾರಂತೆ. ಬೆಳಗ್ಗಿನ ತಿಂಡಿ ತಿನ್ನುವ 4 ಗಂಟೆ ಮೊದಲು ಯೋಗ ಮಾಡುವುದು ಇವರ ಅಭ್ಯಾಸ, ಹಾಗಾಗಿ ಪ್ರತಿದಿನ ತಪ್ಪದೇ 3:30ಕ್ಕೆ ಎದ್ದೇಳುತ್ತಾರೆ. ಯೋಗಾಭ್ಯಾಸ ಇವರ ಜೀವನದಲ್ಲಿ ಸಾಕಷ್ಟು ಬದಲಾವಣೆ ತಂದಿದೆಯಂತೆ. ರಕ್ಷಿತ್ ಶೆಟ್ಟಿ ಅವರು ಸಹ ಯೋಗಾಭ್ಯಾಸ ಮಾಡಲು ಪ್ರೇರಣೆಯಂತೆ.. ಹರ ಹರ ಮಹಾದೇವ ನಂತರ ಸಂಗೀತ ಶೃಂಗೇರಿ ಅವರು ಬೆಳ್ಳಿತೆರೆಗೂ ಎಂಟ್ರಿ ಕೊಟ್ಟರು.

ಕಿರುತೆರೆಯ ಖ್ಯಾತ ನಟ ವಿಜಯ್ ಸೂರ್ಯ ಅಭಿನಯದ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದರು ಆದರೆ ಆ ಸಿನಿಮಾ ಹೇಳಿಕೊಳ್ಳುವಾಷ್ಟು ಯಶಸ್ಸು ತಂದುಕೊಡಲಿಲ್ಲ. ಆಗ ಸಿನಿಮಾ ಮತ್ತು ಪಾತ್ರದ ಆಯ್ಕೆ ಹೇಗಿರಬೇಕು ಎನ್ನುವುದನ್ನು ಅರ್ಥಮಾಡಿಕೊಂಡರು, ನಂತರ ಇವರಿಗೆ ಸಿಕ್ಕಿದ್ದು 777 ಚಾರ್ಲಿ ಸಿನಿಮಾದಲ್ಲಿ ನಟಿಸುವ ಅವಕಾಶ. ಚಾರ್ಲಿಯಲ್ಲಿ ಪ್ರಾಣಿ ರಕ್ಷಣಾ ಅಧಿಕಾರಿಯ ಪಾತ್ರದಲ್ಲಿ ಸಂಗೀತ ನಟಿಸುತ್ತಿದ್ದಾರೆ. ಚಾರ್ಲಿ ಸಿನಿಮಾದಲ್ಲಿ ನಾಯಿ ಪ್ರಮುಖವಾದ ಪಾತ್ರ ವಹಿಸಿದೆ. ಚಾರ್ಲಿಯಲ್ಲಿ ಸಂಗೀತ ಅವರ ಪಾತ್ರ ಬಹಳ ವಿಭಿನ್ನವಾಗಿ ಮತ್ತು ವಿಶಿಷ್ಟವಾಗಿದ್ದು, ಮೊದಲೇ ತಯಾರಿ ಮಾಡಿಕೊಂಡು ಈ ಪಾತ್ರದಲ್ಲಿ ನಟನೆ ಮಾಡಿದ್ದಾರಂತೆ.

ಪ್ರತಿಭೆ ಇದ್ದರೆ ಅವಕಾಶಗಳು ಅರಸಿ ಬರುತ್ತವೆ ಎನ್ನುವುದಕ್ಕೆ ಸಂಗೀತ ಶೃಂಗೇರಿ ಉತ್ತಮ ಉದಾಹರಣೆ. ಇವರ ಕೈಯಲ್ಲಿ ಪ್ರಸ್ತುತ ಮೂರು ಸಿನಿಮಾಗಳಿವೆ, 777 ಚಾರ್ಲಿ ಸಿನಿಮಾ ಜೂನ್ 10ರಂದು ಬಿಡುಗಡೆಗೆ ಸಿದ್ಧವಾಗಿದೆ, ಪಂಪ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಸಂಗೀತ. ಜೊತೆಗೆ ಮತ್ತೊಂದು ಸಿನಿಮಾ ಸಹ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಚಾರ್ಲಿ ಸಿನಿಮಾ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ಸಹ ಬಿಡುಗಡೆ ಆಗಲಿದ್ದು, ಇದು ಸಂಗೀತ ಅವರ ಕೇರಿಯರ್ ಗೆ ಬಹಳ ಮುಖ್ಯವಾದ ಸಿನಿಮಾ ಆಗಲಿದೆ.