ಬೆಂಗಳೂರಿನಲ್ಲಿ ಜೀವ ಕಳೆದುಕೊಂಡ ಮಹಿಳಾ ಟೆಕ್ಕಿ ಪ್ರಕರಣಕ್ಕೆ ಊಹಿಸಿರದ ತಿರುವು.. ಪೊಲೀಸರ ಮುಂದೆ ಹಾಜರಾದ ಗಂಡ.. ಆದರೆ ನಡೆದಿದ್ದೇ ಬೇರೆ..

0 views

ಬೆಂಗಳೂರು ಲಕ್ಷಾಂತರ ಜನರಿಗೆ ಆಶ್ರಯ ನೀಡಿದೆ.. ಬದುಕು ಕಟ್ಟಿಕೊಳ್ಳಲು ದಾರಿ ತೋರಿಸಿದೆ.. ದೂರದೂರುಗಳಿಂದ ಬಂದು ಉದ್ಯೋಗಕ್ಕೆ ದಾರಿ ಮಾಡಿಕೊಂಡವರೂ ಇದ್ದಾರೆ.. ಹಾಗೆಯೇ ದೊಡ್ಡ ದೊಡ್ಡ ಹುದ್ದೆಯನ್ನು ಅಲಂಕರಿಸಿ ಜೀವನ ನಡೆಸುತ್ತಿರುವವರು ಇದ್ದಾರೆ.. ಆದರೆ ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಂಡು ಕೊನೆಗೇ ಅದೇ ಊರಿನಲ್ಲಿ ತಮ್ಮ ಜೀವನವನ್ನೇ ಮುಗಿಸಿಕೊಂಡಾಗ ನಿಜಕ್ಕೂ ಇದಕ್ಕೋಸ್ಕರ ಇಲ್ಲಿಗೆ ಬಂದು ಕಷ್ಟ ಪಟ್ಟು ಓದಿ ಉದ್ಯೋಗ ಪಡೆದು ಜೀವನ ರೂಪಿಸಿಕೊಂಡಿದ್ದಾ ಎನಿಸಿಬಿಡುತ್ತದೆ.. ಹೌದು ಅದೇ ರೀತಿ ಎರಡು ದಿನದ ಹಿಂದೆ ಬೆಂಗಳೂರಿನಲ್ಲಿ ನಡೆದ ಘಟನೆಯೊಂದು ಮನಕಲಕುವಂತಿತ್ತು.. ಆದರೆ ಈಗ ಆ ಪ್ರಕರಣದಲ್ಲಿ ಊಹಿಸಿರದ ತಿರುವೊಂದು ಬಂದಿದೆ..

ಹೌದು ಬೆಂಗಳೂರಿನ ಅಮೃತಹಳ್ಳಿಯ ವೀರಣ್ಣ ಪಾಳ್ಯದಲ್ಲಿ ಮಹಿಳಾ ಟೆಕ್ಕಿ ಸಂಗೀತಾ ಜೀವ ಕಳೆದುಕೊಂಡ ಘಟನೆ ನಡೆದಿತ್ತು.. ಹೋಗುವ ಮುನ್ನ ತನ್ನ ಗಂಡ ತನಗೆ ನೀಡುತ್ತಿದ್ದ ನೋವಿನ ಬಗ್ಗೆ ಬರೆದು ಹೋಗಿದ್ದಾಳೆ ಎನ್ನಲಾಗಿತ್ತು.. ಆದರೆ ಈಗ ಹೊಸ ರೀತಿಯಲ್ಲಿ ಪ್ರಕರಣ ಕಾಣುತ್ತಿದೆ.. ಹೌದು ಸಂಗೀತಾ ಹಾಗೂ ವಿನಯ್ ಇಬ್ಬರೂ ಸಹ ಇಂಜಿನಿಯರ್ ಗಳಾಗಿದ್ದರು.. ಇತ್ತ ತನ್ನ ಇಂಜಿನಿಯರಿಂಗ್ ಪದವಿ ಮುಗಿಸಿ ಇಪ್ಪತ್ತೊಂದು ವರ್ಷಕ್ಕೆ ಖಾಸಗಿ ಕಂಪನಿಯಲ್ಲಿ ಸಂಗೀತಾ ಕೆಲಸಕ್ಕೂ ಸಹ ಸೇರಿಕೊಂಡಿದ್ದರು.. ನಂತರ ಮದುವೆಯಾಗುವ ನಿರ್ಧಾರ ಮಾಡಿದಾಗ ಮ್ಯಾಟ್ರಿಮೋನಿಯಲ್ಲಿ ವಿನಯ್ ನ ಪರಿಚಯವಾಗಿದೆ.. ಪರಿಚಯ ನಂತರ ಸ್ನೇಹವಾಗಿದೆ.. ನಾಲ್ಕು ವರ್ಷಗಳ ಕಾಲ ಪ್ರೀತಿಸಿ ಕಳೆದ ವರ್ಷ ಮದುವೆಯನ್ನೂ ಸಹ ಆದರು..

ಇಬ್ಬರೂ ಸಹ ಇಂಜಿನಿಯರ್ ಗಳಾಗಿದ್ದು ಒಳ್ಳೆಯ ಉದ್ಯೋಗದಲ್ಲಿದ್ದರು.. ತಿನ್ನಲು ಬೇಕಾದ ಊಟ.. ಇರಲು ಮನೆ.. ಹೀಗೆ ಅವರ ಬದುಕಿಗೆ ಯಾವುದೇ ಆರ್ಥಿಕ ಸಮಸ್ಯೆಯಂತೂ ಇರಲಿಲ್ಲ.. ಇತ್ತ ಮಗಳು ಆಸೆ ಪಟ್ಟ ಹುಡುಗನನ್ನೇ ಮದುವೆಯಾಗಲಿ ಅವರ ಜೀವನ ಚೆನ್ನಾಗಿರಲಿ ಎಂದು ತಾಯಿಯೂ ಸಹ ಮಗಳಿಗೆ ಆಭರಣ ಮಾಡಿಸಿ ಹಾಗೂ ಐದು ಲಕ್ಷ ರೂಪಾಯಿ ಖರ್ಚು ಮಾಡಿ ಮದುವೆಯನ್ನೂ ಸಹ ಮಾಡಿದ್ದರು.. ಎಲ್ಲವನ್ನೂ ಅರ್ಥ ಮಾಡಿಕೊಂಡು ನಡೆದಿದ್ದರೆ ಒಂದೊಳ್ಳೆ ಜೀವನವನ್ನು ನಡೆಸಬಹಿದಾಗಿತ್ತು.. ಆದರೆ ಮದುವೆಯಾದ ವರ್ಷದಲ್ಲಿಯೇ ಇದೀಗ ಸಂಗೀತಾ ದುಡುಕಿನ ನಿರ್ಧಾರ ಮಾಡಿ ಜೀವ ಕಳೆದುಕೊಂಡು ಬಿಟ್ಟರು.

ಈ ಘಟನೆ ನಡೆದ ನಂತರ ಸಂಗೀತಾಳ ತಾಯಿ ಹೇಳುವಂತೆ ಅಳಿಯ ಬಹಳ ನೋವು ಕೊಡುತ್ತಿದ್ದ.. ನನ್ನ ಬಳಿ ಹೇಳಿಕೊಳ್ಳುತ್ತಿದ್ದಳು.. ಅವನು ಅನುಮಾನವನ್ನೂ ಸಹ ಪಡುತ್ತಿದ್ದ ಎಂದು ಕಣ್ಣೀರಿಟ್ಟಿದ್ದಳು.. ನನ್ನ ಮಗಳ ಈ ಸ್ಥಿತಿಗೆ ಅವನೇ ಕಾರಣ ಎಂದಿದ್ದರು.. ಪೊಲೀಸರು ಸಹ ಅದೇ ಆಯಾಮದಲ್ಲಿ ಪ್ರಕರಣವನ್ನು ನೋಡಿದ್ದರು.. ಆದರೀಗೆ ಬೇರೆ ರೀತಿಯಲ್ಲಿಯೇ ಘಟನೆ ತಿರುವು ಪಡೆದಿದೆ‌‌.. ಹೌದು ಸಂಗೀತಾ ಜೀವ ಕಳೆದುಕೊಂಡ ವಿಚಾರವಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆಯನ್ನು ಸಹ ನಡೆಸಲಾಗುತ್ತಿದೆ.. ಇದಕ್ಕೆ ಸಂಬಂಧ ಪಟ್ಟಂತೆ ನಿನ್ನೆ ಸಂಗೀತಾಳ ಗಂಡ ವಿನಯ್ ಪೊಲೀಸರ ಮುಂದೆ ಹಾಜರಾಗಿದ್ದಾನೆ.. ಹೌದು ಪೊಲೀಸರ ಮುಂದೆ ಬಂದ ವಿನಯ್ ಹೇಳುತ್ತಿರುವ ವಿಚಾರ ಬೇರೆಯದ್ದೇ ರೀತಿಯಾಗಿದೆ..

ಹೌದು ತಾನು ತನ್ನ ಹೆಂಡತಿತನ್ನು ತುಂಬಾ ಪ್ರೀತಿಸುತ್ತಿದ್ದೆ ಎಂದು ಪೊಲೀಸರ ಮುಂದೆ ಕಣ್ಣೀರಿಟ್ಟಿದ್ದಾನೆ..ಹೌದು “ನಾನು ನನ್ನ ಹೆಂಡತಿ ಸಂಗೀತಾಳನ್ನು ಅತಿಯಾಗಿ ಪ್ರೀತಿ ಮಾಡುತ್ತಿದ್ದೆ.. ನಾವು ನಾಲ್ಕು ವರ್ಷ ಪ್ರೀತಿಸಿ ಆನಂತರ ಮದುವೆ ಆಗಿದ್ದು ಸರ್.. ಅವಳಿಗೂ ನನ್ನ ಕಂಡರೆ ತುಂಬಾ ಇಷ್ಟ.. ಅವಳ ಹೆಸರನ್ನೂ ಸಹ ನಾನು ನನ್ನ ಕೈಮೇಲೆ ಹಾಕಿಸಿಕೊಂಡಿದ್ದೀನಿ. ಅವಳೆಂದರೆ ನನಗೆ ಅಷ್ಟು ಪ್ರೀತಿ.. ಅವಳು ನನ್ನಿಂದ ಎಂದೂ ಸಹ ದೂರವಾಗಬಾರದು ಅಂತ ಅತಿಯಾಗಿ ಪ್ರೀತಿಸುತ್ತಿದ್ದೆ.. ಆದರೆ ಅದೇ ಪ್ರೀತಿ ಅವಳಿಗೆ ಈ ರೀತಿ ಮಾಡಿತು ಎಂದರೆ ನನಗೆ ನೋವಾಗುತ್ತಿದೆ.. ನನ್ನ ತಪ್ಪೇನೆ ಇದ್ದರೂ ನನಗೆ ಹೇಳಬೇಕಿತ್ತು.. ನನ್ನನ್ನು ಈ ರೀತಿ ಬಿಟ್ಟು ಹೋಗಬಾರದಿತ್ತು..” ಎಂದು ಕಣ್ಣೀರಿಟ್ಟಿದ್ದಾನಂತೆ..

ಒಟ್ಟಿನಲ್ಲಿ ಆಕೆ ಪತ್ರದಲ್ಲಿ ಬರೆದಿರುವುದು ಸತ್ಯವೋ.. ಅಥವಾ ವಿನಯ್ ಪೊಲೀಸರ ಮುಂದೆ ಹೇಳಿದಂತೆ ಅತಿಯಾದ ಪ್ರೀತಿ ಇದಕ್ಕೆಲ್ಲಾ ಕಾರಣವಾಯಿತೋ.. ಅಥವಾ ಪೊಲೀಸರಿಂದ ತಪ್ಪಿಸಿಕೊಳ್ಳಲು ಇಂತಹ ಹೇಳಿಕೆ ನೀಡಿದ್ದಾರೋ ತನಿಖಿ ನಂತರವಷ್ಟೇ ನಿಜಾಂಶ ತಿಳಿಯಲಿದೆ.. ಆದರೆ ಇಷ್ಟು ದಿನಗಳ ಕಾಲ ವಿನಯ್ ಕಾರಣಕ್ಕಾಗಿಯೇ ಸಂಗೀತಾ ಜೀವ ಕಳೆದುಕೊಂಡಿದ್ದಾಳೆ ಎನ್ನಲಾಗಿತ್ತು.. ಆದರೀಗ ವಿನಯ್ ಹೇಳಿಕೆ ಪಡೆದ ನಂತರ ಹೊಸ ಆಯಾಮದಲ್ಲಿ ಯೋಚಿಸುವಂತೆ ಮಾಡಿರೋದು ಮಾತ್ರ ಸತ್ಯ..