ಕನ್ನಡ ಕಿರುತೆರೆಯ ಖ್ಯಾತ ಧಾರಾವಾಹಿಗಳಲ್ಲಿ ಒಂದಾದ ಕನ್ನಡತಿ ಧಾರಾವಾಹಿ ಸಾಕಷ್ಟು ವಿಚಾರಗಳ ಮೂಲಕ ಜನರ ಮನಗೆದ್ದಿದ್ದು ಪ್ರೇಕ್ಷಕರ ನೆಚ್ಚಿನ ಧಾರಾವಾಹಿಯಾಗಿದೆ. ಒಂದು ಕಡೆ ಹರ್ಷ ಹಾಗೂ ಭುವಿ ಜೋಡಿ ದೊಡ್ಡ ಹಿಟ್ ಜೋಡಿಯಾಗಿದ್ದರೆ ಮತ್ತೊಂದು ಕಡೆ ಅದೇ ಧಾರಾವಾಹಿಯಲ್ಲಿನ ಸಾನಿಯಾ ವರೂ ಅಮ್ಮಮ್ಮ ಹೀಗೆ ಸಾಕಷ್ಟು ಮಂದಿ ತಮ್ಮ ಪಾತ್ರಗಳ ಮೂಲಕವೇ ಜನರಿಗೆ ಹತ್ತಿರವಾಗಿದ್ದರು.. ಇನ್ನು ನಾಯಕಿಯಷ್ಟೇ ಪ್ರಾಮುಖ್ಯತೆಯನ್ನು ಸಾನಿಯಾ ಹಾಗೂ ವರೂ ಪಾತ್ರಕ್ಕೆ ನೀಡಿದ್ದು ಎಲ್ಲಾ ಕಲಾವಿದರನ್ನೂ ಸಹ ಹೈಲೈಟ್ ನಾಡಿ ತೋರಿಸುತ್ತಿದ್ದದ್ದು ಕನ್ನಡತಿ ಧಾರಾವಾಹಿಯ ವಿಶೇಷತೆ ಎನ್ನಬಹುದು.. ಆದರೆ ಈಗ ಕನ್ನಡತಿ ಧಾರಾವಾಹಿಯ ಪ್ರಮುಖ ಪಾತ್ರಧಾರಿ ಸಾನಿಯಾ ಧಾರಾವಾಹಿಯಿಂದ ಹೊರ ಬಂದಿದ್ದಾರೆ..

ಹೌದು ಸಾನಿಯಾ ಅಮ್ಮಮ್ಮನ ಮನೆ ಸೊಸೆಯಾಗಿ ಹರ್ಷನಿಗೆ ಸರಿಯಾಗಿ ಟಕ್ಕರ್ ಕೊಡುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.. ನೋಡಲು ಸಹ ನಾಯಕಿಗೇನೂ ಕಡಿಮೆ ಒಲ್ಲದಂತೆ ಇದ್ದ ಸಾನಿಯಾ ಪಾತ್ರಧಾರಿ ರಮೋಲಾ ಕಿರುತೆರೆ ಪ್ರೇಕ್ಷಕರಲ್ಲಿ ಸಾನಿಯಾ ಎಂದೇ ಹೆಸರುವಾಸಿಯಾಗಿದ್ದರು.. ಎಲ್ಲಿಯೇ ಹೋದರೂ ಸಾನಿಯಾ ಸಾನಿಯಾ ಎಂದೇ ಗುರುತಿಸುವಂತಾಗಿದ್ದು ಆ ಪಾತ್ರ ಅಷ್ಟು ದೊಡ್ಡ ಮಟ್ಟದ ಯಶಸ್ಸನ್ನು ನೀಡಿತ್ತು.. ಇತ್ತ ಆದಿ ಸಾನಿಯಾ ಜೋಡಿಯೂ ಸಹ ಒಂದು ರೀತಿ ಜನರಿಗೆ ಮನರಂಜನೆ ನೀಡಿದರೆ ಮತ್ತೊಂದು ಕಡೆ ಸಾನಿಯಾ ಹಾಗೂ ವರು ಕಾಂಬಿನೇಷನ್ನಿನಲ್ಲಿ ಮೂಡಿ ಬರುತ್ತಿದ್ದ ದೃಶ್ಯಗಳು ಬಹಳ ಖುಷಿ ಕೊಡುತ್ತಿದ್ದವು.. ಸಾನಿಯಾ ಪಾತ್ರಕ್ಕೆ ಬೇರೆ ಯಾರನ್ನೂ ಸಹ ಊಹಿಸಿಕೊಳ್ಳಲಾಗದಷ್ಟು ಪಾತ್ರಕ್ಕೆ ಜೀವ ತುಂಬಿದ್ದರು ರಮೋಲಾ.. ಆದರೆ ಇದೀಗ ಇದ್ದಕಿದ್ದ ಹಾಗೆ ಧಾರಾವಾಹಿಯಿಂದ ಹೊರ ನಡೆದಿದ್ದು ಜನರಿಗೆ ಬಹಳ ಬೇಸರ ತಂದಿದೆ..

ಹೌದು ಕನ್ನಡತಿ ಧಾರಾವಾಹಿ ಕಳೆದ ಕೆಲ ದಿನಗಳಿಂದ ಹರ್ಷ ಹಾಗೂ ಭುವಿಯ ಪ್ರೀತಿಯ ರೋಚಕ ಸಂಚಿಕೆಗಳು ಪ್ರಸಾರವಾಗುತ್ತಿದ್ದು ಬಹಳಷ್ಟು ಕುತೂಹಲವನ್ನೂ ಸಹ ಮೂಡಿಸಿದೆ.. ಇತ್ತ ಹರ್ಷ ತನ್ನ ಮನದ ಮಾತು ಹೇಳಿಕೊಂಡು ಭುವಿಯ ಉತ್ತರಕ್ಕಾಗಿ ಕಾಯುತ್ತಿದ್ದರೆ ಅತ್ತ ಭುವಿಯ ಜೊತೆ ಹರ್ಷನ ರಾಣಿಗಡದ ರೋಡ್ ಟ್ರಿಪ್.. ಇನ್ನು ಇದೀಗ ಭುವಿಯೂ ಸಹ ತನ್ನ ಮನದಲ್ಲಿ ಹರ್ಷನ ಮೇಲಿರುವ ಬೆಟ್ಟದಷ್ಟು ಪ್ರೀತಿಯನ್ನು ಹರ್ಷನ ಮುಂದೆಯೇ ಹೇಳಿಕೊಂಡಿದ್ದು ಒಂದು ರೀತಿ ಪ್ರೇಕ್ಷಕರಿಗೆ ನವಿರಾದ ಪ್ರೀತಿಯ ಕತೆಯ ರಸದೌತಣ ನೀಡುತ್ತಿದೆ.. ಆದರೆ ಇಂತಹ ಸಮಯದಲ್ಲಿ ಧಾರಾವಾಹಿಯ ಪ್ರಮುಖ ಪಾತ್ರಧಾರಿ ಸಾನಿಯಾ ಹೊರ ಬಂದಿದ್ದು ಧಾರಾವಾಹಿಯ ಪ್ರೇಕ್ಷಕರಿಗೆ ಸಾಕಷ್ಟು ನಿರಾಸೆ ಮೂಡಿಸಿರುವುದಂತೂ ಸತ್ಯ..

ಹೌದು ಕಳೆದ ಕೆಲ ದಿನಗಳ ಹಿಂದೆಯೇ ರಮೋಲಾ ಕನ್ನಡತಿ ಧಾರಾವಾಹಿ ಬಿಟ್ಟಿದ್ದು ಧಾರಾವಾಹಿಯಲ್ಲಿ ಕೆಲ ಸಂಚಿಕೆಗಳಿಂದ ಸಾನಿಯಾ ಕೇವಲ ಫೋನ್ ನಲ್ಲಿ ಮಾತನಾಡುವಂತೆ ಸಂದರ್ಭಗಳನ್ನು ಸೃಷ್ಟಿಸಿ ಮ್ಯಾನೇಜ್ ಮಾಡುತ್ತಿದ್ದದ್ದು ಕಂಡು ಬಂದಿತ್ತು.. ಇನ್ನು ಇದೀಗ ನಿನ್ನೆಯಿಂದ ಸಾನಿಯಾ ಪಾತ್ರಕ್ಕೆ ಹೊಸ ನಟಿಯ ಆಗಮನವಾಗಿದ್ದು ರಮೋಲಾ ಧಾರಾವಾಹಿ ಇಂದ ಹೊರ ನಡೆದಿರುವುದು ಅಧಿಕೃತವಾಗಿದೆ.. ಇನ್ನು ಈ ರೀತಿ ದೊಡ್ಡ ಯಶಸ್ಸು ಕೊಡುತ್ತಿರುವ ಸಮಯದಲ್ಲಿ ಧಾರಾವಾಹಿಯಿಂದ ಯಾರೂ ಸಹ ಹೊರ ಹೋಗುವುದಿಲ್ಲ ಆದರೂ ರಮೋಲಾ ಹೊತ ಹೋಗಿದ್ದರ ಬಗ್ಗೆ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲವನ್ನೂ ಸಹ ಮೂಡಿಸಿತ್ತು.. ಅದೆಲ್ಲಾ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದೆ.. ಹೌದು ರಮೋಲ ಕನ್ನಡತಿ ಧಾರಾವಾಹಿಯಿಂದ ಹೊರ ಬರಲು ನಿಜವಾದ ಕಾರಣವೇನೆಂದು ತಿಳಿದಿದೆ..

ಹೌದು ಸಧ್ಯ ಸಾನಿಯಾ ಪಾತ್ರಕ್ಕೆ ಹೊಸದಾಗಿ ಬಂದಿರುವ ನಟಿ ಆರೋಹಿ ಸೈನಾ.. ಹೌದು ಆರೋಹಿ ಸೈನಾ ಈ ಹಿಂದೆ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹೂಮಳೆ ಧಾರಾವಾಹಿಯಲ್ಲಿ ನಾಯಕನ ಅಕ್ಕನ ಪಾತ್ರಕ್ಕೆ ಬದಲಿ ಕಲಾವಿದೆಯಾಗಿ ಬಂದಿದ್ದರು.. ಧಾರಾವಾಹಿ ಮುಕ್ತಾಯವಾಗುವವರೆಗೂ ಆ ಪಾತ್ರವನ್ನು ನಿಭಾಯಿಸಿ ಸೈ ಎನಿಸಿಕೊಂಡಿದ್ದರು.. ಇದೀಗ ಕನ್ನಡತಿ ಧಾರಾವಾಹಿಯ ಬದಲಿ ಪಾತ್ರಕ್ಕೆ ಆಗಮಿಸಿದ್ದು ನಿನ್ನೆಯಿಂದ ಅವರ ಸಂಚಿಕೆಗಳು ಪ್ರಸಾರವಾಗುತ್ತಿದೆ.. ಶುರುವಿನಲ್ಲಿ ಹೊಸ ಪಾತ್ರಧಾರಿಯನ್ನು ಒಪ್ಪಿಕೊಳ್ಳುವುದು ಪ್ರೇಕ್ಷಕರಿಗೆ ಕಷ್ಟವಾದರೂ ಸಹ ಮುಂದಿನ ಸಂಚಿಕೆಗಳಲ್ಲಿ ಯಾವ ರೀತಿ ಆ ಪಾತ್ರವನ್ನು ತೋರುವರೋ ಕಾದು ನೋಡಬೇಕಿದೆ..

ಇನ್ನು ಇತ್ತ ರಮೋಲಾ ಕನ್ನಡತಿಯಿಂದ ಹೊರ ಬರಲು ನಿಜವಾದ ಕಾರಣ ಅವರು ತೆಲುಗು ಕಿರುತೆರೆಗೆ ಕಾಲಿಡುತ್ತಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.. ಹೌದು ಕನ್ನಡತಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರವಾದರೂ ಸಹ ನಾಯಕಿಯ ಪಾತ್ರಕ್ಕಿಂತ ಒಂದು ಹೆಜ್ಜೆ ಹಿಂದೆಯೇ ಎನ್ನಬಹುದು.. ಜೊತೆಗೆ ತಿಂಗಳಲ್ಲಿ ಕಡಿಮೆ ದಿನಗಳ ಚಿತ್ರೀಕರಣ ಮಾತ್ರ ಇಂತಹ ಪಾತ್ರಗಳಿಗೆ ಇರುತ್ತದೆ.. ಸಧ್ಯ ತೆಲುಗು ಇಂಡಸ್ಟ್ರಿಯಲ್ಲಿ ರಮೋಲಾ ಅವರಿಗೆ ಧಾರಾವಾಹಿಯಲ್ಲಿ ನಾಯಕಿಯಾಗಿ ಅವಕಾಶ ದೊರೆತಿದ್ದು ಅಲ್ಲಿ ಸಂಭಾವನೆಯೂ ಹೆಚ್ಚಿದೆ ಎಂದು ತಿಳಿದುಬಂದಿದೆ. ಜೊತೆಗೆ ತಿಂಗಳಲ್ಲಿ ಕಡಿಮೆ ಎಂದರೂ ಇಪ್ಪತ್ತು ದಿನಗಳ ಚಿತ್ರೀಕರಣ ಇರುವ ಕಾರಣ ಇತ್ತ ಬೆಂಗಳೂರಿಗೆ ಹಾಗೂ ಹೈದರಾಬಾದ್ ಗೆ ಓಡಾಡುವುದು ಹಾಗೂ ಡೇಟ್ಸ್ ಹೊಂದಿಸಿಕೊಳ್ಳುವುದು ಕಷ್ಟವಾಗಬಹುದೆಂದು ಕನ್ನಡತಿ ಧಾರಾವಾಹಿಯಿಂದ ಹೊರ ಬಂದಿದ್ದಾರೆ ಎಂದು ತಿಳಿದುಬಂದಿದೆ..