ಗಂಡು ಮಗುವಿಗೆ ಜನ್ಮ ನೀಡಿದ ಸಂಜನಾ ಗರ್ಲಾನಿ.. ಮಗು ಹೇಗಿದೆ ನೋಡಿ..

0 views

ಸಂಜನಾ ಗರ್ಲಾನಿ ಸಧ್ಯ ಕಳೆದ ಎರಡು ವರ್ಷದಿಂದ ಸ್ಯಾಂಡಲ್ವುಡ್ ನಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿ ಹಾಗೂ ಸದ್ದು ಮಾಡಿದ ನಟಿ.. ಸಧ್ಯ ಗಂಡು ಮಗುವಿಗೆ ಜನ್ಮ ನೀಡಿದ್ದು ಸಂತೋಷ ಹಂಚಿಕೊಂಡಿದ್ದಾರೆ.. ಹೌದು ನಟಿ ಸಂಜನಾ ಗರ್ಲಾನಿ ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು ಎರಡೂ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ..

ಹೌದು ಗಂಡ ಹೆಂಡತಿ‌ ಸಿನಿಮಾ ಮೂಲಕ ಸ್ಯಾಂಡಲ್ವುಡ್ ನಲ್ಲಿ ಗುರುತಿಸಿಕೊಂಡ ಸಂಜನಾ ಗರ್ಲಾನಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಹೆಸರು ಮಾಡಿದರು.. ನಂತರ ಕಳೆದ ಎರಡು ವರ್ಷದ ಹಿಂದೆ ಸ್ಯಾಂಡಲ್ವುಡ್ ನಲ್ಲಿ ಸೃಷ್ಟಿಯಾದ ವಿವಾದದಲ್ಲಿ ಗುರಿಯಾಗಿ ಸಾಕಷ್ಟು ತಿಂಗಳುಗಳ ಕಾಲ ಒಳಗಿರುವಂತಾಗಿತ್ತು.. ಆ ಸಮಯದಲ್ಲಿ ಸಂಜನಾ ಗರ್ಲಾನಿ‌ ಅದಾಗಲೇ ಮದುವೆಯಾಗಿರುವ ವಿಚಾರ ಬೆಳಕಿಗೆ ಬಂದಿತ್ತು..

ಹೌದು ಸಂಜನಾ ಕಳೆದ ಮೂರು ವರ್ಷದ ಹಿಂದೆಯೇ ಅಜೀಜ್ ಪಾಷಾ ಎಂಬುವವರನ್ನು ಮದುವೆಯಾಗಿದ್ದರು.. ಆದರೆ ಇಂಡಸ್ಟ್ರಿಯಲ್ಲಿ ನಟಿಯರಿಗೆ ಮದುವೆಯಾಗಿದೆ ಎಂದರೆ ಸಿನಿಮಾ ಅವಕಾಶಗಳಿ ಸಿಗದು ಎಂಬ ಕಾರಣಕ್ಕೆ ಮದುವೆ ಆಗಿರುವ ವಿಚಾರವನ್ನು‌ ಖಾಸಗಿಯಾಗಿ ಇರಿಸಿದ್ದರು.. ಆದರೆ ಸ್ಯಾಂಡಲ್ವುಡ್ ವಿವಾದದಲ್ಲಿ ಪೊಲೀಸ್ ಠಾಣೆಯಲ್ಲಿ ಸಂಜನ ಶ್ರೀಮತಿ ಸಂಜನಾ ಎಂಬ ವಿಚಾರ ತಿಳಿದು ಬಂದಿದ್ದು ಅವರು ಮುಸ್ಲಿಂ ಸಮುದಾಯದ ಅಜೀಜ್ ಪಾಷಾ ಅವರನ್ನು ಮದುವೆಯಾಗಿ ಸಂಜನಾ ಸಹ ಮುಸ್ಲಿಂ ಸಮುದಾಯಕ್ಕೆ ಬದಲಾಗಿರುವ ವಿಚಾರ ಹೊರ ಬಂದಿತ್ತು.. ನಂತರ ಈ ಎಲ್ಲಾ ವಿವಾದಗಳಿಂದ ಹೊರ ಬಂದ ನಂತರ ಗಂಡನ ಜೊತೆ ಕಾಣಿಸಿಕೊಂಡ ಸಂಜನಾ ತಮ್ಮ ಮದುವೆಯ ವಿಚಾರವನ್ನು ಬಹಿರಂಗ ಮಾಡಿದ್ದರು..

ಅಜೀಜ್ ಪಾಷಾ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಸರ್ಜನ್ ಆಗಿ ಕೆಲಸ ಮಾಡುತ್ತಿದ್ದು ಇವರಿಬ್ಬರದ್ದು ಲವ್ ಮ್ಯಾರೇಜ್ ಆಗಿದೆ.. ಹೌದು ಆಸ್ಪತ್ರೆಯಲ್ಲಿ ಭೇಟಿಯಾದ ಇವರಿಬ್ಬರ ನಡುವೆ ಸ್ನೇಹವಾಗಿ ಸ್ನೇಹ ಪ್ರೀತಿಯಾಗಿ ಕಳೆದ ಕೆಲ ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಇನ್ನು ಕೆಲ ತಿಂಗಳ ಹಿಂದೆ ಗರ್ಭಿಣಿಯಾದ ವಿಚಾರ ಹಂಚಿಕೊಂಡಿದ್ದ ಸಂಜನಾ ಸಾಮಾಜಿಕ ಜಾಲತಾಣದಲ್ಲಿ ಸಂತೋಷ ಹಂಚಿಕೊಂಡು ಸಾಕಷ್ಟು ವೀಡಿಯೋಗಳನ್ನು ಪೋಸ್ಟ್ ಮಾಡಿದ್ದರು..

ಇನ್ನು ಹಿಂದೂ ಹಾಗೂ ಮುಸ್ಲಿಂ ಎರಡೂ ಸಂಪ್ರದಾಯದಂತೆ ಸೀಮಂತ ಶಾಸ್ತ್ರ ಮಾಡಿಕೊಂಡಿದ್ದ ಸಂಜನಾ ಗರ್ಲಾನಿ ಕೆಲ ದಿನಗಳಲ್ಲಿ ಮಗು ವಿಚಾರ ತಿಳಿಸಿದ್ದು ಇದೀಗ ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.. ಇನ್ನು ತಾಯಿ ಮಗು ಹೇಗಿದೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಗಂಡ ಅಜೀಜ್ ಪಾಷಾ ಅವರು ತಾಯಿ ಮಗು ಇಬ್ಬರೂ ಸಹ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದು ಸ್ನೇಹಿತರು ತಾಯಿ ಮಗು ಇಬ್ಬರಿಗೂ ಸಹ ಹಾರೈಸಿದ್ದಾರೆ..

ಸಧ್ಯ ಸಿನಿಮಾ ಇಂಡಸ್ಟ್ರಿಯಿಣ್ದ ಬ್ರೇಕ್‌ ಪಡೆದುಕೊಂಡಿರುವ ಸಂಜನಾ ಗರ್ಲಾನಿ ತಾಯಿಯಾದ ಸಂತೋಷದಲ್ಲಿದ್ದು ಮುಂಬರುವ ದಿನಗಳಲ್ಲಿ ಸಿನಿಮಾ ಇಂಡಸ್ಟ್ರಿಗೆ ಮರಳುವುದು ಅನುಮಾನವಾಗಿದ್ದು ಕುಟುಂಬದ ಜೊತೆ ಸಮಯ ಕಳೆಯುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.. ಸಧ್ಯ ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚಿ ನಂತರದ ದಿನಗಳಲ್ಲಿ ಮದುವೆಯಾಗಿ ಸಿನಿಮಾ ರಂಗದಿಂದ ದೂರ ಉಳಿದು ಕುಟುಂಬ ಮನೆ ಮಕ್ಕಳು ಅಂತ ಸಂತೋಷವಾಗಿ ಸಮಯ ಕಳೆಯುತ್ತಿರುವ ನಟಿಯರ ಪಟ್ಟಿಗೆ ಇದೀಗ ಸಂಜನಾ ಗರ್ಲಾನಿ ಸೇರ್ಪಡೆಯಾಗಿದ್ದು ತಾಯ್ತನದ ಸಂತೋಷ ಹಂಚಿಕೊಂಡ ಸಂಜನಾಗೆ ಸ್ನೇಹಿತರು ಶುಭಾಶಯ ತಿಳಿಸಿದ್ದಾರೆ..