ನನ್ನ ಗಂಡನಿಂದಲೇ ನನಗೆ ಕೊರೊನಾ ಬಂತು.. ಗಂಡನ ಬಗ್ಗೆ ಸತ್ಯ ಬಿಚ್ಚಿಟ್ಟ ನಟಿ ಸಂಜನಾ ಗರ್ಲಾನಿ.. ನಿಜಕ್ಕೂ ಸಂಜನಾರ ಗಂಡ ಯಾರು ಗೊತ್ತಾ?

0 views

ಸ್ಯಾಂಡಲ್ವುಡ್ ನ ಖ್ಯಾತ ನಟಿ ಸಂಜನಾ ಗರ್ಲಾನಿ ಅವರಿಗೆ ಕೊರೊನಾ ಪಾಸಿಟಿವ್ ಆಗಿದ್ದು ಸದ್ಯ ಇದೀಗ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.. ಆದರೆ ತಮಗೆ ಕೊರೊನಾ ಬರಲು ನನ್ನ ಗಂಡನೇ ಕಾರಣ ಎಂದಿದ್ದು ಈ ಬಗ್ಗೆ ವಿವರಣೆ ನೀಡಿದ್ದಾರೆ.. ಹೌದು ಸ್ಯಾಂಡಲ್ವುಡ್ ನ ಬಹಳಷ್ಟು ಕಲಾವಿದರು.. ತಂತ್ರಜ್ಞರು.. ನಿರ್ದೇಶಕ ನಿರ್ಮಾಪಕರುಗಳು ಕೊರೊನಾ ಸೋಂಕಿಗೆ ತುತ್ತಾಗಿದ್ದು ಅನೇಕರು ಜೀವ ಕಳೆದುಕೊಂಡರೆ ಮತ್ತಷ್ಟು ಮಂದಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ..

ಇನ್ನೂ ನಟಿ ಸಂಜನಾ ಗರ್ಲಾನಿ ಅವರಿಗೂ ಸಹ ಕೊರೊನಾ ಪಾಸಿಟಿವ್ ಆಗಿದ್ದು ಸದ್ಯ ಚಿಕಿತ್ಸೆ ಪಡೆದು ಗುಣಮುಖರಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.. ಅಷ್ಟೇ ಅಲ್ಲದೇ ಮೊದಲ ಬಾರಿಗೆ ತಮ್ಮ ಗಂಡನ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ.. ಹೌದು ಸಂಜನಾ ಗರ್ಲಾನಿ ಅವರು ಕಳೆದ ವರ್ಷ ಸ್ಯಾಂಡಲ್ವುಡ್ ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ವಿಚಾರದಲ್ಲಿ ಸಿಲುಕಿ ನಾಲ್ಕು ತಿಂಗಳ ಕಾಲ ಪರಪ್ಪನ ಅಗ್ರಹಾರದಲ್ಲಿ ಇದ್ದು ಜಾಮೀನು ಪಡೆದು ಹೊರ ಬಂದಿದ್ದರು.. ಆ ಸಮಯದಲ್ಲಿ ಸಂಜನಾ ಅವರು ಮದುವೆಯಾದ ವಿಚಾರ ಹೊರ ಜಗತ್ತಿಗೆ ತಿಳಿಯಿತು.. ಅಲ್ಲಿಯವರೆಗೂ ತಮ್ಮ ಮದುವೆ ವಿಚಾರವನ್ನು ಸಂಜನಾ ಅವರು ಹೊರಗೆಲ್ಲೂ ಹೇಳಿಕೊಂಡಿರಲಿಲ್ಲ.. ಸಿನಿಮಾ ಇಂಡಸ್ಟ್ರಿಯಲ್ಲಿ ಮದುವೆಯಾಗಿದೆ ಎಂಬ ವಿಚಾರ ಹೇಳಿದರೆ ಅವಕಾಶಗಳು ಕಡಿಮೆಯಾಗುತ್ತವೆ ಎಂಬ ಕಾರಣವೂ ಇರಬಹುದು..

ಹೌದು ಸಂಜನಾ ಅವರು ಪರಪ್ಪನ ಅಗ್ರಹಾರದಲ್ಲಿ ಇದ್ದ ಸಮಯದಲ್ಲಿ ಸಂಜಮಾ ಅವರು ವರ್ಷಗಳ ಹಿಂದೆಯೇ ಡಾಕ್ಟರ್ ಒಬ್ಬರನ್ನು ಮದುವೆಯಾಗಿದ್ದರು ಎಂಬ ಸುದ್ದಿ ಹೊರ ಬಂತು.. ಹೌದು ಬೆಂಗಳೂರಿನ ಪ್ರಖ್ಯಾತ ಆಸ್ಪತ್ರೆಯ ವೈದ್ಯ ಡಾ.ಅಜೀಜ್ ಪಾಶಾ ಎಂಬುವವರನ್ನು ವರ್ಷಗಳ ಹಿಂದೆಯೇ ನಟಿ ಸಂಜನಾ ಗರ್ಲಾನಿ ಅವರು ಮದುವೆಯಾಗಿದ್ದರು.. ಅಷ್ಟೇ ಅಲ್ಲದೇ ತಾವೂ ಸಹ ಗಂಡನ ಮತಕ್ಕೆ ಮತಾಂತರವೂ ಆಗಿ ಹೆಸರನ್ನೂ ಸಹ ಬದಲಿಸಿಕೊಂಡಿದ್ದು ಪೊಲೀಸ್ ಠಾಣೆಯಲ್ಲಿ ಸಹಿ ಮಾಡಿದ ಸಮಯದಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ..

ಇನ್ನು ಪರಪ್ಪನ ಅಗ್ರಹಾರದಿಂದ ಹೊರ ಬಂದ ಬಳಿಕ ಹೊರಗೆಲ್ಲೂ ಕಾಣಿಸಿಕೊಳ್ಳದ ಸಂಜನಾ ಕೆಲ ತಿಂಗಳಿಂದ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿದ್ದರು.. ಇನ್ನು ಸಂಜನಾ ಅವರಿಗೆ ಕೆಲ ದಿನಗಳ ಹಿಂದಷ್ಟೇ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು.. ಈ ಸಮಯದಲ್ಲಿ ತಮ್ಮ ಗಂಡನ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ..

ಹೌದು ತಮಗೆ ಕೊರೊನಾ ಬಂದದ್ದರ ಬಗ್ಗೆ ತಿಳಿಸಿರುವ ಸಂಜನಾ ಅವರು ನನ್ನ ಗಂಡ ಕೊರೊನಾ ವಾರಿಯರ್ ಆಗಿದ್ದು.. ಮಣಿಪಾಲ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಾರೆ.. ನನ್ನ ಗಂಡ ಡಾ. ಅಜೀಜ್ ಅವರಿಂದಲೇ ನನಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು.. ನನಗೆ ಚಿಕ್ಕ ವಯಸ್ಸಿನಿಂದಲೇ ಉಸಿರಾಟದ ಸಮಸ್ಯೆ ಇದೆ.. ಈಗಲೂ ನಾನು ಬ್ರೀಥಿಂಗ್ ಉಪಕರಣವನ್ನು ಬಳಸುತ್ತೇನೆ.. ನನಗೆ ಎದೆ ನೋವು ಸಹ ಆಗಾಗ ಕಾಣಿಸಿಕೊಳ್ಳುತ್ತದೆ.. ಕೊರೊನಾ ಬಂದಾಗ ಸ್ವಲ್ಪ ಹೆಚ್ಚೇ ಆತಂಕವಾಯಿತು.. ಆದರೆ ತಕ್ಷಣ ನಾನು ಚಿಕಿತ್ಸೆ ಪಡೆದ ಕಾರಣ ಗುಣಮುಖಳಾಗಿದ್ದೇನೆ ಎಂದಿದ್ದಾರೆ.. ಕೊರೊನಾ ಬಂದರೆ ಆತಂಕ ಪಡುವ ಬದಲು ಲಕ್ಷಣ ಗಳು ಕಾಣಿಸಿಕೊಳ್ಳುತ್ತಿದ್ದಂತೆಯೇ ವೈದ್ಯರ ಸಲಹೆ ಪಡೆದು ಚಿಕಿತ್ಸೆ ಪಡೆದರೆ ಗುಣಮುಖರಾಗಬಹುದು ಎಂದಿದ್ದಾರೆ..