ಸಂಜನಾರ ಬಗ್ಗೆ ಆ ವಿಚಾರ ಮಾತನಾಡಿದ್ದಕ್ಕೆ ವಾಹಿನಿಯನ್ನು ತರಾಟೆಗೆ ತೆಗೆದುಕೊಂಡ ನಟಿ ಸಂಜನಾ.. ನಿಜಕ್ಕೂ ನಡೆದದ್ದೇನು ಗೊತ್ತಾ..

0 views

ನಟಿ ಸಂಜನಾ ಗರ್ಲಾನಿ, ಸ್ಯಾಂಡಲ್ವುಡ್ ನ ಖ್ಯಾತ ನಟಿಯಾದರೂ ಸಹ ಸಿನಿಮಾಗಳ ವಿಚಾರದ ಜೊತೆಗೆ ಅದಕ್ಕಿಂತ ಕೊಂಚ ಹೆಚ್ಚಾಗಿ ವ್ಯಯಕ್ತಿಕ ವಿಚಾರಗಳಿಗೆ ಸುದ್ದಿಯಾದ ನಟಿ.. ಅದರಲ್ಲಿಯೂ ಕಳೆದ ಒಂದೆರೆಡು ವರ್ಷಗಳಿಂದ ಸ್ಯಾಂಡಲ್ವುಡ್ ನಲ್ಲಿ ಸದ್ದು ಮಾಡಿದ ದೊಡ್ಡ ದೊಡ್ಡ ವಿಚಾರಗಳಲ್ಲಿ ಸಂಜನಾ ಹೆಸರು ಕೇಳಿ ಬಂದು ನಂತರ ಅದೆಲ್ಲದರಿಂದ ಹೊರ ಬಂದ ಸಂಜನಾ ಹೊಸ ಜೀವನವನ್ನು ಶುರು ಮಾಡಿದರು.. ತಮ್ಮದೇ ಆದ ಸಂಸ್ಥೆಯೊಂದನ್ನು ಕಟ್ಟಿ ಜನರಿಗೆ ಸಹಾಯ ಮಾಡುತ್ತಿದ್ದದ್ದು ಮೆಚ್ಚುವ ವಿಚಾರ.. ಸದ್ಯ ಇದೀಗ ಕೆಲ ದಿನಗಳ ಹಿಂದಷ್ಟೇ ತಾಯಿಯಾಗುತ್ತಿರುವ ಸಂತೋಷ ಹಂಚಿಕೊಂಡಿದ್ದ ಸಂಜನಾ ಇದೀಗ ಅದೊಂದು ವಿಚಾರದಿಂದ ಬಹಳ ಬೇಸರ ಪಟ್ಟುಕೊಂಡಿದ್ದು ಈ ಬಾರಿ ನೇರವಾಗಿ ವಾಹಿನಿಯೊಂದನ್ನು ತರಾಟೆಗೆ ತೆಗೆದುಕೊಂಡಿದ್ದಾರೆ..

ಹೌದು ನಟಿ ಸಂಜನಾ ಎರಡು ವರ್ಷದಿಂದ ಬಹಳ ಸುದ್ದಿಯಲ್ಲಿದ್ದರು.. ಸ್ಯಾಂಡಲ್ವುಡ್ ನಲ್ಲಿ ಸುದ್ದಿಯಾದ ಆ ವಿಚಾರದಲ್ಲಿ ಸಂಜನಾ ಹೆಸರು ಕೇಳಿ ಬಂದಾಗಲೇ ಅವರ ಕುರಿತು‌ ಮತ್ತೊಂದು ವಿಚಾರ ಬಯಲಾಯಿತು.. ಹೌದು ಸಂಜನಾ ಗರ್ಲಾನಿ ಮದುವೆಯಾಗಿರುವ ವಿಚಾರ ಆ ಸಮಯದಲ್ಲಿ ತಿಳಿದು ಬಂದಿದ್ದು ವೈದ್ಯರೊಬ್ಬರನ್ನು ಮದುವೆಯಾಗಿದ್ದಾರೆ ಎನ್ನುವ ವಿಚಾರ ಹೊರ ಬಂತು.. ಇನ್ನು ಈ ವಿಚಾರ ಸ್ಯಾಂಡಲ್ವುಡ್ ನ ಕೆಲವರಿಗೆ ಅದಾಗಲೇ ತಿಳಿದಿದ್ದ ವಿಚಾರವಾದರೆ ಮಿಕ್ಕವರಿಗೆ ಆಶ್ಚರ್ಯದ ವಿಚಾರವೂ ಆಗಿತ್ತು..

ಇನ್ನು ಸಂಜನಾ ಆ ಪ್ರಕರಣದಿಂದ ಹೊರ ಬಂದ ನಂತರ ಕೆಲ ದಿನಗಳು ಎಲ್ಲಿಯೂ ಕಾಣಿಸಿಕೊಳ್ಳದೇ ನಂತರ ಎಲ್ಲವನ್ನು ಮರೆತು ಹೊಸ ಜೀವನ ಆರಂಭಿಸಿದರು.. ತಮ್ಮ ಗಂಡನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡು ಸಂತೋಷ ಹಂಚಿಕೊಂಡಿದ್ದರು.. ಇನ್ನು ಇದೀಗ ಹೊಸ ವರ್ಷದ ದಿನ ಸಂಜನಾ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದರು.. ಹೌದು ಸಂಜನಾ ತಾವು ತಾಯಿಯಾಗುತ್ತಿರುವ ವಿಚಾರವನ್ನು ಹಂಚಿಕೊಂಡು ಸಂತೋಷ ಪಟ್ಟಿದ್ದರು.. ಈ ಸಮಯದಲ್ಲಿ ಬಹುತೇಕ ಎಲ್ಲಾ ವಾಹಿನಿಗಳು ಹಾಗೂ ಸಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸುದ್ದಿಯಾಗಿತ್ತು.. ಇದು ಸಾಮಾನ್ಯವೂ ಹೌದು..

ಆದರೆ ಖಾಸಗಿ ವಾಹಿನಿಯಾದ ಸ್ಟಾರ್ ಸುವರ್ಣ ವಾಹಿನಿಯಲ್ಲಿ ತಮ್ಮ ವೆಬ್ಸೈಟ್ ನಲ್ಲಿ ಸಂಜನಾ ತಾಯಿಯಾಗುತ್ತಿರುವ ಸುದ್ದಿಯನ್ನು ಪ್ರಕಟಿಸಲಾಗಿತ್ತು.. ಅದೇ ಸಮಯದಲ್ಲಿ ಸಂಜನಾ ಅವರ ಕುರಿತು ಈ ಹಿಂದೆ ಡಿವೋರ್ಸ್ ಸುದ್ದಿಯೂ ಕೇಳಿ ಬಂದಿತ್ತು ಎಂದು ಪ್ರಕಟಿಸಿದ್ದು ಪುರಾವೆ ಇಲ್ಲದೆ ಹೇಗೆ ಡಿವೋರ್ಸ್ ಎಂಬ ಪದವನ್ನು ಬಳಸಿದ್ದೀರಿ ಎಂದು ಸಂಜನಾ ನೇರವಾಗಿ ವಾಹಿನಿಯ ಸಂಬಂಧಪಟ್ಟವರಿಗೆ ಫೋನ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ..

ಹೌದು ಡಿವೋರ್ಸ್ ಅಂತ ನಿಮ್ಮ ವಾಹಿನಿಯಲ್ಲಿ ಹಬ್ಬಿಸಿ ಆನಂತರ ಅದನ್ನು ಡಿಲೀಟ್ ಮಾಡಿಬಿಡ್ತೀರಾ.. ಜನರಿಗೆ ಇದರಿಂದ ತಪ್ಪು ಮಾಹಿತಿ ಹೋಗಿ ನಂತರ ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತ್ತೆ.. ನನ್ನ ಗಂಡ ಒಬ್ಬ ಸರ್ಜನ್ ಮೇಡಂ.. ನಾನು ಗರ್ಭಿಣಿ‌ ಮೇಡಂ.. ಈ ರೀತಿ ನೀವು ಜೀವನ ಹಾಳು ಮಾಡ್ತೀರಾ ಎಂದಿದ್ದಾರೆ.. ಅಷ್ಟೇ ಅಲ್ಲದೇ ಯಾಕ್ ಹೀಗೆ ನನ್ನ ಜೀವನದ ಹಿಂದೆ ಬಿದ್ದೀದ್ದೀರಾ.. ಇದೆಲ್ಲದರಿಂದ ಬೇಜಾರ್ ಆಗಿ ಹೋಗಿದೆ.. ನಿಮ್ಮ ಹೆಸರನ್ನು ಬರೆದಿಟ್ಟು ನಾನು ಜೀವ ಕಳೆದುಕೊಂಡು ಬಿಡಲಾ ಹೇಳಿ ಮೇಡಂ.. ನಿಮಗೂ ಹೆಣ್ಣು ಮಗು ಇರಲ್ವಾ.. ಯಾಕ್ ಹೀಗೆ ಇನ್ನೊಬ್ಬರ ಭಾವನೆ ಜೊತೆ ಆಟ ಆಡ್ತೀರಾ ಎಂದು ನೊಂದುಕೊಂಡು ಮಾತನಾಡಿದ್ದಾರೆ..

ಅಷ್ಟೇ ಅಲ್ಲದೇ ಟಿ ಆರ್ ಪಿ ಗಾಗಿ ನಿಮ್ಮ ಕುಟುಂಬದವರ ಬಗ್ಗೆ ಬರೀತೀರಾ.. ಬರೆದ ನಂತರ ಹೋಗಲಿ ಬಿಡಿ ಅಂತೀರಾ ಎಂದು ಕೇಳಿದ್ದಾರೆ.‌ ಇತ್ತ ಇನ್ನುಮುಂದೆ ನಿಮ್ಮ ಬಗ್ಗೆಗಿನ ಯಾವ ಸುದ್ದಿಯೂ ಪ್ರಸಾರ ಮಾಡುವುದಿಲ್ಲ ಎಂದು ವಾಹಿನಿ ತಿಳಿಸಿದ್ದು ಮಾತು ಮುಕ್ತಾಯವಾಯಿತು..ಇನ್ನು ಇತ್ತ ಸಂಜನಾ ಕೂಡ ಆ ವಿಚಾರವನ್ನು ಅಲ್ಲಿಯೇ ಕೈಬಿಟ್ಟು ಸಧ್ಯ ಐದು ತಿಂಗಳ ಗರ್ಭಿಣಿಯಾಗಿದ್ದು ತಮ್ಮ ಈ ಅಮೂಲ್ಯವಾದ ಸಮಯದ ಹಾರೈಕೆಯ ವೀಡಿಯೋಗಳು ಹಾಗೂ ಸಂತೋಷದ ವಿಚಾರಗಳನ್ನು ಹಂಚಿಕೊಂಡಿದ್ದಾರೆ.. ಒಟ್ಟಿನಲ್ಲಿ ಈ ಹಿಂದೆ ನಟಿ ಅಮೂಲ್ಯ ಅವರು ಗರ್ಭಿಣಿಯಾದ ಸಮಯದಲ್ಲಿ ಇಡೀ ರಾಜ್ಯವೇ ಖುಷಿ ಪಡುವ ಸುದ್ದಿ ಎಂದು ದೊಡ್ಡ ಮಟ್ಟದ ಟ್ರೋಲ್ ಆಗಿದ್ದರೆ ಇತ್ತ ಸಂಜನಾ ವಿಚಾರ ಮತ್ತೊಂದು ರೀತಿಯಲ್ಲಿ ಸುದ್ದಿಯಾಯಿತು..