ಸರಿಗಮಪ ಖ್ಯಾತಿಯ ಸಂಚಿತ್ ಹೆಗ್ಡೆ ಏನಾದರು ಗೊತ್ತಾ?

0 views

ಸರಿಗಮಪ.. ಕನ್ನಡ ಕಿರುತೆರೆಯ ಅತಿ ದೊಡ್ಡ ಸಿಂಗಿಂಗ್ ಶೋ ಎಂದೇ ಖ್ಯಾತಿ‌ ಪಡೆದಿರುವ ಸರಿಗಮಪ ಅನೇಕ ಪ್ರತಿಭೆಗಳನ್ನು ಹೊರ ತಂದಿತು..‌ ಹಳ್ಳಿಗಾಡಿನಲ್ಲಿ ಎಲೆ ಮರೆ ಕಾಯಿಯಂತೆ ಇರುವ ಹಾಡುಗಾರರಿಂದ ಹಿಡಿದು.. ದೇವಸ್ಥಾನದ ಮುಂದೆ ಹಾಡಿ ಜೀವನ ನಡೆಸುತ್ತಿದ್ದ ಹೆಣ್ಣು ಮಕ್ಕಳಿಂದ ಹಿಡಿದು.. ಪಟ್ಟಣಗಳಲ್ಲಿ ಸಂಗೀತಭ್ಯಾಸ ಮಾಡಿ ಅವಕಾಶಕ್ಕಾಗಿ ಕಾಯುತ್ತಿದ್ದ ಅದೆಷ್ಟೋ ಮಂದಿಗೆ ಸರಿಗಮಪ ವೇದಿಕೆ ಜೀವನ ಕಟ್ಟಿಕೊಳ್ಳಲು ನೆರವಾಗಿದ್ದು ಸುಳ್ಳಲ್ಲ..

ಮೊನ್ನೆ ಮೊನ್ನೆಯಷ್ಟೇ ಅದೇ ಕಾರ್ಯಕ್ರಮದಲ್ಲಿ ಹಾಡಿದ್ದ ಉತ್ತರ ಕರ್ನಾಟಕ ಮೂಲದ ಹನುಮಂತನ ವಿಚಾರ ದೊಡ್ಡ ಸುದ್ದಿಯಾಗಿ ಕೊನೆಗೆ ಆತನೇ ಸ್ಪಷ್ಟನೆ ಕೊಟ್ಟು ವಾಹಿನಿ ನನಗೆ ಕೊಡಬೇಕಾದದ್ದು ಎಲ್ಲವನ್ನು ಕೊಟ್ಟಿದೆ ಎಂದು ಹೇಳಿ ವಿಚಾರಕ್ಕೆ ತೆರೆ ಎಳೆದಿದ್ದನು.. ಇನ್ನು ಇದೇ ಸರಿಗಮಪ ಶೋ ನಲ್ಲಿ ಹಾಡಿದ ಅದೆಷ್ಟೋ ಮಂದಿ ಇಂದು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹಿನ್ನೆಲೆ ಗಾಯಕರಾಗಿ ಹೆಸರು‌ ಮಾಡಿದ್ದಾರೆ..

ಅವರಲ್ಲಿ ಒಬ್ಬರು ಸಂಚಿತ್ ಹೆಗ್ಡೆ.. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಬ್ಯುಸಿ ಆಗಿದ್ದ ಗಾಯಕ ಈಗ ಏನಾಗಿದ್ದಾರೆ ಗೊತ್ತಾ.. ನಿಜಕ್ಕೂ ಜನರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.. ಹೌದು ಸರಿಗಮಪ ವೇದಿಕೆಯಲ್ಲಿ ಯಾರೇನೆ ಅಂದುಕೊಂಡರು‌ ಕೆಲವರು ಟೀಕಿಸಿದರೂ ಸಹ ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಹಾಡುಗಳನ್ನು ಹಾಡುವ ಮೂಲಕ ಜನ ಮನ ಗೆದ್ದರು.. ಕನ್ನಡ ಮಾತ್ರವಲ್ಲದೇ ತಮಿಳಿನ ಸರಿಗಮಪ ದಲ್ಲಿಯೂ ಸಹ ಭಾಗವಹಿಸಿ ಹೆಸರು ಮಾಡಿದರು.. ಕನ್ನಡ ಸರಿಗಮಪ ದಲ್ಲಿ ಶೋ ಗೆಲ್ಲದಿದ್ದರೂ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದರು.. ಶೋ ಮುಗಿಯುತ್ತಿದ್ದಂತೆ ಅರ್ಜುನ್ ಜನ್ಯ ಅವರು ತಮ್ಮ ಕಾಲೇಜ್ ಕುಮಾರ ಸಿನಿಮಾದಲ್ಲಿ ಹಾಡಿಸುವ ಮೂಲಕ ಸಂಚಿತ್ ಹೆಗ್ಡೆ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟರು..

ನಂತರ ಸಂಚಿತ್ ಹಿಂತಿರುಗಿ ನೋಡಿದ್ದೇ ಇಲ್ಲ.. ಸಾಲು ಸಾಲು ಹಿಟ್ ಹಾಡುಗಳನ್ನು ನೀಡಿದರು.. ಸಂಚಿತ್ ಹೆಗ್ಡೆಯ ಪ್ರತಿಭೆಯನ್ನು ನೋಡಿದ್ದ ಅರ್ಜುನ್ ಜನ್ಯ ಅವರು ತಮ್ಮ ಸಂಗೀತ ನಿರ್ದೇಶನದ ಸಾಲು ಸಾಲು ಸಿನಿಮಾಗಳಲ್ಲಿ ಹಾಡಲು ಅವಕಾಶ ನೀಡಿದರು.. ಬರುಬರುತ್ತಿದ್ದಂತೆ ಕನ್ನಡದ ಬಹಳ ಬ್ಯುಸಿಯೆಸ್ಟ್ ಹಾಡುಗಾರನಾದರು ಸಂಚಿತ್.. ಇದರ ಜೊತೆ ಜೊತೆಗೆ ತಮಿಳು ಸರಿಗಮಪ ದಲ್ಲಿಯೂ ಹಾಡುತ್ತಿದ್ದ ಕಾರಣ ಇತರ ಸಿನಿಮಾ ಇಂಡಸ್ಟ್ರಿಯ ಪರಿಚಯವೂ ಆಯಿತು..

ಇನ್ನು ಬಿಡುವೇ ಇಲ್ಲದಂತೆ ಹಾಡುತ್ತಿದ್ದ ಸಂಚಿತ್ ಹೆಗ್ಡೆ ಅವರಿಗೆ ಕೊರೊನಾ ಕಾರಣದಿಂದ ಕೊಂಚ ಬ್ರೇಕ್ ಸಿಕ್ಕಿತು.. ಆದರೆ ಅಂದಿನಿಂದ ಹೆಚ್ಚಾಗಿ ಯಾವುದೇ ವಿಚಾರವಾಗಿಯೂ ಸುದ್ದಿಯಾಗದ ಸಂಚಿತ್ ಏನಾದರು ಎಂಬ ಪ್ರಶ್ನೆ ಹಲವರಲ್ಲಿ ಮೂಡಿತ್ತು.. ಆದರೆ ಸಂಚಿತ್ ಮಾಡುತ್ತಿದ್ದ ಕೆಲಸವೇ ಬೇರೆ..

ಹೌದು ಇಷ್ಟು ದಿನ ಹಾಡುಗಾರನಾಗಿ ಗುರುತಿಸಿಕೊಂಡು ದೊಡ್ಡ ಯಶಸ್ಸು ಪಡೆದಿದ್ದ ಸಂಚಿತ್ ಇದೀಗ ತೆಲುಗು ಸಿ‌ನಿಮಾದಲ್ಲಿ ಹೀರೋ ಆಗಿ ಎಂಟ್ರಿ ನೀಡಿದ್ದಾರೆ.. ಹೌದು ಅದರಲ್ಲೂ ಶೃತಿ ಹಾಸನ್ ಗೆ ಜೋಡಿಯಾಗಿ ಭರ್ಜರಿಯಾಗಿಯೇ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟಿದ್ದಾರೆ.. ಅದಾಗಲೇ ಸಿನಿಮಾದ ಟ್ರೈಲರ್ ಕೂಡ ಬಿಡುಗಡೆಯಾಗಿದ್ದು ಇವರೇನಾ ಸಂಚಿತ್ ಎಂದು ಅಭಿಮಾನಿಗಳು ಆಶ್ವರ್ಯ ಪಟ್ಟಿದ್ದೂ ಉಂಟು..

ಹೌದು ತೆಲುಗಿನ ಪಿಟ್ಟ ಕತಲು ಸಿನಿಮಾ ಮೂಲಕ ಖ್ಯಾತ ನಟಿ ಶೃತಿ ಹಾಸನ್ ಜೊತೆ ಸಂಚಿತ್ ಹೆಗ್ಡೆ ತೆರೆ ಹಂಚಿಕೊಳ್ಳುತ್ತಿದ್ದಾರೆ.. ಅದರಲ್ಲೂ ಟ್ರೈಲರ್ ನಲ್ಲಿ ಸಿಕ್ಕಾಪಟ್ಟೆ ರೊಮ್ಯಾಂಟಿಕ್ ದೃಶ್ಯಗಳಲ್ಲಿ ಶೃತಿ ಹಾಸನ್ ಜೊತೆ ಸಂಚಿತ್ ಕಾಣಿಸಿಕೊಂಡಿದ್ದು ಇವರೇನಾ ಸಂಚಿತ್ ಎನ್ನುವಂತೆ ಅಭಿನಯಿಸಿದ್ದಾರೆ.. ಈ ಸಿನಿಮಾವನ್ನು ಮಹಾನಟಿ ಸಿನಿಮಾ ನಿರ್ದೇಶಕರಾದ ನಾಗ ಅಶ್ವಿನ್ ನಿರ್ದೇಶನ ಮಾಡಿದ್ದು ಇದೇ ಫೆಬ್ರವರಿ 19 ರಂದು ಸಿನಿಮಾ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಲಿದೆ.. ಒಟ್ಟಿನಲ್ಲಿ ಗಾಯಕನಾಗಬೇಕು ಎಂಬ ಆಸೆಯಿಂದ ಸರಿಗಮಪ ಶೋಗೆ ಬಂದ ಸಂಚಿತ್ ತನ್ನ ಪರಿಶ್ರಮ ಹಾಗೂ ಅದೃಷ್ಟದಿಂದ ಇಂದು ತೆಲುಗಿನ ನಟನಾಗಿ ನಿಂತಿದ್ದಾರೆ.. ಅವರ ನಟನೆಯ ಹೊಸ ಜರ್ನಿಗೆ ಶುಭವಾಗಲಿ..