ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಕಾಮಿಡಿ ಕಿಲಾಡಿಗಳು ನಟ ಸಂಜು ಬಸಯ್ಯ.. ಹುಡುಗಿ ಯಾರು ಗೊತ್ತಾ.. ನಿಜಕ್ಕೂ ಆಶ್ಚರ್ಯ ಪಡ್ತೀರಾ..

0 views

ಕಾಮಿಡಿ ಕಿಲಾಡಿಗಳು‌ ಕನ್ನಡ ಕೊರುತೆರೆಯಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದ ಕಾಮಿಡಿ ಶೋ.. ನವರಸ ನಾಯಕ ಜಗ್ಗೇಶ್, ರಕ್ಷಿತಾ, ನಿರ್ದೆಶಕರಾದ ಯೋಗರಾಜ್ ಭಟ್ಟರು ಜಡ್ಜಸ್ ಆಗಿ ಕಾಣಿಸಿಕೊಂಡ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮ ಕನ್ನಡ ಕಿರುತೆರೆ ಇತಿಹಾಸದಲ್ಲಿ ದೊಡ್ಡ ಯಶಸ್ಸು ಕಂಡು ಸಾಕಷ್ಟು ಪ್ರತಿಭಾವಂತರನ್ನು ಸಿನಿಮಾ ಇಂಡಸ್ಟ್ರಿಗೆ ನೀಡಿತು.. ಒಂದಲ್ಲಾ ಎರಡಲ್ಲಾ ಮೂರು ಸೀಸನ್ ಗಳಲ್ಲಿ ಪ್ರಸಾರವಾದ ಕಾಮಿಡಿ ಕಿಲಾಡಿಗಳು ಮತ್ತೆ ಎಲ್ಲಾ ಸೀಸನ್ ಗಳ ಕಾಮಿಡಿ‌ ಕಲಾವಿದರೊಟ್ಟಿಗೆ ಚಾಂಪಿಯನ್ ಶಿಪ್ ಶೋ ಕೂಡ ಪ್ರಸಾರವಾಯಿತು.. ಎಲ್ಲಾ ಸೀಸನ್ ಗಳು ಭರ್ಜರಿ ರೇಟಿಂಗ್ ಪಡೆದು ವಾಹಿನಿ ಲಾಭ ತಂದುಕೊಟ್ಟರೆ ಇತ್ತ ಕಾಮಿಡಿ ಕಿಲಾಡಿಗಳು ಶೋಗೆ ಬಂದ ಬಹುತೇಕ ಕಲಾವಿದರು ಮನೆಮಾತಾದರು.. ಅಷ್ಟೇ ಅಲ್ಲದೇ ಈ ಶೋನಿಂದ ಬಂದ ಹೆಸರಿನಿಂದ ಸಿನಿಮಾ ಹಾಗೂ ಕಿರುತೆರೆಯಲ್ಲಿ ಅವಕಾಶ ಪಡೆದು ಬದುಕು‌ ಕಟ್ಟಿಕೊಂಡರು..

ಕಾಮಿಡಿ ಕಿಲಾಡಿಗಳು ಶೋಗೆ ಬಂದಿದ್ದವರು ಬಹುತೇಕ ಎಲ್ಲರೂ ಸಹ ಗ್ರಾಮೀಣ ಭಾಗದ ಪ್ರತಿಭೆಗಳೇ ಆಗಿದ್ದು ಈ ಶೋ ಅವರಿಗೆಲ್ಲಾ ಒಂದೊಳ್ಳೆ ವೇದಿಕೆಯನ್ನು ನೀಡಿತು ಎಂದರೆ ತಪ್ಪಾಗಲಾರದು.. ಇನ್ನು ಈ ಶೋನಲ್ಲಿ ಭಾಗವಹಿಸಿದ ನಯನಾ.. ಶಿವರಾಜ್ ಕೆ ಆರ್ ಪೇಟೆ.. ಗೋವಿಂದೇ ಗೌಡ ಇನ್ನೂ ಅನೇಕರು ಸಿನಿಮಾಗಳಲ್ಲಿ ಅವಕಾಶ ಪಡೆದು ಮಿಂಚಿದರು.. ಗೋವಿಂದೇ ಗೌಡ ಕೆಜಿಎಫ್ ಸಿನಿಮಾದಲ್ಲಿ ಕಾಣಿಸಿಕೊಂಡು ಜನಮನ ಗೆದ್ದರು… ಇನ್ನೂ ಸಾಕಷ್ಟು ಕಲಾವಿದರಿಗೆ ಜೀ ಕನ್ನಡ ವಾಹಿನಿಯಲ್ಲಿಯೇ ಪ್ರಸಾರವಾಗಿತ್ತಿರುವ ಎಲ್ಲಾ ಧಾರಾವಾಹಿಗಳಲ್ಲಿ‌ ಒಬ್ಬರು ಇಬ್ಬರು ಕಲಾವಿದರಿಗೆ ಅವಕಾಶ ಕೊಟ್ಟಿರುವುದು ಒಳ್ಳೆಯ ವಿಚಾರ.. ಕೊರೊನಾ ಸಮಯದಲ್ಲಿ ಸಿನಿಮಾ ಅವಕಾಶಗಳಿಲ್ಲದೇ ಇದ್ದ ಅನೇಕ‌ ಕಲಾವಿದರಿಗೆ ಧಾರಾವಾಹಿಗಳಲ್ಲಿ ಹಾಗೂ ಶೋಗಳಲ್ಲಿ ಅವಕಾಶ ಕೊಟ್ಟು ಜೀವನಕ್ಕೆ ದಾರಿಯಾಗಿದ್ದು ನಿಜಕ್ಕೂ ಮೆಚ್ಚುವಂತದ್ದು..

ಇನ್ನು ಕಾಮಿಡಿ ಕಿಲಾಡಿಗಳು ಶೋ ಮೂಲಕವೇ ಪರಿಚಯವಾದ ಖ್ಯಾತ ಕಲಾವಿದ ಸಧ್ಯ ಕೆಜಿಎಫ್ ಸಿನಿಮಾ ಮೂಲಕ ಜನಮನಗೆದ್ದ ಗೋವಿಂದೇ ಗೌಡ ಹಾಗೂ ಅದೇ ಶೋನಲ್ಲಿ ಕಾಣಿಸಿಕೊಂಡ ದಿವ್ಯಾ ಅವರು ನಿಜ ಜೀವನದಲ್ಲಿ‌ಯೂ ಜೋಡಿಯಾಗಿ ಎರಡು ವರ್ಷದ ಹಿಂದೆ ದಾಂಪತ್ಯ ಜೀವನಕ್ಕೆ‌ ಕಾಲಿಟ್ಟಿದ್ದು ವಿಶೇಷ.. ಇನ್ನು ಇದೀಗ ಮತ್ತೊಬ್ಬ ಕಲಾವಿದ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಸಂತೋಷ ಹಂಚಿಕೊಂಡಿದ್ದಾರೆ.. ಹೌದು ಕಾಮಿಡಿ ಕಿಲಾಡಿ ಶೋನ ಸಂಜು ಬಸಯ್ಯಾ.. ಇದೀಗ ಮದುವೆಯ ಜೀವನಕ್ಕೆ ಕಾಲಿಡುತ್ತಿದ್ದು ಸಿಕ್ಕಾಪಟ್ಟೆ ಸಂತೋಷದಲ್ಲಿದ್ದಾರೆನ್ನಬಹುದು.. ಹೌದು ಸಂಜು ಬಸಯ್ಯ ಕಾಮಿಡಿ ಕಿಲಾಡಿಗಳು ಶೋ ಗೆ ಬಂದ ನಂತರ ಜನಮೆಚ್ಚುಗೆ ಗಳಿಸಿದ್ದು ಮಾತ್ರವಲ್ಲ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದರು..

ಸಂಜು ಬಸಯ್ಯಾ ಅವರು ದರ್ಶನ್ ಅವರು ಅಭಿನಯದ ಯಜಮಾನ ಸಿನಿಮಾದಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದಲ್ಲದೇ ಇಂತಿ ನಿಮ್ಮ ಭೈರ ಸೇರಿದಂತೆ ಸಾಕಷ್ಟು ಕನ್ನಡ ಚಿತ್ರಗಳಲ್ಲಿ ಹಾಸ್ಯ ಕಲಾವಿದನಾಗಿ ಮಿಂಚುತ್ತಿದ್ದಾರೆ.. ಅಷ್ಟೇ ಅಲ್ಲದೇ ಕಿರುತೆರೆಯ ಶೋಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ.. ಇನ್ನು ಸಧ್ಯ ಇದೀಗ ನೂತನ ಜೀವನಕ್ಕೆ ಕಾಲಿಡುತ್ತಿದ್ದಾರೆ ಸಂಜು ಬಸಯ್ಯ.. ತಮ್ಮ ಮದುವೆ ವಿಚಾರವನ್ನು ಹಂಚಿಕೊಂಡಿರುವ ಸಂಜು ಬಸಯ್ಯ ತಾವು ಮದುವೆಯಾಗುತ್ತಿರುವ ಹುಡುಗಿಯ ಬಗ್ಗೆಯೂ ಹೇಳಿದ್ದಾರೆ.. ಹೌದು ಸಂಜು ಬಸಯ್ಯ ಅವರು ಮದುವೆಯಾಗುತ್ತಿರುವ ಹುಡುಗಿಯ ಹೆಸರು ಪಲ್ಲವಿ.. ಮೂಲತಃ ಬಳ್ಳಾರಿ ಅವರಾದ ಪಲ್ಲವಿ ಅವರು ಕಳೆದ ಎಂಟು ವರ್ಷಗಳಿಂದ ಸಂಜು ಬಸಯ್ಯ ಅವರ ಸ್ನೇಹಿತರಾಗಿದ್ದರು‌..

ಹೌದು ಸಂಜು ಬಸಯ್ಯಾ ಹಾಗೂ ಪಲ್ಲವಿ ಇಬ್ಬರೂ ಸಹ ಉತ್ತರ ಕರ್ನಾಟಕದವರಾಗಿದ್ದು ಎಂಟು ವರ್ಷದ ಸ್ನೇಹ ಪ್ರೀತಿ ಇದೀಗ ಮದುವೆಯ ಹೊಸ್ತಿಲಲ್ಲಿ ಬಂದು ನಿಂತಿದೆ.. ಹೌದು ಇತ್ತ ಬೆಳಗಾವಿ ಜಿಲ್ಲೆ ಮುರುಗೋಡಿನಿಂದ ಬಂದು ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡ ಸಂಜು ಬಸಯ್ಯ ಅವರು ನೋಡಲು ಚಿಕ್ಕ ಹುಡುಗನಂತಿದ್ದರೂ ಸಹ ಅದಾಗಲೇ ಮದುವೆಯ ವಯಸ್ಸಿಗೆ ಬಂದಿದ್ದು ಅದರಲ್ಲೂ ಪ್ರೀತಿಸಿ ಮದುವೆಯಾಗುತ್ತಿರುವುದು ವಿಶೇಷ.. ಹೌದು ಕಳೆದ ಎಂಟು ವರ್ಷಗಳಿಂದ ಪಲ್ಲವಿ ಹಾಗೂ ಸಂಜು ಬಸಯ್ಯ ಸ್ನೇಹಿತರಾಗಿದ್ದರು.. ಆನಂತರ ಸ್ನೇಹ ಪ್ರೀತಿಯಾಯಿತು.. ಇದೀಗ ಆ ಪ್ರೀತಿಗೆ ಮದುವೆಯ ಅರ್ಥ ನೀಡುತ್ತಿದ್ದು ಸಧ್ಯದಲ್ಲಿಯೇ ಈ ಜೋಡಿಯ ಕಲ್ಯಾಣ ನೆರವೇರಲಿದೆ..

ಕಾಕಾಮಿಡಿ‌ ಕಿಲಾಡಿಗಳು ವೇದಿಕೆಯಲ್ಲಿ ಈ ವಿಚಾರ ತಿಳಿಸಿದ ಸಂಜು ಬಸಯ್ಯ ಅವರು ಸಂತೋಷ ಹಂಚಿಕೊಂಡಿದ್ದಾರೆ.. ನಿಶ್ಕಲ್ಮಶ ಪ್ರೀತಿಯ ಮುಂದೆ ಮಿಕ್ಕೆಲ್ಲವೂ ಶೂನ್ಯವೆಂಬುದಕ್ಕೆ ಈ ಜೋಡಿಯೇ ನೈಜ್ಯ ಉದಾಹರಣೆ.. ಸಧ್ಯ ಸಂಜು ಬಸಯ್ಯಾ ಅವರ ಲವ್ ಕಹಾನಿ ಕೇಳಿ ಕಾಮಿಡಿ ಕಿಲಾಡಿಗಳು ಸ್ಪರ್ಧಿಗಳು ಮಾತ್ರವಲ್ಲದೇ ರಕ್ಷಿತಾ ಅವರು ಜಗ್ಗೇಶ್ ಅವರು ಯೋಗರಾಜ್ ಭಟ್ಟರು ಸೇರಿದಂತೆ ಎಲ್ಲರೂ ಸಹ ಆಶ್ಚರ್ಯ ವ್ಯಕ್ತಪಡಿಸಿ ಇಬ್ಬರಿಗೂ ಮನಸ್ಪೂರ್ತಿಯಾಗಿ ಶುಭ ಹಾರೈಸಿದ್ದಾರೆ.. ಶುಭವಾಗಲಿ ಈ ಜೋಡಿಗೆ..