ಹೊಸ ಸುದ್ದಿ ಕೊಟ್ಟ ಕಿಚ್ಚ ಸುದೀಪ್ ಮಗಳು ಸಾನ್ವಿ. ಸುದೀಪ್..‌

0 views

ಕಿಚ್ಚ ಸುದೀಪ್ ಅವರ ಮಗಳು ಸಾನ್ವಿ ಸುದೀಪ್ ಅವರು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಪಟ್ಟೆ ಆಕ್ಟೀವ್ ಆಗಿದ್ದು ಪ್ರತಿದಿನವೂ ತಮ್ಮ ಆಗುಹೋಗುಗಳು ಹಾಗೂ ಬಹಳಷ್ಟು ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.. ಸದ್ಯ ಇದೀಗ ಹೊಸ ಸುದ್ದಿಯೊಂದನ್ನು ನೀಡಿದ್ದಾರೆ.. ತಮ್ಮ ಇಷ್ಟಗಳ ಬಗ್ಗೆ ಸ್ನೇಹಿತರು ಹಾಗೂ ಅಭಿಮಾನಿಗಳ ಜೊತೆ ಮಾತನಾಡಿರುವ ಸಾನ್ವಿ ಅವರು ಬಿಗ್‌ ಬಾಸ್‌ ಸೀಸನ್ ಎಂಟರ ಸ್ಪರ್ಧಿ ಅರವಿಂದ್‌ ಬಗ್ಗೆ ಮಾತನಾಡಿದ್ದಾರೆ..

ಹೌದು ಬಿಗ್ ಬಾಸ್ ಸೀಸನ್ ಎಂಟರಲ್ಲಿ‌ ಕಳೆದ ಎರಡು ವಾರಗಳಿಂದ ಸುದೀಪ್ ಅವರು ಕಾಣಿಸಿಕೊಳ್ಳುತ್ತಿಲ್ಲ.. ಅನಾರೋಗ್ಯದ ಕಾರಣ ಸುದೀಪ್ ಅವರು ಇಲ್ಲದೆ ವಾರಾಂತ್ಯದ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು ಎಲಿಮಿನೇಷನ್ ಪ್ರಕ್ರಿಯೆ ಸಹ ನಡೆಯುತ್ತಾ ಬಂದಿದ್ದು ಈ ವಾರ ರಾಜೀವ್ ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದಾರೆ.. ಇನ್ನು ಸಾನ್ವಿ ಸುದೀಪ್ ಅವರು ಅಭಿಮಾನಿಗಳ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ನೀಡಿದ್ದು ಅವರ ಆರೋಗ್ಯದ ಮಾಹಿತಿಯನ್ನೂ ಸಹ ನೀಡಿದ್ದಾರೆ.. ಹೌದು ಅಪ್ಪ ಚೇತರಿಸಿಕೊಳ್ಳುತ್ತಿದ್ದಾರೆ.. ಇನ್ನೂ ಸ್ವಲ್ಪ ದಿನಗಳ ಕಾಲ ವಿಶ್ರಾಂತಿ ಅವಶ್ಯಕತೆ ಇರುವುದರಿಂದ ಅವರು ಈ ವಾರ ಬಿಗ್ ಬಾಸ್ ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ ಎಂದಿದ್ದಾರೆ..

ಇನ್ನಿ ಬಿಗ್ ಬಾಸ್ ಸ್ಪರ್ಧಿಗಳ ಬಗ್ಗೆ ಅಭಿಮಾನಿಗಳ ಜೊತೆ ಮಾತನಾಡಿರುವ ಸಾನ್ವಿ ಸುದೀಪ್ ಅವರು ನಿಮ್ಮ ನೆಚ್ಚಿನ ಸ್ಪರ್ಧಿ ಯಾರು ಎಂದಿದ್ದಕ್ಕೆ ನನಗೆ ಅರವಿಂದ್ ಅಂದರೆ ಬಹಳ ಇಷ್ಟ ಅವರು ಜೆನ್ಯೂನ್ ಆಗಿ ಆಟ ಆಡ್ತಿದ್ದಾರೆ.. ಎಲ್ಲರ ಜೊತೆ ನೇರವಾಗಿ ನಡೆದುಕೊಳ್ತಾರೆ.. ಅದಕ್ಕೆ ಅವರು ನನಗೆ ಇಷ್ಟ ಆಗ್ತಾರೆ.. ಜೊತೆಗೆ ಎಲ್ಲರೂ ಇಷ್ಟ.. ಆದರೆ ಅರವಿಂದ್‌ ಹಾಗೂ ವೈಷ್ಣವಿ ತುಂಬಾ ಇಷ್ಟ ಎಂದಿದ್ದಾರೆ.. ವೈಷ್ಣವಿ ಬಗ್ಗೆ ಮಾತನಾಡಿ ಮೆಚ್ಚುಗೆ ವ್ಯಕ್ತ ಪಡಿಸಿದ ಸಾನ್ವಿ ಸುದೀಪ್ ಅವರು ವೈಷ್ಣವಿ ಅವರು ಬಹಳ ಟ್ಯಾಲೆಂಟೆಡ್.. ಡೌನ್‌ ಟು ಅರ್ಥ್‌ ಪರ್ಸನಾಲಿಟಿ.. ಅಹಂಕಾರ ಇಲ್ಲ.. ನೇರವಾಗಿ ಇರ್ತಾರೆ. ಅವರು ನನಗೆ ಬಹಳ ಇಷ್ಟ ಆಗ್ತಾರೆ ಎಂದಿದ್ದಾರೆ.‌ ಇನ್ನುಳಿದಂತೆ ಬಿಗ್ ಬಾಸ್ ನಲ್ಲಿ ಪ್ರೀತಿಯ ಜೋಡಿ ಎಂದೇ ಖ್ಯಾತಿ ಪಡೆದಿರುವ ಅರವಿಂದ್ ಹಾಗೂ ದಿವ್ಯಾ ಉರುಡುಗ ಅವರ ಬಗ್ಗೆಯೂ ಮಾತನಾಡಿರುವ ಸಾನ್ವಿ ಸುದೀಪ್ ಅವರು ಅವರು ಇಬ್ಬರು ಒಟ್ಟಾಗಿ ಬಹಳ ಕ್ಯೂಟ್ ಆಗಿ ಕಾಣಿಸ್ತಾರೆ ಎಂದಿದ್ದಾರೆ..

ಇನ್ನೂ ಸಾನ್ವಿ ಸುದೀಪ್ ಅವರ ವ್ಯಯಕ್ತಿಕ ವಿಚಾರಕ್ಕೆ ಬಂದರೆ ಸಾನ್ವಿ ಅವರು ಪ್ರತಿದಿನ ಇಲ್ಲ ಎಂದರು ಕನಿಷ್ಠ ಐದರಿಂದ ಹತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ.. ಆದರೆ ಅದರಲ್ಲಿ ಬಹುತೇಕ ನಟ ಸಿದ್ದಾರ್ಥ್ ಮಲ್ಹೋತ್ರ ಅವರ ಫೋಟೋಗಳೇ ಆಗಿರುತ್ತವೆ.. ಸಿದ್ದಾರ್ಥ್ ಅವರ ಸ್ಟೈಲಿಷ್ ಫೋಟೋಗಳನ್ನು ಪ್ರತಿದಿನವೂ ಶೇರ್ ಮಾಡಿಕೊಳ್ಳುವ ಸಾನ್ವಿ ಅವರಿಗೆ ಅಭಿಮಾನಿಯೊಬ್ಬರು ಆ ಕುರಿತು ಪ್ರಶ್ನೆ ಮಾಡಿದ್ದಾರೆ.. ಯಾಕೆ ನೀವು ಸಿದ್ದಾರ್ಥ್ ಅವರ ಫೋಟೋಗಳನ್ನು ಹೆಚ್ಚು ಶೇರ್ ಮಾಡ್ತೀರಾ ಎಂದಿದ್ದಾರೆ..

ಇದಕ್ಕೆ ಉತ್ತರ ನೀಡಿರುವ ಸಾನ್ವಿ ಸುದೀಪ್ ಅವರು ನಾನಿ ಸಿದ್ದಾರ್ಥ್ ಮಲ್ಹೋತ್ರ ಅವರ ಅಭಿಮಾನಿ.. ಅದರಲ್ಲೂ ದೊಡ್ಡ ಅಭಿಮಾನಿ.. ಅದಕ್ಕಾಗಿಯೇ ಅವರ ಫೋಟೋಗಳನ್ನು ಹೆಚ್ಚು ಶೇರ್ ಮಾಡ್ತೇನೆ ಎಂದಿದ್ದಾರೆ.. ತಮ್ಮ ಮನೆಯಲ್ಲಿಯೇ ದೊಡ್ಡ ಸೂಪರ್ ಸ್ಟಾರ್ ಇದ್ದರೂ ಸಹ ತಾವು ಮತ್ತೊಬ್ಬ ನಟನ ಅಭಿಮಾನಿ ಎಂದು ಬಹಳ ಸಂತೋಷದಿಂದಲೇ ಹೇಳಿಕೊಂಡ ಸುದೀಪ್ ಅವರ ಮಗಳ ನೇರ ಗುಣಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು ಸಾನ್ವಿ ಅವರ ಮುಂದಿನ ಭವಿಷ್ಯಕ್ಕೆ ಶುಭವಾಗಲೆಂದು ಹಾರೈಸಿದ್ದಾರೆ..