ಹೊಸ ಕೆಲಸ ಆರಂಭಿಸಿದ ಕಿಚ್ಚ ಸುದೀಪ್ ಮಗಳು ಸಾನ್ವಿ.. ಆದರೆ ನಟ ಜೆಕೆ ಹೇಳಿದ ಮಾತು ನೋಡಿ..

0 views

ಕಲಾವಿದರು ಸ್ಟಾರ್ ಗಳ ಮಕ್ಕಳು ತಮ್ಮದೇ ಆದ ವೃತ್ತಿ ಜೀವನವನ್ನು ಆರಂಭಿಸಿರುವುದು ಹೊಸ ವಿಚಾರವೇನು ಅಲ್ಲ.. ತಮ್ಮ ತಮ್ಮ ಆಸಕ್ತಿ ಅನುಸಾರ ತಮ್ಮ ಜೀವನವನ್ನು ರೂಪಿಸಿಕೊಳ್ಳುತ್ತಿದ್ದಾರೆ.. ಇದೀಗ ಅದೇ ರೀತಿಯ ವಿಚಾರವೊಂದಕ್ಕೆ ನಟ ಕಿಚ್ಚ ಸುದೀಪ್ ಅವರ ಮಗಳು ಸಾನ್ವಿ ಸುದೀಪ್ ಸುದ್ದಿಯಲ್ಲಿದ್ದಾರೆ..

ಹೌದು ಈ ಹಿಂದೆ ನಟ ಶಿವರಾಜ್ ಕುಮಾರ್ ಅವರ ಮಗಳು ವೆಬ್ ಸೀರಿಸ್ ಗಳನ್ನು ನಿರ್ಮಾಣ ಮಾಡುತ್ತಿದ್ದ ವಿಚಾರವೂ ಸುದ್ದಿಯಾಗಿತ್ತು.. ಇನ್ನು ನಟ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಮಗಳು ಗೀತಾಂಜಲಿ ಅವರೂ ಸಹ ತಮ್ಮದೇ ಆದ ಸೀರೆ ಕಾರ್ಖಾನೆಯನ್ನು ತೆರೆದು ಅನೇಕರಿಗೆ ಉದ್ಯೋಗವನ್ನು ನೀಡಿದ್ದಾರೆ..

ಇತ್ತ ಕಲಾವಿದರ ಮಕ್ಕಳು ಮಾತ್ರವಲ್ಲ.. ಅನೇಕ ನಟ ನಟಿಯರು ಕೂಡ ನಟನೆಯ ಜೊತೆಗೆ ಇತರ ಉದ್ಯಮಗಳನ್ನು ಸಹ ನಡೆಸುತ್ತಿದ್ದಾರೆ.. ಕಿರುತೆರೆ ಹಾಗೂ ಸ್ಯಾಂಡಲ್ವುಡ್ ನಲ್ಲಿ ಗುರುತಿಸಿಕೊಂಡಿರುವ ನಟ ಚಂದನ್ ಕೆಲ ತಿಂಗಳ ಹಿಂದಷ್ಟೇ ದೊನ್ನೆ ಬಿರಿಯಾನಿ ಪ್ಯಾಲೆಸ್ ಹೊಟೆಲ್ ಆರಂಭ ಮಾಡಿದ್ದು ಹೊಟೆಲ್ ಉದ್ಯಮಕ್ಕೆ ಕಾಲಿಟ್ಟಿದ್ದಾರೆ.. ಇತ್ತ ನಟ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಅವರೂ ಸಹ ಹನಿ ಆಂಡ್ ಸ್ಪೈಸ್ ಎನ್ನುವ ಫುಡ್ ಪ್ರಾಡಕ್ಟ್ ಉದ್ಯಮವನ್ನು ಆರಂಭಿಸಿದ್ದಾರೆ.. ಇವರಷ್ಟೇ ಅಲ್ಲ.. ಅನೇಕ ಕಲಾವಿದರು ತಮ್ಮ ಕಲಾ ವೃತ್ತಿ ಬದುಕಿನ ಜೊತೆಗೆ ಕೃಷಿ ಹಾಗೂ ಇನ್ನಿತರ ಉದ್ಯಮಗಳನ್ನು‌ ಮಾಡಿಕೊಂಡು ಬರುತ್ತಿದ್ದಾರೆ..

ಇನ್ನು ಇದೀಗ ಕಿಚ್ಚ ಸುದೀಪ್ ಅವರ ಮಗಳು ಸಾನ್ವಿ ಸುದೀಪ್ ಅವರು ಸಹ ಹೊಸ ಕೆಲಸ ಆರಂಭಿಸಿದ್ದು ಸುದ್ದಿಯಾಗಿದ್ದಾರೆ.. ಹೌದು ಸದ್ಯ ಹೈದರಾಬಾದ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸಾನ್ವಿ ತನ್ನದೇ ಆದ ಯೂಟ್ಯೂಬ್ ಚಾನಲ್ ಒಂದನ್ನು ತೆರೆದಿದ್ದಾರೆ.. ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಇರುವ ಸಾನ್ವಿ ಅವರು ಆಗಾಗ ಸ್ನೇಹಿತರೊಟ್ಟಿಗೆ ತೆರಳಿದ ಪ್ರವಾಸದ ಫೋಟೋಗಳ ಜೊತೆಗೆ ಅಪ್ಪನ ಸಿನಿಮಾದ ಅಪ್ಡೇಟ್ಸ್ ಗಳನ್ನು ನೀಡುತ್ತಿರುತ್ತಾರೆ.. ಇನ್ನು ಇದೀಗ ಓದಿನ ಜೊತೆಗೆ ಹಾಡುಗಾರಿಕೆಯನ್ನು ಶುರು ಮಾಡಿರುವ ಸಾನ್ವಿ ತಮ್ಮ ಚಾನಲ್ ನಲ್ಲಿ ತಾವು ಹಾಡಿದ ವೀಡಿಯೋವನ್ನು ಹಂಚಿಕೊಂಡಿದ್ದಾರೆ..

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡುರುವ ನಟ ಜೆಕೆ ಇನ್ಸ್ಟಾಗ್ರಾಂ ನಲ್ಲಿ ಸಾನ್ವಿ ಬಗ್ಗೆ ಮಾತನಾಡಿದ್ದಾರೆ.. “ನಾನು ಕಳೆದ ಹನ್ನೊಂದು ವರ್ಷಗಳಿಂದ ಈ ಮಗುವನ್ನು ನೋಡುತ್ತಾ ಬಂದಿದ್ದೇನೆ.. ಇವಳು ಇಷ್ಟು ವಿಶಿಷ್ಟವಾದ ಧ್ವನಿಯನ್ನು ತನ್ನದಾಗಿಸಿಕೊಳ್ಳುತ್ತಾಳೆ ಎಂದು ನಾನು ಅಂದುಕೊಂಡಿರಲಿಲ್ಲ… ದೇವರು ಸುಮಧುರವಾದ ಕಂಠ ನೀಡಿದ್ದಾನೆ ಎಂಬುದರ ಜೊತೆಗೆ ಆಕೆಯ ಶ್ರಮವೂ ಸಹ ಇದರಲ್ಲಿ ಇದೆ.. ನಿನಗೆ ಆಲ್‌ ದ ಬೆಸ್ಟ್‌ ಸಾನ್ವಿ ಡಿಯರ್‌. ಎತ್ತರಕ್ಕೆ ಬೆಳೆದು, ನಾವೆಲ್ಲರೂ ಹೆಮ್ಮೆಪಡುವಂತೆ ಮಾಡು” ಎಂದು ಬರೆದು ಸಾನ್ವಿಗೆ ಶುಭಾಶಯ ತಿಳಿಸಿ ಪೋಸ್ಟ್ ಮಾಡಿದ್ದಾರೆ..

ಹದಿನಾರು ವರ್ಷದ ಸಾನ್ವಿ ಸದ್ತ ತಮ್ಮ ಹೆಸರಿನಲ್ಲಿ ಯೂಟ್ಯೂಬ್ ಚಾನಲ್ ತೆರೆದಿದ್ದು ಸದ್ಯ ಇಂಗ್ಲಿಷ್ ಹಾಡೊಂದಕ್ಕೆ ಧ್ವನಿ ನೀಡಿದ್ದಾರೆ.. ಅಮೆರಿಕದ ಖ್ಯಾತ ಗಾಯಕಿ ಆಂಡ್ರಾ ಡೇ ಅವರ ರೈಸ್‌ ಅಪ್‌.. ಗೀತೆಯನ್ನು ಸಾನ್ವಿ ಹಾಡಿದ್ದು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.. ಅಷ್ಟೇ ಅಲ್ಲದೇ ಮುಂದೆ ಒಳ್ಳೆಯ ಗಾಯಕಿಯಾಗಿ ಎಂದು ಶುಭ ಹಾರೈಸಿದ್ದಾರೆ..