ಮದುವೆ ವಾರ್ಷಿಕೋತ್ಸವಕ್ಕೆ ಹೆಂಡತಿಗೆ ದೊಡ್ಡ ಸರ ಉಡುಗೊರೆ ಕೊಟ್ಟ ಗಂಡ.. ಆದರೆ ಮರುಕ್ಷಣ ನಡೆದದ್ದೇ ಬೇರೆ.. ಗಂಡ ಹೆಂಡತಿ ಇಬ್ಬರೂ ಸಹ ಊಹಿಸಿರಲಿಲ್ಲ..

0 views

ಹೆಂಡತಿಗೆ ಯಾವ ಯಾವ ರೀತಿ ಮನವೊಲಿಸಬಹುದೆಂದು ಗಂಡಂದಿರು ಯೋಚನೆ ಮಾಡಿದಾಗ ತಕ್ಷಣ ಬರುವ ಆಲೋಚನೆಯೇ ಹೆಂಡತಿಗೆ ಉಡುಗೊರೆ ಕೊಟ್ಟು ಸಂತೋಷ ಪಡಿಸುವುದು.. ಅದರಲ್ಲಿಯೂ ಉಡುಗೊರೆಯಾಗಿ ಬಂಗಾರ ಕೊಟ್ಟರೆ ಮುಗೀತು.. ಗಂಡಂದಿರು ಮಾಡಿದ ಸಣ್ಣ ಪುಟ್ಟ ತಪ್ಪುಗಳೆಲ್ಲಾ ಮರೆತೇ ಬಿಡುತ್ತಾರೆ.. ಇನ್ನು ಅದೇ ರೀತಿ ಇಲ್ಲೊಬ್ಬರು ಪತಿ ತನ್ನ ಹೆಂಡತಿಗೆ ದೊಡ್ಡ ಸರವೊಂದನ್ನು ಉಡುಗೊರೆಯಾಗಿ ಹೆಂಡತಿಯನ್ನು ಸಂತೋಷ ಪಡಿಸಲು ಪ್ರಯತ್ನ ಪಟ್ಟಿದ್ದಾರೆ.. ಅದೇ ರೀತಿ ಹೆಂಡತಿಯೂ ಸಂತೋಷ ಪಟ್ಟಿದ್ದಾರೆ.. ಆದರೆ ನಂತರ ನಡೆದದ್ದೇ ಬೇರೆ.. ಸತಿ ಪತಿ ಇಬ್ಬರೂ ಸಹ ಊಹಿಸಿಯೂ ಇರದ ಘಟನೆ ನಡೆದಿದೆ..

ಹೌದು ಆ ಸರದ ಕಾರಣಕ್ಕೆ ಗಂಡ ಪೊಲೀಸ್ ಠಾಣೆ ಮೆಟ್ಟಿಲೇರುವಂತಾಗಿದೆ.. ಹೌದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೊಂದು ಸಾಕಷ್ಟು ವೈರಲ್ ಆಗಿತ್ತು.. ಆ ವೀಡಿಯೋದಲ್ಲಿ ಪತಿಯೊಬ್ಬರು ಅವರ ಮದುವೆ ವಾರ್ಷಿಕೋತ್ಸವದ ಅಂಗವಾಗಿ ತಮ್ಮ ಪತ್ನಿಗೆ ಸುಮಾರು ಎರಡರಿಂದ ಮೂರು ಅಡಿ ಉದ್ದದ ಸರವೊಂದನ್ನು ಉಡುಗೊರೆಯಾಗಿ ನೀಡಿದ್ದರು.. ಆ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿಯೂ ಹಂಚಿಕೊಂಡಿದ್ದರು.. ಆದರೆ ಆ ವೀಡಿಯೋ ನೋಡಿದ ಪ್ರತಿಯೊಬ್ಬರೂ ಸಹ ಆಶ್ಚರ್ಯದಿಂದ ಪ್ರತಿಕ್ರಿಯೆ ನೀಡಿದ್ದು ಅದು ನಿಜವಾಗಿಯೂ ಚಿನ್ನದ ಸರವಾ ಎಂದು ಪ್ರಶ್ನೆ ಮಾಡಿದ್ದರು.. ಇನ್ನೂ ಕೆಲವರು ಈ ರೀತಿ ಉಡುಗೊರೆ ಕೊಟ್ಟರೆ ನಮ್ಮ ಮನೆಗಳಲ್ಲಿಯೂ ಹೀಗೆ ಕೇಳ್ತಾರೆ ಗುರು ಎಂದಿದ್ದರು.. ಇನ್ನೂ ಕೆಲ ಮಹಿಳೆಯರು ಎಷ್ಟು ಕೆಜಿ ಇದೆ ಎಂದೂ ಸಹ ಪ್ರಶ್ನೆ ಮಾಡಿದ್ದರು..

ಅಷ್ಟಕ್ಕೆ ಆ ಕತೆ ಮುಗಿಯಲಿಲ್ಲ.. ಪೋಲೀಸರು ಸಹ ಆ ಯಜಮಾನರನ್ನ ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ.. ಹೌದು ಅಷ್ಟು ದೊಡ್ಡ ಚಿನ್ನದ ಸರವನ್ನು ಧರಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರ ಕುರಿತು ವಿಚಾರಣೆ ನಡೆಸಿದ್ದಾರೆ.. ಆಗ ಅಸಲಿ ಸತ್ಯ ಹೊರ ಬಂದಿದೆ.. ಹೌದು ಅಷ್ಟು ದೊಡ್ಡ ಸರದ ಹಿಂದಿನ ಅಸಲಿ ಕತೆ ಬೇರೆಯೇ ಇತ್ತು.. ಹೌದು ಆ ಸರ ಅಸಲಿಯ ಸರವೇ ಅಲ್ಲ.. ಅದೊಂದು ನಕಲಿ ಚಿನ್ನದ ಸರವಾಗಿದ್ದು ಚಿನ್ನದ ಬಣ್ಣದ್ದಾಗಿತ್ತು ಅಷ್ಟೇ..

ಈ ಬಗ್ಗೆ ಆ ಯಜಮಾನರೇ ತಿಳಿಸಿದ್ದು ನನ್ನನ್ನು ಪೊಲೀಸ್ ಠಾಣೆಗೆ ಕರೆಸಿ ಇದರ ಬಗ್ಗೆ ವಿಚಾರಣೆ ನಡೆಸಿದರು.. ನಾನು ಇದ್ದ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದೇನೆ.. ಹಾರದ ಹಿಂದಿನ ಸತ್ಯವನ್ನು ಸಹ ತಿಳಿಸಿದ್ದೇನೆ ಎಂದಿದ್ದಾರೆ.. ಇನ್ನು ಈ ಕುರಿತು ಪೊಲೀಸರು ಸಹ ಒಬ್ಬರು ಮಾಹಿತಿ‌ ನೀಡಿದ್ದು ನಾವು ಆ ಚಿನ್ನವನ್ನು ಪರಿಶೀಲನೆ ಮಾಡಿದ್ದೇವೆ.. ಆಭರಣದ ವ್ಯಾಪಾರಿಯೊಂದಿಗೂ ಸಹ ಚರ್ಚೆ ಮಾಡಲಾಯಿತು.. ಆದರೆ ಅದು ಚಿನ್ನದ ಸರವಾಗಿರಲಿಲ್ಲ ಎಂದು ತಿಳಿಸಿದ್ದಾರೆ..

ಇನ್ನು ಆ ಸರವನ್ನು ಬಹಳಷ್ಟು ವರ್ಷಗಳ ಹಿಂದೆಯೇ ನಾನು ಮೂವತ್ತೆಂಟು ಸಾವಿರ ರೂಪಾಯಿಗಳಿಗೆ ಕೊಂಡುಕೊಂಡಿದ್ದೆ.. ಅದನ್ನು ಮದುವೆ ವಾರ್ಷಿಕೋತ್ಸವ ಇದ್ದ ಕಾರಣ ನನ್ನ ಹೆಂಡತಿ ಧರಿಸಿದ್ದಳು.. ಎಂದು ಸರದ ಅಸಲಿ ವಿಚಾರವನ್ನು ತಿಳಿಸಿದ್ದಾರೆ.. ಒಟ್ಟಿನಲ್ಲಿ ಸರದಿಂದ ಸ್ಟೇಷನ್ ಮೆಟ್ಟಿಲೇರುವಂತಾಯಿತಷ್ಟೇ.. ಹೆಣ್ಣು ಮಕ್ಕಳಿಗೆ ಉಡುಗೊರೆ ನೀಡುವ ಮುನ್ನ ಆಲೋಚಿಸಬೇಕಾದ ವಿಚಾರವೇ.. ಎಂದು ಸಾಮಾಜಿಕ ಜಾಲತಾಣದಲ್ಲಿ ಮಾತು ಕೇಳಿಬಂದಿದ್ದಂತೂ ಸತ್ಯ.. ಸಧ್ಯ ಒಂದು ದೊಡ್ಡ ಸರದ ಕತೆ ನಕಲಿ‌ ಎಂದು ತಿಳಿಯುವ ಮೂಲಕ ಅದೆಷ್ಟೋ ಗಂಡಂದಿರು ಹೆಂಡತಿಯರ ಅದೇ ರೀತಿಯ ಸರದ ಬೇಡಿಕೆಯಿಂದ ಪಾರಾದರೆನ್ನಬಹುದು..