ಸಂತೋಷದ ಸುದ್ದಿ ಹಂಚಿಕೊಂಡ ಗಟ್ಟಿಮೇಳ ನಟ ಅಭಿಷೇಕ್ ಹಾಗೂ ಸಾರಿಕಾ ಪಾತ್ರಧಾರಿ ಶರಣ್ಯಾ..

0 views

ಗಟ್ಟಿಮೇಳ.. ಕನ್ನಡ ಕಿರುತೆರೆಯ ನಂಬರ್ ಒನ್ ಧಾರಾವಾಹಿಯಾಗುರುವ ರೇಟಿಂಗ್ ನಲ್ಲಿ ಕಳೆದ ಹತ್ತು ತಿಂಗಳಿನಿಂದ ಟಾಪ್ ಒನ್ ಧಾರಾವಾಹಿಯಾಗಿರುವ ಗಟ್ಟಿಮೇಳ ಎಷ್ಟು ಫೇಮಸ್ಸೋ ಅಲ್ಲಿನ ಕಲಾವಿದರೂ ಕೂಡ ಅಷ್ಟೇ ಫೇಮಸ್ಸು.. ಗಟ್ಟಿಮೇಳ ಧಾರಾವಾಹಿಯ ಬಹಳಷ್ಟು ಕಲಾವಿದರು ಈ ಹಿಂದೆ ಸಾಕಷ್ಟು ಧಾರಾವಾಹಿಯಲ್ಲಿ ಅಭಿನಯಿಸಿದ್ದರೂ ಕೂಡ ಗಟ್ಟಿಮೇಳದ ಪಾತ್ರದ ಮೂಲಕವೇ ಗುರುತಿಸಲ್ಪಡುವುದು ಧಾರಾವಾಹಿ ಎಷ್ಟು ಪ್ರಖ್ಯಾತಿ ತಂದು ಕೊಟ್ಟಿದೆ ಎಂಬುದಕ್ಕೆ ಉದಾಹರಣೆ.. ಇನ್ನು

ಇನ್ನು ಧಾರಾವಾಹಿಯಲ್ಲಿ ವೇದಾಂತ್ ಹಾಗೂ ಅಮೂಲ್ಯ ಪಾತ್ರಕ್ಕೆ ಮಾತ್ರವಲ್ಲದೇ ವಿಕ್ಕಿ ಆದ್ಯ ಆರತಿ ಅದಿತಿ ಧೃವ ಹೀಗೆ ಎಲ್ಲಾ ಪಾತ್ರಗಳಿಗೂ ಪ್ರಾಮುಖ್ಯತೆ ನೀಡಿರುವುದು ಮೆಚ್ಚುವಂತಹ ವಿಚಾರ.. ಇನ್ನು ವಿಕ್ಕಿ ಪಾತ್ರಧಾರಿ ನಟ ಅಭಿಷೇಕ್ ಹಾಗೂ ಸಾರಿಕಾ ಪಾತ್ರಧಾರಿ ನಟಿ ಶರಣ್ಯ ಶೆಟ್ಟಿ ಸಂತೋಷದ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ..

ಹೌದು ಕೆಲ ದಿನಗಳ ಹಿಂದಷ್ಟೇ ಸ್ಯಾಂಡಲ್ವುಡ್ ನಲ್ಲಿ ದೊಡ್ಡ ಸುದ್ದಿಯಾಗಿದ್ದ ವಿಚಾರದಲ್ಲಿ ಅಭಿಶೇಕ್ ಅವರ ಹೆಸರು ಕೇಳಿ ಬಂದಿತ್ತು.. ಆದರೆ ವಿಚಾರಣೆಗೆ ಹಾಜರಾಗಿ ತಮಗೂ ಇದೆಲ್ಲಕ್ಕೂ ಯಾವುದೇ ಸಂಬಂಧವಿಲ್ಲವೆಂದು ಸ್ಪಷ್ಟನೆ ಕೊಟ್ಟು ಜನರಿಗೂ ಸಹ ಈ ಬಗ್ಗೆ ಇರುವ ವಿಚಾರವನ್ನು ಮನವರಿಕೆ ಮಾಡಿದ್ದರು.. ನಂತರ ತಮ್ಮ ಧಾರಾವಾಹಿ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದರು.. ಆದರೀಗ ಹೊಸ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ..

ಹೌದು ಈ ಹಿಂದೆ ಮಾದ್ಯಮದ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅಭಿಶೇಕ್ ಅವರನ್ನು ಪ್ರೀತಿ ವಿಚಾರವಾಗಿ ಪ್ರಶ್ನೆ ಕೇಳಲಾಗಿ ಬುದ್ದಿ ಇರೋರು ಯಾರು ಲವ್ ಮಾಡಲ್ಲ.. ದುಡ್ಡು ಮಾಡ್ತಾರೆ ಎಂದಿದ್ದರು.. ಆದರೆ ಇದೀಗ ಅದೇ ನಟ ಅದೇ ಧಾರಾವಾಹಿಯ ಸಾರಿಕಾ ಜೊತೆ ಲವ್ವಲ್ಲಿ ಬಿದ್ದಿದ್ದಾರೆ.. ಆದರೆ ನಿಜ ಜೀವನದಲ್ಲಲ್ಲ.. ಬದಲಿಗೆ ಈ ಇಬ್ಬರು ಕಲಾವಿದರು ಹೊಸ ಲವ್ ಸ್ಟೋರಿ ಸಿನಿಮಾದಲ್ಲಿ ನಾಯಕ ನಾಯಕಿಯಾಗಿ ಅಭಿನಯಿಸುತ್ತಿದ್ದು ಚಿತ್ರೀಕರಣ ನಡೆಯುತ್ತಿದೆ..

ಸಿನಿಮಾಗೆ ಫೆಬ್ರವರಿ 14 ಎಂದು ಹೆಸರಿಡಲಾಗಿದ್ದು ಸಿನಿಮಾ ಕಂಪ್ಲೀಟ್ ಲವ್ ಸ್ಟೋರಿ ಆಗಿರಲಿದೆ.. ಈ ಹಿಂದೆ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟ ಅಭಿಶೇಕ್ ಇದೀಗ ಫೆಬ್ರವರಿ 14 ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.. ಇವರಿಗೆ ನಾಯಕಿಯಾಗಿ ಗಟ್ಟಿಮೇಳ ಧಾರಾವಾಹಿಯ ಸಾರಿಕಾ ಪಾತ್ರಧಾರಿ ನಟಿ ಶರಣ್ಯ ಶೆಟ್ಟಿ ಅಭಿನಯಿಸುತ್ತಿರುವುದು ವಿಶೇಷ..

ಅದಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿರುವ ಸಾರಿಕಾ ಈ ಸಿನಿಮಾದ ಬಗ್ಗೆ ಮಾತನಾಡಿ “ಧಾರಾವಾಹಿಯಲ್ಲಿ ಅತ್ತಿಗೆ ಮೈದುನನ ರೀತಿಯ ಪಾತ್ರ ಮಾಡಿದ್ದೆವು.. ಇದೀಗ ಇಬ್ಬರು ಜೋಡಿಯಾಗಿ ಅಭಿನಯಿಸುತ್ತಿದ್ದೇವೆ.. ಯುವ ಜನತೆಗೆ ಆಗಾಗ ಆಗುವ ಲವ್ ಬಗ್ಗೆಯ ಸಿನಿಮಾ ಇದು.. ಸಂಪೂರ್ಣ ಲವ್ ಸ್ಟೋರಿ ಎಂದಿದ್ದಾರೆ..

ಇನ್ನು ಅಭಿಶೇಕ್ ಕೂಡ ಈ ಬಗ್ಗೆ ಮಾತನಾಡಿ ಮೊದಲು ಬಹಳ ಸಣ್ಣಗಿದ್ದೆ ಈ ಸಿನಿಮಾಗಾಗಿ ವರ್ಕ್ ಔಟ್ ಮಾಡಿ ದಪ್ಪ ಆಗಿದ್ದೇನೆ.. ಆಗಿನ ಕಾಲಕ್ಕೆ ಮೈ ಆಟೋಗ್ರಾಫ್ ಸಿನಿಮಾ ರೀತಿ ಈಗಿನ ಕಾಲದಲ್ಲಿ ಯುವ ಜನತೆಗೆ ಆಗಾಗ ಆಗುವ ಲವ್ ಗಳ ಬಗ್ಗೆ ಸಿನಿಮಾ ಇದು.. ಇನ್ನು ಸಾಕಷ್ಟು ಸಿನಿಮಾಗಳ ಅವಕಾಶ ಬರುತ್ತಿದೆ.. ಮಾತುಕತೆ ಮುಗಿದ ನಂತರ ತಿಳಿಸುತ್ತೇನೆ ಎಂದಿದ್ದಾರೆ..