ಜೂನಿಯರ್ ಚಿರುಗೆ ವಿಶೇಷವಾದ ಹೆಸರು.. ಸಂತೋಷ ಹಂಚಿಕೊಂಡ ಮೇಘನಾ ರಾಜ್..

0 views

ಸದ್ಯ ಸರ್ಜಾ ಕುಟುಂಬ ಹಾಗೂ ಸುಂದರ್ ರಾಜ್ ಅವರ ಕುಟುಂಬದಲ್ಲಿ ನೋವುಗಳ ಮೋಡ ಸರಿದು ಸಂತೋಷದ ದಿನಗಳು ಕಣ್ಣು ಮುಂದೆ ಬಂದಿದೆ.. ಹೌದು ಚಿರಂಜೀವಿ ಸರ್ಜಾ ಇಲ್ಲವಾದ ನೋವು ಅದೊಂದು ರೀತಿ ಜೀವನ ಪೂರ್ತಿ ಕಾಡುವ ನೋವು.ಮ್ ಆದರೆ ಸದ್ಯ ವಾಸ್ತವವನ್ನು ಅರಿತು ಜೀವನದಲ್ಲಿ ಮುಂದೆ ಸಾಗಲೇ ಬೇಕು.. ಪುಟಾಣಿ ಚಿರುವಿನ ಜೀವನವನ್ನು ಸುಂದರವಾಗಿ ರೂಪಿಸಲೇ ಬೇಕು.. ಸದ್ಯ ಮೇಘನಾ ರಾಜ್ ಅವರೂ ಸಹ ಅದೇ ಹಾದಿಯಲ್ಲಿದ್ದು ಪುಟಾಣಿ ಕಂದನ ಬೇಕು ಬೇಡವನ್ನು ಪೂರೈಸುವುದರಲ್ಲಿ ಬ್ಯುಸಿಯಾಗಿದ್ದಾರೆ..

ಹೌದು ಚಿರು ಇಲ್ಲವಾದ ನೋವಿನಲ್ಲಿದ್ದ ಮೇಘನಾ ರಾಜ್ ಅವರ ಬಾಳಿಗೆ ಬೆಳಕಾಗಿ ಮಗುವಾಗಿ ಚಿರು ಮತ್ತೆ ಹುಟ್ಟಿ ಬಂದರು.. ಆದರೆ ಅದ್ಯಾಕೋ ಕಷ್ಟಗಳು ಸಾಲದೆಂಬಂತೆ ಮತ್ತೆ ಸುಂದರ್ ರಾಜ್ ಅವರ ಸಂಪೂರ್ಣ ಕುಟುಂಬಕ್ಕೆ ಕೊರೊನಾ ಕಾಣಿಸಿಕೊಂಡಿತು.. ಬಾಣಂತಿ ಮೇಘನಾ ರಾಜ್ ಹಾಗೂ ಪುಟಾಣಿ ಕಂದನನ್ನಿ ಬಿಡದೇ ಕಾಡಿದ ಕೊರೊನಾದಿಂದ ಈ ಕುಟುಂಬ ಆದಷ್ಟು ಬೇಗ ಚೇತರಿಸಿಕೊಳ್ಳಲೆಂದು ಅಭಿಮಾನಿಗಳು ಪ್ರಾರ್ಥಿಸಿದ್ದರು..

ಎಲ್ಲರ ಪ್ರಾರ್ಥನೆಯಂತೆ ಸದ್ಯ ಸಂಪೂರ್ಣ ಕುಟುಂಬ ಕೊರೊನಾ ಮುಕ್ತವಾಗಿದ್ದು ಸದ್ಯ ಜೂನಿಯರ್ ಚಿರು ಜೊತೆ ಮೇಘನಾ ರಾಜ್ ಅವರು ಸಮಯ ಕಳೆಯುತ್ತಿದ್ದಾರೆ.. ಈ ನಡುವೆ ಸಂತೋಷದ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ.. ಹೌದು ಮಗು ಹುಟ್ಟಿದ ಒಂದು ತಿಂಗಳಲ್ಲಿಯೇ ತೊಟ್ಟಿಲು ಶಾಸ್ತ್ರ ನೆರವೇರಿಸಿದ್ದ ಮೇಘನಾ ರಾಜ್ ಅವರು ಮಗುವಿಗೆ ಇನ್ನು ಹೆಸರನ್ನು ನಿರ್ಧಾರ ಮಾಡಿಲ್ಲ.. ಆದಷ್ಟು ಬೇಗ ಹೆಸರನ್ನು ನಿರ್ಧಾರ ಮಾಡಿದ ಕೂಡಲೇ ಎಲ್ಲರಿಗೂ ತಿಳಿಸುವೆವು ಎಂದಿದ್ದರು.. ಸದ್ಯ ಪುಟಾಣಿಯನ್ನು ಚಿಂಟು ಎಂದೇ ಕರೆಯಲಾಗುತಿತ್ತು.. ಆದರೀಗ ಹೊಸ ಹೆಸರೊಂದನ್ನು ನಿರ್ಧಾರ ಮಾಡಿದಂತೆ ಕಾಣುತ್ತಿದೆ..

ಹೌದು ನಿನ್ನೆ ಪುಟಾಣಿ ಕಂದನ ಫೋಟೋ ಹಂಚಿಕೊಂಡಿರುವ ಮೇಘನಾ ರಾಜ್ ಅವರು ಆ ಹೆಸರು ಇರುವ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ.. ಹೌದು ನಿನ್ನೆ ಐದು ವರ್ಷದ ಒಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಿಸುವ ಅಭಿಯಾನ ಇದ್ದು ಎಲ್ಲಾ ಮಕ್ಕಳಿಗೂ ಲಸಿಕೆ ಹಾಕಿಸಲಾಗುತ್ತಿದೆ.. ಅದೇ ರೀತಿ ಮೇಘನ ರಾಜ್ ಅವರೂ ಸಹ ಜೂನಿಯರ್ ಚಿರುಗೆ ಲಸಿಕೆ ಹಾಕಿಸಿ ಸಂತೋಷ ಹಂಚಿಕೊಂಡಿದ್ದಾರೆ.. ಮಗುವಿನ ಬೆರಳಿಗೆ ಇಂಕ್ ಹಾಕಿರುವ ಫೋಟೋ ಹಂಚಿಕೊಂಡಿರುವ ಮೇಘನಾ ರಾಜ್ ಅವರು “ಬೇಬಿ ಸಿ ಮೊದಲ ಬಾರಿಗೆ ಲಸಿಕೆ ಹಾಕಿಸಿಕೊಂಡಿದ್ದು ತನ್ನ ಪುಟ್ಟ ಬೆರಳಿಗೆ ಇಂಕ್ ಹಾಕಲಾಗಿದೆ.. ಕೆಲ ಹನಿಗಳಿಂದ ನಮ್ಮ ಮಕ್ಕಳನ್ನು ಆರೋಗ್ಯವಂತರನ್ನಾಗಿ ಮಾಡುವುದಷ್ಟೇ ಅಲ್ಲದೇ ನಮ್ಮ ದೇಶವನ್ನು ಪೊಲೀಯೋ ಮುಕ್ತ ಭಾರತವನ್ನಾಗಿ ಮಾಡೋಣ.. ಆರೋಗ್ಯದಿಂದಿರಿ.. ಸೇಫ್ ಆಗಿರಿ” ಎಂದು ಬರೆದು ಪುಟ್ಟ ಕಂದನ ಫೋಟೋಗಳನ್ನು ಹಂಚಿಕೊಂಡಿದ್ದಾರೆ..

ಅಷ್ಟೇ ಅಲ್ಲದೇ ಪುಟ್ಟ ಕಂದನ ಹೆಸರಿರುವ ಮತ್ತೊಂದು ಫೋಟೋ ಕೂಡ ಶೇರ್ ಮಾಡಿಕೊಂಡಿದ್ದಾರೆ.. ಹೌದು ಮಗುವಿಗೆ ಎರಡೂ ಕುಟುಂಬದ ಹೆಸರನ್ನು ಸೇರಿಸಿ ಬರೆದಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.. ಸರ್ಜಾ ಹಾಗೂ ಸುಂದರ್ ರಾಜ್ ಅವರ ಎರಡೂ ಕುಟುಂಬದ ಕುಡಿಯಾಗಿರುವುದರಿಂದ ಸರ್ಜಾ ರಾಜ್ ಎಂದು ಕರೆಯಲಾಗಿದ್ದು ಉದೇ ಹೆಸರನ್ನು ಮಗುವಿಗೆ ಇಟ್ಟರೂ ಯಾವುದೇ ಆಶ್ಚರ್ಯ ಪಡಬೇಕಿಲ್ಲ.. ಚಿರಂಜೀವಿ ಸರ್ಜಾ ಅವರಾಗಿರಬಹುದು.. ಇತ್ತ ಮೇಘನಾ ರಾಜ್ ಅವರಾಗಿರಬಹುದು ಇಬ್ಬರೂ ಸಹ ಕುಟುಂಬಕ್ಕೆ ಬಹಳ ಪ್ರಾಮುಖ್ಯತೆ ನೀಡುವ ಗುಣದವರಾಗಿದ್ದು ಅವರ ಕಂದನಿಗೆ ಎರಡೂ ಕುಟುಂಬದ ಹೆಸರನ್ನು ಸೇರಿಸಿ ಇಡುವ ನಿರ್ಧಾರ ಮಾಡಿರಬಹುದು ಎನ್ನಲಾಗಿದೆ..