ಏನ್ ಕರ್ಮ ಗುರು.. ಲಾಜಿಕ್ಕೇ ಇಲ್ವಲ್ರಯ್ಯಾ.. ಒಂದ್ ಚೂರ್ ಆದ್ರೂ ಲಾಜಿಕ್ ಇಡ್ರಯ್ಯಾ..

0 views

ಕಿರುತೆರೆ ಧಾರಾವಾಹಿಗಳು ನೈಜ್ಯತೆಗೆ ಕೊಂಚ ದೂರವಾಗಿ ಚಿತ್ರೀಕರಣ ಆಗೋದು ಹೊಸ ವಿಚಾರವೇನೂ ಅಲ್ಲ.. ಈ ಹಿಂದೆ ನಮ್ಮ ಪುಟ್ಟ ಗೌರಕ್ಕ ಕಾಡಿನ ಮಧ್ಯೆ ದೊಡ್ಡ ದೊಡ್ಡ ಹಾವುಗಳನ್ನು ಒಂದೇ ಮಾತಿನಲ್ಲಿ ಹಿಂದಕ್ಕೆ ಕಳುಹಿಸಿದ್ದು ದೊಡ್ಡ ದೊಡ್ಡ ಹುಲಿ ಸಿಂಹಗಳನ್ನು ಮಾತಿನ ಮೂಲಕವೇ ಹಿಮ್ಮೆಟ್ಟಿಸಿದ್ದು ನಿಜಕ್ಕೂ ನಮ್ಮ ಪುಟ್ಟ ಗೌರಕ್ಕನ ಕಂಡರೆ ಎಲ್ಲಿಲ್ಲದ ಹೆಮ್ಮೆ ಮೂಡುವಂತೆ ಮಾಡಿತ್ತು.. ಆ ರೀತಿ ಆ ರೇಂಜ್ ಗೆ ಇಲ್ಲವಾದರೂ ಇತ್ತೀಚಿನ ಧಾರಾವಾಹಿಗಳಲ್ಲಿಯೂ ಅಂತಹ ಸಾಕಷ್ಟು ದೃಶ್ಯಗಳು ಚಿತ್ರೀಕರಣಗೊಂಡು ಪ್ರಸಾರವಾಗುತ್ತಿದ್ದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗೆ ಒಳಗಾಗೋದು ಉಂಟು.. ಅದರಲ್ಲೂ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಗೀತಕ್ಕ ಧಾರಾವಾಹಿ ಅಂತಹ ವಿಚಾರಗಳಲ್ಲಿ ಎತ್ತಿದ ಕೈ.. ಆದರೆ ಇದೀಗ ಗೀತಕ್ಕನನ್ನೂ ಸಹ ನಮ್ಮ ಸತ್ಯಣ್ಣ ಹಿಂದಿಕ್ಕಿದಂತೆ ಕಾಣುತ್ತಿದೆ..

ಹೌದು ಸತ್ಯ ಧಾರಾವಾಹಿ ಕನ್ನಡದ ಖ್ಯಾತ ಧಾರಾವಾಹಿಗಳಲ್ಲಿ‌ ಒಂದು.. ಶುರುವಾದಾಗಿನಿಂದಲೂ ಟಾಪ್ ಐದು ಧಾರಾವಾಹಿಗಳಲ್ಲಿ‌ ಒಂದಾಗಿದ್ದು ಈಗಲೂ ಸಹ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.. ಅತ್ತ ಇದೇ ಸಮಯಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾಮಾಚಾರಿ ಧಾರಾವಾಹಿ ಪ್ರಸಾರಗೊಂಡು ಸತ್ಯ ಧಾರಾವಾಹಿಗೆ ಕೊಂಚ ಪೆಟ್ಟು ಬಿದ್ದಂತೆ ಕಂಡರೂ ಸಹ ಎರಡೇ ವಾರದಲ್ಲಿ ಸತ್ಯ ಭರ್ಜರಿಯಾಗಿ ಕಂಬ್ಯಾಕ್ ಮಾಡಿದ್ದೂ ಆಯ್ತು.. ಎಂದಿನಂತೆ ಒಳ್ಳೆಯ ರೇಟಿಂಗ್ ಪಡೆದು ತನ್ನ ಸ್ಥಾನವನ್ನು ಕಾಯ್ದುಕೊಂಡು ಮುನ್ನಡೆಯುತ್ತಿದೆ..

ಆದರೆ ಧಾರಾವಾಹಿಯಲ್ಲಿ‌ ಕೆಲವೊಂದು ದೃಶ್ಯಗಳನ್ನು ಮಾಡುವಾಗ ನಿಜಕ್ಕೂ ನಿರ್ದೇಶಕರುಗಳಿಗೆ ನಗು ಬರುವುದೇ ಇಲ್ಲವಾ.. ಇದರಲ್ಲಿ ಚೂರಾದರೂ ಲಾಜಿಕ್ ಇರಬೇಕು ಅಂತ ಅನಿಸೋದಿಲ್ಲವಾ ಎಂದು ನೋಡುಗರಿಗೆ ಅನಿಸಿದ್ದಂತೂ ಸತ್ಯ.. ಹೌದು ಸತ್ಯ ಧಾರಾವಾಹಿಯಲ್ಲಿ ಸಧ್ಯ ನಮ್ಮ ಸತ್ಯಣ್ಣ ಹಾಗೂ ಅಮೂಲ್ ಬೇಬಿ ಅಕ್ಕನ ಮದುವೆ ಅದ್ಧೂರಿಯಾಗಿ ನೆರವೇರಿದ್ದು ಅತ್ತ ದಿವ್ಯಾ ಬಾಲನ ಬಾಲವನ್ನಿಡಿದು ಹೊರಟಿಯಾಗಿದೆ.. ಇತ್ತ ರಾಮಚಂದ್ರರಾಯರ ಮನೆ ಸೇರಿರುವ ನಮ್ಮ ಸತ್ಯಣ್ಣ ಮಾಡುತ್ತಿರುವ ಯಡವಟ್ಟು ಒಂದೆರೆಡಲ್ಲ..‌ ಒಂದು ಕಡೆ ಅಮೂಲ್ ಬೇಬಿ ಮುಂಚೆ ಸತ್ಯನನ್ನು ಪ್ರೀತಿಸುತ್ತಿದ್ದರೂ ಸಹ ಈಗ ಸತ್ಯಳನ್ನು ಒಪ್ಪಿಕೊಳ್ಳದೇ ತಕರಾರು ಎತ್ತಿರೋದು.. ಇತ್ತ ಮದುವೆಯಾದ ನಂತರ ಇದೇ ನನ್ನ ಮನೆ ಎಂದುಕೊಂಡು ರಾಮಚಂದ್ರರಾಯರ ಮನೆ ಸೇರಿರುವ ಸತ್ಯನ ಪಜೀತಿ ಒಂದೆರೆಡಲ್ಲ..

ಪಜೀತಿ ಆದರೆ ಆಯ್ತು.. ಆದರೆ ಲಾಜಿಕ್ಕೇ ಇಲ್ಲದೇ ದೃಶ್ಯಗಳು ನಿಜಕ್ಕೂ ಧಾರಾವಾಹಿಯ ಬದಲಾಗಿ ಕಾಮಿಡಿ ಶೋ ನೋಡಿದಂತೆ ಭಾಸವಾಗುವಂತೆ ಮಾಡಿದೆ ಎಂದರೆ ತಪ್ಪಾಗಲಾರದು.. ಹೌದು ಸತ್ಯ ತಾನು ಚಿಕ್ಕ ವಯಸ್ಸಿನಿಂದ ಹುಡುಗನಂತೆಯೇ ಬೆಳೆದಿರೋದು ನಿಜ.. ಅದರಲ್ಲೇನೂ ತಪ್ಪಿಲ್ಲ.. ಆದರೆ ಅದೊಂದೇ ಕಾರಣಕ್ಕೆ ಹಿಡುಗರಿಗಿಂತಲೂ ಭಿನ್ನವಾದ ಗುಣ ನಡವಳಿಕೆ ಸತ್ಯಣ್ಣನಿಗೆ ಬಂದಿರೋದು ನಿಜಕ್ಕೂ ಧಾರಾವಾಹಿಯನ್ನು ಮನೆಯಲ್ಲೇ ಕೂತು ನೋಡುವ ಮಹಾ ಪ್ರಭುಗಳು ಬೆಚ್ಚಿ ಬೀಳುವಂತೆ ಮಾಡಿದೆ.. ಹೌದು ಸತ್ಯ ಮದುವೆಯಾಗಿ ರಾಮಚಂದ್ರ ರಾಯರ ಮನೆಗೆ ಕಾಲಿಟ್ಟು ಸೇರು ಒದ್ದು ಮನೆಯೊಳಗೆ ಕಾಲಿಟ್ಟು ಪೂಜೆ ಮಾಡೋದ್ರಿಂದ ಹಿಡಿದು ಹಾಲು ಕಾಯಿಸುವವರೆಗೂ ಸತ್ಯ ನಡೆದುಕೊಳ್ಳುವ ರೀತಿ ನಿಜಕ್ಕೂ ಅತಿಯಲ್ಲಿ ಅತಿ ಎನಿಸಿದೆ..

ಹೌದು ಸತ್ಯ ಮನೆ ಕೆಲಸ ಮಾಡಿದವಳಲ್ಲ.. ಸರಿ.. ಆದರೆ ಕನಿಷ್ಟ ಸಾಮಾನ್ಯ ಜ್ಞಾನವೂ ಇಲ್ಲದವಳು ಎಂದು ಈಗಲೇ ಗೊತ್ತಾಗಿದ್ದು.. ಪೂಜೆ ಮಾಡಲ್ಯ್ ಒಂದು ಕಾಯಿ ಒಡಿ ಎಂದರೆ ಅದು ಮತ್ತೊಬ್ಬರ ತಲೆಗೆ ಹೋಗಿ ಬೀಳುತ್ತದೆ.. ಅಲ್ರಯ್ಯಾ ಯಾವ್ ಹುಡುಗರಿಗೆ ಕಾಯಿ ಒಡೆಯೋಕೆ ಬರಲ್ಲ ಹೇಳಿ.. ಬಹುತೇಕರ ಮನೆಯಲ್ಲಿ ಪೂಜೆ ಮಾಡಲು ಕಾಯಿ ಒಡೆಯೋದೆ ಗಂಡು ಮಕ್ಕಳು. ಆದರೆ ಗಂಡು ಮಕ್ಕಳಂತೆ ಬೆಳೆದ ಸತ್ಯಳಿಗೆ ಇದು ಗೊತ್ತಿಲ್ಲ.. ಸರಿ ಬಿಡಿ.. ನಂತರ ಮತ್ತೊಂದು ಕಾಯಿಯನ್ನು ತನ್ನ ಕೈಯಿಂದಲೇ ಮುಟ್ಟಿದ ತಕ್ಷಣ ಸರಿಯಾಗಿ ಅರ್ಧಕ್ಕೆ ಭಾಗ ಆಗಿ ಬಿಡುತ್ತದೆ.. ಅಲ್ರಯ್ಯಾ ಕಲ್ಲಿಗೆ ಹೊಡೆದಾಗಲೂ ಸಹ ಕಾಯಿ ಆ ಮಟ್ಟಕ್ಕೆ ಅರ್ಧಕ್ಕೆ ಸರಿಯಾಗಿ ಪಾಲಾಗುವುದು ಅಪರೂಪ.. ಆದರೆ ಇಲ್ಲಿ ಸತ್ಯ ದೇವರ ಮನೆಯಲ್ಲಿ ನಿಂತು ಕೈಯಲ್ಲಿ‌ ಮುಟ್ಟಿದ ಕೂಡಲೇ ಕಾಯಿ ಎರಡು ಪಾಲಾಯಿತು.. ಅದನ್ನು ನೋಡಿ ರಾಮಚಂದ್ರರಾಯರು ಅಮುಲ್ ಬೇಬಿ ಸೇರಿದಂತೆ ಎಲ್ಲರೂ ಬೆಚ್ಚಿಬೀಳೋ ದೃಶ್ಯ.. ಅಲ್ರಯ್ಯಾ ಕನಿಷ್ಟ ಸಣ್ಣದೊಂದು ಲಾಜಿಕ್ ಆದ್ರೂ ಇರಬೇಕು ಅಂತ ಅನಿಸೋದೆ ಇಲ್ವಾ..

ಅಷ್ಟೇ ಅಲ್ಲದೇ ಹಾಲು ಕಾಯಿಸಲು ಹಾಲಿನ ಪ್ಯಾಕೆಟ್ ಅನ್ನು ಬಾಯಲ್ಲಿ ಓಪನ್ ಮಾಡುವ ಸತ್ಯ.. ಇದೇ ಸತ್ಯ ಹಿಂದೆ ಇರೋ ಬರೋ ಜನರಿಗೆಲ್ಲಾ ಬುದ್ದಿ ಹೇಳುತ್ತಿದ್ದದ್ದಳು.. ಆದರೆ ಹಾಲಿನ ಪ್ಯಾಕೆಟ್ ಅನ್ನು ಹಲ್ಲಿನಿಂದ ಓಪನ್ ಮಾಡಬಾರದೆಂಬ ಕನಿಷ್ಟ ಜ್ಞಾನವೂ ಇಲ್ಲವಾ ಎನಿಸಿತು.. ಇಷ್ಟಕ್ಕೇ ಮುಗಿಯೋದಿಲ್ಲ.. ಬೆಂಕಿ ಕಡ್ಡಿಯನ್ನು ಸಿಗರೇಟ್ ಗೆ ಹಚ್ವುವ ಹಾಗೆ ಹಚ್ಚೋದಂತೆ.. ಅದರ ಅಭ್ಯಾಸವೇ ಇಲ್ಲದ ಸತ್ಯಳಿಗೆ ಆ ರೀತಿ ಕಡ್ಡಿ ಹಚ್ಚೋ ಕಲೆ ಎಲ್ಲಿಂದ ಬಂತು.. ಹೀಗೆ ಒಂದಾ ಎರಡಾ.. ನೋಡಲು ಎರಡು ಕಣ್ಣು ಸಾಲದು.. ಸಧ್ಯ ಈ ದೃಶ್ಯಗಳನ್ನೆಲ್ಲಾ ಕಣ್ತುಂಬಿಕೊಂಡ ಪ್ರೇಕ್ಷಕ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮೂಲಕ ಅತಿಯಾಗಿ ಮಾಡಬೇಡ್ರಯ್ಯಾ ಎಂದು ಪ್ರೋಮಗಳಿಗೆ ಟೀಕಿಸಿದ್ದೂ ಆಯ್ತು..

ಒಟ್ಟಿನಲ್ಲಿ ಒಂದೇ ಕೈನಲ್ಲಿ ದೊಡ್ಡ ದೊಡ್ಡ ಗೂಂಡಾಗಳನ್ನು ಎದುರಿಸಿ ಹೊಡೆದು ಬೀಳಿಸುವ ನಮ್ಮ ಗೀತಕ್ಕನ ಮುಂದೆ ಸತ್ಯಣ್ಣನ ಈ ಹೊಸ ಶೈಲಿ ಕಡಿಮೆಯೇ ಬಿಡಿ.. ಆದರೆ ಏನಾದರೂ ಆಗಲಿ ಧಾರಾವಾಹಿಗಳಲ್ಲಿ ಸ್ವಲ್ಪನಾದ್ರೂ ಲಾಜಿಕ್ ಇಡ್ರಯ್ಯಾ.. ಎನ್ನುವುದಷ್ಟೇ ಅಭಿಮಾನಿ ಮಹಾಶಯರ ಮನದಾಳದ ಕೋರಿಕೆ.. ಸತ್ಯಣ್ಣ ಹಾಗೂ ಅಮೂಲ್ ಬೇಬಿಯ ದಾಂಪತ್ಯ ಜೀವನ ಸುಖಕರವಾಗಿರಲಿ.. ಆದಷ್ಟು ಬೇಗ ಪುಟಾಣಿ ಸತ್ಯಣ್ಣ ಅಥವಾ ಪುಟ್ಟ ಅಮೂಲ್ ಬೇಬಿ ರಾಮಚಂದ್ರರಾಯರ ಮನೆಗೆ ಕಾಲಿಡುವಂತಾಗಲಿ..