ಜೀ ಕನ್ನಡದ ಹೊಸ ಸೀರಿಯಲ್ ಸತ್ಯ ಧಾರಾವಾಹಿ ಯಾರದ್ದು ಗೊತ್ತಾ? ಬಂಡವಾಳ ಹಾಕಿರುವ ಸ್ಯಾಂಡಲ್ವುಡ್ ನ ಸ್ಟಾರ್ ಯಾರು ಗೊತ್ತಾ?

0 views

ಕಳೆದ ಕೆಲ ವರ್ಷಗಳಿಂದ ಕನ್ನಡ ಕಿರುತೆರೆ ಬೇರೆಯದ್ದೇ ರೇಂಜ್ ನಲ್ಲಿದೆ ಎನ್ನಬಹುದು.. ಧಾರಾವಾಹಿಗಳ ನಿರ್ಮಾಣದಲ್ಕಿ ಯಾವುದೇ ಕಾಂಪ್ರಮೈಸ್ ಇಲ್ಲದೇ ಅದ್ಧೂರಿತನದ ನಿರ್ಮಾಣ ಕಾಣುತ್ತಿದೆ.. ಪ್ರತಿಯೊಂದು ಧಾರಾವಾಹಿಯೂ ಇದೀಗ ಬಿಗ್ ಬಡ್ಜೆಟ್ ನ ಧಾರಾವಾಹಿಗಳೇ ಆಗಿವೆ.. ಕಿರುತೆರೆಯ ನಟ ನಟಿಯರಿಗೆ ಒಂದು ದಿನಕ್ಕೆ 30 ರಿಂದ 35 ಸಾವಿರದ ವರೆಗೂ ಸಂಭಾವನೆ ನೀಡುವ ಮಟ್ಟಕ್ಕೆ ನಮ್ಮ ಕನ್ನಡ ಕಿರುತೆರೆ ಬೆಳೆದು ನಿಂತಿದೆ..

ಇನ್ನು ಕೊರೊನಾ ಕಾರಣದಿಂದ ಆದ ಲಾಕ್ ಡೌನ್ ನಿಂದಾಗಿ ಕನ್ನಡದಲ್ಲಿ ಬಹಳಷ್ಟು ಧಾರಾವಾಹಿಗಳು ನಿಂತು ಹೋದವು.. ಒಳ್ಳೆಯ ರೇಟಿಂಗ್ ಪಡೆಯುತ್ತಿದ್ದ ಧಾರಾವಾಹಿಗಳು ಸಹ ಕೆಲ ಕಾರಣಗಳಿಂದ ತನ್ನ ಪ್ರಸಾರವನ್ನು ನಿಲ್ಲಿಸಿದವು.. ಕೆಲ ದಿನಗಳು ಡಬ್ಬಿಂಗ್ ಧಾರಾವಾಹಿಯ ಮೊರೆ ಹೋದರೂ ಕೂಡ ಅವೆಲ್ಲವೂ ತಾತ್ಕಾಲಿಕವಷ್ಟೇ ಎನ್ನುವಂತೆ ಜನರು ಕನ್ನಡದ ಧಾರಾವಾಹಿಗಳನ್ನು ಇಷ್ಟ ಪಡುವಷ್ಟು ಬೇರೆ ಧಾರಾವಾಹಿಗಳನ್ನು ಹೆಚ್ಚು ದಿನಗಳು ಇಷ್ಟ ಪಡಲು ಸಾಧ್ಯವಿಲ್ಲ ಎಂಬುದು ಸಾಭೀತಾಗಿದೆ.. ಹೊಸದರಲ್ಲಿ ಡಬ್ಬಿಂಗ್ ಧಾರಾವಾಹಿಗಳು ಒಳ್ಳೆಯ ರೇಟಿಂಗ್ ಪಡೆದರೂ ಕೂಡ ಬರುಬರುತ್ತಾ ಕನ್ನಡದ ಧಾರಾವಾಹಿಗಳ ಮುಂದೆ ಡಬ್ಬಿಂಗ್ ಧಾರಾವಾಹಿಗಳು ಮಂಕಾಗಿ ಹೋದವು..

ಇದೀಗ ಮತ್ತೆ ಎಲ್ಲಾ ವಾಹಿನಿಗಳಲ್ಲಿಯೂ ಕನ್ನಡದ ಹೊಸ ಹೊಸ ಕತೆಯುಳ್ಳ ಹೊಸ ಧಾರಾವಾಹಿಗಳು ಆರಂಭವಾಗುತ್ತಿವೆ.. ಇನ್ನು ಸದ್ಯ ಕನ್ನಡ ಕಿರುತೆರೆಯ ನಂಬರ್ ಒನ್ ವಾಹಿನಿ ಜೀ ಕನ್ನಡದಲ್ಲಿ‌ ಮೊನ್ನೆ‌ ಮೊನ್ನೆಯಷ್ಟೇ ಹೊಸ ಧಾರಾವಾಹಿ ಅದರಲ್ಲೂ ವಿಭಿನ್ನ ಕತೆಯುಳ್ಳ ಧಾರಾವಾಹಿ ಸತ್ಯ ಆರಂಭಗೊಂಡಿದೆ.. ಇಷ್ಟು ದಿನ ರಾತ್ರಿ 9ಕ್ಕೆ ಪ್ರಸಾರವಾಗುತ್ತಿದ್ದ ನಾಗಿಣಿ ಧಾರಾವಾಹಿ 9.30 ಕ್ಕೆ ಪ್ರಸಾರವಾಗುತ್ತಿದ್ದು.. ಕಳೆದ ವಾರದಿಂದ ರಾತ್ರಿ 9ಕ್ಕೆ ಸತ್ಯ ಧಾರಾವಾಹಿ ಪ್ರಸಾರವಾಗುತ್ತಿದೆ.. ಇನ್ನು 9.30ಕ್ಕೆ‌ ಪ್ರಸಾರವಾಗುತ್ತಿದ್ದ ಯಾರೇ ನೀ ಮೋಹಿನಿ ಧಾರಾವಾಹಿ ಅಂತ್ಯವಾಗಿದೆ..

ಇನ್ನು ಸದ್ಯ ಹೊಸದಾಗಿ ಶುರು ಆಗಿರುವ ಸತ್ಯ ಧಾರಾವಾಹಿ ಬಹಳ ವಿಭಿನ್ನ ಕತೆ ಹೊಂದಿದ್ದು ಹೆಣ್ ಮಕ್ಳಿಗೆ ಇವಳು ರೋಲ್ ಮಾಡಲ್ ಎಂದೇ ಧಾರಾವಾಹಿ ಆರಂಭವಾಗಿದ್ದು ಒಳ್ಳೆಯ ರೆಸ್ಪಾನ್ಸ್ ಕೂಡ ಪಡೆದಿದೆ.. ಅಷ್ಟಕ್ಕೂ ಈ ಧಾರಾವಾಹಿ ಯಾರದ್ದು? ಎಂಬ ಸಣ್ಣ ಕುತೂಹಲ ಇದ್ದೇ ಇದೆ.. ಇದಕ್ಕೆ ಬಂಡವಾಳ ಹೂಡಿರುವುದು ಮತ್ಯಾರೂ ಅಲ್ಲ ಸ್ಯಾಂಡಲ್ವುಡ್ ನ ಸ್ಟಾರ್ ನಿರ್ದೇಶಕ ಹಾಗೂ ನಿರ್ಮಾಪಕ..

ಹೌದು ಅವರು ಮತ್ಯಾರೂ ಅಲ್ಲ ಪೈಲ್ವಾನ್ ಸಿನಿಮಾದ ನಿರ್ದೇಶಕ‌ ಹಾಗೂ ನಿರ್ಮಾಪಕರಾಗಿರುವ ಕೃಷ್ಣ ಅವರು.. ಹೌದು ನಿರ್ದೇಶಕ ಕೃಷ್ಣ ಹಾಗೂ ಅವರ ಪತ್ನಿ ಸ್ವಪ್ನ ಕೃಷ್ಣ ಒಂದು ರೀತಿ ಹಿಟ್ ಜೋಡಿ ಎನ್ನಬಹುದು.. ತಮ್ಮ ಆರ್ ಆರ್ ಆರ್ ಕ್ರಿಯೇಷನ್ಸ್ ಅಡಿಯಲ್ಲಿ ಪೈಲ್ವಾನ್ ಸಿನಿಮಾ ನಿರ್ದೇಶನದ ಜೊತೆಗೆ ನಿರ್ಮಾಣ ಮಾಡಿ ಗೆದ್ದರು.. ಇನ್ನು ಕಿರುತೆರೆಯ ವಿಚಾರಕ್ಕೆ ಬಂದರೆ ಅದಾಗಲೇ ಸ್ವಪ್ನ ಕೃಷ್ಣ ಅವರು ತಮ್ಮ ನಿರ್ದೇಶನದಲ್ಲಿ ಸಾಕಷ್ಟು ಹಿಟ್ ಧಾರಾವಾಹಿಗಳನ್ನು ನೀಡಿದ್ದಾರೆ.. ಗಂಗಾ.. ಗೃಹಲಕ್ಷ್ಮಿ.. ಸುಬ್ಬಲಕ್ಷ್ಮಿ ಸಂಸಾರ ದಂತಹ ಹಿಟ್ ಧಾರಾವಾಹಿಗಳನ್ನು ನೀಡಿರುವ ಖ್ಯಾತಿ ಸ್ವಪ್ನ ಕೃಷ್ಣ ಅವರಿಗಿದೆ.. ಲಾಕ್ ಡೌನ್ ಸಮಯದಲ್ಲಿ ಸುಬ್ಬಲಕ್ಷ್ಮಿ ಸಂಸಾರ ಧಾರಾವಾಹಿಯನ್ನು‌ ನಿಲ್ಲಿಸಬೇಕಾಯಿತು.. ಬಹಳ ಬೇಸರದಿಂದಲೇ ಆ ಧಾರಾವಾಹಿಯನ್ನು ಅರ್ಧಕ್ಕೆ ನಿಲ್ಲಿಸಿದ್ದರು..

ಆದರೆ ಇದೀಗ ಮತ್ತೆ ಸೂಪರ್ ಆಗಿಯೇ ಕಂಬ್ಯಾಕ್‌ ಮಾಡಿದ್ದು ಸತ್ಯ ಧಾರಾವಾಹಿ‌ ಮೂಲಕ‌ ಮತ್ತೊಂದು ಮಹಿಳಾ ಪ್ರಧಾನ ಧಾರಾವಾಹಿಗೆ ಕೈ ಹಾಕಿದ್ದು ಆರಂಭದಲ್ಲಿಯೇ ಒಳ್ಳೆಯ ರೆಸ್ಪಾನ್ಸ್ ದೊರೆತಿದ್ದು ಸತ್ಯಳ ಜರ್ನಿಗೆ ಶುಭ ಹಾರೈಸಿದ್ದಾರೆ.. ಇನ್ನು ಜೊತೆಜೊತೆಯಲಿ ಧಾರಾವಾಹಿಗೆ ಸಂಗೀತ ನೀಡಿ ಹಿಟ್ ಆದ ಸುನಾದ್ ಗೌತಮ್ ಅವರೇ ಸತ್ಯ ಧಾರಾವಾಹಿಗೂ ಸಂಗೀತ ನೀಡಿದ್ದು ಜೊತೆಜೊತೆಯಲಿ ಶೀರ್ಷಿಕೆ ಗೀತೆ ಹಾಡಿದ ನಿನಾದ ನಾಯಕ್ ಸತ್ಯ ಶೀರ್ಷಿಕೆ ಗೀತೆಗೂ ಧನಿಯಾಗಿದ್ದಾರೆ..

ಈ ಮೂಲಕ ಜೀ ಕನ್ನಡ ವಾಹಿನಿ ಹಾಗೂ ಸ್ವಪ್ನ ಕೃಷ್ಣ ಅವರು ತಮ್ಮ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಮತ್ತೊಂದು ಹಿಟ್ ಧಾರಾವಾಹಿ ನೀಡುವತ್ತ ಹೆಜ್ಜೆ ಹಾಕಿದ್ದು ಸ್ನೇಹಿತರು ಶುಭ ಹಾರೈಸಿದ್ದಾರೆ..