ನಿರ್ದೇಶಕ ಯೋಗರಾಜ್ ಭಟ್ಟರ ಮಾವ ಇನ್ನಿಲ್ಲ.. ಆದರೆ ಇವರು ನಿಜಕ್ಕೂ ಯಾರು ಗೊತ್ತಾ.. ಎಲ್ಲರಿಗೂ ತಿಳಿದಿರುವ ಖ್ಯಾತ ನಟನೇ..

0 views

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕಳೆದ ಎರಡು ವರ್ಷಗಳಿಂದ ಸಾಲು ಸಾಲು ಸಾವಿನ ಸುದ್ದಿಗಳನ್ನು ನೋಡುತ್ತಿದ್ದು ಇದೀಗ ಮತ್ತೊಂದು ಅಗಲಿಕೆಯ ಸುದ್ದಿ ಎದುರಾಗಿದೆ.. ಹೌದು ಕನ್ನಡ ಸಿನಿಮಾ ಇಂಡಸ್ಟ್ರಿಯ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ಟರ ಪತ್ನಿಯ ತಂದೆ ಇಂದು ಇಹಲೋಕ ತ್ಯಜಿಸಿದ್ದು ಯೋಗರಾಜ್ ಭಟ್ಟರ ಕುಟುಂಬದಲ್ಲಿ ನೋವು ಎದುರಾಗಿದೆ..

ಹೌದು ಯೋಗರಾಜ್ ಭಟ್ಟರ ಮಾವ ಸತ್ಯ ಉಮ್ಮತ್ತಾಲ್ ಅವರು ಇಂದು ಮಧ್ಯಾಹ್ನ ಹೃದಯಾಘಾತದಿಂದಾಗಿ ಕೊನೆಯುಸಿರೆಳೆದಿದ್ದು ಕುಟುಂಬದಲ್ಲಿ ಸೂತಕದ ವಾತಾವರಣ‌ ಮನೆ ಮಾಡಿದೆ.. ಸತ್ಯ ಉಮ್ಮತ್ತಾಲ್ ಅವರಿಗೆ ಎಪ್ಪತ್ತು ವರ್ಷ ವಯಸ್ಸಾಗಿದ್ದು ಇವರು ಬೆಂಗಳೂರಿನಲ್ಲಿ ಮಗಳ ಮನೆಯಲ್ಲಿಯೇ ವಾಸವಿದ್ದರು.. ಇಂದು ಯೋಗರಾಜ್ ಭಟ್ಟರ ಮನೆಯಲ್ಲಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಇಂದು ಸಂಜೆ ವೇಳೆಗೆ ಬೆಂಗಳೂರಿನ ರುದ್ರ ಭೂಮಿಯಲ್ಲಿಯೇ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ಯೋಗರಾಜ್ ಭಟ್ಟರು ತಿಳಿಸಿದ್ದರು.. ಸತ್ಯ ಉಮ್ಮತ್ತಾಲ್ ಅವರು ಯೋಗರಾಜ್ ಭಟ್ಟರ ಮಾವ ಎಂದೇ ಎಲ್ಲರಿಗೂ ಪರಿಚಿತರು..

ಅದರೆ ಸತ್ಯ ಉಮ್ಮತ್ತಾಲ್ ಅವರು ಯೋಗರಾಜ್ ಭಟ್ಟರ ಮಾವ ಮಾತ್ರವಲ್ಲ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯ ಖ್ಯಾತ ನಟರೂ ಹೌದು ಎಂದು ಬಹುತೇಕರಿಗೆ ತಿಳಿದೇ ಇಲ್ಲ.. ಹೌದು ಸತ್ಯ ಉಮ್ಮತ್ತಾಲ್ ಅವರು ಕನ್ನಡದಲ್ಲಿ ಇಪ್ಪತ್ತೈದಕ್ಕೂ ಹೆಚ್ಚು ಸಿನಿಮಾದಲ್ಲಿ ಅಭಿನಯಿಸಿದ ಖ್ಯಾತ ನಟ.. ಅಷ್ಟೇ ಅಲ್ಲದೇ ಈಗಲೂ ಸಹ ಸಿನಿಮಾ ಇಂಡಸ್ಟ್ರಿಯಲ್ಲಿ ಸಕ್ರೀಯವಾಗಿದ್ದ ನಟರಾಗಿದ್ದು ಇತ್ತೀವಿನ ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ಸತ್ಯ ಉಮ್ಮತ್ತಾಲ್ ಅವರು ಅಭಿನಯಿಸಿದ್ದು ಹೆಸರು ಮಾಡಿದ್ದಾರೆ..

ಹೌದು ಸತ್ಯ ಉಮ್ಮತ್ತಾಲ್ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯ ಖ್ಯಾತ ನಿರ್ದೇಶಕ ಪವನ್ ಕುಮಾರ್ ಅವರ ನಿರ್ದೇಶನದ ಲೈಫು ಇಷ್ಟೇನೆ ಸಿನಿಮಾ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟಿದ್ದು ನಂತರ ಆ ಸಿನಿಮಾದಲ್ಲಿನ ಅವರ ಅಭಿನಯ ಕಂಡು ಸಾಕಷ್ಟು ಸಿನಿಮಾಗಳ ಅವಕಾಶ ದೊರೆತವು..‌ಇಲ್ಲಿಯವರೆಗೆ ಇಪ್ಪತ್ತೈದಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರು..

ಗೋಲ್ಡನ್ ಸ್ಟಾರ್ ಗಣೇಶ್ ದುನಿಯಾ ವಿಜಯ್.. ಶಿವರಾಜ್ ಕುಮಾರ್ ಅವರನ್ನೂ ಸೇರಿದಂತೆ ಸಾಕಷ್ಟು ದೊಡ್ಡ ದೊಡ್ಡ ನಟರುಗಳ ಜೊತೆ ಸತ್ಯ ಉಮ್ಮತ್ತಾಲ್ ಅವರು ತೆರೆ ಹಂಚಿಕೊಂಡಿದ್ದರು.. ಅಷ್ಟೇ ಅಲ್ಲದೇ ಅಳಿಯ ಯೋಗರಾಜ್ ಭಟ್ ನಿರ್ದೇಶನದ ಬಹುತೇಕ ಸಿನಿಮಾಗಳಲ್ಲಿ ಸತ್ಯ ಉಮ್ಮತ್ತಾಲ್ ಅವರು ಅಭಿನಯಿಸಿದ್ದಾರೆ.. ಕೆಂಡ ಸಂಪಿಗೆ.. ಕಡ್ಡಿಪುಡಿ.. ದನ ಕಾಯೋನು.. ಪ್ರೀತಿ ಗೀತಿ ಇತ್ಯಾದಿ.. ಆಕ್ಟ್ 1978 ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಸತ್ಯ ಉಮ್ಮತ್ತಾಲ್ ಅವರು ಅಭಿನಯಿಸಿದ್ದು ಸಹಕಲಾವಿದರಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹೆಸರು ಮಾಡಿದ್ದರು..

ಇನ್ನು ಬೆಂಗಳೂರಿನಲ್ಲಿ ಯೋಗರಾಜ್ ಭಟ್ಟರ ನಿವಾಸದಲ್ಲಿಯೇ ಮಗಳು ಅಳಿಯನ ಜೊತೆ ವಾಸವಿದ್ದ ಸತ್ಯ ಉಮ್ಮತ್ತಾಲ್ ಅವರು ಬಹಳ ಆರೋಗ್ಯವಾಗಿಯೇ ಇದ್ದರು.. ಆದರೆ ವಿಧಿಯ ನಿರ್ಣಯ ಯಾರು ಯಾವಾಗ ತಮ್ಮ ಬದುಕಿನ ಪಯಣ ಮುಗಿಸುವರೋ ತಿಳಿಯದು ಎನ್ನುವಂರೆ.. ಇಂದು ಮಧ್ಯಾಹ್ನ ಇದ್ದಕಿದ್ದ ಹಾಗೆ ಹೃದಯಾಘಾತದಿಂದಾಗಿ ಕೊನೆಯುಸಿರೆಳೆದಿದ್ದಾರೆ.. ಸತ್ಯ ಉಮ್ಮತ್ತಾಲ್ ಅವರ ಅಗಲಿಕೆಗೆ ಚಿತ್ರರಂಗ ಕಂಬನಿ‌ ಮಿಡಿದಿದ್ದು ಸಂತಾಪ ಸೂಚಿಸಿದ್ದಾರೆ.. ಕನ್ಮಡ ಸಿನಿಮಾ ಇಂಡಸ್ಟ್ರಿಯ ಸಾಕಷ್ಟು ಕಲಾವಿದರು ತಂತ್ರಜ್ಞರು ಯೋಗರಾಜ್ ಭಟ್ಟರ ನಿವಾಸಕ್ಕೆ ಭೇಟಿ ನೀಡಿ ಸತ್ಯ ಉಮ್ಮತ್ತಾಲ್ ಅವರ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ..