ಮೈಸೂರಿನ ದೇವಸ್ಥಾನವೊಂದರಲ್ಲಿ ಸಂತೋಷದ ಸಮಾಚಾರ ಹಂಚಿಕೊಂಡ ಸತೀಶ್ ನೀನಾಸಂ ಹಾಗೂ ಹರಿಪ್ರಿಯಾ..

0 views

ಸದ್ಯ ಕೊರೊನಾ ಕಾರಣದಿಂದಾಗಿ ಆದ ಲಾಕ್ ಡೌನ್ ನಿಂದಾಗಿ ಚಿತ್ರರಂಗ ಸಂಪೂರ್ಣ ಸ್ತಬ್ಧವಾಗಿತ್ತು. ಕೆಲ ತಿಂಗಳ ಹಿಂದಷ್ಟೇ ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಡಲಾಗಿತ್ತು.. ಇನ್ನು ಈ ತಿಂಗಳು ಅಕ್ಟೋಬರ್ 15 ರಿಂದ ಚಿತ್ರಮಂದಿರಗಳನ್ನು ತೆರೆಯಲು ಕೇಂದ್ರ ಅನುಮತಿ ನೀಡಿತ್ತು.. ಕೆಲ ಹಳೆಯ ಸಿನಿಮಾಗಳು ಮರು ಬಿಡುಗಡೆ ಆದವು.. ಆದರೆ ಅಂದುಕೊಂಡಷ್ಟು ಜನರು ಚಿತ್ರಮಂದಿರಕ್ಕೆ ಆಗಮಿಸದಿದ್ದರೂ ಹೊಸ ಸಿನಿಮಾಗಳು ಬಿಡುಗಡೆಯಾದರೆ ಜನರು ಥಿಯೇಟರ್ ನತ್ತ ಬರುವ ವಿಶ್ವಾಸವಿದೆ ಎನ್ನುತ್ತಿದೆ ಗಾಂಧಿನಗರ..

ಇನ್ನು ಇದೆಲ್ಲದರ ನಡುವೆ ಇಂದು ನಟ ಸತೀಶ್ ನೀನಾಸಂ ಹಾಗೂ ನಟಿ ಹರಿಪ್ರಿಯ ಅವರು ಮೈಸೂರಿನಲ್ಲಿ ಸಂತೋಷದ ಸಮಾಚಾರವೊಂದನ್ನು ಹಂಚಿಕೊಂಡಿದ್ದಾರೆ.. ಹೌದು ಈಗಾಗಲೇ ಅರ್ಧಕ್ಕೆ ನಿಂತ ಅನೇಕ ಸಿನಿಮಾಗಳ ಶೂಟಿಂಗ್ ಗಳು ಭರದಿಂದ ಸಾಗಿದರೆ..‌ ಇತ್ತ ಹೊಸ ಸಿನಿಮಾಗಳ ಸಾಲು ಸಾಲು ಮುಹೂರ್ತಗಳು ಸಹ ನೆರವೇರುತ್ತಿದೆ.. ಅದೇ ರೀತಿ ಸತೀಶ್ ನೀನಾಸಂ ಅವರ ಎರಡು ಸಿನಿಮಾಗಳ ಮುಹೂರ್ತ ನೆರವೇರಿದ್ದು ಎರಡೂ ಸಿನಿಮಾಗಳ ಚಿತ್ರೀಕರಣ ಪ್ರಾರಂಭಗೊಂಡಿದೆ.. ಹೌದು ಸತೀಶ್ ನೀನಾಸಂ ಹಾಗೂ ಹರಿಪ್ರಿಯಾ ಅವರು ಅಭಿನಯದ ಪೆಟ್ರೋಮ್ಯಾಕ್ಸ್ ಸಿನಿಮಾದ ಮುಹೂರ್ತ ಇಂದು ಮೈಸೂರಿನ ದೇವಸ್ಥಾನವೊಂದರಲ್ಲಿ ನೆರವೇರಿದ್ದು ಚಿತ್ರೀಕರಣ ಸಹ ಇಂದೇ ಆರಂಭಗೊಂಡಿದೆ..

ಇನ್ನು ಈ ಸಿನಿಮಾಗೆ ನೀರ್ ದೋಸೆ ಖ್ಯಾತಿಯ ವಿಜಯ್ ಪ್ರಸಾದ್ ಅವರು ಆಕ್ಷನ್ ಕಟ್ ಹೇಳುತ್ತಿದ್ದಾರೆ.. ಈ ಹಿಂದೆ ವಿಜಯ್ ಪ್ರಸಾದ್ ಅವರ ನಿರ್ದೇಶನದ ನೀರ್ ದೋಸೆ ಸಿನಿಮಾದಲ್ಲಿ ರಮ್ಯ ಅವರು ಅಭಿನಯಿಸಬೇಕಿದ್ದ ಪಾತ್ರವನ್ನು ಕೊನೆ ಘಳಿಗೆಯಲ್ಲಿ ಕೈಕೊಟ್ಟ ಕಾರಣ ನಟಿ ಹರಿಪ್ರಿಯಾ ಅವರು ಅಭಿನಯಿಸಿದ್ದರು.. ಇದೀಗ ವಿಜಯ್ ಪ್ರಸಾದ್ ಅವರ ಪೆಟ್ರೋಮ್ಯಾಕ್ಸ್ ಸಿನಿಮಾಗೂ ಸಹ ಹರಿಪ್ರಿಯಾ ಅವರೇ ನಾಯಕಿಯಾಗಿದ್ದು ಸತೀಶ್ ನೀನಾಸಂ ಅವರ ಜೊತೆ ಪರದೆ ಹಂಚಿಕೊಳ್ಳಲಿದ್ದಾರೆ..

ಇನ್ನು ಈ ಬಗ್ಗೆ ಮಾತನಾಡಿರುವ ಸತೀಶ್ ನೀನಾಸಂ ಅವರು.. “ಇದೇ ಮೊದಲ ಗೊತ್ತಿಲ್ಲ, ನನ್ನ ಎರಡು ಚಿತ್ರಗಳ ಮಹೂರ್ತವಷ್ಟೇ ಅಲ್ಲ ಚಿತ್ರೀಕರಣಗಳು ಪ್ರಾರಂಭ. ಪೆಟ್ರೋಮ್ಯಾಕ್ಸ್ ಮತ್ತು ಮ್ಯಾಟ್ನಿ” ಎಂದು ಸಂತೋಷ ಹಂಚಿಕೊಂಡಿದ್ದು.. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ನಟನಿಗೆ ಅಭಿಮಾನಿಗಳು ಶುಭಕೋರಿದ್ದಾರೆ..

ಇತ್ತ ನಟಿ ಹರಿಪ್ರಿಯಾ ಸಿನಿಮಾಗಳಲ್ಲಿ‌ ಮಾತ್ರವಲ್ಲದೇ ಕಿರುತೆರೆಯಲ್ಲಿಯೂ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ.. ಹೌದು ಇದೇ ಮೊದಲ ಬಾರಿಗೆ ಹರಿಪ್ರಿಯಾ ಅವರು ಧಾರಾವಾಹಿಯಲ್ಲಿಯೂ ನಟಿಸುತ್ತಿದ್ದಾರೆ.. ಸ್ಟಾರ್ ಸುವರ್ಣ ವಾಹಿನಿಯ ಧಾರಾವಾಹಿಯೊಂದರಲ್ಲಿ ಅತಿಥಿ ಪಾತ್ರದಲ್ಲಿ‌ ಕಾಣಿಸಿಕೊಳ್ಳುತ್ತಿರುವ ಹರಿಪ್ರಿಯಾ ಅವರು ನವರಾತ್ರಿ ಅಂಗವಾಗಿ ದುರ್ಗೆಯ ಅವತಾರದಲ್ಲಿ ಧಾರಾವಾಹಿಗೆ ಪಾದಾರ್ಪಣೆ ಮಾಡಿದ್ದು ಇಂದಿನಿಂದ ಪ್ರಸಾರವಾಗುತ್ತಿದೆ..